Homeಮುಖಪುಟಲೋಕಸಭಾ ಚುನಾವಣೆ: 362 ಕ್ಷೇತ್ರಗಳಲ್ಲಿ 5,54,598 ಮತಗಳನ್ನು ಎಣಿಕೆಗೆ ಪರಿಗಣಿಸದೆ ಕೈಬಿಡಲಾಗಿದೆ

ಲೋಕಸಭಾ ಚುನಾವಣೆ: 362 ಕ್ಷೇತ್ರಗಳಲ್ಲಿ 5,54,598 ಮತಗಳನ್ನು ಎಣಿಕೆಗೆ ಪರಿಗಣಿಸದೆ ಕೈಬಿಡಲಾಗಿದೆ

- Advertisement -
- Advertisement -

ಜೂನ್ 4 ರಂದು ಮಂಗಳವಾರ ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟಿಸುವ ವೇಳೆ ವಿವಿಧ ರಾಜ್ಯಗಳ 362 ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮೂಲಕ ಚಲಾವಣೆಯಾದ 5,54,598 ಮತಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಕಸದ ಬುಟ್ಟಿಗೆ ಹಾಕಿದೆ ಎಂದು ವರದಿಯಾಗಿದೆ.

ಅಲ್ಲದೆ, ಚುನಾವಣಾ ಆಯೋಗ 176 ಕ್ಷೇತ್ರಗಳಲ್ಲಿ 35,093 ಇವಿಎಂ ಮತಗಳನ್ನು ಹೆಚ್ಚುವರಿಯಾಗಿ ದಾಖಲಿಸಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಎರಡು ಅಂಕಿ ಅಂಶಗಳ ನಡುವೆ ತಾಳೆಯಾಗದೆ 542 ಕ್ಷೇತ್ರಗಳ ಪೈಕಿ 538ರಲ್ಲಿ ಮತಗಳ ಅಂತರ ಕಂಡು ಬಂದಿದೆ. ಅರ್ಥಾತ್ ಈ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾಯಿಸಲಾದ ಮತಗಳ ಸಂಖ್ಯೆ ಮತ್ತು ಫಲಿತಾಂಶದ ದಿನ ಎಣಿಕೆ ಮಾಡಲಾದ ಮತಗಳ ಸಂಖ್ಯೆಗಳು ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ (ಅಂಚೆ ಮತಗಳು ಹೊರತುಪಡಿಸಿ). ಕನಿಷ್ಠ 267 ಕ್ಷೇತ್ರಗಳಲ್ಲಿ ಚಲಾಯಿತ ಮತಗಳು ಮತ್ತು ಎಣಿಸಲಾದ ಮತಗಳ ನಡುವಿನ ವ್ಯತ್ಯಾಸ 500ಕ್ಕೂ ಹೆಚ್ಚಿದೆ.

ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆದ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದ ಅಂಕಿ ಅಂಶಗಳನ್ನು ಚುನಾವಣಾ ಆಯೋಗ ಮೇ 25ರಂದು ಬಿಡುಗಡೆ ಮಾಡಿತ್ತು. ಆಯೋಗದ ಪ್ರಕಾರ ಈ ಕ್ಷೇತ್ರದಲ್ಲಿ ಚಲಾಯಿಸಿದ ಇವಿಎಂ ಮತಗಳ ಸಂಖ್ಯೆ 14,30,738. ಆದರೆ, ಜೂನ್ 4ರ ಮತ ಎಣಿಕೆಯಲ್ಲಿ ಎಣಿಸಲಾದ ಮತಗಳ ಸಂಖ್ಯೆ 14,13,947. ಅಂದರೆ 16,791 ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ.

ಏಪ್ರಿಲ್ 26ರಂದು ಮತದಾನ ನಡೆದ ಅಸ್ಸಾಮಿನ ಕರೀಮ್ ಗಂಜ್ ಕ್ಷೇತ್ರದಲ್ಲಿ ಆಯೋಗದ ಅಂಕಿ ಅಂಶಗಳ ಪ್ರಕಾರ ಚಲಾಯಿಸಲಾದ ಒಟ್ಟು ಇವಿಎಂ ಮತಗಳು 11,32,538. ಆದರೆ, ಫಲಿತಾಂಶದ ದಿನದಂದು ಎಣಿಸಲಾದ ಮತಗಳ ಸಂಖ್ಯೆ 11,40,349. ಹೆಚ್ಚುವರಿಯಾಗಿ 3,811 ಮತಗಳನ್ನು ಹೆಚ್ಚುವರಿಯಾಗಿ ಎಣಿಸಲಾಗಿದೆ.

