ಪಾಕಿಸ್ತಾನದ ಉತ್ತರ ಪ್ರಾಂತ್ಯದಲ್ಲಿ ಚೀನಾ ಪ್ರಜೆಗಳನ್ನು ಸಾಗಿಸುತ್ತಿದ್ದ ಬಸ್‌ ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 10 ಜನರು ಮೃತಪಪಟ್ಟಿದ್ದಾರೆ. ಮೃತರಲ್ಲಿ ಕನಿಷ್ಠ 6 ಜನರು ಚೀನಾ ಇಂಜನೀಯರ್‌ಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಸ್ಫೋಟದಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಮೃತಪಟ್ಟಿರುವುದು ದೃಢಪಟ್ಟಿದೆ.

ಪಾಕಿಸ್ತಾನದಲ್ಲಿನ ಚೀನಾ ರಾಯಭಾರ ಕಚೇರಿಯು ತನ್ನ ಪ್ರಜೆಗಳ ಸಾವಿನ ವಿಷಯವನ್ನು ದೃಢಪಡಿಸಿದ್ದು ಘಟನೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಆಗ್ರಹಿಸಿದೆ. ಜೊತೆಗೆ ಧಾಳಿ ನಡೆಸಿದವರನ್ನು ಬಂಧಿಸಿ ಶಿಕ್ಷೆ ವಿಧಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ.

ದಾಸು ಆಣೆಕಟ್ಟೆ ನಿರ್ಮಾಣದಲ್ಲಿ ತೊಡಗಿದ್ದ 37 ಚೀನಾ ಇಂಜಿನೀಯರ್‌ಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ರಕ್ಷಣೆಗೆ ಇಬ್ಬರು ಪಾಕಿಸ್ತಾನಿ ಯೋಧರು ಜೊತೆಯಿದ್ದರು. ಪ್ರಬಲ IED ದಾಳಿಯ ಭೀಕರತೆಗೆ ಬಸ್‌ ಸ್ಫೋಟಗೊಂಡಿದ್ದು ಇದುವರೆಗೆ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಇನ್ನು ಹಲವರು ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಅತಂಕ ಮನೆಮಾಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ಅಫ್ಘಾನ್‌-ಪಾಕಿಸ್ತಾನದ ಪ್ರಮುಖ ಗಡಿ ಕ್ರಾಸಿಂಗ್‌‌‌ ತಾಲಿಬಾನ್ ವಶಕ್ಕೆ

“ಸ್ಫೋಟದ ನಂತರ ಬಸ್ ಆಳವಾದ ಪ್ರಪಾತಕ್ಕೆ ಬಿದ್ದಿದ್ದು, ಬಸ್‌ನಲ್ಲಿದ್ದ ಒಬ್ಬ ಚೀನಾದ ಎಂಜಿನಿಯರ್ ಮತ್ತು ಓರ್ವ ಸೈನಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಪಾಕಿಸ್ತಾನ ಸೇನೆ ಮತ್ತು ಇತರ ಇಲಾಖೆಗಳು  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಗಾಯಗೊಂಡವರನ್ನು ಏರ್ ಆಂಬುಲೆನ್ಸ್ ಮೂಲಕ ರಕ್ಷಿಸಲು ಇಡೀ ಸರ್ಕಾರಿ ವ್ಯವಸ್ಥೆ ತೊಡಗಿಸಿಕೊಂಡಿದೆ. ” ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಬಸ್‌ನೊಳಗೆ ಸ್ಪೋಟಕಗಳನ್ನು ಇಡಲಾಗಿತ್ತೊ ಅಥವಾ ರಸ್ತೆ ಪಕ್ಕದಲ್ಲಿ ಸ್ಪೋಟಕಗಳನ್ನಿಟ್ಟು ಬಸ್‌ ಸ್ಫೋಟಿಸಲಾಗಿದೆಯೇ ಎಂಬ ಕುರಿತು ಇದುವರೆಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನದ ನಿರ್ಮಾಣ ಕಾರ್ಮಿಕರು ಹಲವಾರು ವರ್ಷಗಳಿಂದ ದಾಸು ಜಲವಿದ್ಯುತ್ ಯೋಜನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇದುವರೆಗೆ  ಅಲ್ಲಿಯಾವುದೇ ದಾಳಿ ಸಂಭವಿಸಿರಲಿಲ್ಲ.

ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಿಂದ ಸೇನಾಪಡೆಗಳನ್ನು ಗುರಿಯಾಗಿಸಕೊಂಡು ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು ಮಂಗಳವಾರ 11 ಜನ ಪಾಕಿಸ್ತಾನ ಆರ್ಮಿಯ ಯೋಧರನ್ನು ತೆಹ್ರಿಕ್‌ ಎ ತಾಲಿಬಾನ್‌ ಉಗ್ರರು ಹತ್ಯೆಗೈದಿದ್ದರು. ಕೆಲವು ಸೈನಿಕರನ್ನು ಒತ್ತೆಯಾಳುಗಳನ್ನಾಗಿ ಉಗ್ರರು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಉತ್ತರ ಪ್ರಾಂತ್ಯವು ಅಪಘಾನಿಸ್ಥಾನದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅಮೆರಿಕಾ ಸೇನಾಪಡೆಗಳು ಅಪಘಾನಿಸ್ತಾನವನ್ನು ತೊರೆಯುತ್ತಿರುವುದರಿಂದ ತಾಲಿಬಾನ್‌ ಪ್ರಾಬಲ್ಯ ಹೆಚ್ಚುತ್ತಿದ್ದು ಕಳೆದೊಂದು ತಿಂಗಳಿನಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಅಧಿಕಗೊಂಡಿವೆ.

ಇದನ್ನೂ ಓದಿ: ಪಾಕಿಸ್ತಾನ: ಉಗ್ರರಿಂದ 11 ಜನ ಸೈನಿಕರ ಹತ್ಯೆ-ಯೋಧರ ಅಪಹರಣ

 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here