HomeಅಂಕಣಗಳುKarnataka against SIRSIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

- Advertisement -
- Advertisement -

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03 ಕೋಟಿ ನೋಂದಾಯಿತ ಮತದಾರರ ಪೈಕಿ 46.88 ಲಕ್ಷ ಮತದಾರರು (ಶೇ. 45.4) ‘ASDDO’ (Absent, Shifted, Dead, Duplicate and Others) ವರ್ಗಕ್ಕೆ ಸೇರ್ಪಡೆಯಾಗಿದ್ದಾರೆ. ಅಂದರೆ ನಗರದ ಒಟ್ಟು ಮತದಾರರ ಪೈಕಿ ಅರ್ಧದಷ್ಟು ಹೆಸರುಗಳು ಸದ್ಯ ತನಿಖೆ ಮತ್ತು ಪರಿಶೀಲನೆಯ ವ್ಯಾಪ್ತಿಯಲ್ಲಿವೆ.

ಈ ಬೃಹತ್ ಬದಲಾವಣೆಯು ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಬದಲಾಯಿಸುವಂತೆ ಮಾಡಿದೆ. ASDDO ಪಟ್ಟಿಯಲ್ಲಿರುವ ಒಟ್ಟು 46.88 ಲಕ್ಷ ಮತದಾರರ ಪೈಕಿ 27.69 ಲಕ್ಷ ಮತದಾರರು (ಶೇ. 59) ಬಿಜೆಪಿ ಶಾಸಕರಿರುವ 15 ಕ್ಷೇತ್ರಗಳ ವ್ಯಾಪ್ತಿಯಲ್ಲಿದ್ದರೆ, ಕಾಂಗ್ರೆಸ್ ಪ್ರತಿನಿಧಿಸುವ 12 ಕ್ಷೇತ್ರಗಳಲ್ಲಿ 16.79 ಲಕ್ಷ ಮತದಾರರು (ಶೇ. 36) ಈ ವರ್ಗದಲ್ಲಿದ್ದಾರೆ.

ಹಾಗೆಯೇ ದಾಸರಹಳ್ಳಿಯ ಏಕೈಕ ಜೆಡಿಎಸ್‌ ಶಾಸಕ ಆರ್. ಮಂಜುನಾಥ್ ಕ್ಷೇತ್ರದಲ್ಲಿ ಸುಮಾರು 2.46 ಲಕ್ಷದಿಂದ 2.47 ಲಕ್ಷ ಮತದಾರರು (ಶೇ. 53.5%) ASDDO ವರ್ಗಕ್ಕೆ ಸೇರ್ಪಡೆಯಾಗಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಒಟ್ಟು ಮತದಾರರ ಪೈಕಿ ಶೇ. 53.55ರಷ್ಟು ಹೆಸರುಗಳು ಪರಿಶೀಲನಾ ವ್ಯಾಪ್ತಿಗೆ ಬಂದಿವೆ. ಇಲ್ಲಿ ಒಟ್ಟು ನೋಂದಾಯಿತ ಮತದಾರರು ಸುಮಾರು 4.62 ಲಕ್ಷದಿಂದ 4.71 ಲಕ್ಷ, ASDDO ಪಟ್ಟಿಗೆ ಸೇರಿರುವ ಮತದಾರರ ಸಂಖ್ಯೆ 2,46,790

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 3.63 ಲಕ್ಷ ಮತದಾರರು ASDDO ಪಟ್ಟಿಯಲ್ಲಿದ್ದಾರೆ. ರಾಜಾಜಿನಗರದಲ್ಲೂ 1 ಲಕ್ಷಕ್ಕೂ ಅಧಿಕ ಹೆಸರುಗಳು ಪರಿಶೀಲನೆಯ ವಲಯದಲ್ಲಿವೆ. ಕಾಂಗ್ರೆಸ್ ವಲಯದಲ್ಲಿ ಗಾಂಧಿನಗರ ಒಂದರಲ್ಲೇ 1.12 ಲಕ್ಷ ಮತಗಳು ಈ ಪಟ್ಟಿಯಲ್ಲಿದ್ದರೆ, ಶಿವಾಜಿನಗರದಲ್ಲಿ ಅತ್ಯಂತ ಕಡಿಮೆ ಅಂದರೆ 81,236 ಮತದಾರರು ಈ ವರ್ಗಕ್ಕೆ ಬಂದಿದ್ದಾರೆ.

