Homeಮುಖಪುಟನೇತಾಜಿಯ ಜಾತ್ಯತೀತತೆಯನ್ನು ಅನುಸರಿಸಿ, ಇಲ್ಲದಿದ್ದರೆ ದೇಶವು ವಿಭಜನೆಯಾಗುತ್ತದೆ: ಬೋಸ್ ರಕ್ತಸಂಬಂಧಿ

ನೇತಾಜಿಯ ಜಾತ್ಯತೀತತೆಯನ್ನು ಅನುಸರಿಸಿ, ಇಲ್ಲದಿದ್ದರೆ ದೇಶವು ವಿಭಜನೆಯಾಗುತ್ತದೆ: ಬೋಸ್ ರಕ್ತಸಂಬಂಧಿ

ಇಂದು ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನ. ಅವರು ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರನ್ನು ತಮ್ಮ ಆಜಾದ್ ಹಿಂದ್ ಫೌಜ್ (ಐಎನ್‌ಎ) ಯಲ್ಲಿ ಒಂದುಗೂಡಿಸಿದರು ಎಂದು ಹೇಳಿದ್ದಾರೆ.

- Advertisement -
- Advertisement -

ಭಾರತವನ್ನು ಒಗ್ಗೂಡಿಸಲು ನೇತಾಜಿಯ ಜಾತ್ಯತೀತ ಸಿದ್ಧಾಂತವನ್ನು ಬಿಜೆಪಿ ಪಕ್ಷವು ಅನುಸರಿಸದಿದ್ದರೆ, ದೇಶವು ವಿಭಜನೆಯಾಗುತ್ತದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರಳಿಯ, ಬಿಜೆಪಿ ನಾಯಕ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.

“ಧರ್ಮಕ್ಕೆ ಸ್ಥಾನವಿಲ್ಲದ ಭಾರತವನ್ನು ಏಕೀಕರಿಸಲು ಪಕ್ಷವು ನೇತಾಜಿಯ ಸಿದ್ಧಾಂತವನ್ನು ಅನುಸರಿಸಬೇಕು. ಇಲ್ಲದಿದ್ದರೆ, ಇಡೀ ದೇಶವು ತುಂಡುಗಳಾಗಿ ಒಡೆಯುತ್ತದೆ. ಇಂದು ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನ. ಅವರು ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರನ್ನು ತಮ್ಮ ಆಜಾದ್ ಹಿಂದ್ ಫೌಜ್ (ಐಎನ್‌ಎ) ಯಲ್ಲಿ ಒಂದುಗೂಡಿಸಿದರು ಎಂದು ಹೇಳಿದ್ದಾರೆ.

ನಾನು ಕೂಡ ಬಿಜೆಪಿಯಲ್ಲಿದ್ದೇನೆ, ಆದರೂ ನಾನು ಧರ್ಮವು ವೈಯಕ್ತಿಕ ವಿಷಯ ಎಂದು ನಂಬಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳದವರು ವಿಭಜಕ ಶಕ್ತಿಗಳು ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಕೋಲ್ಕತಾ ದಕ್ಷಿಣ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು.

ಈ ಹಿಂದೆ ಚಂದ್ರಕುಮಾರ್‌ ಬೋಷ್‌ ರವರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧವೂ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ಗೆ ಸಮರ್ಪಕ ಗೌರವ ಸಲ್ಲಿಸಲು ದೆಹಲಿಯಲ್ಲಿ ನೇತಾಜಿಯ ಪ್ರತಿಮೆ ಮತ್ತು ಸ್ಮಾರಕವನ್ನು ನಿರ್ಮಿಸುವಂತೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

