Homeಮುಖಪುಟತಾಲಿಬಾನ್ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ಹೊರಗಿಟ್ಟಿರುವುದಕ್ಕೆ ತೀವ್ರ ಆಕ್ರೋಶ: ಮೋದಿ ನಿಲುವು ಕೇಳಿದ ಪ್ರಿಯಾಂಕಾ ಗಾಂಧಿ

ತಾಲಿಬಾನ್ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ಹೊರಗಿಟ್ಟಿರುವುದಕ್ಕೆ ತೀವ್ರ ಆಕ್ರೋಶ: ಮೋದಿ ನಿಲುವು ಕೇಳಿದ ಪ್ರಿಯಾಂಕಾ ಗಾಂಧಿ

- Advertisement -
- Advertisement -

ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ದೂರ ಇಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ..ತಾಲಿಬಾನ್ ಪ್ರತಿನಿಧಿಯ ಭಾರತ ಭೇಟಿಯ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರುವ ಬಗ್ಗೆ ನಿಮ್ಮ ನಿಲುವನ್ನು ದಯವಿಟ್ಟು ಸ್ಪಷ್ಟಪಡಿಸಿ” ಎಂದಿದ್ದಾರೆ.

ಮುಂದುವರಿದು, “ನೀವು ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವುದು ಕೇವಲ ಚುನಾವಣೆಗಾಗಿ ಜನರ ಮನಗೆಲ್ಲಲು ಮಾಡುವ ತೋರಿಕೆಯಲ್ಲದಿದ್ದರೆ, ಭಾರತದ ತುಂಬಾ ಗೌರವಾನ್ವಿತ ಮತ್ತು ಶಕ್ತಿಶಾಲಿ ಮಹಿಳೆಯರಿಗೆ ಈ ಅವಮಾನ ಏಕೆ ಆಗುತ್ತಿದೆ? ಭಾರತವು ತನ್ನ ಮಹಿಳೆಯರನ್ನು ದೇಶದ ಬೆನ್ನೆಲುಬು ಮತ್ತು ಹೆಮ್ಮೆ ಎಂದು ಹೇಳಿಕೊಳ್ಳುತ್ತದೆ, ಆದರೆ ಈ ಅವಮಾನಗಳು ಏಕೆ ನಡೆಯುತ್ತಿವೆ?” ಎಂದು ಪ್ರಶ್ನಿಸಿದ್ದಾರೆ.

“ಮೋದಿಯವರೇ ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲು ಅನುಮತಿಸುವ ಮೂಲಕ, ಭಾರತದ ಮಹಿಳೆಯರ ಪರ ನಿಲ್ಲುವ ವಿಷಯದಲ್ಲಿ ದುರ್ಬಲ ಎಂಬುವುದನ್ನು ನೀವು ತೋರಿಸಿದ್ದೀರಿ” ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.

“ನಮ್ಮ ದೇಶದಲ್ಲಿ, ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಭಾಗವಹಿಸುವಿಕೆಯ ಹಕ್ಕಿದೆ. ಇಂತಹ ತಾರತಮ್ಯದ ವಿರುದ್ಧ ನಿಮ್ಮ ಮೌನವು ನಾರಿ ಶಕ್ತಿಯ ಕುರಿತ ನಿಮ್ಮ ಘೋಷಣೆಗಳ ಶೂನ್ಯತೆಯನ್ನು ಬಹಿರಂಗಪಡಿಸುತ್ತದೆ” ಎಂದು ಕುಟುಕಿದ್ದಾರೆ.

