Homeಮುಖಪುಟವ್ಯಕ್ತಿಯೊಬ್ಬರಿಗೆ ಥಳಿಸಿದ ನುಹ್ ಹಿಂಸಾಚಾರ ಆರೋಪಿ ಬಿಟ್ಟು ಭಜರಂಗಿ: ಮೂಕ ಪ್ರೇಕ್ಷಕನಾಗಿ ನಿಂತ ಪೊಲೀಸ್ ಸಿಬ್ಬಂದಿ!

ವ್ಯಕ್ತಿಯೊಬ್ಬರಿಗೆ ಥಳಿಸಿದ ನುಹ್ ಹಿಂಸಾಚಾರ ಆರೋಪಿ ಬಿಟ್ಟು ಭಜರಂಗಿ: ಮೂಕ ಪ್ರೇಕ್ಷಕನಾಗಿ ನಿಂತ ಪೊಲೀಸ್ ಸಿಬ್ಬಂದಿ!

- Advertisement -
- Advertisement -

ಕಳೆದ ವರ್ಷ ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿರುವ ಬಿಟ್ಟು ಭಜರಂಗಿ, ವ್ಯಕ್ತಿಯೊಬ್ಬರಿಗೆ ಅಮಾನವೀಯ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಬಿಟ್ಟು ಭಜರಂಗಿಯ ದುಷ್ಕೃತ್ಯಕ್ಕೆ ಆತನ ಸ್ವಯಂ ಘೋಷಿತ ಗೋರಕ್ಷಕ ಗುಂಪಿನ ಇತರ ಸದಸ್ಯರು ಸಾಥ್ ನೀಡಿದ್ದಾರೆ. ರಸ್ತೆಯಲ್ಲೇ ಹಲ್ಲೆ ನಡೆಯುತ್ತಿದ್ಧರೂ ಪೊಲೀಸ್ ಸಿಬ್ಬಂದಿಯೊಬ್ಬರು ಮೂಕ ಪ್ರೇಕ್ಷರಾಗಿ ನಿಂತು ನೋಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಹಲ್ಲೆಯ ವಿಡಿಯೋ ಏಪ್ರಿಲ್ 1ನೇ ತಾರೀಖಿನದ್ದಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶಾಮು ಎಂದು ಗುರುತಿಸಲಾಗಿದ್ದು, ಫರಿದಾಬಾದ್‌ನ ಸರೂರ್‌ಪುರದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಮು ಇಬ್ಬರು ಹುಡುಗಿಯರನ್ನು ಚಾಕೋಲೇಟ್ ಆಸೆ ತೋರಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಶಾಮುನ ಮನೆಗೆ ನುಗ್ಗಿ ಆತನನ್ನು ಹಿಡಿದು ತಂದಿದ್ದಾರೆ.

ಈ ವಿಷಯ ಬಿಟ್ಟು ಭಜರಂಗಿಯ ‘ಗೋರಕ್ಷ ಭಜರಂಗಿ ಪೋರ್ಸ್‌’ಗೆ ಗೊತ್ತಾಗಿದೆ. ಸ್ಥಳಕ್ಕೆ ಬಂದ ತಂಡ ಶಾಮುವನ್ನು ಭಜರಂಗಿಯ ಮನೆ ಫರಿದಾಬಾದ್‌ನ ಸಂಜಯ್ ಎನ್‌ಕ್ಲೇವ್‌ಗೆ ಕರೆದುಕೊಂಡು ಹೋಗಿದ್ದಾರೆ. ಬಿಟ್ಟು ತನ್ನ ಮನೆ ಮುಂದೆ ಶಾಮುಗೆ ಬೆತ್ತದಿಂದ ಥಳಿಸಿದ್ದಾನೆ. ಆತನ ಸಹಚರರು ಸಾಥ್ ನೀಡಿದ್ದಾರೆ.

ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ನಿಂತು ದುಷ್ಕೃತ್ಯವನ್ನು ನೋಡಿದ್ದಾರೆ. ತಡೆಯುವ ಪ್ರಯತ್ನ ಮಾಡಿಲ್ಲ. ಆ ಪೊಲೀಸ್ ಸಿಬ್ಬಂದಿ ಬಿಟ್ಟು ಭಜರಂಗಿಯ ಭದ್ರತೆಗೆ ನಿಯೋಜಿಸಿದವರು ಎಂದು ಹೇಳಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸರನ್ ಪೊಲೀಸ್ ಠಾಣೆಯ ಅಧಿಕಾರಿ, ವ್ಯಕ್ತಿಯೊಬ್ಬರಿಗೆ ಥಳಿಸಿರುವ ವಿಡಿಯೋವನ್ನು ನಾವು ಗಮನಿಸಿದ್ದೇವೆ. ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡಿದರೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಅವರು ದೂರು ನೀಡದಿದ್ದರೂ, ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಹರಿಯಾಣದ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆ ವೇಳೆ ಕೋಮುಗಲಭೆ ಭುಗಿಲೆದ್ದಿತ್ತು. ನಂತರ ಗುರುಗ್ರಾಮ್ ಮತ್ತು ಬಾದ್‌ಶಹಪುರ ಸೇರಿದಂತೆ ಇತರ ಪ್ರದೇಶಗಳಿಗೂ ಹಿಂಸಾಚಾರ ಹರಡಿತ್ತು. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದರು ಮತ್ತು ಕನಿಷ್ಠ 70 ಜನರು ಗಾಯಗೊಂಡಿದ್ದರು. ಮಸೀದಿಗೆ ಬೆಂಕಿ ಹಚ್ಚಲಾಗಿತ್ತು. ಮೃತರಲ್ಲಿ ಒಬ್ಬರು ಧರ್ಮಗುರುವೂ ಸೇರಿದ್ದರು.

ಇದನ್ನೂ ಓದಿ : ಮೋದಿ ಆಡಳಿತದಲ್ಲಿ ‘ಭ್ರಷ್ಟಾಚಾರ’ದ ತನಿಖೆ ಎದುರಿಸುತ್ತಿದ್ದ 25 ವಿರೋಧ ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆ, ಆ ಬಳಿಕ ನೆನೆಗುದಿಗೆ ಬಿದ್ದ ಹೆಚ್ಚಿನ ಪ್ರಕರಣಗಳು……

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಕನ್ನಡ “ಲೋಕ” ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

0
ಉತ್ತರ ಕನ್ನಡದ ಅಷ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ "ಉತ್ತರ ಕನ್ನಡ ಲೋಕಸಭಾ ಕ್ಷೇತ್ರ" ವಿಭಿನ್ನತೆ, ವೈವಿಧ್ಯತೆಗಳ ವಿಶಿಷ್ಟ ಸೀಮೆ. ಭೋರ್ಗರೆವ ಅರಬ್ಬೀ...