Homeಮುಖಪುಟಬಣ್ಣದ ಕಾರಣ ರವೀಂದ್ರನಾಥ ಟ್ಯಾಗೋರ್‌ ತಾರತಮ್ಯ ಎದುರಿಸಿದ್ದಾರೆ: ಕೇಂದ್ರ ಸಚಿವರ ವಿವಾದಿತ ಹೇಳಿಕೆ

ಬಣ್ಣದ ಕಾರಣ ರವೀಂದ್ರನಾಥ ಟ್ಯಾಗೋರ್‌ ತಾರತಮ್ಯ ಎದುರಿಸಿದ್ದಾರೆ: ಕೇಂದ್ರ ಸಚಿವರ ವಿವಾದಿತ ಹೇಳಿಕೆ

- Advertisement -
- Advertisement -

ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಖಾತೆ ಸಚಿವ ಸುಭಾಷ್ ಸರ್ಕಾರ್, ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರ ಮೈಬಣ್ಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟ್ಯಾಗೋರ್‌ರ ಮೈಬಣ್ಣದ ಕಾರಣದಿಂದ ಅವರ ತಾಯಿ ತಾರತಮ್ಯ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ರವೀಂದ್ರನಾಥ ಟ್ಯಾಗೋರ್‌ ಸ್ಥಾಪಿಸಿದ ವಿಶ್ವ ಭಾರತಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದ ಸಚಿವ ಸುಭಾಷ್ ಸರ್ಕಾರ್, ” ಟ್ಯಾಗೋರ್‌ ಅವರ ಮೈ ಬಣ್ಣ ಮನೆಯಲ್ಲಿದ್ದವರಿಗಿಂತ ಹೆಚ್ಚು ಕಪ್ಪಗಿದ್ದಿದ್ದರಿಂದ ಅವರ ತಾಯಿ  ತಾರತಮ್ಯ ಮಾಡಿದ್ದಾರೆ” ಎಂದು ಹೇಳಿದ್ದಾರೆ.

“ಟ್ಯಾಗೋರ್‌ ಅವರು ಕಪ್ಪು ಬಣ್ಣದವರಾಗಿದ್ದರು ಎಂದು  ಅವರ ತಾಯಿ ಮತ್ತು ಇತರ ಕೆಲವು ಸಂಬಂಧಿಕರು ಅವರನ್ನು ಎತ್ತಿ ಆಡಿಸಿಲ್ಲ” ಎಂದು ಸಚಿವರು ಹೇಳಿಕೊಂಡಿದ್ದಾರೆ.

“ಚರ್ಮದ ಬಣ್ಣದಲ್ಲಿ ಎರಡು ವಿಧದ ಜನರಿದ್ದಾರೆ. ಹಳದಿ ಮಿಶ್ರಿತವಾದ ಆಕರ್ಷಕ ಬಿಳುಪಿನ ಮೈಬಣ್ಣ ಹೊಂದಿರುವವರು ಮತ್ತು ಎಣ್ಣೆಗೆಂಪು ಛಾಯೆಯನ್ನು ಹೊಂದಿರುವವರು. ಟ್ಯಾಗೋರರು ಎರಡನೇ ವರ್ಗಕ್ಕೆ ಸೇರಿದವರು” ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಇದನ್ನೂ ಓದಿ: ದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಟ್ಯಾಗೋರರ ಕವಿತೆ ವೈರಲ್

ಸಚಿವರ ಹೇಳಿಕೆಗೆ ಟ್ಯಾಗೋರ್‌ ಅಭಿಮಾನಿಗಳು, ತಜ್ಞರು ಮತ್ತು ವಿಪಕ್ಷಗಳು ಕಿಡಿ ಕಾರಿವೆ. ಶಿಕ್ಷಣ ಸಚಿವರನ್ನು ಅವಿದ್ಯಾವಂತರು ಎಂದು ಆಕ್ರೋಶ ವ್ಯಕ್ತಪಡಿಸಿವೆ.

