ಮಹಾರಾಷ್ಟ್ರ ದೆಹಲಿಯ ಗುಲಾಮ ಅಲ್ಲ: ಪ್ರಧಾನಿಯು ಸಹೋದರ ಉದ್ಧವ್‌ ಠಾಕ್ರೆಗೆ ಸಹಕರಿಸಬೇಕು – ಶಿವಸೇನೆ

1

ಪ್ರಧಾನಿಯು ಕಿರಿಯ ಸಹೋದರ ಉದ್ಧವ್‌ ಠಾಕ್ರೆಯವರೊಂದಿಗೆ ಸಹಕರಿಸಬೇಕು ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.

“ಬಿಜೆಪಿ-ಶಿವಸೇನೆ ಮಹಾರಾಷ್ಟ್ರ ರಾಜಕೀಯದಲ್ಲಿ ಅಷ್ಟು ಹಿತಕರವಲ್ಲದ ಸಂಬಂಧಗಳನ್ನು ಹಂಚಿಕೊಳ್ಳುತ್ತಿವೆ. ಆದರೆ ನರೇಂದ್ರ ಮೋದಿ ಮತ್ತು ಉದ್ಧವ್ ಠಾಕ್ರೆ ಸಹೋದರ ಸಂಬಂಧಿಗಳಾಗಿದ್ದಾರೆ. ಆದ್ದರಿಂದ ಮಹಾರಾಷ್ಟ್ರದ ಕಿರಿಯ ಸಹೋದರನೊಂದಿಗೆ ಪ್ರಧಾನ ಮಂತ್ರಿಯಾಗಿ ಸಹಕರಿಸುವುದು ಮೋದಿಯವರ ಜವಾಬ್ದಾರಿಯಾಗಿದೆ ಎಂದು ಸಾಮ್ನಾದಲ್ಲಿ ಬರೆದಿದೆ.

ಇದನ್ನೂ ಓದಿ: ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್‌ ಠಾಕ್ರೆ ಪ್ರಮಾಣ ವಚನ ಸ್ವೀಕಾರ: ಮೊದಲ ಬಾರಿಗೆ ಠಾಕ್ರೆ ಸರ್ಕಾರ್‌ ಶುರು

ಪ್ರಧಾನ ಮಂತ್ರಿ ಯಾವುದೇ ಒಂದು ಪಕ್ಷಕ್ಕೆ ಸೇರಿಲ್ಲ. ಇಡೀ ದೇಶವನ್ನು ಅವರು ಪ್ರತಿನಿಧಿಸುತ್ತಾರೆ. “ಮಹಾರಾಷ್ಟ್ರದ ಜನರು ತೆಗೆದುಕೊಂಡ ನಿರ್ಧಾರವನ್ನು ದೆಹಲಿ ಗೌರವಿಸಬೇಕು ಮತ್ತು ರಾಜ್ಯ ಸರ್ಕಾರದ ಸ್ಥಿರತೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು” ಎಂದು ಪಕ್ಷವು ತನ್ನ ಮುಖವಾಣಿಯಲ್ಲಿ ಹೇಳಿದೆ.

“ತ್ವರಿತ ಅಭಿವೃದ್ಧಿಗಾಗಿ ಕೇಂದ್ರವು ರಾಜ್ಯದೊಂದಿಗೆ ಸಹಕರಿಸಬೇಕಾಗುತ್ತದೆ. ಮಹಾರಾಷ್ಟ್ರದ ರೈತರನ್ನು ಅವರ ದುಃಖದಿಂದ ಹೊರಗೆ ತರಲು ಕೇಂದ್ರವು ಸಹಾಯವನ್ನು ನೀಡಬೇಕಾಗುತ್ತದೆ” ಎಂದು ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.

“ದೆಹಲಿ ಖಚಿತವಾಗಿ ದೇಶದ ರಾಜಧಾನಿಯಾಗಿದೆ. ಆದರೆ ಮಹಾರಾಷ್ಟ್ರ ದೆಹಲಿಯ ಗುಲಾಮ ಅಲ್ಲ ಎಂದು ದೃಢವಾದ ನಿಲುವನ್ನು ತೆಗೆದುಕೊಂಡ ಬಾಲಾಸಾಹೇಬ್ ಠಾಕ್ರೆ ಅವರ ಪುತ್ರ ಉದ್ಧವ್ ಠಾಕ್ರೆ ಈಗ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ, ಸರ್ಕಾರವು ಖಚಿತವಾಗಿದೆ ಅದರ ಬೆನ್ನುಮೂಳೆಯು ಗಟ್ಟಿಯಾಗಿಯೇ ಇರುತ್ತದೆ “ಎಂದು ಅದು ಹೇಳಿದೆ.

ಇದನ್ನೂ ಓದಿ: ದುರಹಂಕಾರದ ರಾಜಕೀಯ ಕೆಲಸ ಮಾಡುವುದಿಲ್ಲ, ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ: ಗೆಲುವಿನ ಬಳಿಕ ಮಮತಾ ಬ್ಯಾನರ್ಜಿ

ಉದ್ಧವ್‌ ಠಾಕ್ರೆಯವರು ಬುಧವಾರ ಸಂಜೆ ಪ್ರಧಾನಿ ಮೋದಿಯವರನ್ನು ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಮುಂಬೈಗೆ ಆಹ್ವಾನಿಸಿದ್ದರು. ಆದರೆ ಭಾಗವಹಿಸಲು ಸಾಧ್ಯವಾಗದ ಮೋದಿಯವರು “ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್‌ ಠಾಕ್ರೆಜಿ ಅವರಿಗೆ ಅಭಿನಂದನೆಗಳು. ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಟ್ವೀಟ್ ಮಾಡಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಸಹೋದರತ್ವದ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿದರು ಸಹಿಸಿಕೊಂಡು ಸಹಕರಿಸಬೇಕಾ..?!! ಅಂತಹ ದರ್ದು ಬಿಜೆಪಿಗೆ ಬಂದಿಲ್ಲ..!!!

LEAVE A REPLY

Please enter your comment!
Please enter your name here