ಇನ್ನು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ “ಭಾರತದ ಮಣ್ಣಿನಲ್ಲಿ ನಡೆದ ತಾಲಿಬಾನ್ ಸಚಿವ ಆಮೀರ್ ಖಾನ್ ಮುತ್ತಕಿಯ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ಹೊರಗಿಡಲಾಗಿದೆ. ಭಾರತ ಸರ್ಕಾರ ಈ ವ್ಯಕ್ತಿಗೆ ಕೆಂಪು ಹಾಸಿನ ಸ್ವಾಗತ ಕೋರಿ ಬರಮಾಡಿಕೊಂಡಿದೆ. ತಾಲಿಬಾನ್ ನಿಯೋಗದ ಭೇಟಿಯನ್ನು ಸರ್ಕಾರ ಅಧಿಕೃತವಾಗಿ ಪರಿಗಣಿಸಿದೆ, ಶಿಷ್ಟಾಚಾರದ ಗೌರವ ಕೊಟ್ಟಿದೆ. ಮುತ್ತಕಿಯ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪುರುಷ ಪತ್ರಕರ್ತರು, ಮಹಿಳೆಯನ್ನು ಹೊರಗಿಟ್ಟಿರುವುದನ್ನು ಪ್ರತಿಭಟಿಸಿಲ್ಲ. ಹಾಗಾದರೆ, ನೀವು ಅಷ್ಟೊಂದು ದುರ್ಬಲರಾ..? ಬೆನ್ನು ಮೂಳೆ ಇಲ್ಲದವರಾ? ಇದು ಭಾರತದ ಮಹಿಳೆಯರಿಗೆ ಮಾಡಿದ ಅವಮಾನ” ಎಂದಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸಿದ ಮಹುವಾ, “ಜನರ ತೆರಿಗೆ ದುಡ್ಡಿನ್ನು ತಾಲಿಬಾನ್ ನಿಯೋಗಕ್ಕೆ ನೀವು ವೆಚ್ಚ ಮಾಡಿದ್ದೀರಿ. ಭೇಟಿ ಬಚಾವೋ ಎಂದು ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವ ನೀವು, ಭಾರತದ ಹೆಣ್ಣು ಮಕ್ಕಳು, ತಾಯಿ, ಸಹೋದರಿಯರ ಬಗ್ಗೆ ಮಾತನಾಡುವ ನೀವು ಹೆಣ್ಣು ಮಕ್ಕಳಿಗೆ ಅವಮಾನವಾದಾಗ ಸೊಲ್ಲೆತ್ತಿಲ್ಲ. ಇದು ನನ್ನೊಬ್ಬಳ ಆಕ್ರೋಶವಲ್ಲ, ಪ್ರತಿಯೊಬ್ಬ ಭಾರತೀಯ ಮಹಿಳೆಯ ಆಕ್ರೋಶ ಎಂದಿದ್ದಾರೆ.

“ತಾಲಿಬಾನ್ ವಿದೇಶಾಂಗ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡದಿರುವ ಮೂಲಕ ಭಾರತ ತನ್ನದೇ ಆದ ನೈತಿಕ ಮತ್ತು ರಾಜತಾಂತ್ರಿಕ ನಿಲುವನ್ನು ರಾಜಿ ಮಾಡಿಕೊಂಡಿದೆ. ಇದು ಕೇವಲ ಕಾರ್ಯವಿಧಾನದ ಲೋಪವಲ್ಲ, ಬದಲಾಗಿ ಸಮಾನತೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಲಿಂಗ ನ್ಯಾಯಕ್ಕೆ ಭಾರತದ ದೀರ್ಘಕಾಲದಿಂದ ಪಾಲಿಸಿಕೊಂಡು ಬಂದ ಬದ್ಧತೆಯ ಸಾಂಕೇತಿಕ ಶರಣಾಗತಿಯಾಗಿದೆ” ಎಂದು ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಹೇಳಿದ್ದಾರೆ.

“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೆಮ್ಮೆಪಡುವ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯ ಪ್ರತಿಪಾದಕರಾಗಿರುವ ದೇಶಕ್ಕೆ, ಈ ಘಟನೆ ತೀವ್ರ ನಿರಾಶಾದಾಯಕ ಮತ್ತು ರಾಜಕೀಯವಾಗಿ ದೂರದೃಷ್ಟಿಯಿಲ್ಲದ ಸಂಗತಿಯಾಗಿದೆ. ಇದು ಭಾರತೀಯ ಮಹಿಳೆಯರು ಮತ್ತು ಜಾಗತಿಕ ಸಮುದಾಯಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದಿದ್ದಾರೆ.

