Homeಮುಖಪುಟಜನರಿಗೆ ಗುರುತು ಸಿಗಬಾರದು ಅಂತ ಗಡ್ಡ ಬೆಳೆಸಿದ್ದಾರೆ: ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ

ಜನರಿಗೆ ಗುರುತು ಸಿಗಬಾರದು ಅಂತ ಗಡ್ಡ ಬೆಳೆಸಿದ್ದಾರೆ: ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ

- Advertisement -
- Advertisement -

“ಜನರಿಗೆ ಗುರುತು ಸಿಗಬಾರದು ಅಂತ ಮೋದಿ ಗಡ್ಡ ಬೆಳೆಸಿಕೊಂಡಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ. ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ? ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಅಧಿಕಾರ ನಡೆಸಿ ತೋರಿಸುತ್ತೇವೆ” ಎಂದು ರಾಜ್ಯ ಸರ್ಕಾರದ ವಿರುದ್ಧವೂ ಗುಡುಗಿದ್ದಾರೆ.

“ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, ಜನಸಾಮಾನ್ಯರು ಕಷ್ಟದಲ್ಲಿ ದಿನ ದೂಡುವಂತಾಗಿದೆ. ದೇಶದ ಈ ದುಸ್ಥಿತಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ತಮ್ಮ ಗುರುತು ಸಿಗಬಾರದು ಅಂತ ಗಡ್ಡ ಬೆಳೆಸಿಕೊಂಡಿದ್ದಾರೆ. ಸುಳ್ಳಿಗೆ ಪರ್ಯಾದ ಪದವೆಂದರೆ ಅದು ನರೇಂದ್ರ ಮೋದಿ. ಅವರ ಚುನಾವಣಾ ಪೂರ್ವದ ಭಾಷಣ ಹಾಗೂ ಇಂದಿನ ಆಡಳಿತ ಒಂದಕ್ಕೊಂದು ತದ್ವಿರುದ್ಧವಾಗಿದೆ. ಮೋದಿ, ಮೋದಿ ಅಂತ ಘೋಷಣೆ ಕೂಗುತ್ತಾ, ಅಧಿಕಾರ ಕೊಟ್ಟ ಜನರೇ ಇಂದು ಮೋಸಹೋಗಿದ್ದಾರೆ.
ಮೋದಿಯವರ ನಿಜ ಬಣ್ಣವನ್ನು ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ: ಚುನಾವಣಾ ಆಯೋಗಕ್ಕೆ ಸವಾಲು

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್...

ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪ್ರತಿಪಕ್ಷಗಳ ಮೆರವಣಿಗೆ: ದೆಹಲಿಯ 6 ಮೆಟ್ರೋ ನಿಲ್ದಾಣಗಳಿಗೆ ನಿರ್ಬಂಧ 

ಸುಪ್ರೀಂ ಕೋರ್ಟ್‌ಗೆ ‘ಚಲೋ ದೆಹಲಿ’ ಮೆರವಣಿಗೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮ | ಗ್ಯಾನೇಶ್ ಕುಮಾರ್ ರಾಜೀನಾಮೆ, ಎಸ್‌ಐಆರ್ ಸ್ಥಗಿತಕ್ಕೆ ಆಗ್ರಹ | ಸಿಜೆಐ ಭೇಟಿಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮನವಿ ತಿರಸ್ಕಾರ ನವದೆಹಲಿ: ಚುನಾವಣಾ...

ಪ್ರತಿಭಟನೆಗೆ ಜಂತರ್ ಮಂತರ್ ಇನ್ಮುಂದೆ ಅಧಿಕೃತ ಸ್ಥಳವಲ್ಲ: ಹೊಸ ಆದೇಶ ಹೊರಡಿಸಿದ ದೆಹಲಿ ಪೊಲೀಸ್!

ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಪ್ರತಿಭಟನೆಗಳು ಹಾಗೂ ಧರಣಿಗಳನ್ನು ಆಯೋಜಿಸಲು ನಿಗದಿಪಡಿಸಲಾಗಿದ್ದ ಪ್ರಮುಖ ಸ್ಥಳ 'ಜಂತರ್ ಮಂತರ್' ಹೊಂದಿದ್ದ ಅಧಿಕೃತ ಸ್ಥಾನಮಾನವನ್ನು ದೆಹಲಿ ಪೊಲೀಸ್ ಇಲಾಖೆ ಹಿಂಪಡೆದಿದೆ. ಕೇಂದ್ರ ಗೃಹ ಸಚಿವಾಲಯದ ಸಮಿತಿಯ ಶಿಫಾರಸಿನ...