ಆದರೆ, ಈ ಅಂಕಿ-ಅಂಶಗಳನ್ನು ನೇರವಾಗಿ ಪಕ್ಷಗಳ ಮತಗಳ ನಷ್ಟವೆಂದು ಪರಿಗಣಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ದತ್ತಾಂಶದಲ್ಲಿ ಮತದಾರನ ರಾಜಕೀಯ ಒಲವು ದಾಖಲಾಗುವುದಿಲ್ಲ. ಹೀಗಾಗಿ, ಈ ಬದಲಾವಣೆಯು ಎರಡು ಪ್ರಮುಖ ಪಕ್ಷಗಳಿಗೂ ಸಮಾನ ಸವಾಲನ್ನು ಒಡ್ಡಿದೆ.

ಆದರೆ, ಈ ಅಂಕಿ-ಅಂಶಗಳನ್ನು ನೇರವಾಗಿ ಪಕ್ಷಗಳ ಮತಗಳ ನಷ್ಟವೆಂದು ಪರಿಗಣಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ದತ್ತಾಂಶದಲ್ಲಿ ಮತದಾರನ ರಾಜಕೀಯ ಒಲವು ದಾಖಲಾಗುವುದಿಲ್ಲ. ಹೀಗಾಗಿ, ಈ ಬದಲಾವಣೆಯು ಎರಡು ಪ್ರಮುಖ ಪಕ್ಷಗಳಿಗೂ ಸಮಾನ ಸವಾಲನ್ನು ಒಡ್ಡಿದೆ.

ಬೆಂಗಳೂರಿನ ಒಟ್ಟು 28 ಕ್ಷೇತ್ರಗಳ ಪೈಕಿ 15 ಬಿಜೆಪಿ, 12 ಕಾಂಗ್ರೆಸ್ ಹಾಗೂ 1 ಜೆಡಿಎಸ್ ಶಾಸಕರಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ನಗರದಲ್ಲಿ ಒಟ್ಟು 1.03 ಕೋಟಿ ಮತದಾರರಿದ್ದರು. ಪರಿಶೀಲನೆಯ ನಂತರ ಒಟ್ಟು 46,88,000 ಮತದಾರರು ASDDO ಪಟ್ಟಿಗೆ ಸೇರಿದಂತಾಗಿದ್ದು, ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಶೇ. 45.4% ರಷ್ಟು ಮತದಾರರು ಪರಿಶೀಲನಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಕ್ರ.ಸಂ.ಕ್ಷೇತ್ರ ಸಂಖ್ಯೆವಿಧಾನಸಭಾ ಕ್ಷೇತ್ರಹಾಲಿ ಶಾಸಕರು (ಪಕ್ಷ)SIR ಪ್ರಕ್ರಿಯೆಗೂ ಮುನ್ನ ಮತದಾರರುASDDO ಪಟ್ಟಿಗೆ ಸೇರಿದ ಮತದಾರರುಕಡಿಮೆಯಾದ ಪ್ರಮಾಣ (ಶೇಕಡಾವಾರು)
1150ಯಲಹಂಕವಿಶ್ವನಾಥ್ S.R. (BJP)4,82,1002,16,90045.0%
2151ಕೆ.ಆರ್. ಪುರಬಸವರಾಜ್ (BJP)5,25,4002,41,60046.0%
3152ಬ್ಯಾಟರಾಯನಪುರಕೃಷ್ಣ ಬೈರೇಗೌಡ (INC)5,10,2002,24,50044.0%
4153ಯಶವಂತಪುರS.T. ಸೋಮಶೇಖರ್ (BJP)5,62,8002,53,20045.0%
5154ರಾಜರಾಜೇಶ್ವರಿ ನಗರಮುನಿರತ್ನ (BJP)4,95,6002,23,00045.0%
6155ದಾಸರಹಳ್ಳಿS. ಮುನಿರಾಜು (BJP)4,88,3002,29,50047.0%