ಈ ಎರಡು ಅಂಕಿ ಅಂಶಗಳು ತಾಳೆಯಾಗದೆ ಇರುವುದಕ್ಕೆ ಆಯೋಗ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಎಕ್ಸ್‌ನಲ್ಲಿ ಉತ್ತರ ಪ್ರದೇಶಕ್ಕೆ ಸೀಮಿತಗೊಂಡಂತೆ ಈ ವ್ಯತ್ಯಾಸದ ಕುರಿತು ವಿವರಣೆ ನೀಡಿದ್ದಾರೆ.

“ಚುನಾವಣಾ ಆಯೋಗ ಮತ್ತು ಹಲವಾರು ಕೈಪಿಡಿಗಳಲ್ಲಿ ಒದಗಿಸಲಾಗಿರುವ ಸವಿವರ ಶಿಷ್ಟಾಚಾರದ (ಪ್ರೋಟೋಕಾಲ್) ಪ್ರಕಾರ ಹಲವು ನಿರ್ದಿಷ್ಟ ಮತಗಟ್ಟೆಗಳ ಮತಗಳನ್ನು ಎಣಿಕೆ ಮಾಡಿಲ್ಲ. ಹೀಗಾಗಿ, ಚಲಾಯಿತ ಮತಗಳು ಮತ್ತು ಎಣಿಸಿದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅಸಲು ಮತದಾನ ಶುರುವಾಗುವ ಮುನ್ನ ಕಂಟ್ರೋಲ್ ಯೂನಿಟ್‌ನಲ್ಲಿ ಉಳಿದಿರಬಹುದಾದ ಅಣಕು ಚುನಾವಣಾ ಅಂಕಿ ಅಂಶವನ್ನು ಚುನಾವಣಾಧಿಕಾರಿ ಅಳಿಸಲು ಸಾಧ್ಯವಾಗದೆ ಹೋದಾಗ ಅಥವಾ ವಿವಿಪ್ಯಾಟ್ ನಲ್ಲಿರುವ ಅಣಕು ಮತ ಚೀಟಿಗಳನ್ನು ಅಸಲು ಮತದಾನ ಆರಂಭ ಆಗುವ ಮುನ್ನ ತೆಗೆದು ಹಾಕದೆ ಇದ್ದಾಗ ಈ ವ್ಯತ್ಯಾಸ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.

ಎರಡನೆಯದಾಗಿ ಕಂಟ್ರೋಲ್ ಯೂನಿಟ್‌ನಲ್ಲಿ ದಾಖಲಾದ ಒಟ್ಟು ಚಲಾಯಿತ ಮತಗಳ ಸಂಖ್ಯೆಗೂ ಚುನಾವಣಾಧಿಕಾರಿ ಭರ್ತಿ ಮಾಡಿದ ನಮೂನೆ 17ಸಿ ಯಲ್ಲಿ ದಾಖಲಿಸಿದ ಒಟ್ಟು ಚಲಾಯಿತ ಮತಗಳಿಗೂ ಅಂತರವಿದ್ದಾಗ ಈ ವ್ಯತ್ಯಾಸ ಕಂಡು ಬಂದಿದೆ. ಈ ಎರಡೂ ಸನ್ನಿವೇಶಗಳಲ್ಲಿ ಚುನಾವಣಾಧಿಕಾರಿಯಿಂದ ಆಕಸ್ಮಿಕವಾಗಿ ಜರುಗುವ ದೋಷಗಳಿವು. ಉದ್ದೇಶಪೂರ್ವಕ ಅಲ್ಲ. ಎಲೆಕ್ಟ್ರಾನಿಕ್ ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಮತದಾನದ ದಿನ ಬೆಳಗಿನ ಜಾವ ಐದಕ್ಕೆ ಅಣಕು ಮತದಾನ ನಡೆಯುತ್ತದೆ. ಪ್ರತಿ ಅಭ್ಯರ್ಥಿಗೆ ಐದು ಅಣಕು ಮತಗಳನ್ನು ಹಾಕಲಾಗುತ್ತದೆ. ಅವುಗಳ ಫಲಿತಾಂಶಗಳನ್ನು ಆನಂತರ ಪರೀಕ್ಷಿಸಲಾಗುತ್ತದೆ.