‘ಗ್ಯಾನೇಶ್ ಕುಮಾರ್ ಅಪರಾಧ ಮಾಡಿದ್ದಾರೆ, ಈಗ ಸಾಕ್ಷಾಧಾರರಾಗಬೇಕು’: ಸಿಇಸಿಗೆ ರಾಹುಲ್ ಗಾಂಧಿ ನೇರ ಎಚ್ಚರಿಕೆ

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುವ ಮುನ್ನ ರಾಹುಲ್ ಗಾಂಧಿ ಆರೋಪ | ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ಹೋರಾಟ ಮುಂದುವರಿಸುವುದಾಗಿ ಘೋಷಣೆ | ಚುನಾವಣಾ ವ್ಯವಸ್ಥೆಯ ಸುಧಾರಣೆ...

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ‘ಇಮ್ರಾನ್ ಖಾನ್ ಅವರನ್ನು ತಕ್ಷಣ ಗಡೀಪಾರು ಮಾಡಿ’: ನಟನ ಪೌರತ್ವದ ವಿರುದ್ಧ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ದೂರು

ಮುಂಬೈ: ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಟ ಇಮ್ರಾನ್ ಖಾನ್ ವಿರುದ್ಧ ಬಿಜೆಪಿ ನಾಯಕ...

2ನೇ ದಿನಕ್ಕೆ ಕಾಲಿಟ್ಟ ದೆಹಲಿ ಪ್ರತಿಭಟನೆ; 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ದೆಹಲಿ ಪೊಲೀಸರು

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಯು ದೆಹಲಿಯಾದ್ಯಂತ ಭಾರಿ ಭದ್ರತೆಯ ನಡುವೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ (ಅ.11) ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗುತ್ತಿದ್ದ 100...

ಪೊಲೀಸರಿಂದ ಗಂಭೀರ ಹಲ್ಲೆ ಆರೋಪ : CPIM ಸಂಸದ ಜಾನ್ ಬ್ರಿಟ್ಟಾಸ್ ಆಸ್ಪತ್ರೆಗೆ ದಾಖಲು

ಭಾನುವಾರ (ಅಕ್ಟೋಬರ್ 11, 2026) ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದು...

ಫಾರಂ-7: ಎಫ್‌ಐಆರ್ ಮುಂದುವರಿಸಿದರೆ ಪೊಲೀಸ್ ಠಾಣೆ ಮುತ್ತಿಗೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಸ್ಐಆರ್ (SIR) ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ವ್ಯವಸ್ಥಿತವಾಗಿ ಗೊಂದಲಗಳನ್ನು ಸೃಷ್ಟಿಸಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಅನ್ಯಾಯವಾಗಿ ಎಫ್‌ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪೊಲೀಸ್ ಠಾಣೆಗಳು ಹಾಗೂ ಎಸ್‌ಪಿ ಕಚೇರಿಗಳಿಗೂ...

ಗ್ಯಾನೇಶ್ ಅವರನ್ನು ರಕ್ಷಿಸಲು ಮೋದಿ-ಶಾ ಎಲ್ಲವನ್ನೂ ಮಾಡುತ್ತಾರೆ: ಸಿಜೆಪಿ

"ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ; ತನ್ನದೇ ನಾಗರಿಕರ ವಿರುದ್ಧ ಯುದ್ಧ ಸಾರಿದೆ" ಎಂದು ಪೊಲೀಸರ ಬಂಧನದಿಂದ ಬಿಡುಗಡೆಯಾದ ತಕ್ಷಣ ಮಾಧ್ಯಮಗಳೊಂದಿಗೆ ನಡೆಸಿದ ತಮ್ಮ ಮೊದಲ ಸಂವಾದದಲ್ಲಿ...

ದೆಹಲಿ ಪ್ರತಿಭಟನೆ ವೇಳೆ ಇಂಟರ್ನೆಟ್ ಸ್ಥಗಿತ : ನ್ಯಾಯಾಂಗ ಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಅಕ್ಟೋಬರ್ 9 ಮತ್ತು 10 ರಂದು ಮಧ್ಯ ದೆಹಲಿಯ ಜನಪಥ್-ಕರ್ತವ್ಯ ಪಥ್ ಜಂಕ್ಷನ್‌ನ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು...