Homeಅಂಕಣಗಳುರಂಜಿಸಿ ವಂಚಿಸುವ ಕಾಂತಾರ

ರಂಜಿಸಿ ವಂಚಿಸುವ ಕಾಂತಾರ

- Advertisement -
- Advertisement -

ಚಂಡಮಾರುತ, ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ದುರಂತಗಳಂತೆಯೇ ಬಿಜೆಪಿ ಸರಕಾರದಲ್ಲಿ ನಡೆದ ನೋಟುಬ್ಯಾನು, ಜಿಎಸ್‌ಟಿ, ಕೃಷಿಕಾಯ್ದೆಗಳಿಂದಾಗಿರಬಹುದಾದ ಅನಾಹುತಗಳನ್ನು ದಾಖಲಿಸುವ ಬದಲು, ಮಾಧ್ಯಮದವರು ಚೀನಾದಲ್ಲಿ ಏನಾಗಿದೆ ಆಫ್ಘಾನಿನ ಕತೆಯೇನು, ಪಾಕಿಸ್ತಾನ ಉಳಿಯುವುದೆ, ಶ್ರೀಲಂಕಾದಲ್ಲಿ ಅರಮನೆಗೇ ನುಗ್ಗಿ ಆಹಾರ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂಬಿತ್ಯಾದಿಯಾಗಿ ಹುಡುಕುತ್ತಾ ಕುಳಿತಿರಬೇಕಾದರೆ ಹಸಿವಿನ ವಿಷಯದಲ್ಲಿ ನಮ್ಮ ಸುತ್ತಮುತ್ತಲ ದೇಶಗಳನ್ನ ಭಾರತ ಹಿಂದಿಕ್ಕಿದೆಯಂತಲ್ಲಾ. ಈ ಬಗ್ಗೆ ಮಾಧ್ಯಮದವರನ್ನ ಕೇಳಿದರೆ, ಅದೆಲ್ಲಾ ಕಾಂಗ್ರೆಸ್ಸಿಗರು ಹರಡುತ್ತಿರುವ ಸುಳ್ಳು ಸುದ್ದಿ; ಈಗ ನಮ್ಮನ್ನೇ ನೋಡಿ, ದಿನಬೆಳಗಾಯ್ತೆಂದರೆ ಯಾರಾದರೂ ಕಾಫಿ, ತಿಂಡಿ ಕೊಡಿಸುವವರು ಸಿಗುತ್ತಾರ ಎಂದು ಹುಡುಕುತ್ತಿದ್ದೆವು. ಮಧ್ಯಾಹ್ನದ ಊಟಕ್ಕೂ ಅದೇ ಸ್ಥಿತಿಯಿತ್ತು. ಸಾಯಂಕಾಲಕ್ಕೆ ಯಾರಾದರೂ ಪಾರ್ಟಿಗೆ ಕರೆಯುತ್ತಿದ್ದರು. ಈಗ ನಾವೇ ಕರೆಯುತ್ತೇವೆ. ಅಲ್ಲದೆ ಅವರವರ ಮನೆಯವರೆಗೂ ಬಿಟ್ಟುಕೊಡುವ ವಾಹನವೂ ನಮ್ಮಲ್ಲಿದೆ. ನಾವೇ ಹೀಗೆ ಸುಧಾರಿಸುತ್ತಿರಬೇಕಾದರೆ, ಇನ್ನು ನಮ್ಮ ದೇಶದ ಜನ ಹಸಿದು ಮಲಗುತ್ತಾರೆಂಬುದು ಹಸಿಸುಳ್ಳು ಎಂದು ಮಾರಿಕೊಂಡ ಮಾಧ್ಯಮದವರು ಬೊಮ್ಮಾಯಿ ಕೊಟ್ಟ ಗಿಫ್ಟನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರಂತಲ್ಲಾ, ಥೂತ್ತೇರಿ.