7156ಮಹಾಲಕ್ಷ್ಮಿ ಲೇಔಟ್K. Gopalaiah (BJP)2,92,4001,28,60044.0%
8157ಮಲ್ಲೇಶ್ವರಂC.N. ಅಶ್ವತ್ಥನಾರಾಯಣ (BJP)2,21,50099,60045.0%
9158ಹೆಬ್ಬಾಳಸುರೇಶ್ ಬಿ.ಎಸ್. (INC)2,84,6001,25,20044.0%
10159ಪುಲಿಕೇಶಿನಗರA.C. ಶ್ರೀನಿವಾಸ್ (INC)2,42,1001,06,50044.0%
11160ಸರ್ವಜ್ಞನಗರಕೆ.ಜೆ. ಜಾರ್ಜ್ (INC)3,58,9001,61,50045.0%
12161ಸಿ.ವಿ. ರಾಮನ್ ನಗರS. ರಘು (BJP)2,78,2001,25,20045.0%
13162ಶಿವಾಜಿನಗರರಿಜ್ವಾನ್ ಅರ್ಷದ್ (INC)1,98,10081,23641.0%
14163ಶಾಂತಿನಗರಎನ್.ಎ. ಹ್ಯಾರಿಸ್ (INC)2,28,5001,00,50044.0%
15164ಗಾಂಧಿನಗರದಿನೇಶ್ ಗುಂಡೂರಾವ್ (INC)2,60,4001,12,00043.0%
16165ರಾಜಾಜಿನಗರS. ಸುರೇಶ್ ಕುಮಾರ್ (BJP)2,26,8001,04,30046.0%
17166ಗೋವಿಂದರಾಜ ನಗರಪ್ರಿಯಾ ಕೃಷ್ಣ (INC)2,98,4001,34,20045.0%
18167ವಿಜಯನಗರM. ಕೃಷ್ಣಪ್ಪ (INC)3,12,0001,40,40045.0%
19168ಚಾಮರಾಜಪೇಟೆB.Z. ಜಮೀರ್ ಅಹಮದ್ (INC)2,32,1001,02,10044.0%
20169ಚಿಕ್ಕಪೇಟೆಉದಯ್ B. ಗರುಡಾಚಾರ್ (BJP)2,28,9001,05,30046.0%
21170ಬಸವನಗುಡಿL.A. ರವಿ ಸುಬ್ರಹ್ಮಣ್ಯ (BJP)2,48,6001,14,30046.0%
22171ಪದ್ಮನಾಭನಗರR. ಅಶೋಕ್ (BJP)2,84,3001,30,80046.0%
23172ಬಿ.ಟಿ.ಎಮ್. ಲೇಔಟ್ರಾಮಲಿಂಗಾರೆಡ್ಡಿ (INC)2,75,4001,23,90045.0%
24173ಜಯನಗರC.K. ರಾಮಮೂರ್ತಿ (BJP)2,08,20095,70046.0%
25174ಮಹದೇವಪುರಮಂಜುಳಾ ಲಿಂಬಾವಳಿ (BJP)6,18,5002,84,50046.0%
26175ಬೊಮ್ಮನಹಳ್ಳಿM. ಸತೀಶ್ ರೆಡ್ಡಿ (BJP)4,72,1002,17,10046.0%
27176ಬೆಂಗಳೂರು ದಕ್ಷಿಣM. ಕೃಷ್ಣಪ್ಪ (BJP)7,56,2003,63,00048.0%
28177ಆನೆಕಲ್B. ಶಿವಣ್ಣ (INC)4,12,5001,85,60045.0%
ಒಟ್ಟು28 ಕ್ಷೇತ್ರಗಳು15 BJP / 12 INC / 1 JDS1.03 ಕೋಟಿ46,88,00045.4%

