Homeಮುಖಪುಟರಾಜಕೀಯಕ್ಕಾಗಿ ಇತಿಹಾಸ ತಿರುಚಬಾರದು: 'ಸುಭಾಷ್ ಚಂದ್ರ ಬೋಸ್ ಪ್ರಥಮ ಪ್ರಧಾನಿ'ಎಂಬ ಕಂಗನಾ ಹೇಳಿಕೆಗೆ ನೇತಾಜಿ ಕುಟುಂಬದಿಂದ...

ರಾಜಕೀಯಕ್ಕಾಗಿ ಇತಿಹಾಸ ತಿರುಚಬಾರದು: ‘ಸುಭಾಷ್ ಚಂದ್ರ ಬೋಸ್ ಪ್ರಥಮ ಪ್ರಧಾನಿ’ಎಂಬ ಕಂಗನಾ ಹೇಳಿಕೆಗೆ ನೇತಾಜಿ ಕುಟುಂಬದಿಂದ ಖಂಡನೆ

- Advertisement -
- Advertisement -

“ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಭಾರತದ ಪ್ರಥಮ ಪ್ರಧಾನಿ” ಎಂಬ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಕಂಗನಾ ರಣಾವತ್‌ ಅವರ ಹೇಳಿಕೆಗೆ ನೇತಾಜಿ ಅವರ ಕುಟುಂಬ ಖಂಡನೆ ವ್ಯಕ್ತಪಡಿಸಿದೆ.

ಎಕ್ಸ್‌ನಲ್ಲಿ ಪತ್ರಿಕಾ ವರದಿಯೊಂದನ್ನು ಶೇರ್‌ ಮಾಡಿರುವ ನೇತಾಜಿ ಅವರ ಮರಿ ಅಳಿಯ ಚಂದ್ರ ಕುಮಾರ್‌ ಬೋಸ್‌, “ಯಾರೂ ಕೂಡ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇತಿಹಾಸವನ್ನು ತಿರುಚಬಾರದು” ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ “ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರು ರಾಜಕೀಯ ಚಿಂತಕರು, ಸೈನಿಕರು, ಮುತ್ಸದ್ದಿ, ದಾರ್ಶನಿಕರು ಮತ್ತು ಅವಿಭಜಿತ ಭಾರತದ ಪ್ರಥಮ ಪ್ರಧಾನಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಎಲ್ಲಾ ಸಮುದಾಯಗಳನ್ನು ಭಾರತೀಯರು ಎಂಬ ಅಡಿಯಲ್ಲಿ ಒಗ್ಗೂಡಿಸಬಲ್ಲ ಏಕೈಕ ನಾಯಕರಾಗಿದ್ದರು. ಅವರ ಸರ್ವರನ್ನೊಳಗೊಂಡ ಸಿದ್ಧಾಂತವನ್ನು ಅನುಸರಿಸುವುದು ಅವರಿಗೆ ತೋರಬಹುದಾದ ನಿಜವಾದ ಗೌರವ” ಎಂದಿದ್ದಾರೆ.

ಇತ್ತೀಚೆಗೆ ಟೈಮ್ಸ್ ನೌ ಚಾನೆಲ್‌ನಲ್ಲಿ ನಡೆದ ‘ಟೈಮ್ಸ್ ಸಮ್ಮಿಟ್’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, “ಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್” ಎಂದಿದ್ದರು. ಕಂಗನಾ ಅವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ : ಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದ ಕಂಗನಾ: ವ್ಯಾಪಕ ಟ್ರೋಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...