ವಾಸ್ತವ ಮತದಾನ ಆರಂಭ ಆಗುವ ಮುನ್ನ ಕಂಟ್ರೋಲ್ ಯೂನಿಟ್‌ನಿಂದ ಈ ಮತಗಳನ್ನು ಚುನಾವಣಾಧಿಕಾರಿ ಅಳಿಸಿ ಹಾಕಬೇಕು. ನಮೂನೆ 17 ಸಿ ಎಂಬುದು ಪ್ರತಿಯೊಂದು ಮತಗಟ್ಟೆಯ ಮತದಾನದ ಸಮಗ್ರ ದಾಖಲೆ. ಪ್ರತಿಯೊಂದು ಮತಗಟ್ಟೆಗೆ ಹಂಚಿಕೆ ಮಾಡಲಾದ ಒಟ್ಟು ಮತದಾರರ ಸಂಖ್ಯೆ, ನಿರ್ದಿಷ್ಟ ಮತಗಟ್ಟೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡ ಒಟ್ಟು ಮತದಾರರ ಸಂಖ್ಯೆ, ಮತದಾನ ಮಾಡದೆ ಇರುವ ಮತದಾರರ ಸಂಖ್ಯೆ, ಮತದಾನ ಮಾಡಲು ಅವಕಾಶ ನಿರಾಕರಿಸಲಾದವರ ಸಂಖ್ಯೆ, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮುಖಾಂತರ ಚಲಾಯಿತ ಮತಗಳ ಸಂಖ್ಯೆ ಹಾಗೂ ಮತಪತ್ರಗಳು ಮತ್ತು ಪೇಪರ್ ಮೊಹರುಗಳ ಕುರಿತ ವಿವರಗಳನ್ನು ಫಾರ್ಮ್ 17 ಸಿ ಹೊಂದಿರುತ್ತದೆ.

ಆದರೆ, ಯಾವ್ಯಾವ ಸನ್ನಿವೇಶಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಬಹುದು ಎಂಬುವುದಕ್ಕೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿಲ್ಲ.

ಬಿಹಾರದ ಬಕ್ಸರ್‌ (1010), ಮಧ್ಯ ಪ್ರದೇಶದ ಮಂಡ್ಲಾ (1089), ಆಂಧ್ರ ಪ್ರದೇಶದ ಓಂಗೋಲ್ (1467) ಹಾಗೂ ಅಸ್ಸಾಮಿನ ಕರೀಮ್ ಗಂಜ್ (3811) ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಲಾಗಿದೆ. ಕರೀಮ್ ಗಂಜ್‌ನಲ್ಲಿ ಭಾರತೀಯ ಜನತಾ ಪಾರ್ಟಿಯ ಕೃಪಾನಾಥ ಮಲ್ಲಾ 18,360 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಡಿಶಾದ ಜಜಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಬೀಂದ್ರ ನಾರಾಯಣ ಬೆಹೆರ ಅವರು ಕೇವಲ 1,587 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಎಣಿಸಲಾಗಿರುವ ಹೆಚ್ಚುವರಿ ಮತಗಳು 809.

ಈ ವ್ಯತ್ಯಾಸಗಳಿಗೆ ಕ್ಷೇತ್ರವಾರು ನಿರ್ದಿಷ್ಟ ವಿವರಣೆಗಳನ್ನು ನೀಡಬೇಕೆಂದು ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ಸಹಸಂಸ್ಥಾಪಕ ಜಗದೀಪ್ ಛೋಕರ್ ಚುನಾವಣಾ ಆಯೋಗವನ್ನು ಒತ್ತಾಯಪಡಿಸಿದ್ದಾರೆ.