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 3.63 ಲಕ್ಷ ಮತದಾರರು ASDDO ಪಟ್ಟಿಯಲ್ಲಿದ್ದಾರೆ. ರಾಜಾಜಿನಗರದಲ್ಲೂ 1 ಲಕ್ಷಕ್ಕೂ ಅಧಿಕ ಹೆಸರುಗಳು ಪರಿಶೀಲನೆಯ ವಲಯದಲ್ಲಿವೆ. ಕಾಂಗ್ರೆಸ್ ವಲಯದಲ್ಲಿ ಗಾಂಧಿನಗರ ಒಂದರಲ್ಲೇ 1.12 ಲಕ್ಷ ಮತಗಳು ಈ ಪಟ್ಟಿಯಲ್ಲಿದ್ದರೆ, ಶಿವಾಜಿನಗರದಲ್ಲಿ ಅತ್ಯಂತ ಕಡಿಮೆ ಅಂದರೆ 81,236 ಮತದಾರರು ಈ ವರ್ಗಕ್ಕೆ ಬಂದಿದ್ದಾರೆ.

ಆದರೆ, ಈ ಅಂಕಿ-ಅಂಶಗಳನ್ನು ನೇರವಾಗಿ ಪಕ್ಷಗಳ ಮತಗಳ ನಷ್ಟವೆಂದು ಪರಿಗಣಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ದತ್ತಾಂಶದಲ್ಲಿ ಮತದಾರನ ರಾಜಕೀಯ ಒಲವು ದಾಖಲಾಗುವುದಿಲ್ಲ. ಹೀಗಾಗಿ, ಈ ಬದಲಾವಣೆಯು ಎರಡು ಪ್ರಮುಖ ಪಕ್ಷಗಳಿಗೂ ಸಮಾನ ಸವಾಲನ್ನು ಒಡ್ಡಿದೆ.

