Homeಮುಖಪುಟಬಂಗಾಳದ ಎಲ್ಲಾ ಅಕ್ರಮಗಳ ಕಿಂಗ್‌ಪಿನ್ ಸುವೆಂದು ಅಧಿಕಾರಿ: ಶಾ ಆರೋಪಗಳಿಗೆ ಟಿಎಂಸಿ ತಿರುಗೇಟು

ಬಂಗಾಳದ ಎಲ್ಲಾ ಅಕ್ರಮಗಳ ಕಿಂಗ್‌ಪಿನ್ ಸುವೆಂದು ಅಧಿಕಾರಿ: ಶಾ ಆರೋಪಗಳಿಗೆ ಟಿಎಂಸಿ ತಿರುಗೇಟು

- Advertisement -
- Advertisement -

ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಸುದೀರ್ಘ ಪ್ರತ್ಯಾರೋಪದೊಂದಿಗೆ ತಿರುಗೇಟು ನೀಡಿದೆ.

ಬಿರ್ಭೂಮ್ ಜಿಲ್ಲೆಯ ರ್ಯಾಲಿಯಲ್ಲಿ ಅಮಿತ್ ಶಾ ಅವರು, ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿಯನ್ನು ಹೊಗಳಿದ್ದರು. ಅದಕ್ಕೆ ತಿರುಗೇಟು ನೀಡಿದ ಟಿಎಂಸಿ ‘ಎಲ್ಲಾ ಅಕ್ರಮಗಳ ಕಿಂಗ್‌ಪಿನ್’ ಅವರೇ ಎಂದು ಹೇಳಿದೆ.

”ಬಂಗಾಳದ ಜನರು ನಮಗೆ 77 ಸ್ಥಾನಗಳನ್ನು ನೀಡಿದ್ದಾರೆ, ಮತ್ತು ಇದು ಬಿಜೆಪಿಗೆ ಬಹುದೊಡ್ಡ ಜವಾಬ್ದಾರಿಯಾಗಿದೆ. ವಿಧಾನಸೌಧದಲ್ಲಿ, ನಮ್ಮ ಶಾಸಕರೊಂದಿಗೆ, ನಮ್ಮ ನಾಯಕ ಸುವೇಂದು ಅಧಿಕಾರಿ ದೀದಿಯ ದಾದಾಗಿರಿಯ ವಿರುದ್ಧ ಪೂರ್ಣ ಶಕ್ತಿಯಿಂದ ಹೋರಾಡುತ್ತಿದ್ದಾರೆ. ಅವರು ದೀದಿಯ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಿದ್ದಾರೆ. ಬಿಜೆಪಿಯು ಬಂಗಾಳದಲ್ಲಿ ಹೋರಾಡುತ್ತಿರುವ ಕಾರಣ, ಇಲ್ಲಿಯ ನಿಮ್ಮ ಸ್ಥಳೀಯ ನಾಯಕ, ಗೋವು ಕಳ್ಳಸಾಗಣೆದಾರನನ್ನು ಕಂಬಿ ಹಿಂದೆ ಹಾಕಲಾಗಿದೆ” ಎಂದು ಇತ್ತೀಚೆಗೆ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಅನುಬ್ರತಾ ಮೊಂಡಲ್ ಅವರನ್ನು ಉಲ್ಲೇಖಿಸಿ ಅಮಿತ್ ಶಾ ಹೇಳಿದರು.

”ವಾಷಿಂಗ್ ಮೆಷಿನ್ ರಾಜಕೀಯ”ದೊಂದಿಗೆ, ತೃಣಮೂಲ ಕಾಂಗ್ರೆಸ್ ಬಿಜೆಪಿಯನ್ನು ಕಟುವಾಗಿ ಟೀಕಿಸಿತು. ಸುವೆಂದು ಅಧಿಕಾರಿಯ ಮೇಲೆ ಆರೋಪ ಮಾಡಿರುವ ಹಲವಾರು ಹಗರಣಗಳನ್ನು ತೋರಿಸಿದೆ. ಅವರು ಬಿಜೆಪಿಗೆ ಹೋದಬಳಿಕ ಶುಭ್ರವಾಗಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಎಎಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ; ಸ್ಥಾನಮಾನ ಕಳೆದುಕೊಂಡ ಎನ್‌ಸಿಪಿ, ಟಿಎಂಸಿ, ಸಿಪಿಐ ಪಕ್ಷಗಳು

