Homeಕರೋನಾ ತಲ್ಲಣಕುಂಭಮೇಳದ ’ಶಾಹಿ ಸ್ನಾನ'ದಲ್ಲಿ ದೈಹಿಕ ಅಂತರ ಅಸಾಧ್ಯ ಎಂದ ಅಧಿಕಾರಿಗಳು

ಕುಂಭಮೇಳದ ’ಶಾಹಿ ಸ್ನಾನ’ದಲ್ಲಿ ದೈಹಿಕ ಅಂತರ ಅಸಾಧ್ಯ ಎಂದ ಅಧಿಕಾರಿಗಳು

- Advertisement -
- Advertisement -

ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದ ’ಶಾಹಿ ಸ್ನಾನ’ದ ಸಂದರ್ಭದಲ್ಲಿ ಘಾಟ್‌ಗಳಲ್ಲಿ ಪರಸ್ಪರ ಅಂತರವನ್ನು ಜಾರಿಗೊಳಿಸಲು ಪೊಲೀಸರು ಪ್ರಯತ್ನಿಸಿದರೆ ಕಾಲ್ತುಳಿತ ಮುಂತಾದ ಪರಿಸ್ಥಿತಿ ಉದ್ಭವಿಸಬಹುದು ಎಂದು ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ.

ಕುಂಭಮೇಳದ ಉಸ್ತುವಾರಿ ವಹಿಸಿಕೊಂಡಿರುವ ಸಂಜಯ್ ಗುಂಜ್ಯಾಲ್, “ಎರಡನೇ`ಶಾಹಿ ಸ್ನಾನ’ದ ಸಂದರ್ಭದಲ್ಲಿ ಘಾಟ್‌ಗಳಲ್ಲಿ ನಾವು ಪರಸ್ಪರ ದೂರವನ್ನು ಜಾರಿಗೊಳಿಸಲು ಪ್ರಯತ್ನಿಸಿದರೆ ಕಾಲ್ತುಳಿತದ ಪರಿಸ್ಥಿತಿ ಉದ್ಭವಿಸಬಹುದು, ಆದ್ದರಿಂದ ಇಲ್ಲಿ ದೈಹಿಕ ಅಂತರವನ್ನು ಜಾರಿಗೊಳಿಸಲು ನಮಗೆ ಸಾಧ್ಯವಾಗುವುದಿಲ್ಲ”ಎಂದಿದ್ದಾರೆ.

’ಕೊರೊನಾ ನಿಯಮಾವಳಿಗಳನ್ನು ಅನುಸರಿಸಲು ನಾವು ಜನರಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಅಪಾರ ಜನಸಂದಣಿಯಿಂದಾಗಿ, ಚಲನ್‌ಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಘಾಟ್‌ಗಳಲ್ಲಿ ದೈಹಿಕ ಅಂತರವನ್ನು ಖಚಿತಪಡಿಸುವುದು ಬಹಳ ಕಷ್ಟ” ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕುಂಭಮೇಳಕ್ಕೆ ಬರುವ ಭಕ್ತಾದಿಗಳಿಗೆ ಕೊರೊನಾ ನೆಗೆಟಿವ್ ವರದಿ ಅಗತ್ಯವಿಲ್ಲ: ಉತ್ತರಾಖಂಡ್ ಸಿಎಂ

ಸೋಮವಾರ, ಕುಂಭಮೇಳದ ಎರಡನೇ ‘ಶಾಹಿ ಸ್ನಾನ’ ಸಂದರ್ಭದಲ್ಲಿ ಉತ್ತರಾಖಂಡದ ಹರಿದ್ವಾರದ ಹರ್‌ ಕಿ ಪೌಡಿಯ ಗಂಗಾ ನದಿಯಲ್ಲಿ ಸಾವಿರಾರು ಭಕ್ತರು ಸ್ನಾನ ಮಾಡಿದ್ದಾರೆ. ಸಾರ್ವಜನಿಕರಿಗೆ ಬೆಳಿಗ್ಗೆ 7 ಗಂಟೆಯವರೆಗೆ ಇಲ್ಲಿ ಸ್ನಾನಕ್ಕೆ ಅವಕಾಶ ನೀಡಲಾಗಿತ್ತು. 350 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಕುಂಭಮೇಳ ಪ್ರದೇಶದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಮಾಸ್ಕ್ ಧರಿಸದೆ ಇರುವ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುತ್ತಿದೆ.

ಇದನ್ನೂ ಓದಿ: ಕೂಲಿ ಕಾರ್ಮಿಕ ಸೈಯದ್ ಇಸಾಕ್‌ರ ಗ್ರಂಥಾಲಯಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು: 11 ಸಾವಿರ ಪುಸ್ತಕಗಳು ಭಸ್ಮ

ಘಾಟ್‌ಗಳನ್ನು ಖಾಲಿ ಮಾಡಲು ಮತ್ತು ಸ್ವಚ್ಛಗೊಳಿಸಲು ’ಅಖಾರ’ರ ಸ್ನಾನದ ನಡುವೆ ಅರ್ಧ ಘಂಟೆಯ ಅಂತರವನ್ನು ನಾವು ನೀಡುತ್ತಿದ್ದೇವೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ನಾವು ನಿರೀಕ್ಷಿಸಿದ್ದಕ್ಕಿಂತ 50% ಕಡಿಮೆ ಜನ ಸೇರಿದ್ದಾರೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್‌ 11ರಂದು ಮೊದಲ ಶಾಹಿ ಸ್ನಾನ ನಡೆದಿತತ್ತು. ಎರಡನೇ ಪವಿತ್ರ ಸ್ನಾನ ಸೋಮವಾರ ಹಾಗೂ ಮೂರನೇ ಶಾಹಿ ಸ್ನಾನವು ಏಪ್ರಿಲ್‌ 14ರಂದು ನಡೆಯಲಿದೆ.

ಉತ್ತರಾಖಂಡದಲ್ಲಿ ಭಾನುವಾರ 1,333 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,08,812 ಕ್ಕೆ ತಲುಪಿದೆ.


ಇದನ್ನೂ ಓದಿ: ಇತ್ತ ಲಸಿಕೆ ಇಲ್ಲದೆ ರಾಜ್ಯಗಳ ಪರದಾಟ, ಅತ್ತ ಗುಜರಾತ್‌ನಲ್ಲಿ ಬಿಜೆಪಿಯಿಂದ 1000 ರೆಮ್‌ಡೆಸಿವಿರ್‌ ಲಸಿಕೆ ವಿತರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...