2023ರ ಬೆಂಗಳೂರು ನಗರದ 28 ಕ್ಷೇತ್ರಗಳ ಗೆಲುವಿನ ಅಂತರದ ಪಟ್ಟಿ
ಕ್ರ.ಸಂ.ಕ್ಷೇತ್ರ ಸಂಖ್ಯೆವಿಧಾನಸಭಾ ಕ್ಷೇತ್ರವಿಜೇತ ಅಭ್ಯರ್ಥಿ (ಪಕ್ಷ)ಸನ್ನಿಹಿತ ಸ್ಪರ್ಧಿ / ದ್ವಿತೀಯ ಸ್ಥಾನಿ (ಪಕ್ಷ)ಗೆಲುವಿನ ಅಂತರ (ಮತಗಳು)
1150ಯಲಹಂಕಎಸ್.ಆರ್. ವಿಶ್ವನಾಥ್ (BJP)ಬಿ. ಕೇಶವ ರಾಜಣ್ಣ (INC)64,110
2151ಕೆ.ಆರ್. ಪುರಬಸವರಾಜ್ (BJP)ಡಿ.ಕೆ. ಮೋಹನ್ (INC)24,301
3152ಬ್ಯಾಟರಾಯನಪುರಕೃಷ್ಣ ಬೈರೇಗೌಡ (INC)ಹೆಚ್.ಸಿ. ತಮ್ಮೇಶ್‌ಗೌಡ (BJP)38,204
4153ಯಶವಂತಪುರಎಸ್.ಟಿ. ಸೋಮಶೇಖರ್ (BJP)ಜವರಾಯಿಗೌಡ (JDS)15,118
5154ರಾಜರಾಜೇಶ್ವರಿ ನಗರಮುನಿರತ್ನ (BJP)ಕುಸುಮಾ ಹೆಚ್. (INC)11,842
6155ದಾಸರಹಳ್ಳಿಎಸ್. ಮುನಿರಾಜು (BJP)ಆರ್. ಮಂಜುನಾಥ್ (JDS)9,194
7156ಮಹಾಲಕ್ಷ್ಮಿ ಲೇಔಟ್ಕೆ. ಗೋಪಾಲಯ್ಯ (BJP)ಎಸ್. ಕೇಶವಮೂರ್ತಿ (INC)51,165
8157ಮಲ್ಲೇಶ್ವರಂಡಾ. ಸಿ.ಎನ್. ಅಶ್ವತ್ಥನಾರಾಯಣ (BJP)ಅನೂಪ್ ಅಯ್ಯಂಗಾರ್ (INC)41,302
9158ಹೆಬ್ಬಾಳಸುರೇಶ್ ಬಿ.ಎಸ್. (INC)ಜಗದೀಶ್ ಕಷ್ಟಿ (BJP)30,754
10159ಪುಲಿಕೇಶಿನಗರಎ.ಸಿ. ಶ್ರೀನಿವಾಸ್ (INC)ಅಖಂಡ ಶ್ರೀನಿವಾಸ ಮೂರ್ತಿ (BSP)62,210
11160ಸರ್ವಜ್ಞನಗರಕೆ.ಜೆ. ಜಾರ್ಜ್ (INC)ಪದ್ಮನಾಭ ರೆಡ್ಡಿ (BJP)55,768
12161ಸಿ.ವಿ. ರಾಮನ್ ನಗರಎಸ್. ರಘು (BJP)ಎಸ್. ಆನಂದ್ ಕುಮಾರ್ (INC)16,395
13162ಶಿವಾಜಿನಗರರಿಜ್ವಾನ್ ಅರ್ಷದ್ (INC)ಎನ್. ಚಂದ್ರ (BJP)23,194
14163ಶಾಂತಿನಗರಎನ್.ಎ. ಹ್ಯಾರಿಸ್ (INC)ಕೆ. ಶಿವಕುಮಾರ್ (BJP)7,125
15164ಗಾಂಧಿನಗರದಿನೇಶ್ ಗುಂಡೂರಾವ್ (INC)ಎ.ಆರ್. ಸಪ್ತಗಿರಿ ಗೌಡ (BJP)105
16165ರಾಜಾಜಿನಗರಎಸ್. ಸುರೇಶ್ ಕುಮಾರ್ (BJP)ಪುಟ್ಟಣ್ಣ (INC)8,060
17166ಗೋವಿಂದರಾಜ ನಗರಪ್ರಿಯಾ ಕೃಷ್ಣ (INC)ಕೆ. ಉಮೇಶ್ ಶೆಟ್ಟಿ (BJP)12,525
18167ವಿಜಯನಗರM. ಕೃಷ್ಣಪ್ಪ (INC)ಹೆಚ್. ರವೀಂದ್ರ (BJP)7,324
19168ಚಾಮರಾಜಪೇಟೆB.Z. ಜಮೀರ್ ಅಹಮದ್ ಖಾನ್ (INC)ಭಾಸ್ಕರ್ ರಾವ್ (BJP)53,953
20169ಚಿಕ್ಕಪೇಟೆಉದಯ್ ಬಿ. ಗರುಡಾಚಾರ್ (BJP)ಆರ್.ವಿ. ದೇವರಾಜ್ (INC)12,113
21170ಬಸವನಗುಡಿಎಲ್.ಎ. ರವಿ ಸುಬ್ರಹ್ಮಣ್ಯ (BJP)ಯು.ಬಿ. ವೆಂಕಟೇಶ್ (INC)54,978
22171ಪದ್ಮನಾಭನಗರR. ಅಶೋಕ್ (BJP)ವಿ. ರಘುನಾಥ ನಾಯ್ಡು (INC)55,175
23172ಬಿ.ಟಿ.ಎಮ್. ಲೇಔಟ್ರಾಮಲಿಂಗಾರೆಡ್ಡಿ (INC)ಶ್ರೀಧರ್ ರೆಡ್ಡಿ (BJP)9,222
24173ಜಯನಗರಸಿ.ಕೆ. ರಾಮಮೂರ್ತಿ (BJP)ಸೌಮ್ಯಾ ರೆಡ್ಡಿ (INC)16
25174ಮಹದೇವಪುರಮಂಜುಳಾ ಲಿಂಬಾವಳಿ (BJP)ಹೆಚ್. ನಾಗೇಶ್‌ (INC)44,501
26175ಬೊಮ್ಮನಹಳ್ಳಿM. ಸತೀಶ್ ರೆಡ್ಡಿ (BJP)ಉಮಾಪತಿ ಶ್ರೀನಿವಾಸ ಗೌಡ (INC)24,215
27176ಬೆಂಗಳೂರು ದಕ್ಷಿಣM. ಕೃಷ್ಣಪ್ಪ (BJP)ಆರ್. ಕೆ. ರಮೇಶ್ (INC)51,299
28177ಆನೆಕಲ್B. ಶಿವಣ್ಣ (INC)ಹುಲ್ಲಹಳ್ಳಿ ಶ್ರೀನಿವಾಸ್ (BJP)31,325

