’ಹಿಂದೂಗಳಿಗೆ ಮಾತ್ರ’: ವಿವಾದ ಸೃಷ್ಟಿಸಿದ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಜಾಹೀರಾತು

ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನೀಡಿರುವ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಉದ್ಯೋಗಕ್ಕಾಗಿ ನೀಡಿರುವ ಜಾಹೀರಾತಿನಲ್ಲಿ ಹಿಂದೂಗಳಿಗೆ ಮಾತ್ರ ಎಂದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಕೊಲತ್ತೂರಿನಲ್ಲಿರುವ ಅರುಲ್ಮಿಗು ಕಪಾಲೀಶ್ವರರ್ ಕಲಾ ಮತ್ತು ವಿಜ್ಞಾನ ಕಾಲೇಜು ಆರಂಭವಾಗುತ್ತಿದ್ದು, ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಗೆ ಅರ್ಜಿ ಆಹ್ವಾನಿಸಿರುವ ಇಲಾಖೆ, ಜಾಹೀರಾತಿನಲ್ಲಿ ’ಹಿಂದೂಗಳಿಗೆ ಮಾತ್ರ’ ಎಂದು ಉಲ್ಲೇಖಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಧರ್ಮದ ಆಧಾರದ ಮೇಲೆ ಯಾರಾಗಿದಾರೂ ಅವಕಾಶಗಳನ್ನು ನಿರಾಕರಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಬೋಧಕರ ಸಂಘಗಳು ಹೇಳಿವೆ.

ಇದನ್ನೂ ಓದಿ: ‘ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿ ಸಮರ್ಥಿಸುವುದು ಅಪಾಯಕಾರಿ ಬೆಳವಣಿಗೆ’

ಮಾನವ ಸಂಪನ್ಮೂಲ ಇಲಾಖೆ ಮತ್ತು ಸಿಇ ವಿಭಾಗವು 2021-22 ರಿಂದ ಕೊಲತ್ತೂರಿನಲ್ಲಿ ಕಪಾಲೀಶ್ವರರ್ ಕಾಲೇಜು ಸೇರಿದಂತೆ ನಾಲ್ಕು ಹೊಸ ಕಾಲೇಜುಗಳನ್ನು ಆರಂಭಿಸುತ್ತಿದೆ.

ಅಕ್ಟೋಬರ್ 13 ರಂದು ಪ್ರಕಟವಾಗಿರುವ ಜಾಹೀರಾತಿನಲ್ಲಿ, ಬಿಕಾಂ, ಬಿಬಿಎ, ಬಿಎಸ್ಸಿ ಕಂಪ್ಯೂಟರ್ ಸೈನ್ಸ್, ಬಿಸಿಎ, ತಮಿಳು, ಇಂಗ್ಲಿಷ್, ಗಣಿತ ಕೋರ್ಸ್‌ಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮತ್ತು ದೈಹಿಕ ನಿರ್ದೇಶಕ ಮತ್ತು ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.

ಕಚೇರಿ ಸಹಾಯಕ, ಕಿರಿಯ ಸಹಾಯಕ, ಕಾವಲುಗಾರ ಮತ್ತು ಸ್ವೀಪರ್ ಸೇರಿದಂತೆ 11 ಬೋಧಕೇತರ ಸಿಬ್ಬಂದಿ ಹುದ್ದೆಗಳು ಸೇರಿದಂತೆ ಅಕ್ಟೋಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ಕೊಳತ್ತೂರಿನ ಕಾಲೇಜು ಆವರಣದಲ್ಲಿ ವಾಕ್-ಇನ್ ಸಂದರ್ಶನವಿದೆ ಎಂದು ಇಲಾಖೆ ಹೇಳಿದೆ.

ಆದರೆ, ಬೋಧಕರು ಮತ್ತು ಬೋಧಕೇತರ ಹುದ್ದೆಗಳಿಗೆ ಹಿಂದೂಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ ಇದಕ್ಕೆ ಸರ್ಕಾರವು ನಡೆಸುವ ಸಂಸ್ಥೆಗಳು ಸಂವಿಧಾನದ ಪ್ರಕಾರ ಕಾರ್ಯ ನಿರ್ವಹಿಸಬೇಕು ಎಂದು ಬೋಧಕರ ಸಂಘಗಳು ಆಗ್ರಹಿಸಿವೆ.


ಇದನ್ನೂ ಓದಿ: ತಮಿಳುನಾಡು: ವಿದ್ಯಾರ್ಥಿಗೆ ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿದ ಶಿಕ್ಷಕನ ಬಂಧನ

LEAVE A REPLY

Please enter your comment!
Please enter your name here