Homeಕರ್ನಾಟಕರಾಮದೇವ್‌ರ ಪತಂಜಲಿ ಸಂಸ್ಥೆ ಹರಿದ್ವಾರದಲ್ಲಿ ದಲಿತರ ಭೂಮಿ ಕಬಳಿಸುತ್ತಿದೆ: ವರದಿ

ರಾಮದೇವ್‌ರ ಪತಂಜಲಿ ಸಂಸ್ಥೆ ಹರಿದ್ವಾರದಲ್ಲಿ ದಲಿತರ ಭೂಮಿ ಕಬಳಿಸುತ್ತಿದೆ: ವರದಿ

- Advertisement -
- Advertisement -

ಬಾಬಾ ರಾಮ್‌ದೇವ್‌ ಅವರ ಪತಂಜಲಿ ಸಂಸ್ಥೆಯು ದಲಿತರ ಭೂಮಿಯನ್ನು ಕಬಳಿಸುತ್ತಿದೆ. ಪರೋಕ್ಷವಾಗಿ ದಲಿತರನ್ನು ವಂಚಿಸುತ್ತಿದೆ ಎಂದು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವರದಿ ಮಾಡಿದೆ.

ಸುಮಾರು ಐದು ದಶಕಗಳ ಹಿಂದೆ ಭೂಸುಧಾರಣೆಯ ಭಾಗವಾಗಿ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ತೆಲಿವಾಲಾ ಗ್ರಾಮದ ಪ್ರತಿ ದಲಿತ ಕುಟುಂಬಕ್ಕೆ ಆರು ಬಿಘಾ ಜಮೀನುಗಳನ್ನು ನೀಡಲಾಯಿತು. ಆದರೆ ಆ ಭೂಮಿಯ ಬಹುಪಾಲು ಈಗ ಪತಂಜಲಿಯ ನಿಯಂತ್ರಣದಲ್ಲಿದೆ. ದಲಿತರು ಹೆಚ್ಚಾಗಿ ಭೂರಹಿತರಾಗಿದ್ದು- ಒಂದೋ ರಾಮ್‌ದೇವ್ ಅವರ ಕಾರ್ಪೊರೇಟ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದಾರೆ ಅಥವಾ ಜೀವನೋಪಾಯಕ್ಕಾಗಿ ವಲಸೆ ಹೋಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪತಂಜಲಿ ಸಂಸ್ಥೆ ತಾಂತ್ರಿಕವಾಗಿ ಭೂಮಿಯನ್ನು ಖರೀದಿಸಿಲ್ಲ. ಅವಿಭಜಿತ ಉತ್ತರ ಪ್ರದೇಶದಲ್ಲಿ ಜಮೀನ್ದಾರಿ ಪದ್ಧತಿಯನ್ನು ರದ್ದುಪಡಿಸಿದ ನಂತರ ಜಾರಿಗೊಳಿಸಲಾದ ಕಟ್ಟುನಿಟ್ಟಾದ ಭೂ ಕಾನೂನುಗಳಿಂದಾಗಿ ಇಲ್ಲಿ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ. ಹರಿದ್ವಾರದಿಂದ 20 ಕಿಮೀ ದೂರದಲ್ಲಿರುವ, 1,500 ದಲಿತ ಮತದಾರರಿರುವ ತೆಲಿವಾಲಾ ಗ್ರಾಮದಲ್ಲಿ ಕಾನೂನು ಬದ್ಧವಾಗಿ ಭೂಮಿ ಖರೀದಿಸಲು ಪತಂಜಲಿ ಸಂಸ್ಥೆಗೆ ಅವಕಾಶವಿಲ್ಲ.

18 ಬಿಘಾಗಳಿಗಿಂತ ಹೆಚ್ಚಿನ ನಿವೇಶನಗಳನ್ನು ಹೊಂದಿರುವವರಿಗೆ ವಿನಾಯಿತಿಯನ್ನು ನೀಡಿ ಮಾರಬಹುದು. ಆದರೆ ದಲಿತರು ತಮ್ಮ ಭೂಮಿಯನ್ನು ಇತರ ದಲಿತರಿಗೆ ಮಾತ್ರ ವರ್ಗಾಯಿಸಬಹುದು ಎಂದು ಕಾನೂನು ಹೇಳುತ್ತದೆ. ಹೀಗೆ ಮಾರಾಟ ಮಾಡುವಾಗ ಜಿಲ್ಲೆ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ರಿಂದ ವಿಶೇಷ ಅನುಮತಿ ಅಗತ್ಯವಿದೆ.