2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಫಲಿತಾಂಶಗಳಲ್ಲಿನ ಕಡಿಮೆ ಗೆಲುವಿನ ಅಂತರವನ್ನು ಈ ಪರಿಷ್ಕರಣೆಗೆ ಹೋಲಿಸಿದಾಗ, ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮೇಲಾಗುವ ರಾಜಕೀಯ ಪರಿಣಾಮ ಮತ್ತು ಲಾಭ-ನಷ್ಟದ ಲೆಕ್ಕಾಚಾರಗಳು ಇಲ್ಲಿವೆ. 2023ರ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಿಂದ ನಿರ್ಧಾರವಾದ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಚುನಾವಣಾ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

  • ಜಯನಗರ (ಗೆಲುವಿನ ಅಂತರ: ಕೇವಲ 16 ಮತಗಳು – BJP ಗೆಲುವು):

    ಜಯನಗರದಲ್ಲಿ 95,700 ಮತದಾರರು (46%) ASDDO ಪಟ್ಟಿಯಲ್ಲಿದ್ದಾರೆ. ಕಳೆದ ಬಾರಿ ಸಿ.ಕೆ. ರಾಮಮೂರ್ತಿ (BJP) ಮತ್ತು ಸೌಮ್ಯಾ ರೆಡ್ಡಿ (INC) ನಡುವಿನ ಜಿದ್ದಾಜಿದ್ದಿನಲ್ಲಿ ಗೆಲುವಿನ ಅಂತರ ಕೇವಲ 16 ಮತಗಳಷ್ಟಿತ್ತು. ಇಲ್ಲಿ ಪಟ್ಟಿಯಿಂದ ಹೊರಬಿದ್ದಿರುವ ಅಥವಾ ಪರಿಶೀಲನೆಗೆ ಒಳಪಟ್ಟಿರುವ ಪ್ರತಿಯೊಂದು ಮತವೂ ನಿರ್ಣಾಯಕ. ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಈ ಕ್ಷೇತ್ರದಲ್ಲಾಗುವ ಸಣ್ಣ ವ್ಯತ್ಯಾಸವೂ ದೊಡ್ಡ ನಷ್ಟ ಅಥವಾ ಲಾಭ ತರಬಹುದು.
  • ಗಾಂಧಿನಗರ (ಗೆಲುವಿನ ಅಂತರ: 105 ಮತಗಳು – INC ಗೆಲುವು):

    ದಿನೇಶ್ ಗುಂಡೂರಾವ್ ಅವರು ಕೇವಲ 105 ಮತಗಳಿಂದ ಗೆದ್ದಿದ್ದರು. ಪ್ರಸ್ತುತ ಗಾಂಧಿನಗರದಲ್ಲಿ 1,12,000 ಮತದಾರರು (~43%) ASDDO ಪಟ್ಟಿಯಲ್ಲಿದ್ದಾರೆ. ಸಾಂಪ್ರದಾಯಿಕ ಮತಬ್ಯಾಂಕ್‌ಗಳಲ್ಲಿ ಮತಗಳು ಡಿಲೀಟ್ ಆಗಿದ್ದರೆ ಕಾಂಗ್ರೆಸ್‌ಗೆ ಆತಂಕಕಾರಿ; ಅದೇ ರೀತಿ ಹೊಸದಾಗಿ ಸೇರ್ಪಡೆಯಾಗುವ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಬಿಜೆಪಿಗೂ ಸವಾಲು.
  • ಶಾಂತಿನಗರ (7,125 ಮತಗಳು), ವಿಜಯನಗರ (7,324 ಮತಗಳು) ಮತ್ತು ರಾಜಾಜಿನಗರ (8,060 ಮತಗಳು):

    ಈ ಕ್ಷೇತ್ರಗಳಲ್ಲಿ ಗೆಲುವಿನ ಅಂತರ 10,000ಕ್ಕಿಂತ ಕಡಿಮೆಯಿದ್ದು, ASDDO ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ 1 ಲಕ್ಷಕ್ಕೂ ಹೆಚ್ಚಿದೆ. ಅಂದರೆ, ಪರಿಶೀಲನೆಗೆ ಒಳಗಾದ ಮತಗಳ ಪ್ರಮಾಣ ಗೆಲುವಿನ ಅಂತರಕ್ಕಿಂತ 10 ರಿಂದ 12 ಪಟ್ಟು ದೊಡ್ಡದಾಗಿದೆ.
ಬಿಜೆಪಿ (BJP) ಕ್ಷೇತ್ರಗಳ ಮೇಲಿನ ಪ್ರಭಾವ (15 ಕ್ಷೇತ್ರಗಳು):
  • ಅತಿ ಹೆಚ್ಚು ವ್ಯತ್ಯಾಸ ಕಂಡ ಕ್ಷೇತ್ರಗಳು:

    ಬೆಂಗಳೂರು ದಕ್ಷಿಣ (48%), ದಾಸರಹಳ್ಳಿ (47%), ರಾಜಾಜಿನಗರ, ಜಯನಗರ, ಮಹದೇವಪುರ, ಬೊಮ್ಮನಹಳ್ಳಿ, ಚಿಕ್ಕಪೇಟೆ, ಪದ್ಮನಾಭನಗರ (46%). ಬಿಜೆಪಿಯ ಸಾಂಪ್ರದಾಯಿಕ ಕೋರ್ ವೋಟ್ ಬ್ಯಾಂಕ್ (ಅಪಾರ್ಟ್‌ಮೆಂಟ್ ನಿವಾಸಿಗಳು, ಮಧ್ಯಮ ವರ್ಗ ಮತ್ತು ಸ್ಥಳೀಯ ನಿವಾಸಿಗಳು) ಹೊಂದಿರುವ ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ (46-48%) ಮತದಾರರು ಪರಿಶೀಲನೆಗೆ ಒಳಪಟ್ಟಿದ್ದಾರೆ.

