Homeಮುಖಪುಟಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ

ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ

ಎಐಸಿಸಿಯ ಮೂವರು ವಕ್ತಾರರು ವಿವಾದದಿಂದ ದೂರವಿರಲು ಪಕ್ಷವು ತತ್ವಬದ್ಧವಾದ ನಿಲುವನ್ನು ತೆಗೆದುಕೊಂಡಿದೆ ಎಂದು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

- Advertisement -
- Advertisement -

ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರಾಣಾವತ್ ನಡುವಿನ ಜಟಾಪಟಿಯಿಂದ ದೂರ ಉಳಿಯಲು ಕೇಂದ್ರ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಎಐಸಿಸಿಯ ಮೂವರು ವಕ್ತಾರರು ವಿವಾದದಿಂದ ದೂರವಿರಲು ಪಕ್ಷವು ತತ್ವಬದ್ಧವಾದ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

“ಹೌದು, ಇದು ಹೆಚ್ಚು ರಾಜಕೀಯಗೊಳಿಸಿದ ವಿಷಯವಾಗಿದೆ. ಬಿಜೆಪಿ ಬಯಸುವುದು ಕೂಡ ಇದನ್ನೇ. ಕೋವಿಡ್ ಮತ್ತು ಆರ್ಥಿಕತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸದಂತೆ ಅವರು ಇಡೀ ರಾಜಕೀಯವನ್ನು ವಿವಾದಕ್ಕೆ ಎಳೆಯಲು ಬಯಸುತ್ತಾರೆ ” ಆದ್ದರಿಂದ, ಇದರಿಂದ ದೂರವಿರಲು ಮತ್ತು ಅವರ ಬಲೆಗೆ ಬೀಳದಂತೆ ನಾವು ತತ್ವಬದ್ಧವಾದ ನಿರ್ಧಾರ ತೆಗೆದುಕೊಂಡಿದ್ದೇವೆ ಎಐಸಿಸಿ ಮಾಧ್ಯಮ ವಿಭಾಗದ ಮುಖಂಡರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ನಟಿ ಕಂಗನಾ ಮುಂಬೈ ಕಚೇರಿ ನೆಲಸಮಕ್ಕೆ ಮುಂದಾದ ಬಿಎಂಸಿ!: ಹೈಕೋರ್ಟ್‌ ತಡೆಯಾಜ್ಞೆ

ನಟಿ ಕಂಗನಾ ರಾಣಾವತ್ ಬಾಲಿವುಡ್‌ನಲ್ಲಿ ಡ್ರಗ್ ಮಾಫಿಯಾ ಆದೆ ಎಂಬ ಆರೋಪ ಮತ್ತು ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಬಗ್ಗೆ ಮುಂಬೈ ಪೊಲೀಸರಿಗೆ ಸಂಬಂಧಿಸಿದಂತೆ ಟ್ವೀಟ್‌ಗಳನ್ನು ಮಾಡುವ ಮೂಲಕ ವಿವಾದವನ್ನು ಆರಂಭಿಸಿದ್ದರು. ನಾನು ಮುಂಬೈ ಪೊಲೀಸರಿಗೆ ಹೆದರುತ್ತಿದೆ. ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂಬಂತ ಹೇಳಿಕೆಗಳು ಶಿವಸೇನೆಯನ್ನು ಹೆಚ್ಚು ಕೆಣಕಿದ್ದವು.

ಮಹಾರಾಷ್ಟ್ರದ ಜನರು, ಬಾಲಿವುಡ್ ನಟಿ-ನಟಿಯರು, ಸರ್ಕಾರದ ಸಚಿವರು ಆಕೆಯ ಹೇಳಿಕೆಗಳ ಬಗ್ಗೆ ಅಸಮಾಧಾನ, ಆಕ್ರೋಶ ಹೊರಹಾಕಿದ್ದರು. ನಂತರ ಬುಧವಾರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈ ಪ್ರದೇಶದಲ್ಲಿನ ರನೌತ್ ಕಚೇರಿಯ ಭಾಗವನ್ನು ಧ್ವಂಸಗೊಳಿಸಿತು. ಸದ್ಯ ಬಿಜೆಪಿ ಆಕೆಯ ಹೇಳಿಕೆ ವಿರೋಧಿಸುತ್ತಲೇ ರಾಣಾವತ್‌ಗೆ ಬೆಂಬಲ, ರಕ್ಷಣೆ ಕೊಡಲು ಆರಂಭಿಸಿದೆ.

