ವಿಧಾನಸಭೆಯ ಕಲಾಪಕ್ಕೆ ಫೋನ್‌, ಟ್ಯಾಬ್‌ ತರುವಂತಿಲ್ಲ ನಿಯಮವನ್ನು ವಿರೋಧಿಸಿದ ಸಿದ್ದರಾಮಯ್ಯ…

ಮಾಧ್ಯಮಗಳು ಅವಕಾಶ ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳಿ, ನಿಯಮಗಳನ್ನು ಬಿಗಿಗೊಳಿಸಿ. ಅದನ್ನು ಬಿಟ್ಟು ಟಿವಿ ಚಾನೆಲ್‌ಗಳ ಕ್ಯಾಮರಾಮ್ಯಾನ್ ಮತ್ತು ಪತ್ರಿಕಾ ಛಾಯಾಗ್ರಾಹಕರ ವಿಧಾನಸಭೆ ಪ್ರವೇಶವನ್ನೇ ನಿರ್ಬಂಧಿಸಿರುವ ಸ್ಪೀಕರ್ ತೀರ್ಮಾನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರು “ಪಾರದರ್ಶಕತೆ ಬಗ್ಗೆ ಭೀತಿ ಯಾಕೆ?” ಎಂದು ಸ್ಫೀಕರ್‌ ತೀರ್ಮಾನವನ್ನು ಪ್ರಶ್ನಸುವ ಮೂಲಕ ಮಾಧ್ಯಮಗಳ ಪರವಾಗಿ ಬ್ಯಾಟಿಂಗ್‌ ನಡೆಸಿದ್ದಾರೆ..

ರಾಜ್ಯ ವಿಧಾನಸಭೆಯ ಅಧಿವೇಶನ ಇಂದಿನಿಂದ ಆರಂಭವಾಗಿದ್ದು ಮಾಧ್ಯಮದವರು ಮೊಬೈಲ್, ಟ್ಯಾಬ್‌ ಇತ್ಯಾದಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶದ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಪ್ರಕಣಣೆಯಲ್ಲಿ ತಿಳಿಸಿದ್ದರು.

ವಿಡಿಯೋ ಮತ್ತಿತರ ಮಾಹಿನಿಯನ್ನು ದೂರದರ್ಶನ ಕೇಂದ್ರದಿಂದಲೂ, ಫೋಟೊ ಸುದ್ದಿ ಮಾಹಿತಿಯನ್ನು ವಾರ್ತಾ ಇಲಾಖೆಯಿಂದಲೂ ಖಾಸಗಿ ವಾಹಿನಿಗಳು ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

ಬಹುತೇಕ ಮಾಧ್ಯಮಗಳು ಬಿಜೆಪಿಯ ಪರವಾಗಿದ್ದರೂ ಕೂಡ ಅವರಿಗೆ ಬಿಜೆಪಿ ಸರ್ಕಾರವೇ ಈ ನಿರ್ಭಂದ ವಿಧಿಸಿರುವುದು ಆಶ್ಚರ್‍ಯ ತಂದಿದೆ. ಹಲವು ಮಾಧ್ಯಮಗಳು ಸಿದ್ದರಾಮಯ್ಯನವರ ವಿರುದ್ಧವಿದ್ದರೂ ಸಹ ಸಿದ್ದರಾಮಯ್ಯನವರು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ದನಿಎತ್ತಿ ಪ್ರಸ್ತುತ ಆದೇಶವನ್ನು ವಿರೋಧಿಸಿದ್ದಾರೆ. ಇಂದಿನ ಸಾಮಾಜಿಕ ಸ್ಥಿತಿಗತಿಯ ವಿರೋಧಭಾಸವಿದು ಎಂದು ಪತ್ರಕರ್ತ ಅನಿಲ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here