******

ಒಂದಲ್ಲಾ ಒಂದು ದಿನ ಶುದ್ಧ ಸಾಹಿತ್ಯದ ಕಡೆಗೆ ಸಾಹಿತಿ ತಿರುಗಲೇಬೇಕೆಂದು ನಮ್ಮ ಸಂತೆಶಿವರದ ಭೈರಪ್ಪ ಹಾಸನಕ್ಕೆ ಬಂದು ಭೈರಿಗೆ ಹಿಡಿದು ಹೋಗಿದ್ದಾರಲ್ಲಾ! ಸದರಿ ಸಾಹಿತಿಗೆ ಈ ಜ್ಞಾನೋದಯ ತಡವಾಗಿ ಸಂಭವಿಸಿದೆ. ಭೈರಪ್ಪನವರು ಧರ್ಮಶ್ರೀ, ದಾಟು, ಆವರಣ ಇತ್ಯಾದಿ ಶುದ್ಧವಲ್ಲದ ಸಾಹಿತ್ಯ ರಚಿಸಿದ ಮೇಲೆ ಕಡೆಗೂ ಶುದ್ಧ ಸಾಹಿತ್ಯದ ಬಗ್ಗೆ ಹಲುಬಿದ್ದಾರೆ. ಪರಂಪರೆಯ ಹಾಳುಗುಡಿಯಲ್ಲೇ ಕುಳಿತು ರಿಮ್ಮುಗಟ್ಟಲೆ ಬರೆದ ಭೈರಪ್ಪನವರಿಗೆ ಆಧುನಿಕತೆ ಚಿಂತನೆಯ ಸಾಹಿತಿಗಳನ್ನು ಕಂಡರಾಗುವುದಿಲ್ಲ. ಅವರೆಲ್ಲಾ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕೀಳರಿಮೆಯಿಂದ ಹಿಂದೂ ಧರ್ಮದ ಕಗ್ಗ ಹೊಸೆಯುತ್ತಿದ್ದ ಭೈರಣ್ಣ ಅವರೆಲ್ಲಾ ಕಾಲವಾದ ನಂತರ ಅವರ ಸಾಹಿತ್ಯವನ್ನು ಅಣಕಿಸುತ್ತಿದ್ದಾರೆ. ಸುದೈವದಿಂದ ಅವರೆಲ್ಲಾ ಭೈರಪ್ಪನ ಸಾಹಿತ್ಯ ಅಂದರೆ ಏನು ಎಂದು ದಾಖಲಿಸಿ ಹೋಗಿದ್ದಾರೆ. ಅವು ನೆನಪಿಗೆ ಬಂದಾಗಲೆಲ್ಲಾ ಆಧುನಿಕ ಸಾಹಿತಿಗಳು ಮತ್ತು ಕವಿಗಳನ್ನ ಟೀಕಿಸುತ್ತಲೇ ಬರುತ್ತಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…

