ನಮ್ಮ ಪಾಲಿನ ಜಿಎಸ್‌ಟಿ ಪರಿಹಾರ ಕೊಡಿ: ಮೋದಿಗೆ ಪತ್ರ ಬರೆದ ಪಿಣರಾಯಿ ವಿಜಯನ್
PC: Scroll.in

ಕೇರಳ ಮುಖ್ಯಮಂತ್ರಿಯೂ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ನುಸುಳುವ ಉಗ್ರಗಾಮಿಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಹಾಗೂ ಮತ್ತೊಂದೆಡೆ ಅವರ ಪಕ್ಷ ದೆಹಲಿಯಲ್ಲಿ ಅಂತವರನ್ನು ಬೆಂಬಲಿಸುತ್ತಿದೆ ಎಂದು ಪ್ರಧಾನಿ ಮೋದಿಯ ಹೇಳಿಕೆಗೆ ಕೇರಳ ಸಿಎಂ ವಿಜಯನ್ ತಿರುಗೇಟು ನೀಡಿದ್ದಾರೆ.

ಸಿಎಎ ವಿರುದ್ಧದ ಹೋರಾಟಗಳಲ್ಲಿ ಕೇರಳ ಮುಂಚೂಣಿಯಲ್ಲಿದೆ ಎಂದ ವಿಜಯನ್, ಪ್ರಧಾನಿಯವರು ಪ್ರತಿಭಟನೆಗಳ ಸಾರ್ಥಕತೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೇರಳದ ಜಾತ್ಯತೀತ ನೀತಿ ಎಲ್ಲಾ ರೀತಿಯ ಕೋಮುವಾದವನ್ನು ವಿರೋಧಿಸುತ್ತದೆ. ಈ ಆಂದೋಲನದಲ್ಲಿ ಯಾವುದೇ ರೀತಿಯ ಒಳನುಸುಳುವವರನ್ನು ತಡೆಯುವ ಶಕ್ತಿ ನಮ್ಮ ಜಾತ್ಯತೀತ ರಾಜ್ಯಕ್ಕೆ ಇದೆ” ಎಂದು ಟ್ವೀಟಿಸಿದ್ದಾರೆ.

“ಪ್ರತಿಪಕ್ಷಗಳು ಪೌರತ್ವ ಕಾನೂನಿನ ಬಗ್ಗೆ ರಾಷ್ಟ್ರವನ್ನು ದಾರಿ ತಪ್ಪಿಸುತ್ತಿವೆ ಮತ್ತು ತಪ್ಪಾಗಿ ಮಾಹಿತಿ ನೀಡುತ್ತಿವೆ, ಹಿಂಸಾಚಾರವನ್ನು ಆಂದೋಲನದ ಹಕ್ಕು ಎಂದು ಕರೆಯುತ್ತಿದೆ. ಸಂವಿಧಾನದ ಹೆಸರಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ನಡೆಯುತ್ತಿವೆ. ಕಾಂಗ್ರೆಸ್ಸನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಆದರೆ ಕೇರಳದ ನಮ್ಮ ಎಡಪಂಥೀಯ ಸ್ನೇಹಿತರು ಅರ್ಥಮಾಡಿಕೊಳ್ಳಬೇಕು… ಕೇರಳದ ಆಂದೋಲನಗಳಲ್ಲಿ ಉಗ್ರಗಾಮಿ ಗುಂಪುಗಳ ಕೈವಾಡವಿದೆ ಎಂದು ಸ್ವತಃ ಕೇರಳದ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದ್ದಾರೆ” ಎಂದು ಪ್ರಧಾನಿ ಮೋದಿ ರಾಜ್ಯ ಸಭೆಯಲ್ಲಿ ಅಧ್ಯಕ್ಷರ ಭಾಷಣದ ಮೇಲೆ ಉತ್ತರಿಸುವಾಗ ಹೇಳಿದ್ಧರು . ಅಷ್ಟೇ ಅಲ್ಲದೆ “ಕೇರಳವನ್ನು ತೊಂದರೆಗೊಳಿಸುತ್ತಿರುವ ಅರಾಜಕತೆಯನ್ನು, ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ನೀವು ಅದನ್ನು ಹೇಗೆ ಬೆಂಬಲಿಸುತ್ತೀರಿ” ಎಂದು ರಾಜ್ಯ ಸಭೆಯಲ್ಲಿ ಹೇಳಿದ್ದರು.

“ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಿಎಎ ವಿರುದ್ಧ ನಡೆಸುಯುತ್ತಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಕೋಮು ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸಿದೆ” ಎಂದು ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ಕೇರಳ ವಿಧಾನಸಭೆಗೆ ತಿಳಿಸಿದ್ದರು.

LEAVE A REPLY

Please enter your comment!
Please enter your name here