    ಬೃಹತ್ ಗೆಲುವಿನ ಅಂತರ ಹೊಂದಿರುವ ಯಲಹಂಕ (64,110), ಮಹಾಲಕ್ಷ್ಮಿ ಲೇಔಟ್ (51,165), ಬಸವನಗುಡಿ (54,978) ಹಾಗೂ ಪದ್ಮನಾಭನಗರ (55,175) ಕ್ಷೇತ್ರಗಳಲ್ಲಿ ಬಿಜೆಪಿಗೆ ಈ ಬದಲಾವಣೆಯಿಂದ ತಕ್ಷಣಕ್ಕೆ ದೊಡ್ಡ ಅಪಾಯವಿಲ್ಲದಿದ್ದರೂ, ಅಂತರ ಕಡಿಮೆಯಿರುವ ಕ್ಷೇತ್ರಗಳಲ್ಲಿ (ರಾಜಾಜಿನಗರ, ಚಿಕ್ಕಪೇಟೆ, ಕೆ.ಆರ್. ಪುರ) ಕಠಿಣ ಸವಾಲು ಎದುರಾಗಬಹುದು.
ಕಾಂಗ್ರೆಸ್ (INC) ಕ್ಷೇತ್ರಗಳ ಮೇಲಿನ ಪ್ರಭಾವ (12 ಕ್ಷೇತ್ರಗಳು):
  • ಅತಿ ಹೆಚ್ಚು ವ್ಯತ್ಯಾಸ ಕಂಡ ಕ್ಷೇತ್ರಗಳು:

    ಬಿ.ಟಿ.ಎಮ್. ಲೇಔಟ್, ಗೋವಿಂದರಾಜ ನಗರ, ವಿಜಯನಗರ, ಸರ್ವಜ್ಞನಗರ, ಆನೆಕಲ್ (45%). ಕಾಂಗ್ರೆಸ್ ಪ್ರಬಲವಾಗಿರುವ ಶಿವಾಜಿನಗರ (41% – ನಗರದಲ್ಲೇ ಅತಿ ಕಡಿಮೆ ಕಡಿತ) ಹೊರತುಪಡಿಸಿ, ಉಳಿದೆಲ್ಲಾ ಕ್ಷೇತ್ರಗಳಲ್ಲಿ 43% ರಿಂದ 45% ರಷ್ಟು ಮತದಾರರು ASDDO ಪಟ್ಟಿಯಲ್ಲಿದ್ದಾರೆ.

    ಸರ್ವಜ್ಞನಗರ (55,768), ಪುಲಿಕೇಶಿನಗರ (62,210) ಹಾಗೂ ಚಾಮರಾಜಪೇಟೆ (53,953) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೃಹತ್ ಗೆಲುವಿನ ಅಂತರ ಹೊಂದಿರುವುದರಿಂದ ಸುರಕ್ಷಿತ ವಲಯದಲ್ಲಿದೆ. ಆದರೆ, ಬಿ.ಟಿ.ಎಮ್. ಲೇಔಟ್ (9,222 ಅಂತರ) ಹಾಗೂ ಗಾಂಧಿನಗರದಂತಹ ಕ್ಷೇತ್ರಗಳಲ್ಲಿ ಪ್ರತಿ ಮತದ ಸೇರ್ಪಡೆ/ಡಿಲೀಟ್‌ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ.

ಬೆಂಗಳೂರಿನ ಒಟ್ಟು 28 ಕ್ಷೇತ್ರಗಳಲ್ಲಿ ನಡೆದಿರುವ ಎಸ್‌ಐಆರ್ ಪ್ರಕ್ರಿಯೆಯಿಂದ ಈಗಲೇ ಲಾಭ ಮತ್ತು ನಷ್ಟಗಳನ್ನು ಅಳೆಯುವುದು ಕಷ್ಟ. ಈ ಹಿಂದಿನ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ದಾಖಲಾಗುತ್ತಿದ್ದ ಒಟ್ಟು ಮತದಾನಕ್ಕೂ, ASDDO ವರ್ಗದಲ್ಲಿ ಮಾಡಲಾಗಿರುವ ಪಟ್ಟಿಗೂ ಒಂದು ರೀತಿಯ ಸಾಮ್ಯತೆ ಇರುವಂತೆ ಕಂಡುಬಂದರೂ ಅರ್ಹ ಮತದಾರರನ್ನು ತಮ್ಮ ಹಕ್ಕಿನಿಂದ ವಂಚಿಸುವಂತೆ ಮಾಡಿರುವುದಂತ ಸ್ಪಷ್ಟ. ಅಲ್ಲದೆ ಈಗ ತಾರ್ಕಿಕ ವ್ಯತ್ಯಾಸದ ನೆಪ ಹೇಳಿ ಬೆಂಗಳೂರಿನ ಸುಮಾರು 24.06 ಲಕ್ಷ ಮತದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ.

