Homeಮುಖಪುಟಗಣರಾಜ್ಯೋತ್ಸವ-2022: ದೆಹಲಿಯಲ್ಲಿ ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಅಂಟಿಸಿದ ಪೊಲೀಸರು

ಗಣರಾಜ್ಯೋತ್ಸವ-2022: ದೆಹಲಿಯಲ್ಲಿ ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಅಂಟಿಸಿದ ಪೊಲೀಸರು

- Advertisement -
- Advertisement -

ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಪೊಲೀಸರು ಮಂಗಳವಾರ ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರದ ಸುತ್ತ ಮುತ್ತ ಶಂಕಿತ ಭಯೋತ್ಪಾದಕರ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.

ಸುನ್ನಿ ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪು ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಉಲ್ಲೇಖಿಸಿರುವ ನಾಲ್ಕೈದು ಪೋಸ್ಟರ್‌ಗಳು ಈ ಪ್ರದೇಶದಲ್ಲಿ ಕಂಡುಬಂದಿವೆ.

ಪೋಸ್ಟರ್‌ನಲ್ಲಿರುವವರ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸುವವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿದಾರರ ಹೆಸರನ್ನು ಮರೆಮಾಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಗಾಂಧೀಜಿ ನೆಚ್ಚಿನ ‘ಅಬೈಡ್‌‌ ವಿತ್‌ ಮೀ’ ಗೀತೆ ಗಣರಾಜ್ಯೋತ್ಸವದ ಬೀಟಿಂಗ್ ರಿಟ್ರೀಟ್‌ನಿಂದ ಹೊರಕ್ಕೆ!

ದೆಹಲಿ ಪೊಲೀಸರು ಈ ವರ್ಷದ ಗಣರಾಜ್ಯೋತ್ಸವದ ಭದ್ರತೆಯನ್ನು ಹೆಚ್ಚಿಸಲು ದೆಹಲಿಯಾದ್ಯಂತ 30 ಸ್ಥಳಗಳಲ್ಲಿ ಎಫ್‌ಆರ್‌ಎಸ್ (facial recognition systems) ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಫ್‌ಆರ್‌ಎಸ್‌ನಲ್ಲಿ ಒಟ್ಟು 50,000 ಶಂಕಿತ ಅಪರಾಧಿಗಳ ಡೇಟಾಬೇಸ್ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ ದೆಹಲಿ ಪೊಲೀಸರು ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಪರೇಡ್‌ನಲ್ಲಿ ಬಾಗವಹಿಸುವವರುರು ಕೋವಿಡ್ ಲಸಿಕೆಯನ್ನು ಪಡೆದಿರುವುದು ಕಡ್ಡಾಯವಾಗಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿರಬೇಕು ಕಡ್ಡಾಯವಾಗಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಅಧಿಕಾರಿಗಳಿಗೆ ಸಹಕರಿಸಲು, ಪ್ರವೇಶ ಪಾಸ್‌ಗಳ ಜೊತೆಗೆ ಆಧಾರ್ ಕಾರ್ಡ್‌ಗಳು, ಮತದಾರರ ಗುರುತಿನ ಚೀಟಿಗಳು, ಡ್ರೈವಿಂಗ್ ಲೈಸೆನ್ಸ್‌ನಂತಹ ವೈಯಕ್ತಿಕ ಗುರುತಿನ ಪುರಾವೆಗಳನ್ನು ತೋರಿಸುವಂತೆ ಜನರಿಗೆ ವಿನಂತಿ ಮಾಡಲಾಗಿದೆ.

ಗಣರಾಜ್ಯೋತ್ಸವದ ಪರೇಡ್ ಜನವರಿ 26 ರಂದು ಬೆಳಿಗ್ಗೆ 10.20 ಕ್ಕೆ ಪ್ರಾರಂಭವಾಗಲಿದ್ದು, ವಿಜಯ್ ಚೌಕ್‌ನಿಂದ ಕೆಂಪು ಕೋಟೆ ಮೈದಾನಕ್ಕೆ ತೆರಳಲಿದೆ.


ಇದನ್ನೂ ಓದಿ: ಮೋದಿ ಸರ್ಕಾರದಿಂದ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ: ಗಣರಾಜ್ಯೋತ್ಸವದಂದು ಕರಾವಳಿಯ ಪ್ರತಿ ತಾಲೂಕಿನಲ್ಲಿ ಟ್ಯಾಬ್ಲೊ ಮೆರವಣಿಗೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...