ಇವಿಎಂ ಮತಗಳ ಹೆಚ್ಚುವರಿ ಅಥವಾ ಕೊರತೆಯ ಕುರಿತು ಆಯೋಗ ಈವರೆಗೆ ಸಾಮಾನ್ಯ ವಿವರಣೆ ನೀಡಿದೆ. ಅದೂ ಟ್ವಿಟರ್ ನಲ್ಲಿ. ನಿರ್ದಿಷ್ಟ ವಿವರಗಳನ್ನು ನೀಡಲೇಬೇಕು. ಈ ಕಾರಣಕ್ಕಾಗಿ ನಮೂನೆ 17ಸಿ ಯನ್ನು ಸಾರ್ವಜನಿಕಗೊಳಿಸಬೇಕು ಎಂಬ ವಾದಕ್ಕೆ ಹೆಚ್ಚು ಪುಷ್ಟಿ ನೀಡುವ ಅಂಶವಿದು. ಚುನಾವಣೆಯ ಫಲಿತಾಂಶಗಳ ಕುರಿತು ನಾವು ಸಂದೇಹ ವ್ಯಕ್ತಪಡಿಸುತ್ತಿಲ್ಲ. ಆದರೆ, ಮತ ಎಣಿಕೆಯ ಕುರಿತು ಪಾರದರ್ಶಕವಾದ ಮತ್ತು ಕಟ್ಟು ನಿಟ್ಟಾದ ವ್ಯವಸ್ಥೆ ಇರಲೇಬೇಕು ಎಂಬುವುದು ಛೋಕರ್ ಅಭಿಪ್ರಾಯ.

ತಮಿಳುನಾಡಿನ ತಿರುವಳ್ಳೂರಿನಲ್ಲಿ ಚಲಾಯಿತ ಮತಗಳಿಗಿಂತ 16,791 ಕಡಿಮೆ ಮತಗಳನ್ನು ಎಣಿಸಲಾಗಿದೆ. ಅಸ್ಸಾಮಿನ ಕೋಕ್ರಝಾರ್ ನಲ್ಲಿ ಇಂತಹ ಮತಗಳ ಸಂಖ್ಯೆ 10,760. ಒಡಿಶಾದ ಧೇಂಕನಾಳದಲ್ಲಿ 9,427. ಕೇರಳದ ಆಲಪ್ಪುಝದಲ್ಲಿ 7,928 ಮತ್ತು ಆಂಧ್ರ ಪ್ರದೇಶದ ಗುಂಟೂರಿನಲ್ಲಿ 7,928.

ಕೋಕ್ರಝಾರ್‌ನಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಜೊಯೊಂತ ಬಸುಮತಾರಿ 51,580 ಮತಗಳಿಂದ ಗೆದ್ದಿದ್ದಾರೆ. ಉತ್ತರ ಪ್ರದೇಶದ ಅಲೀಗಢದಲ್ಲಿ ಬಿಜೆಪಿಯ ಸತೀಶ್ ಕುಮಾರ್ ಗೌತಮ್ 15,647 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಎಣಿಕೆಗೆ ಪರಿಗಣಿಸದೆ ಕೈ ಬಿಟ್ಟ ಮತಗಳ ಸಂಖ್ಯೆ 5,896.

2019ರಲ್ಲಿಯೂ ಇಂತಹುದೇ ದೋಷಗಳನ್ನು ಕ್ವಿಂಟ್ ವರದಿ ಬಯಲು ಮಾಡಿತ್ತು. ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ದೋಷಗಳನ್ನು ಸರಿಪಡಿಸುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟನ್ನು ಕೋರಿತ್ತು. ವಿವಿಪ್ಯಾಟ್ ಮತಚೀಟಿಗಳು ಮತ್ತು ಇವಿಎಂಗಳ ಮತಗಳನ್ನು ಸಂಪೂರ್ಣವಾಗಿ ಪರಸ್ಪರ ತಾಳೆ ನೋಡಬೇಕೆಂಬ ಅಹವಾಲಿನ ಜೊತೆಗೆ ಈ ಕೋರಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.

ನಾಲ್ಕು ಕೋಟಿ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡಿರುವುದಾಗಿಯೂ, ಎಣಿಸಲಾದ ಮತಗಳು ಮತ್ತು ವಿವಿಪ್ಯಾಟ್ ಚೀಟಿಗಳ ಸಂಖ್ಯೆಗಳ ನಡುವೆ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲವೆಂದೂ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ತೀರ್ಪು ಹೊರಬಿದ್ದಿತ್ತು.

ಕೃಪೆ : ದಿ ಕ್ವಿಂಟ್ 

ಇದನ್ನೂ ಓದಿ : ಮೋದಿ ನೇತೃತ್ವದ ನೂತನ ಎನ್‌ಡಿಎ ಸರಕಾರದಲ್ಲಿ ಮುಸ್ಲಿಮರಿಗೆ ಸಿಗದ ಪ್ರಾತಿನಿಧ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...