“ಮಾನ್ಯ ಸಚಿವರು ಯಾವ ಆಧಾರದ ಮೇಲೆ ಇಂತಹ ಟೀಕೆಗಳನ್ನು ಮಾಡಿದರು. ಅವರು ಟ್ಯಾಗೋರರ ಜೀವನಚರಿತ್ರೆಯನ್ನು ಸಂಪೂರ್ಣವಾಗಿ ಓದಿದ್ದಾರೆಯೇ ಅಥವಾ ಅವರ ಬರಹಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೋ ಗೊತ್ತಿಲ್ಲ” ಎಂದು ವಿಶ್ವ ಭಾರತಿ ವಿಶ್ವವಿದ್ಯಾನಿಲಯ ಉಪಕುಲಪತಿ ಪಬಿತ್ರಾ ಸರ್ಕಾರ್ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್  ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರು ಬಂಗಾಳದ  ಅಸ್ಮಿತೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. “ಸುಭಾಷ್ ಸರ್ಕಾರ್ ಅವರಿಗೆ ಇತಿಹಾಸದ ಬಗ್ಗೆ ತಿಳಿದಿಲ್ಲ. ರವೀಂದ್ರನಾಥ ಟ್ಯಾಗೋರ್ ಬಿಳೀ ಮೈಬಣ್ಣ ಹೊಂದಿದ್ದ ಚರ್ಮದವರು ಎಂಬುದು ಎಲ್ಲರಿಗೂ ತಿಳಿದಿದೆ. ಇದು ಜನಾಂಗೀಯ ನಿಂದನೆ. ಸುಭಾಷ್ ಸರ್ಕಾರಕ್ಕೆ ಮತ್ತೊಮ್ಮೆ ವಿಶ್ವಭಾರತಿ ವಿಶ್ವವಿದ್ಯಾಲಯಕ್ಕೆ ಪ್ರವೇಶ  ನೀಡಬಾರದು” ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಸಿಪಿಐ (ಎಂ) ಕೇಂದ್ರ ಸಮಿತಿಯ ಸದಸ್ಯ ಸುಜನ್ ಚಕ್ರವರ್ತಿ, “ಇಂತಹ ಟೀಕೆಗಳು ಬಿಜೆಪಿಯ ಜನಾಂಗೀಯ ನಿಂದನೆ ಮತ್ತು ಬಂಗಾಳಿ ವಿರೋಧಿ ಮನಸ್ಥಿತಿಯನ್ನು ಮಾತ್ರ ಪ್ರತಿಬಿಂಬಿಸುತ್ತವೆ” ಎಂದು ಟೀಕಿಸಿದ್ದಾರೆ.

ಆದರೆ, ಸಚಿವರ ಪರ ಬ್ಯಾಟ್ ಬಿಸಿರುವ ಬಂಗಾಳ ಬಿಜೆಪಿ, “ಸುಭಾಷ್ ಸರ್ಕಾರ್ ರವೀಂದ್ರನಾಥ ಟ್ಯಾಗೋರ್ ಅಥವಾ ಅವರ ಕುಟುಂಬದ ವಿರುದ್ಧ ಏನನ್ನೂ ಹೇಳಿಲ್ಲ. ಅವರು ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯದ ವಿರುದ್ಧ ಮಾತನಾಡಿದ್ದಾರೆ. ಅವರ ಟೀಕೆಗಳು ಯಾರನ್ನೂ ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ. ಟಿಎಂಸಿ ಎಲ್ಲದರಲ್ಲೂ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು” ಎಂದಿದೆ.


ಇದನ್ನೂ ಓದಿ: ಯುವ ಸಂಕಲ್ಪ ಯಾತ್ರೆ:ಬಂಗಾಳದಲ್ಲಿ ಶಾಸಕ ಸೇರಿದಂತೆ 30 ಬಿಜೆಪಿ ಕಾರ್ಯಕರ್ತರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...