Homeಕರ್ನಾಟಕಕುವೆಂಪು ಅವರ ಜನುಮದಿನದಂದು ‘ಕೊಲುವೆನೆಂಬ ಭಾಶೆ’ ಕೃತಿ ಬಿಡುಗಡೆ; ಸಂವಾದ

ಕುವೆಂಪು ಅವರ ಜನುಮದಿನದಂದು ‘ಕೊಲುವೆನೆಂಬ ಭಾಶೆ’ ಕೃತಿ ಬಿಡುಗಡೆ; ಸಂವಾದ

- Advertisement -
- Advertisement -

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು (ವಿಶ್ವಮಾನವ ದಿನದಂದು) ಚಿಂತಕ ರಂಗನಾಥ ಕಂಟನಕುಂಟೆ ಅವರ ‘ಕೊಲುವೆನೆಂಬ ಭಾಶೆ’ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಚಿಂತನ ಚಿತ್ತಾರ, ಮೈಸೂರು ಗೆಳೆಯರು ಸಹಯೋಗದಲ್ಲಿ, ಅಲ್ಲಮ ಸಂಶೋಧನಾ ಮತ್ತು ಸಾಂಸ್ಕೃತಿಕ ಕೇಂದ್ರ, ರಂಗವಲ್ಲಿ, ಸಮಾಜವಾದಿ ಅಧ್ಯಯನ ಕೇಂದ್ರ, ಹಸಿರು ಆರ್ಗ್ಯಾನಿಕ್ಸ್‌, ನೆಲೆ-ಹಿನ್ನೆಲೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಹಕಾರದಲ್ಲಿ ಡಿಸೆಂಬರ್‌ 29ರಂದು (ಬುಧವಾರ), ಸಂಜೆ 5 ಗಂಟೆಗೆ ಕೃತಿ ಬಿಡುಗಡೆ ಮಾಡಲಾಗುತ್ತಿದೆ. ಮೈಸೂರಿನ ಮುಡಾ ಕಚೇರಿ ಬಳಿಯ ರೋಟರಿ ಸೆಂಟರ್‌ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ವಿಮರ್ಶಕ ಓ.ಎಲ್‌.ನಾಗಭೂಷಣಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಿಂತಕರಾದ ಮಹೇಶ್‌ ಹರವೆ, ಭಾರತಿದೇವಿ ಅವರು ಸಂವಾದ ನಡೆಸಿಕೊಡುವರು. ಲೇಖಕರಾದ ರಂಗನಾಥ್‌ ಕಂಟನಕುಂಟೆ, ರೇಣುಕಾರಾಧ್ಯ, ನಿಂಗಣ್ಣ ಚಿತ್ತಣ್ಣನವರ್‌ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಅನೇಕ ಹಿರಿಯರು, ಹೋರಾಟಗಾರರು, ಬರಹಗಾರರು, ಚಿಂತಕರು ಪಾಲ್ಗೊಳ್ಳುವರು. ಪ.ಮಲ್ಲೇಶ್‌, ಕಾಳೇಗೌಡ ನಾಗವಾರ, ಕೆ.ಪಿ.ಸುರೇಶ್‌, ಪಿ.ಬೆಟ್ಟೇಗೌಡ, ಪ್ರಭು ಬಿಸ್ಲೇಹಳ್ಳಿ, ಕೆ.ನರಸಿಂಹಮೂರ್ತಿ, ಚೀ.ಜ.ರಾಜೀವ, ಕೆ.ಎಲ್.ಚಂದ್ರಶೇಖರ ಐಜೂರು, ಎಸ್.ನರೇಂದ್ರಕುಮಾರ್‌, ಜಯಶಂಕರ ಹಲಗೂರು, ರಾಜೇಶ್‌, ಗೋಪಾಲ್‌, ಚಿನ್ನಸ್ವಾಮಿ ವಡ್ಡಗೆರೆ, ಪ್ರಸನ್ನ ಸಂತೆಕಡೂರು, ಪ್ರಭುಸ್ವಾಮಿ, ಆರ್‌.ಸುಧೀಂದ್ರಕುಮಾರ್‌, ಚಿಕ್ಕಮಗಳೂರು ಗಣೇಶ್‌, ನಂದಕುಮಾರ್‌, ಎಂ.ಶ್ರೀನಿವಾಸ್‌ಮೂರ್ತಿ, ತಿರುಮಲೇಶ್‌ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿರುವರು.


ಇದನ್ನೂ ಓದಿರಿ: ‘ಸ್ಕ್ರಾಲ್‌’ ಜಾಲತಾಣ, ಪಿ.ಸಾಯಿನಾಥ್‌ ಅವರ ‘ಪರಿ’ ತಂಡಕ್ಕೆ ರಾಮನಾಥ್ ಗೋಯೆಂಕಾ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...