“ಭಾರತ ಸರ್ಕಾರವು, ಭಾರತದ ವಿಮೋಚಕ ಮತ್ತು ಆಜಾದ್ ಹಿಂದ್ ಫೌಜ್ ಸ್ಥಾಪಕ ಸುಭಾಷ್‌ ಚಂದ್ರ ಬೋಸ್‌ರವರಿಗೆ ಸರಿಯಾದ ಮತ್ತು ಸೂಕ್ತವಾದ ಗೌರವವನ್ನು ನೀಡುವ ಸಮಯ ಇದಾಗಿದೆ. ದೆಹಲಿಯ ರಾಜ್‌ಪಾತ್‌ನಲ್ಲಿರುವ ಇಂಡಿಯಾ ಗೇಟ್, ಐಎನ್‌ಎ ಸ್ಮಾರಕದಲ್ಲಿ ನೇತಾಜಿಯ ಪ್ರತಿಮೆಯನ್ನು ನಿರ್ಮಿಸಿ ಮತ್ತು ಎಲ್ಲಾ ಭಾರತೀಯರನ್ನು ಸಂಯೋಜಿಸಲು ನೇತಾಜಿಯ ಸಿದ್ಧಾಂತವನ್ನು ಜಾರಿಗೊಳಿಸಿ. ನೇತಾಜಿಯವರ ಸಾವಿನ ರಹಸ್ಯವನ್ನು ಅದರ ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯಿರಿ” ಎಂದು ಚಂದ್ರ ಕುಮಾರ್ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಅನ್ನು ಟ್ಯಾಗ್ ಮಾಡಿದ್ದಾರೆ.

ಇದೇ ವಿಷಯದ ಬಗ್ಗೆ ಪಿಎಂಒಗೆ ಪತ್ರ ಬರೆಯುವುದಾಗಿ ಹೇಳಿದ ಅವರು “ನಾವು (ಬಿಜೆಪಿ) ಗಾಂಧಿ ಸಂಕಲ್ಪ ಯಾತ್ರೆ ಮಾಡಿದ್ದೇವೆ. ನಾನು ಆರು ದಿನಗಳ ಕಾಲ ನಡೆದಿದ್ದೇನೆ, ಆದರೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ನಾನು ಗಾಂಧಿಯನ್ನು ಕೀಳಾಗಿ ಕಾಣಲು ಬಯಸುವುದಿಲ್ಲ, ಆದರೆ ಇಡೀ ಜನವರಿ ತಿಂಗಳಲ್ಲಿ ನಾವು ದೇಶಾದ್ಯಂತ ನೇತಾಜಿ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಬೇಕೆಂದು ಪ್ರಧಾನಮಂತ್ರಿಗೆ ನನ್ನ ಸಲಹೆ ಇದೆ” ಎಂದು ಅವರು ಹೇಳಿದರು.

ನೇತಾಜಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ, ಅವರು ಮೇ 3, 1939 ರಂದು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ರಚನೆಯನ್ನು ಘೋಷಿಸಿದರು ಮತ್ತು ನಂತರ ಬ್ರಿಟಿಷರನ್ನು ಎದುರಿಸಲು ಐಎನ್ಎ ಅನ್ನು ಪರಿಷ್ಕರಿಸಿದರು.

ನೇತಾಜಿಯ ಸಾವು ಅಥವಾ ಕಣ್ಮರೆ ಇನ್ನೂ ರಹಸ್ಯವಾಗಿ ಉಳಿದಿದೆ. ಅವರು ತೈವಾನ್‌ನಲ್ಲಿ ವಿಮಾನ ಹತ್ತಿದ್ದರು ಮತ್ತು ಅದು ಅವರ ಸಾವಿಗೆ ಕಾರಣವಾಯಿತು ಎಂದು ಹಲವಾರು ವರದಿಗಳು ಹೇಳಿಕೊಂಡಿವೆ. ಆದಾಗ್ಯೂ, ಅವರ ಕಣ್ಮರೆಯ ಬಗ್ಗೆ ತಜ್ಞರು ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಿದ್ದರಿಂದ ಅವರ ಸಾವಿನ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಈ ರಹಸ್ಯದ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ಕೇಂದ್ರವು ಕಾಲಕಾಲಕ್ಕೆ ಆಯೋಗಗಳನ್ನು ರಚಿಸಿತ್ತು – 1956 ರಲ್ಲಿ ಷಾ ನವಾಜ್ ಸಮಿತಿ, 1970 ರಲ್ಲಿ ಖೋಸ್ಲಾ ಆಯೋಗ ಮತ್ತು 2005 ರಲ್ಲಿ ಮುಖರ್ಜಿ ಕಮಿಷನ್ – ಆದರೆ ಯಾರೂ ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಾಗಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...