Homeಮುಖಪುಟಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕೇರಳ ಯೂತ್ ಕಾಂಗ್ರೆಸ್ -ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕೇರಳ ಯೂತ್ ಕಾಂಗ್ರೆಸ್ -ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕೇರಳ ರಾಜಧಾನಿಯ ಪಾಳಯಂ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ, ಕೆಎಸ್‌ಯು/ಯೂತ್ ಕಾಂಗ್ರೆಸ್ ಮತ್ತು ಎಸ್‌ಎಫ್‌‌ಐ/ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕೆಎಸ್‌ಯು/ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಭಾರಿ ಹಿಂಸಾಚಾರ ವರದಿಯಾಗಿದೆ.

ಆದರೆ, ಪ್ರತಿಭಟನಾ ಮೆರವಣಿಗೆಯು ಕೇರಳ ವಿಶ್ವವಿದ್ಯಾಲಯದ ಹಾಸ್ಟೆಲ್ ಹತ್ತಿರ ತಲುಪಿದಾಗ ಘರ್ಷಣೆ ಭುಗಿಲೆದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸ್ಟೆಲ್‌ನಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಯೂತ್ ಕಾಂಗ್ರೆಸ್/ಕೆಎಸ್‌ಯು ಕಾರ್ಯಕರ್ತರು ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, ಪ್ರತಿಭಟನಾಕಾರರು ಹಾಸ್ಟೆಲ್ ನಿವಾಸಿಗಳತ್ತ ಬೆಂಕಿಯ ಪಂಜುಗಳನ್ನು ಎಸೆದಿದ್ದಾರೆ ಎಂದು ಎಸ್‌ಎಫ್‌ಐ/ಡಿವೈಎಫ್‌‌ಐ ಕಾರ್ಯಕರ್ತರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂಸಾಚಾರದಿಂದಾಗಿ ಪೊಲೀಸರು ಮಧ್ಯಪ್ರವೇಶಿಸಿ ಹಾಸ್ಟೆಲ್ ಒಳಗೆ ಮತ್ತು ಹೊರಗೆ ಲಾಠಿಚಾರ್ಜ್ ನಡೆಸಬೇಕಾಯಿತು.

ನೆಮೊಮ್ ಶಜೀರ್, ಗೋಪಿ ನಾಯರ್, ಸೈಯದಲಿ ಕೈಪ್ಪಾಡಿ, ಶ್ಯಾಮ್‌ಲಾಲ್ ಮತ್ತು ಅಭಿಜಿತ್ ಸೇರಿದಂತೆ 80 ಯೂತ್ ಕಾಂಗ್ರೆಸ್/ಕೆಎಸ್‌ಯು ಕಾರ್ಯಕರ್ತರ ವಿರುದ್ಧ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಗೆಯೇ ವೇಣು, ಶ್ರೀಕುಮಾರ್, ಡೆನ್ನಿ, ಅಶ್ವಿನ್ ಮತ್ತು ಆದಿತ್ಯನ್ ಸೇರಿದಂತೆ 80 ಎಸ್‌ಎಫ್‌ಐ/ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಕೇರಳ ಪೊಲೀಸ್ ಕಾಯ್ದೆ, ಕೇರಳ ಸಾರ್ವಜನಿಕ ಮಾರ್ಗ ಸಭೆಗಳು ಮತ್ತು ಮೆರವಣಿಗೆಗಳ ನಿರ್ಬಂಧ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಆರೋಪಿಸಲಾಗಿರುವ ಅಪರಾಧಗಳು ಜಾಮೀನು ರಹಿತವಾಗಿರುವುದರಿಂದ, ಆರೋಪಿಗಳನ್ನು ಕರೆಸಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಸ್‌ಎಫ್‌ಐ ಘೋಷಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ನಿರ್ಧಾರಗಳ ಕುರಿತು 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಇಂಡಿಯಾ ಒಕ್ಕೂಟ ಅರ್ಜಿ : ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ 'ಇಂಡಿಯಾ' ಒಕ್ಕೂಟದ ನಾಯಕರು, ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್...