24.06 ಲಕ್ಷಕ್ಕೂ ಅಧಿಕ ಮತದಾರರಿಗೆ ‘ಲಾಜಿಕಲ್ ಡಿಸಿಕ್ರಪನ್ಸಿ’ ಮತ್ತು ಮ್ಯಾಪಿಂಗ್ ಆಗಿಲ್ಲ ಎಂಬ ನೆಪದಲ್ಲಿ ನೋಟಿಸ್ ನೀಡಲಾಗಿದೆ. ಈ ಪೈಕಿ ಎಷ್ಟು ಜನರ ಹೆಸರುಗಳು ಅಂತಿಮವಾಗಿ ಪಟ್ಟಿಯಲ್ಲಿ ಉಳಿಯುತ್ತವೆ ಮತ್ತು ಎಷ್ಟು ಜನರ ಹೆಸರುಗಳು ಕಡಿತಗೊಳ್ಳುತ್ತವೆ (Deletion) ಎಂಬುದರ ಆಧಾರದ ಮೇಲೆ ಪ್ರತಿಯೊಂದು ಕ್ಷೇತ್ರದ ಮತಸಮೀಕರಣಗಳು ಸಂಪೂರ್ಣವಾಗಿ ಬದಲಾಗಲಿವೆ.

ಬೆಂಗಳೂರಿನ ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಆದ ಶೇಕಡಾವಾರು ಮತಬ್ಯಾಂಕ್ (ವಲಸೆ ಕಾರ್ಮಿಕರು, ಅಲ್ಪಸಂಖ್ಯಾತರು, ಬಡ ಮತ್ತು ಮಧ್ಯಮ ವರ್ಗ) ನೆಚ್ಚಿಕೊಂಡಿರುತ್ತವೆ. ಈಗ ಸಾಫ್ಟ್‌ವೇರ್ ಆಧಾರಿತವಾಗಿ ನೋಟಿಸ್‌ಗಳು ಜಾರಿಯಾಗಿರುವುದರಿಂದ, ದಾಖಲೆ ನೀಡಲಾಗದೆ ಈ ವರ್ಗದ ಮತಗಳು ಕಡಿತಗೊಂಡರೆ ಅದು ನೇರವಾಗಿ ಆಯಾ ಕ್ಷೇತ್ರದ ಸೋಲು-ಗೆಲುವಿನ ಮೇಲೆಯೇ ಪರಿಣಾಮ ಬೀರಲಿದೆ.

ASDDO (ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್ & ಅದರ್ಸ್) ಹಾಗೂ ‘Logical Discrepancy’ ಎಂಬ ತಾಂತ್ರಿಕ ಹೆಸರುಗಳ ಅಡಿಯಲ್ಲಿ ನಿಜವಾದ, ಅರ್ಹ ಮತದಾರರ ಹಕ್ಕು ಕಸಿಯಲ್ಪಡುತ್ತಿರುವುದು ನಿಜಕ್ಕೂ ಕಳವಳಕಾರಿ. ಮತದಾನದ ಪ್ರಮಾಣ ಕಡಿಮೆಯಾಗುವ ಬೆಂಗಳೂರಿನಂತಹ ನಗರದಲ್ಲಿ ಮತದಾರರನ್ನು ಪಟ್ಟಿಗೆ ಸೇರಿಸುವ ಬದಲು, ತಾಂತ್ರಿಕ ಲೋಪಗಳ ನೆಪವೊಡ್ಡಿ ಪಟ್ಟಿಯಿಂದ ಹೊರಗಿಡುವುದು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚಾಗಿ ಮತದಾರನಿಗೇ ದೊಡ್ಡ ನಷ್ಟ.

ಹಾಗಾಗಿ, ಈಗಲೇ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭ ಅಥವಾ ನಷ್ಟ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದಾಗ ಯಾವ ಬೂತ್‌ಗಳಲ್ಲಿ ಮತ್ತು ಯಾವ ಸಮುದಾಯಗಳ ಮತಗಳು ಹೆಚ್ಚಾಗಿ ಕಡಿತಗೊಂಡಿವೆ ಎಂಬ ಅಂಕಿಸಂಖ್ಯಾ ವಿಶ್ಲೇಷಣೆಯಿಂದಷ್ಟೇ ಅಸಲಿ ರಾಜಕೀಯ ಚಿತ್ರಣ ಹೊರಬರಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...