”ಬಂಗಾಳ ಸರ್ಕಾರದ ಮೇಲಿರುವ ಭ್ರಷ್ಟಾಚಾರದ ಆರೋಪಗಳ ವಿರುದ್ಧ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಹೋರಾಟವನ್ನು ಮುನ್ನಡೆಸುತ್ತಿದ್ದಾರೆ ಎಂದು ಅಮಿತ್ ಶಾ ಪ್ರತಿಪಾದಿಸಿದರು. ಆದರೆ, ಸುವೇಂದು ಅಧಿಕಾರಿ ಅವರೇ ವಿವಾದಗಳಲ್ಲಿ ಸಿಲುಕಿದ್ದಾರೆ. ಶಾರದಾ ಹಗರಣದಲ್ಲಿ ಭಾಗಿಯಾಗಿದ್ದರಿಂದ ಹಿಡಿದು ನೇಮಕಾತಿ ಅಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬಂಗಾಳದಲ್ಲಿ ನಡೆದ ಎಲ್ಲ ಅಕ್ರಮಗಳ ಕಿಂಗ್‌ಪಿನ್ ಅಧಿಕಾರಿ ಅವರೇ ಆಗಿದ್ದಾರೆ. ಅವರ ಅಪರಾಧಗಳ ಪ್ರಮಾಣ ಎಷ್ಟಿದೆ ಎಂದರೆ, ನಾರದ ಸ್ಟಿಂಗ್ ಆಪರೇಷನ್‌ನಲ್ಲಿ ಅಧಿಕಾರಿ ಹಣ ತೆಗೆದುಕೊಳ್ಳುವ ವೀಡಿಯೊದಲ್ಲಿ ಕಂಡುಬಂದಿದೆ. ಆದರೂ, ಅಧಿಕಾರಿ ಬಿಜೆಪಿಯ ‘ವಾಶಿಂಗ್ ಮೆಷಿನ್’ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ” ಎಂದು ಟಿಎಂಸಿ ಹೇಳಿದೆ.

ಗೃಹ ಸಚಿವರು ರಾಜ್ಯದಲ್ಲಿ ಹಿಂಸಾಚಾರ, ಅಕ್ರಮ ಒಳನುಸುಳುವಿಕೆ ಮತ್ತು ಹಸು ಕಳ್ಳಸಾಗಣೆಯ ವಿಷಯವನ್ನು ಪ್ರಸ್ತಾಪಿಸಿ, ಈ ಅಪರಾಧಗಳನ್ನು ತಡೆಯಲು ಏಕೈಕ ಮಾರ್ಗವೆಂದರೆ ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕಿ ಅಧಿಕಾರಕ್ಕೆ ತರಬೇಕು ಎಂದು ಪ್ರತಿಪಾದಿಸಿದರು.

”ಈ ದೀದಿ ಮತ್ತು ಭಟಿಜಾ (ತೃಣಮೂಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ) ಅವರ ದುರಾಡಳಿತ, ಇದು ದುರಾಡಳಿತವಲ್ಲವೇ? ಮತ್ತು ಈ ದುರಾಡಳಿತವನ್ನು ತೊಡೆದುಹಾಕಲು ಏಕೈಕ ಮಾರ್ಗವೆಂದರೆ ಬಿಜೆಪಿ. ಬಂಗಾಳವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಬೇಕು ಮತ್ತು ಅದನ್ನು ಮಾಡಲು ಬಿಜೆಪಿ ಏಕೈಕ ಮಾರ್ಗವಾಗಿದೆ. ನಿಮಗೆ ಬಂಗಾಳದಲ್ಲಿ ಒಳನುಸುಳುವಿಕೆ ಬೇಕೇ? ನುಸುಳುವಿಕೆಯನ್ನು ತಡೆಯಲು ಬಿಜೆಪಿಯೇ ಏಕೈಕ ಮಾರ್ಗವಾಗಿದೆ. ನಿಮಗೆ ಬಂಗಾಳದಲ್ಲಿ ಗೋವು ಕಳ್ಳಸಾಗಣೆ ಬೇಕೇ? ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದರಿಂದ ನುಸುಳುವಿಕೆ ಮತ್ತು ಗೋವು ಕಳ್ಳಸಾಗಣೆ ಎರಡೂ ನಿಂತಿದೆ ಎಂದು ಅಮಿತ್ ಶಾ ಹೇಳಿದರು.

