Homeಕರ್ನಾಟಕಸಂಗಮೇಶ್ ಅಗೌರವ ತೋರಿಸಿಲ್ಲ, ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ- ಸಿದ್ದರಾಮಯ್ಯ

ಸಂಗಮೇಶ್ ಅಗೌರವ ತೋರಿಸಿಲ್ಲ, ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ- ಸಿದ್ದರಾಮಯ್ಯ

ಒಂದು ದೇಶ ಒಂದು ಚುನಾವಣೆ ಎಂಬುದು ಆರ್.ಎಸ್.ಎಸ್ ಅಜೆಂಡಾ. ವಾಸ್ತವದಲ್ಲಿ ಇದು ಒಂದು ದೇಶ, ಒಂದು ಚುನಾವಣೆ ಅಲ್ಲ "ಒನ್ ನೇಷನ್, ಒನ್ ಲೀಡರ್" ಆಗಿದೆ.

- Advertisement -
- Advertisement -

ವಿಧಾನಸಭೆ ಅಧಿವೇಶದಲ್ಲಿ ಶರ್ಟ್ ಬಿಚ್ಚಿ ಅಶಿಸ್ತಿನಿಂದ ವರ್ತಿಸಿದ ಆರೋಪದ ಮೇಲೆ ಒಂದು ವಾರ ಕಲಾಪದಿಂದ ಅಮಾನತಾಗಿರುವ ಶಾಸಕ ಸಂಗಮೇಶ್ ಸಮರ್ಥನೆಗೆ ಕಾಂಗ್ರೆಸ್ ನಾಯಕರ ದಂಡು ನಿಂತಿದೆ. ಸಂಗಮೇಶ್ ಪರ ಬ್ಯಾಟ್ ಬೀಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಭದ್ರಾವತಿ ಶಾಸಕರಾದ ಸಂಗಮೇಶ್ ಅವರು ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವಂತೆ ವರ್ತಿಸಿಲ್ಲ ಎಂದಿದ್ದಾರೆ.

ಶಾಸಕ ಸಂಗಮೇಶ್, ಶಿವಮೊಗ್ಗ ಜಿಲ್ಲೆಯಲ್ಲಿ ಆಡಳಿತ ಪಕ್ಷದವರು ನಡೆಸುತ್ತಿರುವ ಅನ್ಯಾಯ, ದಬ್ಬಾಳಿಕೆಗಳಿಂದ ನೊಂದು ಸದನದಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ ನೀಡಿದ್ದಾರೆ.

“ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ಪುತ್ರ ಸಂಸದ ರಾಘವೇಂದ್ರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕ ಸಂಗಮೇಶ್ ಮತ್ತು ಅವರ ಕುಟುಂಬದವರ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ಕೊಲೆ ಯತ್ನದ ಮೊಕದ್ದಮೆಯನ್ನು ದಾಖಲಿಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಶರ್ಟ್ ಬಿಚ್ಚಿದ ಶಾಸಕ ಬಿ.ಕೆ ಸಂಗಮೇಶ್- ಕಲಾಪದಿಂದ ಒಂದು ವಾರ ಅಮಾನತು

ಭದ್ರಾವತಿ ಶಾಸಕ ಸಂಗಮೇಶ್‌ರನ್ನು ಒಂದು ವಾರದ ಕಾಲ ಸದನದಿಂದ ವಜಾ ಮಾಡಿರುವ ಸ್ಪೀಕರ್ ಅವರ ಆದೇಶವನ್ನು ಖಂಡಿಸಿರುವ ಸಿದ್ದರಾಮಯ್ಯ, ಸಂಗಮೇಶ್ ಅವರಿಗಾಗಲೀ, ಪ್ರತಿಪಕ್ಷದ ನಾಯಕನಾದ ನನಗಾಗಲೀ ಮಾತನಾಡಲು ಅವಕಾಶ ನೀಡದೆ ವಿಧಾನ ಸಭಾಧ್ಯಕ್ಷರು ಏಕಪಕ್ಷೀಯವಾಗಿ ಕೈಗೊಂಡಿರುವ ನಿರ್ಣಯ ಅಸಂವಿಧಾನಿಕ ಎಂದಿದ್ದಾರೆ.