ಖುಲಾಸೆಗೊಂಡರೂ 7 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ₹30 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್; ಅಕ್ರಮ ಬಂಧನಕ್ಕೆ ಪರಿಹಾರ ನೀಡಲು ಕಾನೂನು ರಚಿಸುವಂತೆ ಶಿಫಾರಸು

ಖುಲಾಸೆ ಆದೇಶದ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸುವಲ್ಲಿ ಉಂಟಾದ ಸಂವಹನದ ಕೊರತೆಯಿಂದಾಗಿ, ನಿರ್ದೋಷಿ ಎಂದು ಸಾಬೀತಾದ ನಂತರವೂ ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸೋಮವಾರ (ನವೆಂಬರ್...

SIR ನಿರ್ಧಾರಗಳಿಗೆ ಮೂವರು ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂಬುದಕ್ಕೆ ಚುನಾವಣಾ ಆಯೋಗ ದಾಖಲೆ ಸಲ್ಲಿಸಿಲ್ಲ : ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರ ಹೇಳಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ ಭಾರತೀಯ ಚುನಾವಣಾ...

‘ನೋವು, ಆಘಾತ, ಅಪನಂಬಿಕೆಯಲ್ಲಿದ್ದೇನೆ’: ಇಬ್ಬರು ಅತ್ಯಾಚಾರ ಅಪರಾಧಿಗಳ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಆದೇಶದ ಕುರಿತು ಬಿಲ್ಕಿಸ್ ಬಾನು ಪ್ರತಿಕ್ರಿಯೆ

ಗುಜರಾತ್ ಗಲಭೆಯ ಸಂದರ್ಭದಲ್ಲಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ತಮ್ಮ ಕುಟುಂಬ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳ ಪೈಕಿ ಇಬ್ಬರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿರುವುದು ತನಗೆ...

ಕಿಶ್ತ್ವಾರ್ ಪೊಲೀಸರ ಹತ್ಯೆ : ‘ಮಸೀದಿ ಘೋಷಣೆ’ ಕುರಿತ ಬಿಜೆಪಿ ಶಾಸಕಿಯ ಹೇಳಿಕೆಗೆ ಆಕ್ರೋಶ; ತನಿಖೆಗೆ ಕಾಂಗ್ರೆಸ್ ಆಗ್ರಹ

ಕಿಶ್ತ್ವಾರ್‌ನಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ಹತ್ಯೆಯ ಕುರಿತು ಹಲವು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಈ ಘಟನೆಯನ್ನು ಮಸೀದಿ ಘೋಷಣೆಗಳೊಂದಿಗೆ ತಳುಕು ಹಾಕುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಯತ್ನಕ್ಕೆ ಸ್ಥಳೀಯ...

SIR ವಿವಾದ: ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಸುಪ್ರೀಂ ಕೋರ್ಟ್ ಅನುಮತಿ ಕೋರಿದ ರಾಹುಲ್ ಗಾಂಧಿ!

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಏಕಪಕ್ಷೀಯ ನಿರ್ಧಾರಗಳು ಮತ್ತು ಬೃಹತ್ ಪ್ರಮಾಣದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಆರೋಪಗಳಿಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ...

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ | ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ : ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ ಮಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು...

ಬಿಲ್ಕಿಸ್ ಬಾನು ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದ ಸುಪ್ರೀಂ ಕೋರ್ಟ್

2002ರ ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ನಡೆದಿದ್ದ ಭೀಕರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ ಅವರಿಗೆ ಜಾಮೀನು ಮಂಜೂರು...

‘ನೀವು ಆ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ, ನಿಮಗೆ ಸಮಗ್ರತೆ ಇಲ್ಲ’: ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೂರ್ಯ ಕಾಂತ್ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಮ್ಯೂಟ್!

ನವದೆಹಲಿ: ಭಾರತೀಯ ನ್ಯಾಯಾಂಗದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ತೀವ್ರ ಘರ್ಷಣೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಲು...

ಜಾರ್ಖಂಡ್‌ | ಕಲ್ಲಿದ್ದಲು ಗಣಿ ವಿಸ್ತರಣೆಗೆ ಕೇಂದ್ರ ಅನುಮತಿ : 6 ಲಕ್ಷ ಮರಗಳ ಮಾರಣಹೋಮ, ಆನೆಗಳ ಆವಾಸಸ್ಥಾನ ನಾಶಕ್ಕೆ ಕಾರಣವಾಗಲಿರುವ ಯೋಜನೆ!

ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿನ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿಸ್ತರಣೆಗಾಗಿ 928.03 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ (ವರ್ಗಾಯಿಸುವ) ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ಅರಣ್ಯ...