”ಬಂಗಾಳದಲ್ಲಿ ಕಮಲವನ್ನು ಒಮ್ಮೆ ಅರಳುವಂತೆ ಮಾಡಿ ಮತ್ತು ಯಾವುದೇ ಬಾಂಬ್ ಸ್ಫೋಟಗಳು ನಡೆಯುವುದಿಲ್ಲ ಮತ್ತು ಇಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ಯಾವುದೇ ದಾಳಿಗಳು ನಡೆಯುವುದಿಲ್ಲ, ಚಿತ್ರಹಿಂಸೆ ಇರುವುದಿಲ್ಲ. ಬಂಗಾಳದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಡೆದುಹಾಕಲು ಏಕೈಕ ಮಾರ್ಗವೆಂದರೆ ಭಾರತೀಯ ಜನತಾ ಪಕ್ಷ,” ಎಂದು ಹೇಳಿದರು.

”ರಿಶ್ರಾ ಮತ್ತು ಹೌರಾದಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ದಾಳಿಗಳು ನಡೆದಿವೆ. ಬಂಗಾಳದಲ್ಲಿ ರಾಮನವಮಿ ಮೆರವಣಿಗೆಗಳನ್ನು ಮಾಡಬೇಕೆ ಅಥವಾ ಬೇಡವೇ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ? ಬಂಗಾಳದಲ್ಲಿ ರಾಮನವಮಿ ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸಲಾಗದಿದ್ದರೆ, ನಾವು ಮೆರವಣಿಗೆ ಹೇಗೆ ಮಾಡಲು ಸಾಧ್ಯ? ತೃಣಮೂಲ ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದಿಂದಾಗಿ ಇದಕ್ಕೆ ಉತ್ತೇಜನ ಸಿಕ್ಕಿದೆ. ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೋದಿಜಿಗೆ ಒಮ್ಮೆ 35 ಸ್ಥಾನಗಳನ್ನು ನೀಡಿ, ಇಲ್ಲಿ ಬಿಜೆಪಿ ಸರಕಾರವನ್ನು ರಚಿಸಿ, ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ಮೇಲೆ ದಾಳಿ ಮಾಡಲು ಯಾರಿಗೂ ಧೈರ್ಯವಿರುವುದಿಲ್ಲ ಎಂದು ನಿಮಗೆ ಭರವಸೆ ನೀಡಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ಅಮಿತ್ ಶಾ ದಾಳಿಗೆ ಟಿಎಂಸಿ ಪಕ್ಷದ ಹೇಳಿಕೆಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ”ಬಿರ್ಭೂಮ್‌ನಲ್ಲಿ ನಡೆದ ತಮ್ಮ ಸಾರ್ವಜನಿಕ ಸಭೆಯಲ್ಲಿ, ಬಂಗಾಳ ಸರ್ಕಾರವು ರಾಮನವಮಿ ಮೆರವಣಿಗೆಗಳನ್ನು ತಡೆಯುತ್ತಿದೆ ಎಂದು ಶಾ ಹೇಳಿದರು. ಆದರೂ, ಈ ರ್ಯಾಲಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಂದೂಕು ಮತ್ತು ಕತ್ತಿಗಳನ್ನು ಏಕೆ ಝಳಪಿಸುತ್ತಿದ್ದಾರೆ ಎನ್ನುವ ಬಗ್ಗೆ ಬಾಯಿಬಿಡಬೇಕು ಆದರೆ ಆ ವಿಚಾರದಲ್ಲಿ ಅವರು ಮೌನವಾಗಿದ್ದಾರೆ. ಬಿಹಾರದ ಮುಂಗೇರ್‌ನಿಂದ ಹೌರಾ ಪೊಲೀಸರು ಬಂಧಿಸಿದ ಆರೋಪಿ ಸುಮಿತ್ ಶಾ ಜೊತೆ ಬಿಜೆಪಿಯ ಸಂಪರ್ಕವಿರುವ ಬಗ್ಗೆ ಅವರು ಮೌನವಾಗಿದ್ದರು ಎಂದು ಹೇಳಿದೆ.

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಬಂಗಾಳ ಸರ್ಕಾರ ಉರುಳಿಹೋಗುತ್ತದೆ ಎಂಬ ಶಾ ಹೇಳಿಕೆಯು ರಾಜ್ಯದ ವಿರುದ್ಧದ ”ಪಿತೂರಿ”ಯನ್ನು ಬಹಿರಂಗಪಡಿಸಿದೆ ಎಂದು ಟಿಎಂಸಿ ಹೇಳಿದೆ.