ಶಿವಸೇನಾ ಪ್ರಸ್ತುತ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಯೊಂದಿಗೆ ಪಾಲುದಾರರಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದೆ.

ಇದನ್ನೂ ಓದಿ: ಇದು ಕೆ.ಎಲ್.‌ ಅಶೋಕ್‌ರವರ ವೈಯಕ್ತಿಕ ಸಮಸ್ಯೆ ಅಲ್ಲ. ಸುಮ್ಮನಿದ್ದರೆ ನಾಳೆ ಎಲ್ಲರಿಗೂ ಹೀಗಾಗುವುದರಲ್ಲಿ ಸಂಶಯವಿಲ್ಲ.

ಕಾಂಗ್ರೆಸ್ ನಾಯಕರಲ್ಲಿ ಪರಸ್ಪರ ಭಿನ್ನಾಭಿಪ್ರಾಯ!

ಕೇಂದ್ರದ ಕಾಂಗ್ರೆಸ್ ನಾಯಕರು ಈ ವಿವಾದದಿಂದ ದೂರವೂಳಿಯಲು ನಿರ್ಧರಿಸಿದ್ದರೇ ಇತ್ತ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬರುತ್ತಿವೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ನಟಿ ರಾಣಾವತ್ ವಿವಾದದ ಮೇಲೆ ಕೇಂದ್ರೀಕರಿಸುವುದಕ್ಕಿಂತ  ಆಡಳಿತದಲ್ಲಿ ಕೋವಿಡ್ -19, ಆರ್ಥಿಕತೆ, ಚೀನಾದೊಂದಿಗಿನ ನಿಲುವು ಮುಂತಾದ ತುಂಬಾ ಮುಖ್ಯವಾದ ವಿಷಯಗಳಿವೆ ಎಂದು ತಿಳಿಸಿದ್ದಾರೆ.

“ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಏಜೆನ್ಸಿಗಳು ತಮ್ಮ ಕೆಲಸವನ್ನು ಮಾಡಲಿ. ಕ್ರಿಮಿನಲ್ ಏಜೆನ್ಸಿಗಳಿಗೆ ಮಾಧ್ಯಮ ಅಥವಾ ಯಾವುದೇ ರಾಜಕೀಯ ಮುಖಂಡರ ಸಹಾಯ ಅಗತ್ಯವಿಲ್ಲ ”ಎಂದು ಚವಾಣ್ ಹೇಳಿದರು.

ಮಾಜಿ ಕೇಂದ್ರ ಸಚಿವ ಮಿಲಿಂದ್ ದಿವೋರಾ ಕೂಡ ರಾಜಕೀಯ ಬಿಟ್ಟು ಮುಖ್ಯವಾದ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

 

ಮುಂಬೈನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನಿರುಪಮ್ ಅವರು ಬಿಎಂಸಿಯ ಈ ಕ್ರಮವನ್ನು “ಪ್ರತೀಕಾರದ ಕ್ರಮ” ಎಂದು ಬಣ್ಣಿಸಿದ್ದಾರೆ. ಹೈಕೋರ್ಟ್ ಈ ಕ್ರಮವನ್ನು ತಪ್ಪೆಂದು ಪರಿಗಣಿಸಿ ತಕ್ಷಣ ಅದನ್ನು ತಡೆಹಿಡಿದಿದೆ. ಇಡೀ ಕ್ರಮವು ಪ್ರತೀಕಾರದಿಂದ ಕೂಡಿದೆ. ಆದರೆ ಸೇಡು ರಾಜಕೀಯದ ರಾಜಕಾರಣ ಬಹಳ ಚಿಕ್ಕದು ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ರಾಣಾವತ್ ಮಾಡಿದ ಆರೋಪಗಳಿಗೆ ಮಾತ್ರ ಪಕ್ಷ ಉತ್ತರಿಸುತ್ತದೆ ಎಂದರು. ನಾವು ಆಡಳಿತದತ್ತ ಗಮನ ಹರಿಸುತ್ತಿದ್ದೇವೆ. ಆದರೆ ಕಂಗನಾ ಮುಂಬೈಯನ್ನು ಪಿಒಕೆಗೆ ಸಮಾನ ಎಂದು ಕರೆಯುವಾಗ, ನಾವು ಮಾತನಾಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ದೇಶದ್ರೋಹ ಎನ್ನಲಾಗುವುದಿಲ್ಲ: ಯುಎಪಿಎ ಅಡಿ ಬಂಧಿತರಾಗಿದ್ದ ಕೇರಳದ ಯುವಕರಿಗೆ ಜಾಮೀನು

