HomeಅಂಕಣಗಳುKarnataka SIRSIR ಪ್ರಕ್ರಿಯೆಯ ಅಧಿಕೃತ ದತ್ತಾಂಶ ಬಿಡುಗಡೆ ಮಾಡಿದ ಚುನಾವಣಾ ಆಯೋಗ

SIR ಪ್ರಕ್ರಿಯೆಯ ಅಧಿಕೃತ ದತ್ತಾಂಶ ಬಿಡುಗಡೆ ಮಾಡಿದ ಚುನಾವಣಾ ಆಯೋಗ

- Advertisement -
- Advertisement -

ರಾಜ್ಯದಲ್ಲಿ ತೀವ್ರ ಚರ್ಚೆ, ರಾಜಕೀಯ ವಿವಾದ ಹಾಗೂ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕರ ಬೃಹತ್ ಧರಣಿ ಹಾಗೂ ಫಾರಂ ನಂಬರ್ 7ರ ದುರುಪಯೋಗದ ಗಂಭೀರ ಆರೋಪಗಳ ಬೆನ್ನಲ್ಲೇ ಚುನಾವಣಾ ಆಯೋಗವು ಈ ವಿವರಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ನಡೆಸಿದ್ದರು. ರಾಜ್ಯದಲ್ಲಿ ಫಾರಂ ನಂಬರ್ 7 ದುರುಪಯೋಗಪಡಿಸಿಕೊಂಡು ಸುಮಾರು 50 ಲಕ್ಷ ಮತದಾರರ ಹೆಸರುಗಳನ್ನು, ವಿಶೇಷವಾಗಿ ಅಲ್ಪಸಂಖ್ಯಾತರ ವೋಟ್‌ಗಳನ್ನು ಪಟ್ಟಿಯಿಂದ ತೆಗೆದುಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಬಿಡುಗಡೆ ಮಾಡಿರುವ ನೈಜ ಅಂಕಿ-ಅಂಶಗಳು ಮಹತ್ವ ಪಡೆದುಕೊಂಡಿವೆ.

ಚುನಾವಣಾ ಆಯೋಗ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಇಡೀ ರಾಜ್ಯಾದ್ಯಂತ ಸಲ್ಲಿಕೆಯಾಗಿರುವ ಫಾರಂ ನಂಬರ್ 7ರ ಒಟ್ಟು ಅರ್ಜಿಗಳ ಸಂಖ್ಯೆ 84,900. ಇನ್ನು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಲ್ಲಿಕೆಯಾಗಿರುವ ಫಾರಂ ನಂಬರ್ 6ರ ಅರ್ಜಿಗಳ ಸಂಖ್ಯೆ 8,85,952 ತಲುಪಿದ್ದರೆ, ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಸಲ್ಲಿಸಿರುವ ಫಾರಂ 6A ಅರ್ಜಿಗಳ ಸಂಖ್ಯೆ 4,648 ಆಗಿದೆ. ಮತದಾರರ ಪಟ್ಟಿಯಲ್ಲಿನ ಅನ್-ಮ್ಯಾಪಿಂಗ್, ಹೆಸರು ಅಥವಾ ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಅನುಮಾನಾಸ್ಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಒಟ್ಟು 43,43,137 ನೋಟೀಸ್‌ಗಳನ್ನು ಸಿದ್ಧಪಡಿಸಲಾಗಿತ್ತು. ಇವುಗಳಲ್ಲಿ ಶೇಕಡಾ 99ರಷ್ಟು ನೋಟೀಸ್‌ಗಳು ಸಾರ್ವಜನಿಕರಿಗೆ ತಲುಪಿದ್ದು, ಈ ಪೈಕಿ 35,60,833 ಜನರು ಅಗತ್ಯ ದಾಖಲೆಗಳನ್ನು ಒದಗಿಸಿ ವಿಚಾರಣೆಗೆ ಒಳಪಟ್ಟಿದ್ದಾರೆ ಹಾಗೂ ಉಳಿದ 7,82,304 ನೋಟೀಸ್‌ಗಳ ವಿಚಾರಣೆ ಪ್ರಕ್ರಿಯೆ ಬಾಕಿ ಉಳಿದಿದೆ.

ಜಿಲ್ಲಾವಾರು ಫಾರಂ 7 ಅರ್ಜಿಗಳ ಸ್ಥಿತಿಗತಿಯನ್ನು ನೋಡಿದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ 5,760 ಫಾರಂ ನಂಬರ್ 7 ಅರ್ಜಿಗಳು ಸಲ್ಲಿಕೆಯಾಗಿವೆ. ತುಮಕೂರು ಜಿಲ್ಲೆಯಲ್ಲಿ 4,350, ದಾವಣಗೆರೆಯಲ್ಲಿ 3,747, ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 3,026, ಬಿಬಿಎಂಪಿ ನಾರ್ತ್‌ನಲ್ಲಿ 1,689, ಬೆಳಗಾವಿಯಲ್ಲಿ 3,539, ಮೈಸೂರಿನಲ್ಲಿ 2,828 ಹಾಗೂ ಗುಲ್ಬರ್ಗದಲ್ಲಿ 1,040 ಅರ್ಜಿಗಳು ಬಂದಿವೆ. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಇದೇ ತಿಂಗಳ 22ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ವಿವರ ನೀಡಲಿದ್ದಾರೆ ಎಂದು ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ವೇಳೆ ದಾಳಿ: ಗಾಂಧೀಜಿ ಭಾವಚಿತ್ರ ಹಾಗೂ ವೇದಿಕೆ ಧ್ವಂಸ, ಬಿಜೆಪಿ ಯುವ ಮೋರ್ಚಾ ಕೃತ್ಯ ಎಂದು ಸಿಪಿಐ(ಎಂ) ಆರೋಪ

ಭಾರತೀಯ ಚುನಾವಣಾ ಆಯೋಗ ಜಾರಿಗೆ ತಂದಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪಶ್ಚಿಮ ಬಂಗಾಳದ ಬಿರಾಟಿಯಲ್ಲಿ...