******

ಭೈರಪ್ಪನವರ ಬರವಣಿಗೆಯ ಬೆಲೆ ಕಟ್ಟಿದ ಯು.ಆರ್ ಅನಂತಮೂರ್ತಿಯವರು ಭೈರಪ್ಪ ರಂಜಿಸಿ ವಂಚಿಸುವ ಲೇಖಕ ಎಂದು ಸಾಕ್ಷಿಸಮೇತ ತೋರಿ ಹೋಗಿದ್ದರು. ಈ ವ್ಯಾಖ್ಯಾನ ಕಾಂತಾರ ಎಂಬ ಕಂತೆ ಪುರಾಣದ ಸಿನಿಮಾ ನೋಡುವಾಗ ಜ್ಞಾಪಕಕ್ಕೆ ಬಂತಲ್ಲಾ. ಕಾಂತಾರದ ನಿರ್ದೇಶಕ ಜಗ್ಗೇಶ್ ಚೇಷ್ಟೆಗಳನ್ನು ಅನುಕರಿಸಿ ಮೇಲೆ ಬಂದವರು. ಹಾಗೆಯೇ ಜನ ಹಗುರವಾಗಿ ನಗುವ ದೃಶ್ಯಗಳನ್ನು ತೆಗೆದು ತೋರಿದವರು. ಹೀಗೆ ತೋರುತ್ತ ಬಂದ ಆತನೊಳಗೆ ಅಮಾನುಷತೆ ಅಡಗಿರುವುದು ಅವರಿಗೇ ಗೊತ್ತಿಲ್ಲ. ಉಬ್ಬುಹಲ್ಲಿರುವ ಪಾತ್ರವೊಂದನ್ನು ಸೃಷ್ಠಿ ಮಾಡಿ ಆಡಿಕೊಳ್ಳುವ ಈತ ಜನರನ್ನು ನಗಿಸುವ ಬರದಲ್ಲಿ ಎಂತಹ ಹೀನ ಕೆಲಸ ಮಾಡುತ್ತೇನೆಂದು ಗ್ರಹಿಸಿದಂತೆ ಕಾಣುವುದಿಲ್ಲ. ಹಾಗೇ ನೋಡಿದರೆ ದಕ್ಷಿಣ ಕನ್ನಡದ ಯಕ್ಷಗಾನ ಯಕ್ಕುಟ್ಟಿ ಹೋಗಿ ಬಹಳ ದಿನಗಳಾಗಿವೆ. ಕಪ್ಪು ಬಣ್ಣ ಬಳಿದ ಪಾತ್ರ ತಂದು ನಿಲ್ಲಿಸಿಕೊಂಡು ಆಡಿಕೊಳ್ಳುವುದು, ಸಾಬರನ್ನ ಅಣಕಿಸುವುದು ಅದ್ಭುತ ಕಲೆಯಾದ ಯಕ್ಷಗಾನದೊಳಕ್ಕೆ ತಂದು ಬಹಳ ದಿನಗಳಾಗಿವೆ. ಮನುಷ್ಯನ ಆಕಾರವನ್ನ ಆಡಿಕೊಳ್ಳುವುದು, ಪುರೋಹಿತರ ಶ್ರೇಷ್ಠತೆ ಮೆರೆಯುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಸಮಯದಲ್ಲಿ ಭೂತ, ಕೋಲ, ಪಂಜುರ್ಲಿ ಎಂದುಕೊಂಡು ಮನಸ್ಸಿನ ವಿಕಾರಗಳನ್ನು ಮೆರೆಸುತ್ತ, ಅವುಗಳನ್ನು ದೈವೀಕರಿಸಿ ನಿಂದಿಸಿದವರು ರಕ್ತ ಕಾರಿಕೊಂಡು ಸಾಯುತ್ತಾರೆಂದು ನಂಬಿಸಲು ಹೊರಟಿರುವುದು ಒಂದು ಸಮೂಹದ ತಲೆ ಯಕ್ಕುಟ್ಟಿ ಹೋಗಿರುವುದರ ಸೂಚನೆಯಂತಲ್ಲಾ, ಥೂತ್ತೇರಿ.

******

ಗುಜರಾತಿನ ಮೋರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ಕುಸಿದುಬಿದ್ದು 135 ಜನ ಸಾವಿಗೀಡಾಗಿದ್ದಾರೆ. ಸೇತುವೆ ಕುಸಿಯುವುದು, ಜನರ ಆಕ್ರಂದನ, ಅಸಹಾಯಕರಾಗಿ ಅಸುನೀಗುವುದು ಇವೆಲ್ಲಾ ಬದುಕಿರುವವರನ್ನ ಕಾಡುವ ಸಂಗತಿಗಳು. ಈ ಸೇತುವೆ ದುರಸ್ತಿಗೊಂಡು ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ಕುಸಿದುಬಿದ್ದು 135 ಜನ ಸತ್ತಿದ್ದಾರೆ. ಜನ ಸತ್ತಿದ್ದಕ್ಕೆ ಮೋದಿ ಸರ್ಕಾರ ಇಲ್ಲಿಯವರೆಗೆ ತಮ್ಮ ತವರು ರಾಜ್ಯದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಕ್ರಮವಂತೂ ದೂರವೇ ಹೋಯ್ತು. ಹಿಂದೆ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಗುಜರಾತಿನಲ್ಲಿ ಮೂರ್ನಾಕು ದಿನದಲ್ಲಿ ಮೂರು ಸಾವಿರ ಜನ ಸತ್ತಾಗ ಅದು ಅವರನ್ನು ಕಾಡಲಿಲ್ಲ. ರೈತ ಹೋರಾಟದ ಸಮಯದಲ್ಲಿ ದೆಹಲಿ ಗಡಿಯಲ್ಲಿ ಏಳುನೂರ ಐವತ್ತು ಜನ ರೈತರು ಅಸುನೀಗಿದಾಗ ಮಾತನಾಡಲಿಲ್ಲ. ಪ್ರಧಾನಿಯವರ ಈ ವಿಲಕ್ಷಣ ನಡೆಗೆ ಏನು ಹೇಳುವುದೆಂಬುದೇ ಸಮಸ್ಯೆಯಾಗಿದೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...