”ಸರ್ಕಾರವನ್ನು ಉರುಳಿಸುವ ಅಮಿತ್ ಶಾ ಅವರ ಹೇಳಿಕೆಗಳು ಬಂಗಾಳದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ” ಎಂದು ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿದೆ, ಬಂಗಾಳದ ವಿರುದ್ಧ ಪಿತೂರಿ ನಡೆದಿದೆ ಎಂಬ ಆರೋಪವನ್ನು ಪುನರುಚ್ಚರಿಸಿದೆ.

”ಬಂಗಾಳದಿಂದ ಬಿಜೆಪಿಗೆ 35 ಸ್ಥಾನಗಳ ಅವರ ಹಕ್ಕುಗಳ ಬಗ್ಗೆ, 2021 ರ ಬಂಗಾಳ ಚುನಾವಣೆಗೆ ಮೊದಲು ‘ಅಬ್ಕಿ ಬಾರ್ 200 ಪಾರ್’ ಎಂದು ಹೇಳಿದ್ದ ಶಾ ಅವರೇ. ಕೊನೆಯಲ್ಲಿ ಬಿಜೆಪಿಗೆ ಮೂರು ಅಂಕಿಗಳ ಅಂಕವನ್ನು ಕೂಡ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಮುಂಬರುವ ಪಂಚಾಯತ್ ಚುನಾವಣೆಗಳು ಮತ್ತು ನಂತರದ ಸಾರ್ವತ್ರಿಕ ಚುನಾವಣೆಗಳಲ್ಲೂ ಇದೇ ಮುಂದುವರೆಯುತ್ತದೆ” ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ಯಾನೇಶ್ ಕುಮಾರ್ ರಕ್ಷಣೆಗಾಗಿ ದೆಹಲಿಯನ್ನೇ ಭಾರತ-ಪಾಕ್ ಗಡಿಯನ್ನಾಗಿ ಪರಿವರ್ತಿಸಿದ ಮೋದಿ: ಅಭಿಜೀತ್ ದಿಪ್ಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ನಡೆದಿರುವ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ಸಂಘಟನೆಗಳು,...

ಸಹಪಾಠಿಗಳ ಜಾತಿ, ಪ್ರವೇಶದ ವರ್ಗ, ರ‍್ಯಾಂಕ್ ಕೇಳಬೇಡಿ: ದರ್ಶನ್, ಸಾಹಿಲ್ ಸಾವುಗಳ ಬೆನ್ನಲ್ಲೇ ತಾರತಮ್ಯ ವಿರೋಧಿ ನಿಯಮ ನೆನಪಿಸಿದ ಐಐಟಿ ಬಾಂಬೆ

ಮುಂಬೈ: ಸಹಪಾಠಿಗಳ ಜಾತಿ, ಪ್ರವೇಶದ ವರ್ಗ ಅಥವಾ ಪ್ರವೇಶ ಪರೀಕ್ಷೆಯ ರ‍್ಯಾಂಕ್‌ಗಳ ಬಗ್ಗೆ ಪ್ರಶ್ನಿಸುವುದು ತಾರತಮ್ಯಕ್ಕೆ ಕಾರಣವಾಗಬಹುದು. ಇಂತಹ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ತನ್ನ ವಿದ್ಯಾರ್ಥಿಗಳಿಗೆ...

ಲೈಂಗಿಕ ಕಿರುಕುಳದ ಆರೋಪ ಮಾಡಿದ ಪತ್ರಕರ್ತೆಯ ವಿರುದ್ಧ ಜಾತಿ ನಿಂದನೆ ಪ್ರಕರಣ: ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುವಾಗ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಮಹಿಳಾ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ...

ಸಿಇಸಿ ವಿರೋಧಿ ಪ್ರತಿಭಟನೆ: ಮೆಟ್ರೋ ನಿರ್ಬಂಧ, ಇಂಟರ್ನೆಟ್ ಸ್ಥಗಿತ ಪ್ರಕರಣ: ಸುಪ್ರೀಂ ಕೋರ್ಟ್ ಗೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಕಾರ್ಯದರ್ಶಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳ ಮೇಲೆ ನಿರ್ಬಂಧ ವಿಧಿಸಿದ ಹಾಗೂ ಇಂಟರ್ನೆಟ್...