“ಮುತ್ತಕಿಯವರ ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತೆಯರನ್ನು ಆಹ್ವಾನಿಸಿಲ್ಲ. ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಆರಂಭಿಕ ಹೇಳಿಕೆಗಳಲ್ಲಿ ಅಥವಾ ಮುತ್ತಕಿ ಅವರೊಂದಿಗಿನ ಮಾತುಕತೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಹುಡುಗಿಯರು ಮತ್ತು ಮಹಿಳೆಯರ ಭೀಕರ ದುಃಸ್ಥಿತಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ನಮ್ಮ ಭದ್ರತಾ ಕಾಳಜಿಯಿಂದಾಗಿ ಮಹಿಳಾ ಸಾಧಕರು ಮತ್ತು ನಾಯಕಿಯರ ಬಗ್ಗೆ ನಾವು ಹೆಮ್ಮೆಪಡುವ ದೇಶದಲ್ಲಿ ಮುತ್ತಕಿ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ದೊರೆಯುತ್ತಿದೆ. ಇದು ಇಂದಿನ ವಿಶ್ವ ರಾಜಕೀಯ” ಎಂದು ಪತ್ರಕರ್ತೆ ಸ್ಮೀತಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸ್ಮೀತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ದಿ ಹಿಂದೂ ಪತ್ರಿಕೆಯ ಸುಹಾಸಿನಿ ಹೈದರ್, “ಇನ್ನೂ ಹಾಸ್ಯಾಸ್ಪದ ಸಂಗತಿಯೆಂದರೆ, ತಾಲಿಬಾನ್ ಸಚಿವನ ಮಹಿಳೆಯರ ವಿರುದ್ಧದ ಅಸಹ್ಯಕರ ಮತ್ತು ಕಾನೂನುಬಾಹಿರ ತಾರತಮ್ಯವನ್ನು ಭಾರತಕ್ಕೆ ತರಲು ಅನುಮತಿಸಲಾಗಿದೆ, ಏಕೆಂದರೆ ಭಾರತ ಸರ್ಕಾರವು ತಾಲಿಬಾನ್ ನಿಯೋಗವನ್ನು ಪೂರ್ಣ ಅಧಿಕೃತ ಶಿಷ್ಟಾಚಾರದೊಂದಿಗೆ ಸ್ವಾಗತಿಸಿದೆ. ಇದನ್ನು ‘ವಾಸ್ತವಿಕ’ ನಿರ್ಧಾರ ಎಂದು ಕರೆಯಲಾಗದು, ಬದಲಿಗೆ ಇದು ತಾಲಿಬಾನ್‌ಗೆ ಗುಲಾಮಗಿರಿಯಂತೆ ಇದೆ” ಎಂದು ಟೀಕಿಸಿದ್ದಾರೆ.

ತಾಲಿಬಾನ್ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತೆಯರಿಗೆ ನಿರ್ಬಂಧ; ಕೇಂದ್ರ ಸರ್ಕಾರ ಹೆಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಬ್ರಾಹ್ಮಣರಂತೆ ಸಂಸ್ಕೃತ ಅಧ್ಯಯನ ಮಾಡಲು ಸಾಧ್ಯವಿಲ್ಲ..’ ಎಂದು ದಲಿತ ವಿದ್ಯಾರ್ಥಿಗೆ ಪಿಎಚ್‌ಡಿ ತಡೆಹಿಡಿದ ಡೀನ್

ಕೇರಳ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ (ಪಿಎಚ್‌ಡಿ) ವಿಪಿನ್ ವಿಜಯನ್ ಅವರು ಸಂಸ್ಕೃತ ವಿಭಾಗದ ಡೀನ್ ಡಾ. ಸಿ. ಎನ್. ವಿಜಯಕುಮಾರಿ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. "ಡೀನ್ ಆರ್‌ಎಸ್‌ಎಸ್-ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ....

ಎಎಂಯು ಕ್ಯಾಂಪಸ್‌ನಲ್ಲಿ ಗುಂಡಿನದಾಳಿ; ಅಪಹರಣ ಪ್ರಯತ್ನದ ಆರೋಪ

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿ ಕಾರ್ಯಕರ್ತನೊಬ್ಬನ ಮೇಲೆ ನವೆಂಬರ್ 5, 2025 ರ ಸಂಜೆ ಗ್ರಂಥಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಏಳು ಜನರ ಗುಂಪು ದಾಳಿ ನಡೆಸಿದೆ...

ಹೆದ್ದಾರಿ, ಶಾಲೆ, ಆಸ್ಪತ್ರೆ, ರೈಲು ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ನಾಯಿ ಕಡಿತದ ಘಟನೆಗಳಲ್ಲಿ ಆತಂಕಕಾರಿ ಏರಿಕೆಯನ್ನು ಉಲ್ಲೇಖಿಸಿ ಪ್ರಮುಖ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಎಲ್ಲ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಸಾರ್ವಜನಿಕ ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ಡಿಪೋಗಳು ಮತ್ತು ರೈಲು ನಿಲ್ದಾಣಗಳಿಗೆ...

