Homeಮುಖಪುಟಒಂದು ವಾರ ಪ್ರತಿದಿನ 6 ಗಂಟೆಗಳ ಕಾಲ ರೈಲು ‘ಬುಕ್ಕಿಂಗ್ ಮತ್ತು ರದ್ದತಿ’ ಸೇವೆ ಸ್ಥಗಿತ

ಒಂದು ವಾರ ಪ್ರತಿದಿನ 6 ಗಂಟೆಗಳ ಕಾಲ ರೈಲು ‘ಬುಕ್ಕಿಂಗ್ ಮತ್ತು ರದ್ದತಿ’ ಸೇವೆ ಸ್ಥಗಿತ

- Advertisement -
- Advertisement -

ಹೊಸ ರೈಲು ಸಂಖ್ಯೆ ಹಾಗೂ ಸಂಬಂಧಿತ ಇತರೆ ಮಾಹಿತಿಯ ಡೇಟಾವನ್ನು ನವೀಕರಣ ಮಾಡಲು ಭಾರತೀಯ ರೈಲ್ವೇಯು  ಮುಂದಾಗಿದೆ. ಹೀಗಾಗಿ, ಇಂದಿನಿಂದ (ಸೋಮವಾರ) ಏಳು ದಿನಗಳವರೆಗೆ ಪ್ರತಿದಿನ ಆರು ಗಂಟೆಗಳ ಕಾಲ ರೈಲ್ವೇ ಟಿಕೆಟ್‌ ಬುಕಿಂಗ್‌ ಮತ್ತು ರದ್ದತಿ ಸೇವೆ ಸ್ಥಗತಗೊಳ್ಳಲಿದೆ.

ಕೊರೊನಾ ಸೋಂಕು ಆಕ್ರಮಿಸಿದ್ದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸುವುದಕ್ಕಾಗಿ ರೈಲ್ವೇಯ ಹಲವು ರೀತಿಯ ಮಾರ್ಪಾಡುಗಳನ್ನು ಮಾಡಿತ್ತು. ಇದೀಗ ರೈಲ್ವೇ ಬುಕಿಂಗ್‌ ಮತ್ತು ರದ್ದತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಹಂತ ಹಂತವಾಗಿ ತರಲು ರೈಲ್ವೇ ಮುಂದಾಗಿದೆ. ಹೀಗಾಗಿ, ನವೆಂಬರ್‌ 1415 ಮಧ್ಯರಾತ್ರಿಯಿಂದ ನವೆಂಬರ್‌ 20-21 ರ ಮಧ್ಯರಾತ್ರಿಯವರೆಗೆ ಒಟ್ಟು ಏಳು ದಿನಗಳ ಕಾಲ ರಾತ್ರಿ 23:30 ಗಂಟೆಯಿಂದ ಮುಂಜಾನೆ 05:30 ಗಂಟೆವರೆಗೆ ಸೇವೆ ಸ್ಥಗಿತವಾಗಲಿದೆ.

ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ಯೋಜನೆ; ರಾಜ್ಯಗಳ ಮತ್ತು ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಯ ನಡುವೆ ಪರಿಸರವಾದಿಗಳ ಕಾಳಜಿ

ಈ ಸಂದರ್ಭದಲ್ಲಿ ಸಿಸ್ಟಮ್‌ ಡೇಟಾದ ನವೀಕರಣ ಮಾಡಲಾಗುತ್ತದೆ. ಹಾಗೆಯೇ ಹೊಸ ರೈಲು ಸಂಖ್ಯೆಗಳ ನವೀಕರಣ ಇತ್ಯಾದಿ ಅಪ್‌ಗ್ರೇಡ್‌ ಕಾರ್ಯವನ್ನು ಮಾಡಲಾಗುತ್ತದೆ. ಈ ವೇಳೆ, ಜನರು ರೈಲು ಟಿಕೆಟ್‌ಗಳನ್ನು ಬುಕ್‌ ಮಾಡಲು ಅಥವಾ ರದ್ದು ಮಾಡಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಜನರು ಯಾವ ಸಂದರ್ಭದಲ್ಲಿ ಹೆಚ್ಚಾಗಿ ರೈಲ್ವೇ ಬುಕಿಂಗ್ ಮತ್ತು ರದ್ದತಿಯ ಸೇವೆಯನ್ನು ಬಳಸುವುದಿಲ್ಲ ಎಂದು ಗಮನಿಸಿ, ಆ ಸಮಯದಲ್ಲಿ ಸೇವೆಯನ್ನು ಸ್ಥಗಿತ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಂಡು ಎಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಉಂಟಾಗದಂತೆ ರಾತ್ರಿ ಹೊತ್ತಿನಲ್ಲಿ ಸೇವೆ ಸ್ಥಗಿತ ಮಾಡಲಾಗಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದ್ದಾರೆ.