2021 ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಕಾಲಿನ ಗಾಯದ ‘ಸುಳ್ಳು ನಾಟಕ’ ಆಡಿದ್ದರು: ಸುವೇಂದು ಅಧಿಕಾರಿ ಆರೋಪ

"2021 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಕಾಲಿಗೆ ಗಾಯವಾಗಿದೆ ಎಂದು 'ಸುಳ್ಳು ನಾಟಕ' ಆಡಿದ್ದರು. ಅವರ ಈ ಸುಳ್ಳು ಹಕ್ಕುಗಳ ಕುರಿತು ಸರ್ಕಾರದಿಂದ ತನಿಖೆ ನಡೆಸಲಾಗುವುದು" ಎಂದು ಪಶ್ಚಿಮ...

ಗ್ಯಾನೇಶ್ ವಿರುದ್ಧ ನಿಲ್ಲದ ಪ್ರತಿಭಟನೆ: ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಸೇರಿದಂತೆ ಹಲವರ ಬಂಧನ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಶನಿವಾರ ಎರಡನೇ ದಿನವೂ ಮುಂದುವರಿಯಿತು. ನವದೆಹಲಿ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಣೆ : ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಯೂತ್ ಕಾಂಗ್ರೆಸ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ, ಇಂಡಿಯನ್ ಯೂತ್ ಕಾಂಗ್ರೆಸ್ (ಐವೈಸಿ) ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. ಐವೈಸಿ...

ಹೈದರಾಬಾದ್‌| ಪ್ರಶ್ನೆ ಕೇಳಿ, ನಿಮ್ಮ ಮತದಾನದ ಹಕ್ಕನ್ನು ಪಡೆದುಕೊಳ್ಳಿ: ನಟ ಪ್ರಕಾಶ್ ರಾಜ್ ಕರೆ

ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬೇಕು, ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಮತದಾರರಿಗೆ...

ದೆಹಲಿ: ಸಿಇಸಿ ಗ್ಯಾನೇಶ್‌ ಕುಮಾರ್ ವಿರುದ್ಧದ ಹೋರಾಟಕ್ಕೆ ಕಪಿಲ್ ಸಿಬಲ್ – ಪ್ರಶಾಂತ್ ಭೂಷಣ್ ಸೇರ್ಪಡೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹಿರಿಯ ವಕೀಲ ಕಪಿಲ್ ಸಿಬಲ್, ವಕೀಲ ಪ್ರಶಾಂತ್ ಭೂಷಣ್, ಎಐಎಸ್‌ಎ...

ಫಾರಂ-7 ಮೂಲಕ ಆಕ್ಷೇಪ: ಬಿಜೆಪಿ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯುವಂತೆ ವಿಜಯೇಂದ್ರ ಒತ್ತಾಯ

ಚುನಾವಣಾ ಆಯೋಗದ ನಿಯಮಾನುಸಾರ ಫಾರಂ-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಎಫ್‌ಐಆರ್ (FIR) ದಾಖಲಿಸಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಈ ಪ್ರಕರಣಗಳನ್ನು ಕೂಡಲೇ...

ಕೇರಳ ಯುಡಿಎಫ್ ಸರ್ಕಾರದಲ್ಲಿ ಭಿನ್ನಮತದ ಹೊಗೆ: ಸಿಎಂ ಸತೀಶನ್ ಏಕಪಕ್ಷೀಯ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರ ಅಸಮಾಧಾನ

ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳು ಕಳೆಯುವುದರೊಳಗೇ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ತೀವ್ರಗೊಳ್ಳುತ್ತಿರುವ ಲಕ್ಷಣಗಳು ಗೋಚರಿಸಿವೆ. ಉನ್ನತ...

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ದೆಹಲಿ ಪೊಲೀಸರಿಂದ 3 ಪ್ರಕರಣ ದಾಖಲು; 1 ಸಾವಿರ ಜನ ವಶಕ್ಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು...

ರಾಜ್ಯದ ಬರ ಪರಿಹಾರಕ್ಕೆ 3,705 ಕೋಟಿ ರೂ. ನೀಡಲು ಕೇಂದ್ರಕ್ಕೆ ಮನವಿ: ಸಿಎಂ

ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದಾಗಿ ಕಂಗಾಲಾಗಿರುವ ರೈತರು ಮತ್ತು ಜನಸಾಮಾನ್ಯರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ತಕ್ಷಣವೇ ಎನ್‌ಡಿಆರ್‌ಎಫ್ (NDRF) ಮಾನದಂಡಗಳನ್ವಯ 3,705.30 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ....