ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ: ಜಿಮ್ ಮಾಲೀಕರ ಪರ ನಿಂತ ನಟ ಯಶ್

ದೇಶದಲ್ಲಿ ಕೊರೊನಾ ಎರಡನೇ ಅಲೆ ಹರಡುತ್ತಿದ್ದು, ರಾಜ್ಯದಲ್ಲಿಯೂ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಹೊರಡಿಸಿರುವ ರಾಜ್ಯ ಸರ್ಕಾರ ಜಿಮ್‌ಗಳಿಗೆ ನಿರ್ಬಂಧ ಹೇರಿರುವದುನ್ನು ಖಂಡಿಸಿ ಜಿಮ್ ಮಾಲೀಕರ ಪರ ನಟ ಯಶ್ ಟ್ವೀಟ್ ಮಾಡಿದ್ದಾರೆ.

ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗೆಗಳು ಮುಕ್ತವಾಗಿವೆ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ ಸರ್ಕಾರ ನೀಡುತ್ತಿದೆ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿ ಅವುಗಳಲ್ಲಿ ಜಿಮ್, ಪಾರ್ಟಿ ಹಾಲ್‌ಗಳು, ಈಜು ಕೊಳಗಳಿಗೆ ನಿರ್ಬಂಧಿಸಿತ್ತು.  ಮುಷ್ಕರ, ಧರಣಿ, ರ್‍ಯಾಲಿಗಳನ್ನು ನಿಷೇಧಿಸಿತ್ತು. ಜೊತೆಗೆ ಸಿನಿಮಾ ಹಾಲ್‌ನಲ್ಲಿ ಶೇಕಡಾ 50 ರಷ್ಟು ಆಸನ ವ್ಯವಸ್ಥೆಗೆ ತಿಳಿಸಿತ್ತು.

ಇಡೀ ಚಿತ್ರರಂಗವೇ ಒಂದಾಗಿ 100 ರಷ್ಟು ಆಸನ ವ್ಯವಸ್ಥೆ ಬೇಕೆಂದು ಸರ್ಕಾರದ ಮನವೊಲಿಸಿವೆ. ಈಗ ಜಿಮ್ ಮಾಲೀಕರ ಪರವಾಗಿ ಮಾತನಾಡಿರುವ ನಟ ಯಶ್, ಸೇವ್ ಫಿಟ್‌ನೇಸ್ ಇಂಡಸ್ಟ್ರಿ ಎಂದು ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

ಇದನ್ನೂ ಓದಿ: ಕೊರೊನಾ ಹೆಚ್ಚುತ್ತಿರುವುದರಿಂದ ಮಾರ್ಗಸೂಚಿ ಬಿಡುಗಡೆ: ಆರೋಗ್ಯ ಸಚಿವ ಸುಧಾಕರ್‌

“ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗೆಗಳು ಮುಕ್ತವಾಗಿವೆ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ ಸರ್ಕಾರ ನೀಡುತ್ತಿದೆ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ…? ಕಟ್ಟುನಿಟ್ಟಿನ ಸಂಚಾರ ಕ್ರಮ ಸಾಕಲ್ಲವೇ..? ಹಾಗೆ ಸಾಲ ಸೋಲ ಮಾಡಿ, ಜಿಮ್ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್ ಬಳಸಲು ಅನುಮತಿ ನೀಡಿದರೆ, ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು. ಜಿಮ ಮಾಲೀಕರು ಬದುಕಿಕೊಳ್ಳುತ್ತಾರಲ್ಲವೇ…? ರೋಗಕ್ಕೆ ಪರಿಹಾರ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಹಸಿವಿಗೆ ಪರಿಹಾರ ಗೊತ್ತಿದೆಯಲ್ಲ!” ಎಂದು ನಟ ಯಶ್ ಟ್ವೀಟ್ ಮಾಡಿದ್ದಾರೆ.

ಮಾರ್ಗಸೂಚಿಗಳ ಬಗ್ಗೆ ಟ್ವೀಟ್ ಮಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, “ಈ ನಿರ್ಧಾರ ವೈಜ್ಞಾನಿಕ ನೆಲೆಗಟ್ಟಿಯಲ್ಲಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಆಡಳಿತಾತ್ಮಕ ನಿರ್ಧಾರವಾಗಿದ್ದು ಇದನ್ನು ರಾಜಕೀಯ ಅಥವಾ ಇನ್ಯಾವುದೇ ದೃಷ್ಟಿಯಿಂದ ಪರಿಗಣಿಸಬಾರದು” ಎಂದು ಮನವಿ ಮಾಡಿದ್ದ‍ರು.


ಇದನ್ನೂ ಓದಿ: ಅಂಧ ಭಕ್ತರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಯಾರು ಕಾರಣ? ಮೋದಿ ವಿರುದ್ಧ ಸಿಡಿದ ಸುಬ್ರಮಣಿಯನ್…

LEAVE A REPLY

Please enter your comment!
Please enter your name here