ಆರೇ ಅರಣ್ಯದಲ್ಲಿ ಒಂದು ಮರದ ಎಲೆಯನ್ನೂ ಸಹ ಕತ್ತರಿಸಲು ಬಿಡುವುದಿಲ್ಲ: ಉದ್ಧವ್ ಠಾಕ್ರೆ

0

ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ಮುಂಬೈನ ಆರೇ ಅರಣ್ಯ ಪ್ರದೇಶದಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆದೇಶಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಮುಂಬೈ ಮೆಟ್ರೋ ಕಾಮಗಾರಿ ಎಂದಿನಂತೆ ಮುಂದುವರೆಯುತ್ತದೆ ಆದರೆ ಕಾರ್ ಶೆಡ್ ನಿರ್ಮಾಣವನ್ನು ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ಆರೇ ಅರಣ್ಯವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ ಮತ್ತು ಐದು ಲಕ್ಷ ಮರಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲು ಸುಮಾರು 2100 ಮರಗಳನ್ನು ಎಂಎಂಆರ್‌ಸಿಎಲ್ ಕತ್ತರಿಸಿತ್ತು. ನಂತರ ಯಾವುದೇ ಮರಗಳನ್ನು ಕಡಿಯಬಾರದೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಕಾರ್ ಶೆಡ್ ಕಾಮಗಾರಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರಲಿಲ್ಲ.

ಇದನ್ನೂ ಓದಿ: ಆರೇ ಅರಣ್ಯ ಪ್ರದೇಶದಲ್ಲಿ ZOO ಕಟ್ಟಲು ಮುಂದಾದ ಸರ್ಕಾರ: ಬೀಳಲಿದೆ ಮತ್ತಷ್ಟು ಮರಗಳಿಗೆ ಕೊಡಲಿಯೇಟು…

“ಮುಂದಿನ ಸೂಚನೆ ಬರುವವರೆಗೂ ಒಂದು ಮರದ ಎಲೆಯನ್ನೂ ಸಹ ಕತ್ತರಿಸಲಾಗುವುದಿಲ್ಲ” ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಆದರೆ ಮಾಜಿ ಸಿಎಂ ಫಡ್ನವಿಸ್‌ ಉದ್ಧವ್‌ ಠಾಕ್ರೆಯವರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಇದರ ದುಷ್ಪರಿಣಾಮವನ್ನು ಎದುರಿಸಬೇಕಾಗುವುದು ಸಾಮಾನ್ಯ ಮುಂಬೈ  ನಿವಾಸಿ ಎಂದು ಅವರು ತಿಳಿಸಿದ್ದಾರೆ.

ಉದ್ಧವ್‌ ಠಾಕ್ರೆಯವರ ಈ ನಿರ್ಧಾರವನ್ನು ಬಹಳಷ್ಟು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ. ಗುರುವಾರ ಉದ್ಧವ್‌ ಠಾಕ್ರೆಯವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿಯೂ ಸಹ ಬಹಳಷ್ಟು ಆರೇ ಕಾರ್ಯಕರ್ತರು ಭಾಗವಹಿಸಿದ್ದರು. ಜೊತೆಗೆ ಸೇವ್‌ ಆರೆ ಎಂಬ ನಾಮಫಲಕ ಮತ್ತು ಬ್ಯಾನರ್‌ ಪ್ರದರ್ಶಿಸುವ ಮೂಲಕ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಯನ್ನು ನೆನಪಿಸುವ ಕೆಲಸ ಮಾಡಿದ್ದರು.

ಅವರು ಸಿಎಂ ಆಗಿ ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ಆರೆ ಫಾರೆಸ್ಟ್‌ನಲ್ಲಿ ಮೆಟ್ರೋ ಕಾರ್ ಶೆಡ್ ಕೆಲಸವನ್ನು ನಿಲ್ಲಿಸುವುದು.

ಎಲ್ಲಾ ಇತರ ಮೆಟ್ರೊ ಕಾರ್ಯಗಳು ಮುಂದುವರಿಯುತ್ತವೆ, ಕೇವಲ ಆರೆ ಫಾರೆಸ್ಟ್‌ನಲ್ಲಿ ಅಲ್ಲ, ಅಮೂಲ್ಯ ಮರಗಳ ವೆಚ್ಚದಲ್ಲಿ ಅಲ್ಲ. ಧನ್ಯವಾದಗಳು ಉದ್ಧವ್ ಠಾಕ್ರೆ! ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಧೃವ್‌ ರಾಠೀ ಅಭಿನಂದನೆ ಸಲ್ಲಿಸಿದ್ದಾರೆ.

“ನಾನು ಸಿಎಂ ಆಗಿದ್ದೇನೆ ಎಂದು ನನಗೆ ಇನ್ನೂ ಅನಿಸುತ್ತಿಲ್ಲ. ಆ ಭಾವನೆ ಬರಲು ಸಮಯ ತೆಗೆದುಕೊಳ್ಳುತ್ತದೆ. ನಾನು ಇನ್ನೂ ವಿಧಾನಸಭಾ ಭವನವನ್ನು ನೋಡಿಲ್ಲ” ಎಂದು ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸಿಎಂ ಹುದ್ದೆ ಅನಿರೀಕ್ಷಿತವಾಗಿದೆ. “ನಾನು ಅನಿರೀಕ್ಷಿತವಾಗಿ ಸಿಎಂ ಆಗಿದ್ದೇನೆ, ಆದರೆ ಈ ಜವಾಬ್ದಾರಿಯಿಂದ ಓಡಿಹೋಗಲು ನಾನು ಬಯಸುವುದಿಲ್ಲ” ಎಂದು ಠಾಕ್ರೆ ಹೇಳಿದರು.

ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸೇರಿ ಹೊಸದಾಗಿ ರಚಿಸಿದ ಮಹಾರಾಷ್ಟ್ರ ವಿಕಾಸ್ ಅಘಾಡಿ ಹೆಸರಿನ ರಾಜ್ಯ ಸರ್ಕಾರವನ್ನು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮುನ್ನಡೆಸುತ್ತಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here