Homeಮುಖಪುಟಲಡಾಖ್: 'ರಾಜ್ಯತ್ವ'ಕ್ಕೆ ಆಗ್ರಹಿಸಿ ಪ್ರತಿಭಟನೆ; ಕೊರೆವ ಚಳಿಯಲ್ಲೂ ಬೀದಿಗಿಳಿದ ಸಾವಿರಾರು ಜನ

ಲಡಾಖ್: ‘ರಾಜ್ಯತ್ವ’ಕ್ಕೆ ಆಗ್ರಹಿಸಿ ಪ್ರತಿಭಟನೆ; ಕೊರೆವ ಚಳಿಯಲ್ಲೂ ಬೀದಿಗಿಳಿದ ಸಾವಿರಾರು ಜನ

- Advertisement -
- Advertisement -

ಲಡಾಖ್ ಪ್ರದೇಶಕ್ಕೆ ‘ರಾಜ್ಯತ್ವ’ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಜನರು; ಕೊರೆವ ಚಳಿಯಲ್ಲೂ ಲೆಕ್ಕಿಸದೆ ಬೀದಿಗೆ ಇಳಿದಿದ್ದಾರೆ. ‘ಕೇಂದ್ರಾಡಳಿತ ಪ್ರದೇಶಕ್ಕೆ ಆರನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯತ್ವ ಮತ್ತು ಸಾಂವಿಧಾನಿಕ ರಕ್ಷಣೆ’ಗಾಗಿ ಒತ್ತಾಯಿಸಿ ಸಾವಿರಾರು ಜನರು ಮೆರವಣಿಗೆಗಳಲ್ಲಿ ಭಾಗವಹಿಸಿದ್ದರಿಂದ ಲಡಾಖ್ ವ್ಯಾಪಕವಾದ ಸ್ಥಗಿತಕ್ಕೆ ಸಾಕ್ಷಿಯಾಯಿತು.

ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆಗಳನ್ನು ಆಯೋಜಿಸಿವೆ. ರಕ್ತ ಹೆಪ್ಪುಗಟ್ಟುವ ತಾಪಮಾವಿದ್ದರೂ ಸಾವಿರಾರು ಜನ ಪುರುಷರು ಮತ್ತು ಮಹಿಳೆಯರು ಲೇಹ್ ಮುಖ್ಯ ನಗರದ ಮೂಲಕ ಮೆರವಣಿಗೆ ನಡೆಸಿದರು. ಲಡಾಖ್‌ನ ಎರಡು ಪ್ರದೇಶಗಳನ್ನು ಪ್ರತಿನಿಧಿಸುವ ‘ಎಲ್‌ಎಬಿ ಮತ್ತು ಕೆಡಿಎ’ಗಳು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾದಾಗಿನಿಂದ ರಾಜ್ಯತ್ವ ಮತ್ತು ಆರನೇ ಶೆಡ್ಯೂಲ್ ಸ್ಥಾನಮಾನಕ್ಕಾಗಿ ಪ್ರತಿಪಾದಿಸುತ್ತಿವೆ. ಆಗಸ್ಟ್ 2021 ರಲ್ಲಿ, ಎಲ್‌ಎಬಿ ಮತ್ತು ಕೆಡಿಎ ತಮ್ಮ ಬೇಡಿಕೆಗಳನ್ನು ವರ್ಧಿಸಲು ಒಟ್ಟಿಗೆ ಸೇರಿಕೊಂಡವು.

ಪ್ರತಿಭಟನಾಕಾರರು ಲಡಾಖ್‌ನ ರಾಜ್ಯತ್ವ, ಸಂವಿಧಾನದ ಆರನೇ ಶೆಡ್ಯೂಲ್‌ನ ಅನುಷ್ಠಾನ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಸಂಸದೀಯ ಸ್ಥಾನಗಳನ್ನು ಸ್ಥಾಪಿಸುವ ಘೋಷಣೆಗಳನ್ನು ಕೂಗಿದರು.

ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) 6 ನೇ ಶೆಡ್ಯೂಲ್ ಜಾರಿ, ರಾಜ್ಯತ್ವ, ಭೂಮಿ ಮತ್ತು ಉದ್ಯೋಗ ಭದ್ರತೆ ಮತ್ತು ಪ್ರತ್ಯೇಕತೆಗೆ ಒತ್ತಾಯಿಸಿ ಕರೆ ನೀಡಿರುವ ‘ಲೇಹ್ ಚಲೋ ಆಂದೋಲನ’ದಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ.

ಆರ್ಟಿಕಲ್ 370 ಮತ್ತು 35 (ಎ) ರದ್ದತಿಯ ನಂತರ ಲಡಾಖ್ ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾಯಿತು. ಇದು ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕಾರಣವಾಯಿತು. ಲಡಾಖ್‌ನ ನಿವಾಸಿಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಸುದೀರ್ಘ ಕಾಲದ ಕೇಂದ್ರದ ಆಡಳಿತದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಈ ಪ್ರದೇಶವನ್ನು ಆಳಲು ತಮ್ಮ ಪ್ರತಿನಿಧಿಗಳನ್ನು ನಾವೆ ಆಯ್ಕೆ ಮಾಡಲು ಸಾಧ್ಯವಾಗುವ ಸಂಪೂರ್ಣ ರಾಜ್ಯತ್ವ ಮಾತ್ರ ತಮ್ಮ ಬೇಡಿಕೆಗಳನ್ನು ಪೂರೈಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಲಡಾಖ್ ಜನರಿಗೆ ‘ಭೂಮಿ ಮತ್ತು ಉದ್ಯೋಗದ ರಕ್ಷಣೆಯನ್ನು ಖಾತ್ರಿಪಡಿಸುವ’ ಉದ್ದೇಶದಿಂದ ಜನವರಿ 2023ರಲ್ಲಿ, ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸಚಿವ ರೈ ನೇತೃತ್ವದಲ್ಲಿ ಉನ್ನತ ಅಧಿಕಾರದ ಸಮಿತಿಯನ್ನು ಸ್ಥಾಪಿಸಿತು. ಲಡಾಖ್‌ನ ಪ್ರತಿನಿಧಿಗಳು ಅಲ್ಲಿನ ಸಾರ್ವಜನಿಕ ಸೇವಾ ಆಯೋಗವನ್ನು ಹಾಕಬೇಕೆಂದು ಒತ್ತಾಯಿಸಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಇದಲ್ಲದೆ, ಪ್ರತಿನಿಧಿಗಳು ಮತ್ತು ರಾಜ್ಯ ಸಚಿವ ನಡುವಿನ ಮುಂಬರುವ ಸಭೆಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.ಆದರೆ, ಫೆಬ್ರುವರಿ ಆರಂಭದಲ್ಲಿಯೇ ಸಭೆ ನಡೆಯುವ ಸಾಧ್ಯತೆ ಇದೆ ಎಂಬ ಸೂಚನೆಗಳಿವೆ.

ಜ್ಞಾಪಕ ಪತ್ರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019 ರ ತಿದ್ದುಪಡಿಗಾಗಿ ಕರಡು ಮಸೂದೆಯನ್ನು ಸಹ ಒಳಗೊಂಡಿದೆ. ಇದು ಲಡಾಖ್ ಪ್ರದೇಶದ ಇಬ್ಬರು ಸಂಸತ್ತಿನ ಸದಸ್ಯರಿಗೆ – ಲೇಹ್‌ನಿಂದ ಒಬ್ಬರು ಮತ್ತು ಕಾರ್ಗಿಲ್‌ನಿಂದ ಒಬ್ಬರಿಗೆ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ. ಹೆಚ್ಚುವರಿಯಾಗಿ, ಸಿಕ್ಕಿಂನಂತಹ ರಾಜ್ಯಗಳಂತೆಯೇ ಲಡಾಖ್ ರಾಜ್ಯಸಭೆಯಲ್ಲಿ ಒಂದು ಸ್ಥಾನವನ್ನು ಪಡೆಯುತ್ತದೆ ಎಂಬ ಆಶಾವಾದವಿದೆ.

ಇದನ್ನೂ ಓದಿ; ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಬೆಂಗಳೂರು-ಪುಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...