‘ಯಾರೂ ನಮ್ಮನ್ನು ಬೆದರಿಸಿ ಮಣಿಸಲು ಸಾಧ್ಯವಿಲ್ಲ’: ವಿಪಕ್ಷಗಳ ಸುಪ್ರೀಂ ಕೋರ್ಟ್ ಮಾರ್ಚ್ ಕುರಿತು ಸಿಜೆಐ ಹೇಳಿಕೆ

ನ್ಯಾಯಾಲಯ ಸಂಕೀರ್ಣಗಳ ಸಮೀಪ ಪ್ರತಿಭಟನೆಗಳು ಮತ್ತು ಮೆರವಣಿಗೆಗಳಿಗೆ ನಿಯಂತ್ರಕ ಚೌಕಟ್ಟೊಂದನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಇಂದು (ಅ.15) ನೋಟಿಸ್ ಜಾರಿ ಮಾಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

ದೆಹಲಿ ಪ್ರತಿಭಟನೆ ಹಾಗೂ ಜಂತರ್ ಮಂತರ್ ರದ್ದತಿ ವಿವಾದ: ಕೇಂದ್ರ ಸರ್ಕಾರ ಹಾಗೂ ಪೊಲೀಸರಿಗೆ ಸುಪ್ರೀಂ ನೋಟಿಸ್; ವಿಡಿಯೋ ಸಾಕ್ಷ್ಯ ಭದ್ರಪಡಿಸಲು ನಿರ್ದೇಶನ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ನಡೆಸಿದ್ದರೆನ್ನಲಾದ ಅತಿಯಾದ ಬಲಪ್ರಯೋಗ, ಸಾರ್ವಜನಿಕರ ಸಂಚಾರ ನಿರ್ಬಂಧ ಹಾಗೂ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ 'ಜಂತರ್ ಮಂತರ್' ಅನ್ನು ರದ್ದುಗೊಳಿಸಿದ (De-notification) ಕೇಂದ್ರ...

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರಿಗೆ ‘ಹಿಂದುಳಿದ ವರ್ಗದ’ ಮೀಸಲಾತಿ ಇಲ್ಲ : ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಯು ತನ್ನ ಮತಾಂತರ ಪೂರ್ವದ ಜಾತಿ ಸ್ಥಿತಿಯ ಆಧಾರದ ಮೇಲೆ ಹಿಂದುಳಿದ ವರ್ಗದ (ಬಿಸಿ) ಮೀಸಲಾತಿಗೆ ಅರ್ಹನಲ್ಲ ಎಂದು ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್...

‘ಎಸ್‌ಐಆರ್’ ವಿರುದ್ಧ ಇಂಡಿಯಾ ನಾಯಕರ ಅರ್ಜಿ: ಸುಪ್ರೀಂ ಕೋರ್ಟ್‌ನಿಂದ ಚುನಾವಣಾ ಆಯೋಗಕ್ಕೆ ನೋಟಿಸ್

ಭಾರತೀಯ ಚುನಾವಣಾ ಆಯೋಗ ದೇಶಾದ್ಯಂತ ಜಾರಿಗೆ ತಂದಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯ ಕಾನೂನಾತ್ಮಕತೆಯನ್ನು ಪ್ರಶ್ನಿಸಿ ವಿಪಕ್ಷ 'ಇಂಡಿಯಾ' ಒಕ್ಕೂಟ ಸಲ್ಲಿಸಿರುವ ಪ್ರಮುಖ...

ಸಿಇಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ನೋಟಿಸ್: ಅಕ್ಟೋಬರ್ 28ರ ಗಡುವು

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್ ಅವರಿಗೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ...

2018ರ ‘ಬಿಜೆಪಿ ಐಟಿ ಸೆಲ್’ ವೀಡಿಯೊ ವಿವಾದ: ಯೂಟ್ಯೂಬರ್ ಧ್ರುವ್ ರಾಠಿಗೆ ಹೊಸ ಸಮನ್ಸ್ ಜಾರಿ ಮಾಡಿದ ದೆಹಲಿ ಕೋರ್ಟ್!

ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ 2018ರ ಕ್ರಿಮಿನಲ್ ಮಾನಹಾನಿ ದೂರಿಗೆ (Criminal Defamation Case) ಸಂಬಂಧಿಸಿದಂತೆ, ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರಿಗೆ ದೆಹಲಿಯ ಸಾಕೇತ್ ನ್ಯಾಯಾಲಯವು ಹೊಸದಾಗಿ...