Homeಮುಖಪುಟಪುಣೆ: ಶಾರ್ಟ್ಸ್ ಧರಿಸಿದಕ್ಕಾಗಿ ಮನೆಗೆ ನುಗ್ಗಿ ಯುವತಿಯರಿಗೆ ಥಳಿತ ಆರೋಪ: 6 ಮಂದಿ ವಿರುದ್ಧ FIR

ಪುಣೆ: ಶಾರ್ಟ್ಸ್ ಧರಿಸಿದಕ್ಕಾಗಿ ಮನೆಗೆ ನುಗ್ಗಿ ಯುವತಿಯರಿಗೆ ಥಳಿತ ಆರೋಪ: 6 ಮಂದಿ ವಿರುದ್ಧ FIR

- Advertisement -
- Advertisement -

ಮಹಾರಾಷ್ಟ್ರದ ಪುಣೆಯಲ್ಲಿ ಶಾರ್ಟ್ಸ್ ಧರಿಸಿದ್ದಕ್ಕಾಗಿ ಬಾಡಿಗೆ ಮನೆಗೆ ನುಗ್ಗಿ ಮೂವರು ಯುವತಿಯರಿಗೆ ಥಳಿಸಿದ ಆರೋಪದ ಮೇಲೆ ಪುಣೆ ನಗರ ಪೊಲೀಸರು ಸುಮಾರು ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಲ್ಕಾ ಪಥಾರೆ, ಸಚಿನ್ ಪಥಾರೆ, ಕೀತನ್ ಪಥಾರೆ, ಸೀಮಾ ಪಥಾರೆ, ಶೀತಲ್ ಪಥಾರೆಮತ್ತು ಕಿರಣ್ ಪಥಾರೆ ಎಂಬ ಆರು ಆರೋಪಿಗಳು ಪೇಯಿಂಗ್ ಗೆಸ್ಟ್‌ಗಳಾಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಗೆ ಥಳಿಸಿದ್ದಾರೆ. ಖಾರಾಡಿಯ ರಷಕ್ ನಗರದಲ್ಲಿ ಬುಧವಾರ ಈ ಘಟನೆ ನಡೆದಿದೆ.

ಪೇಯಿಂಗ್ ಗೆಸ್ಟ್‌ಗಳಾಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಮೂವರು ಯುವತಿಯರಲ್ಲಿ ಇಬ್ಬರು ಐಟಿ ವೃತ್ತಿಪರರಾಗಿದ್ದು, ಖರಾಡಿಯ ಐಟಿ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಮನೆ ಮಾಲೀಕರು ಗುರುವಾರ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

ಮನೆಯ ಮಾಲೀಕರಾಗಿರುವ 32 ವರ್ಷದ ಮಹಿಳೆ ಗುರುವಾರ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 448, 323, 504, 506, 143, 147, 149 ರ ಅಡಿಯಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಯುವತಿಯರು ಶಾರ್ಟ್ಸ್ ಧರಿಸಿ ಸ್ಥಳದಲ್ಲಿ ತಿರುಗಾಡಿದ್ದರಿಂದ ಸುತ್ತಮುತ್ತಲೂ ವಾಸಿಸುತ್ತಿದ್ದ ಆರೋಪಿಗಳು ಕೋಪಗೊಂಡಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ 10.15ರ ಸುಮಾರಿಗೆ ಆರೋಪಿಗಳು ದೂರುದಾರರ ಅನುಮತಿ ಪಡೆಯದೆ ಮನೆಗೆ ನುಗ್ಗಿ, ಯುವತಿಯರಿಗೆ ಪಾದರಕ್ಷೆಗಳಿಂದ ಥಳಿಸಿ, ದೂರುದಾರರನ್ನು ನಿಂದಿಸಿ, ಮನೆ ಕೆಡವುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

“ಆರೋಪಿಗಳು ಮತ್ತು ದೂರುದಾರರ ನಡುವೆ ಈ ಹಿಂದೆ ಸಣ್ಣಪುಟ್ಟ ವಿಚಾರಗಳಿಗೆ ಜಗಳಗಳು ನಡೆದಿದ್ದವು. ಬುಧವಾರ ಯುವತಿಯರು ಶಾರ್ಟ್ಸ್ ಹಾಕಿಕೊಂಡು ತಿರುಗಾಡುತ್ತಿದ್ದ ವಿಚಾರವಾಗಿ ಜಗಳವಾಗಿತ್ತು” ಎಂದು ಚಂದನ್ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಜಾಧವ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ನಿರೀಕ್ಷಕ ಮನೋಹರ್ ಸೋನಾವಾನೆ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವನಾದ ನಟ ಸೋನು ಸೂದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...