ರೈಲ್ವೆ ಸಿಬ್ಬಂದಿಗಳು ಈ ಅವಧಿಯಲ್ಲಿ ಹೊರಡುವ ರೈಲುಗಳ ಚಾರ್ಟ್‌ಅನ್ನು ಮೊದಲೇ ಸಿದ್ದಪಡಿಸುತ್ತಾರೆ. ಪಿಆರ್‌ಎಸ್‌ ಸೇವೆಗಳನ್ನು ಹೊರತುಪಡಿಸಿ, 139 ಸೇವೆಗಳು ಸೇರಿದಂತೆ ಎಲ್ಲಾ ಇತರ ವಿಚಾರಣೆ ಸೇವೆಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಪ್ರಯಾಣಿಕರ ಸೇವೆಗಳನ್ನು ಸಾಮಾನ್ಯಗೊಳಿಸಲು ಮತ್ತು ಮೇಲ್ದರ್ಜೆಗೇರಿಸುವ ಈ ಪ್ರಯತ್ನದಲ್ಲಿ ಸಚಿವಾಲಯಕ್ಕೆ ಜನರು ಬೆಂಬಲ ನೀಡಬೇಕು ಎಂದು ಸಚಿವಾಲಯ ವಿನಂತಿ ಮಾಡಿದೆ.

ಇದನ್ನೂ ಓದಿ: ವಾರದ ಟಾಪ್ 10 ಸುದ್ದಿಗಳು: ಮಿಸ್ ಮಾಡಿದ್ದರೆ ಓದಿ

ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಭಾರತೀಯ ರೈಲ್ವೆ ಆರಂಭಿಸಿದ್ದ ಕೆಲವು ವಿಶೇಷ ರೈಲುಗಳಲ್ಲಿ ಇನ್ನು ಮುಂದೆ ವಿಶೇಷ ಹಣೆಪಟ್ಟಿ ಇರುವುದಿಲ್ಲ. ರೈಲು ಪ್ರಯಾಣ ದರವು ಕೊರೊನಾ ವೈರಸ್‌ ಸೋಂಕಿಗೂ ಮುನ್ನವಿದ್ದಷ್ಟೇ ಇರಲಿದೆ ಎಂದು ಸಚಿವಾಲಯ ಹೇಳಿದೆ.

ವಿಶೇಷ ರೈಲಿನಲ್ಲಿ ಪ್ರಯಾಣಿಕರು ಸಾಮಾನ್ಯ ರೈಲುಗಳಿಗಿಂತ 30% ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತಿತ್ತು. ಈಗ ಈ ವಿಶೇಷ ಎಂಬ ಟ್ಯಾಗ್‌ ಅನ್ನು ತೆಗೆಯಲಾಗುತ್ತಿದ್ದು, ಪ್ರಯಾಣಿಕರ ಪ್ರಯಾಣ ದರವು ಕೊರೊನಾ ಸೋಂಕಿಗೂ ಮೊದಲಿದ್ದ ಸಾಮಾನ್ಯ ದರವೇ ಜಾರಿಗೆ ಬರಲಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಹಿಂಸಾಚಾರ: ಅಮರಾವತಿ, ಪುಣೆಯಲ್ಲಿ ಸೆಕ್ಷನ್ 144 ಜಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...