ಉತ್ತರ ಪ್ರದೇಶ| ಆರ್‌ಪಿಎಫ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿ ಸಾವು; ಚಿತ್ರಹಿಂಸೆ ಆರೋಪ ಮಾಡಿದ ಮೃತನ ಕುಟುಂಬ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ಕಸ್ಟಡಿಯಲ್ಲಿ ದಲಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಮೇಲೆ ಕಬ್ಬಿಣದ ರಾಡ್ ಮತ್ತು ಚಾಕುಗಳಿಂದ ಹಲ್ಲೆ ನಡೆಸಿರುವ ಆಳವಾದ ಗಾಯದ ಗುರುತುಗಳು ಇವೆ ಎಂದು...

ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಡಪಂಥೀಯ ಒಕ್ಕೂಟ

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ನಾಲ್ಕೂ ಸ್ಥಾನಗಳಲ್ಲಿ ಎಡ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಜಯ ಸಾಧಿಸಿವೆ. ಈ ಮೂಲಕ ಆರ್‌ಎಸ್‌ಎಸ್‌ ಬೆಂಬಲಿತ ಅಖಿಲ...

‘ಚುನಾವಣೆ ಕಳ್ಳತನ’ದ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿರುವುದನ್ನು ತೋರಿಸುತ್ತೇನೆ’: ರಾಹುಲ್ ಗಾಂಧಿ

ದೆಹಲಿ: ಚುನಾವಣಾ ಅಕ್ರಮಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಮತ್ತು ನರೇಂದ್ರ ಮೋದಿ "ಚುನಾವ್ ಚೋರಿ" (ಚುನಾವಣಾ ಕಳ್ಳತನ) ಮೂಲಕ ಹೇಗೆ ಪ್ರಧಾನಿಯಾದರು ಎಂಬುದನ್ನು ದೇಶದ ಯುವಜನರಿಗೆ ತೋರಿಸುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಹುಜನರನ್ನು ಬಾಲಿವುಡ್ ನಿರ್ಲಕ್ಷಿಸಿದೆ, ಶೇ.10-15 ರಷ್ಟಿರುವ ಪ್ರಬಲ ಜಾತಿಗಳ ಕಥೆ ಮಾತ್ರ ಹೇಳಿದೆ: ನೀರಜ್ ಘಯ್ವಾನ್

ನೀರಜ್ ಘಯ್ವಾನ್ ಅವರ ಇತ್ತೀಚಿನ ಬಾಲಿವುಡ್ ಚಿತ್ರ 'ಹೋಮ್‌ಬೌಂಡ್' ಆಧುನಿಕ ಭಾರತೀಯ ಸಮಾಜದಲ್ಲಿ ಇರುವ ಜಾತಿ ಅಸಮಾನತೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ವರ್ಷ ಆಸ್ಕರ್‌ಗೆ...

ಬಿಹಾರದಲ್ಲೂ ಮತಗಳ್ಳತನ ಮಾಡಲು ಎನ್‌ಡಿಎ ಪ್ರಯತ್ನಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಹರಿಯಾಣದಲ್ಲಿ ಮತಗಳ್ಳತನ ಮಾಡಿದಂತೆ ಬಿಹಾರದಲ್ಲೂ ಮಾಡಲು ಎನ್‌ಡಿಎ ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.  ಸೀತಮ್‌ ಹಾರಿ ಹಾಗೂ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ...

ಕಬ್ಬಿಗೆ ‘ಎಫ್‌ಆರ್‌ಪಿ’ ನಿರ್ಧಾರ ಮಾಡಿರುವುದು ಕೇಂದ್ರ ಸರ್ಕಾರ: ಸಿಎಂ ಸಿದ್ದರಾಮಯ್ಯ

ಕಬ್ಬಿಗೆ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರ. ಆದ್ದರಿಂದ, ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ರಾಜ್ಯದ ಬಿಜೆಪಿಯವರ ಮರಳು ಮಾತುಗಳಿಗೆ ಬಲಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಬಿಹಾರ ವಿಧಾನಸಭಾ ಚುನಾವಣೆ 2025: ಮಧ್ಯಾಹ್ನ 3 ಗಂಟೆಯವರೆಗೂ ಶೇ. 53 ರಷ್ಟು ಮತದಾನ

ಪಾಟ್ನಾ: ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಪ್ರಗತಿಯಲ್ಲಿದ್ದು, ಕೇಂದ್ರ ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ ಮಧ್ಯಾಹ್ನ 3 ಗಂಟೆಯವರೆಗೂ ಶೇ.53.77 ರಷ್ಟು ಮತದಾನವಾಗಿದೆ. 18 ಜಿಲ್ಲೆಗಳ ಪೈಕಿ...