“ಘಟನೆ ನಡೆದ ಸಮಯವನ್ನು ಪ್ರಶ್ನಿಸಬಹುದು, ಆದರೆ ಅದರ ಕಾನೂನುಬದ್ಧತೆಯಲ್ಲ. ಅದು ಅಕ್ರಮ ಕಟ್ಟಡವಾಗಿದ್ದರೇ, ಅದನ್ನು ಕೆಡವಬೇಕಿದೆ,” ಎಂದರು. ಜೊತೆಗೆ ಮೋದಿ ಸರ್ಕಾರವು ಇಡಿ ಮತ್ತು ಸಿಬಿಐ ದುರುಪಯೋಗಕ್ಕೆ ಹೆಸರುವಾಸಿಯಾಗಿದೆ, ಆದರೆ ಆಗ ಯಾರೂ ಏನನ್ನೂ ಹೇಳುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಬಿಎಂಸಿಯ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದ್ದಿತ್ತು. ಮುಂಬೈನಲ್ಲಿ ಅಕ್ರಮ ನಿರ್ಮಾಣವು ಹೊಸತೇನಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಬಿಎಂಸಿಯ ಕ್ರಮವು ಜನರಿಗೆ ಅದರ ಬಗ್ಗೆ ಅನುಮಾನಗಳನ್ನು ಮೂಡಿಸಲು ಅವಕಾಶ ನೀಡುತ್ತದೆ ಎಂದರು. ಅದು “ಕಾನೂನುಬಾಹಿರ ಕಟ್ಟಡ ಇದೆಯೇ ಎಂದು ನನಗೆ ಗೊತ್ತಿಲ್ಲ. ನಾನು ಅದರ ಬಗ್ಗೆ ಸುದ್ದಿಯಲ್ಲಿ ಮಾತ್ರ ಓದಿದ್ದೇನೆ. ನಿಖರವಾದ ಮಾಹಿತಿಯಿಲ್ಲದೆ ಈ ಕುರಿತು ಪ್ರತಿಕ್ರಿಯಿಸುವುದು ನನಗೆ ಸೂಕ್ತವಲ್ಲ. ಬಿಎಂಸಿಗೆ ತನ್ನದೇ ಆದ ನಿಯಮಗಳಿವೆ ಮತ್ತು ಅವುಗಳಿಂದ ಕಾರ್ಯ ನಿರ್ವಹಿಸಿರಬಹುದು ಎಂದೂ ತಿಳಿಸಿದ್ದಾರೆ.

ಒಟ್ಟಾರೆ ನಟಿ ಕಂಗನಾ ಮುಂಬೈನಲ್ಲಿ ಹಚ್ಚಿರುವ ಕಿಚ್ಚು ಬಾಲಿವುಡ್ ಅಂಗಳ ಬಿಟ್ಟು ರಾಜಕೀಯ ಪಕ್ಷಗಳ ಜಟಾಪಟಿಗೆ, ಮೌನಕ್ಕೆ ಕಾರಣವಾಗಿದೆ. ಯಾವಾಗ ಬಿಜೆಪಿ ಕಂಗನಾ ರಾಣಾವತ್ ಬೆಂಬಲಕ್ಕೆ ನಿಂತು ಆಕೆಗೆ ವೈ-ಪ್ಲಸ್ ಭದ್ರತೆ ನೀಡಿತೋ ಆಗಿನಿಂದ ಟ್ವಿಟ್ಟರ್‌ನಲ್ಲಿ ಬಾಲಿವುಡ್ ಮಂದಿ ಕೂಡ ಈ ಬಗ್ಗೆ ವಿರೋಧವಾಗಿ ಟ್ವೀಟ್ ಮಾಡುವುದು ಬಿಟ್ಟಿದ್ದಾರೆ.


ಇದನ್ನೂ ಓದಿ: ಆತ್ಮಹತ್ಯೆ ತಡೆ ದಿನ: ತಮ್ಮವರ ಬಗೆಗಿನ ಕೊಂಚ ಕಾಳಜಿಯೂ ಸಹ ಆತ್ಮಹತ್ಯೆ ತಡೆಯಬಹುದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...