ಆದರೆ ಪತಂಜಲಿ ಸಂಸ್ಥೆ ಮತ್ತು ಅದರ ಸಹಚರರು ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ಪ್ರಭಾವ ಮತ್ತು ಬಂಡವಾಳವನ್ನು ಬಳಸಿಕೊಂಡು 2005 ಮತ್ತು 2010ರ ನಡುವೆ ದಲಿತ ಗ್ರಾಮಸ್ಥರ ಹೆಸರಿನಲ್ಲಿ ‘ದೇಣಿಗೆ ಪತ್ರಗಳು’ ಮತ್ತು ನೋಂದಣಿಗಳ ಮೂಲಕ ಸುಮಾರು 600 ಬಿಘಾ ಭೂಮಿಯನ್ನು ಪತಂಜಲಿ ಪಡೆದುಕೊಂಡಿದೆ. ಈ ಭೂಮಿಯನ್ನು ಔಷಧೀಯ ಗಿಡಮೂಲಿಕೆಗಳಿಗೆ, ಕಬ್ಬು ಕೃಷಿಗೆ ಮತ್ತು ಗೋಶಾಲೆಗಳನ್ನು ನಿರ್ವಹಿಸಲು ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ‘ನ್ಯೂಸ್‌ಲಾಂಡ್ರಿ’ ಜಾಲತಾಣಕ್ಕೆ ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. “ಮಾಲಿಕತ್ವ ನಿಮ್ಮ ಬಳಿಯೇ ಇರಲಿದ್ದು, ಭೂಮಿಯನ್ನಷ್ಟೇ ಬಳಸಲು ಅವಕಾಶ ನೀಡುವಂತೆ ಅನೇಕ ದಲಿತ ಕುಟುಂಬಗಳಿಗೆ ಪತಂಜಲಿಯ ಸಹವರ್ತಿಗಳು ಕೋರಿದರು. ನಿರಾಕರಿಸಿದವರಿಗೆ ಒತ್ತಡ ಹೇರಲಾಯಿತು” ಎನ್ನಲಾಗಿದೆ.

“ಗ್ರಾಮ ಪಂಚಾಯತ್‌ನ ನೂರಾರು ಬಿಘಾಸ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಔರಂಗಾಬಾದ್ ಮತ್ತು ತೇಲಿವಾಲಾ ಮುಂತಾದ ಸ್ಥಳಗಳಲ್ಲಿ ಗ್ರಾಮಸ್ಥರು ವಿರೋಧಿಸಿದ್ದರಿಂದಾಗಿ ಇದು ಯಶಸ್ವಿಯಾಗಲಿಲ್ಲ.”

ಮುಖಂಡರಾದ ಗುಲಾಬ್ ಸಿಂಗ್, ಕುರಾಡಿ ಸಿಂಗ್ ಅವರು ಪತಂಜಲಿ ಸಂಸ್ಥೆ ಜೊತೆ ಮಾತುಕತೆಗೆ ಸಹಾಯ ಮಾಡಿದರು. ತೆಲಿವಾಲಾದಂತಹ ಸ್ಥಳಗಳಲ್ಲಿ ವೈಯಕ್ತಿಕ ಭೂಮಿ ವರ್ಗಾವಣೆಗಳು ಸುಗಮವಾದವು ಎನ್ನಲಾಗಿದೆ.

ಇದನ್ನೂ ಓದಿರಿ: ಮೊದಲ ಬೆಂಚ್‌ನಲ್ಲಿ ಕುಳಿತ ಕಾರಣ ದಲಿತ ಬಾಲಕಿಗೆ ಶಿಕ್ಷಕಿಯಿಂದ ಥಳಿತ; ಎಫ್‌ಐಆರ್‌

52 ವರ್ಷದ ಮಹೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿ, “ಪತಂಜಲಿ ಸಂಸ್ಥೆಗಾಗಿ ಇತರ ದಲಿತ ಕುಟುಂಬಗಳಿಂದ ಪರೋಕ್ಷವಾಗಿ 100 ಬಿಘಾಗಳನ್ನು ಖರೀದಿಸಲಾಗಿದೆ” ಎಂದು ತಿಳಿಸಿದ್ದಾರೆ.

“ಪತಂಜಲಿಯ ಹಿರಿಯ ಕಾರ್ಯಕರ್ತ ದೇವೇಂದ್ರ ಚೌಧರಿ ನನ್ನ ಬಳಿ ಬಂದಿದ್ದರು. ನಿಮ್ಮ ಹೆಸರಿಗೆ ಸ್ವಲ್ಪ ಜಮೀನು ವರ್ಗಾವಣೆ ಮಾಡಿಕೊಳ್ಳಿ. ಹಣ ನೀಡುತ್ತೇವೆ, ಹೆಸರೇ ನಿಮ್ಮದೇ ಆಗಿರುತ್ತದೆ ಎಂದ ಚೌಧರಿಯವರು ಜಮೀನು ಮಾರಾಟ ಮಾಡಿದವರಿಗೆ ಹಣ ನೀಡುತ್ತಿದ್ದರು’’ ಎಂದು ಮಹೇಂದ್ರ ಆರೋಪಿಸಿದ್ದಾರೆ.

ಭೂ ದಾಖಲೆಗಳ ಪ್ರಕಾರ, ಮಹೇಂದ್ರ ಮತ್ತು ಅವರ ಕುಟುಂಬವು 2008ರಲ್ಲಿ 18 ಬಾರಿ, 2007ರಲ್ಲಿ ಏಳು ಬಾರಿ ಮತ್ತು 2009ರಲ್ಲಿ 21 ಬಾರಿ ಪ್ಲಾಟ್‌ಗಳನ್ನು ಖರೀದಿಸಿ ಮಾರಾಟ ಮಾಡಿದೆ ಮತ್ತು ಒಪ್ಪಂದಗಳಿಗೆ ಸಹಿ ಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...