ಇನ್ನು, ಸಂಗಮೇಶ್ ಅವರ ಮೇಲೆ ದಾಖಲಿಸಲಾಗಿರುವ ಸುಳ್ಳು ಮೊಕದ್ದಮೆಯನ್ನು ವಾಪಾಸು ಪಡೆದು ಸರ್ಕಾರ ಕ್ಷಮಾಪಣೆ ಕೇಳಬೇಕು ಮತ್ತು ಅವರನ್ನು ಸದನದಿಂದ ವಜಾಗೊಳಿಸಿರುವ ನಿರ್ಣಯವನ್ನು ಕೂಡ ಹಿಂಪಡೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ಒಂದು ದೇಶ ಒಂದು ಚುನಾವಣೆ ವಿಚಾರವನ್ನು ಸದನದಲ್ಲಿ ಚರ್ಚಿಸಿದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ’ದೇಶದಲ್ಲಿ ನಡೆಯುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದವು. ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿರುವುದು ಕೂಡ ಕೇಂದ್ರ ಸರ್ಕಾರ. ಹೀಗಿರುವಾಗ ವಿಧಾನ ಮಂಡಲ ಅಧಿವೇಶನದಲ್ಲಿ ‘ಒಂದು ದೇಶ ಒಂದು ಚುನಾವಣೆ’ ಎಂಬ ವಿಚಾರವನ್ನು ಚರ್ಚಿಸುವುದರಿಂದ ಆಗುವ ಉಪಯೋಗ ಏನು?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸುಲಿಗೆ ಆರೋಪ: ವಿಜಯೇಂದ್ರ ವಿರುದ್ದ ಎಫ್‌ಐಆರ್‌ ದಾಖಲಿಸದ ಇನ್ಸ್‌ಪೆಕ್ಟರ್‌‌ಗೆ ನೋಟಿಸ್

ಬಿಜೆಪಿಯವರು ಕೇವಲ ಪ್ರಚಾರದ ದೃಷ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ’ ಎಂಬ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡಿದ್ದಾರೆ. ನಿಯಮಾವಳಿಗಳ ಪ್ರಕಾರ ಈ ವಿಷಯದ ಚರ್ಚೆಗೆ ಅವಕಾಶವಿಲ್ಲ, ಹೀಗಾಗಿ ನಾವು ವಿರೋಧ ಮಾಡಿದ್ದೇವೆಯೇ ಹೊರತು ಚರ್ಚೆ ನಡೆಸಲಾಗದೆ ಅಲ್ಲ ಎಂದು ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ್ದಾರೆ.

ಒಂದು ದೇಶ ಒಂದು ಚುನಾವಣೆ ಎಂಬುದು ಆರ್.ಎಸ್.ಎಸ್ ಅಜೆಂಡಾ. ವಾಸ್ತವದಲ್ಲಿ ಇದು ಒಂದು ದೇಶ, ಒಂದು ಚುನಾವಣೆ ಅಲ್ಲ “ಒನ್ ನೇಷನ್, ಒನ್ ಲೀಡರ್” ಆಗಿದೆ. ಇದರ ಬದಲು ರಾಜ್ಯ ಸರ್ಕಾರ ಚುನಾವಣಾ ವ್ಯವಸ್ಥೆಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸುವುದಾದರೆ, ನಾವು ನಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

’ಒಂದು ದೇಶ ಒಂದು ಚುನಾವಣೆ’ ಚರ್ಚೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದರು. ಕಾಂಗ್ರೆಸ್​ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದಾಗ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಸದನದ ಬಾವಿಗಿಳಿದು, ಶರ್ಟ್‌ ಬಿಚ್ಚಿ ಘೋಷಣೆ ಕೂಗಿದ್ದರು.

ಶಾಸಕರ ವಿರುದ್ಧ ಪ್ರಸ್ತಾವನೆ ಮಂಡಿಸಿ, ಧ್ವನಿ ಮತದ ಮೂಲಕ ಪ್ರಸ್ತಾವನೆಗೆ ಒಪ್ಪಿಗೆ ಪಡೆದ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ  ಮಾರ್ಚ್​ 12 ನೇ ತಾರೀಖಿನವರೆಗೆ, ಸುಮಾರು 9 ದಿನಗಳ ಕಾಲ ಶಾಸಕ ಸಂಗಮೇಶ್​​ರನ್ನ ಸದನದಿಂದ ಅಮಾನತು ಮಾಡುವ ನಿರ್ಧಾರವನ್ನು ಕೈಗೊಂಡರು.


ಇದನ್ನೂ ಓದಿ: ವಿಧಾನಸಭಾ ಅಧಿವೇಶನ | ನಾನುಗೌರಿ ಫೇಸ್‌‌ಬುಕ್ ಲೈ‌ವ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...