HomeಅಂಕಣಗಳುKarnataka against SIRSIR: 'ಚುನಾವಣಾ ಆಯೋಗದಿಂದ ನೋಟಿಸ್‌' ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ ‘Logical Discrepancy’ (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ ಮತದಾರರಿಗೆ ತೀವ್ರ ತೊಂದರೆಗಳನ್ನು ತಂದೊಡ್ಡುತ್ತಿದೆ. ಸಾಫ್ಟ್‌ವೇರ್ ಅಲ್ಗಾರಿದಮ್‌ಗಳು ಮಾನವನ ಸ್ಥಿತಿಗತಿಗಳು ಮತ್ತು ಭಾರತದಂತಹ ದೇಶದ ಸಾಮಾಜಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ವಿಫಲವಾಗುತ್ತಿರುವುದೇ ಇದಕ್ಕೆ ಮೂಲ ಕಾರಣ.

ಸಾಫ್ಟ್‌ವೇರ್ ಪ್ರಯೋಗಗಳಿಂದ ಮತದಾರರು ಎದುರಿಸುತ್ತಿರುವ ಪ್ರಮುಖ ತೊಂದರೆಗಳು:

ಸಾಫ್ಟ್‌ವೇರ್ ಅಲ್ಗಾರಿದಮ್‌ಗಳು ಕುಟುಂಬದ ಸದಸ್ಯರ ನಡುವಿನ ವಯಸ್ಸಿನ ಅಂತರ, ಪೋಷಕರ ಮತ್ತು ಮಕ್ಕಳ ವಯಸ್ಸಿನ ವ್ಯತ್ಯಾಸವನ್ನು ನಿಗದಿತ ಮಾನದಂಡದ ಆಧಾರದಲ್ಲಷ್ಟೇ ವಿಶ್ಲೇಷಿಸುತ್ತವೆ. ಉದಾಹರಣೆಗೆ, ಅವಳಿ (Twins) ಮಕ್ಕಳು ಜನಿಸಿದಾಗ ಅವರ ಜನನ ದಿನಾಂಕ ಒಂದೇ ಆಗಿರುತ್ತದೆ ಅಥವಾ ಒಂಬತ್ತು ತಿಂಗಳಿಗಿಂತ ಕಡಿಮೆ ಅಂತರದಲ್ಲಿ ಸೋದರ-ಸೋದರಿಯರ ವಿವರ ದಾಖಲಾಗಿದ್ದರೆ, ಸಾಫ್ಟ್‌ವೇರ್ ಅದನ್ನು ತಾಂತ್ರಿಕ ‘ದೋಷ’ ಅಥವಾ ‘ಅಸಂಗತತೆ’ ಎಂದು ಗುರುತಿಸಿ ನೋಟಿಸ್ ನೀಡುತ್ತಿದೆ. ನೈಜವಾಗಿ ಆ ಕುಟುಂಬದಲ್ಲಿದ್ದರೂ ತಾಂತ್ರಿಕ ಅಲ್ಗಾರಿದಮ್‌ಗಳ ನಿರ್ಧಾರದಿಂದಾಗಿ ನಾಗರಿಕರು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಅಲೆಯಬೇಕಾಗಿದೆ.

ಹಳೆಯ ದಾಖಲೆಗಳಲ್ಲಿ ಮತ್ತು ಪ್ರಸ್ತುತ ದಾಖಲೆಗಳಲ್ಲಿ ಹೆಸರಿನ ಕಾಗುಣಿತ (Spelling mismatch), ಮನೆತನದ ಹೆಸರು, ಅಥವಾ ಇನಿಷಿಯಲ್ಸ್ (Initials) ವಿಸ್ತರಿಸಿ ಬರೆದಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನೂ ಸಾಫ್ಟ್‌ವೇರ್ ಸಂಶಯಾಸ್ಪದ ಎಂದು ಪರಿಗಣಿಸುತ್ತಿದೆ. ಮಹಿಳೆಯರ ಮದುವೆಯ ನಂತರದ ಹೆಸರು ಬದಲಾವಣೆ, ಹಳೆಯ ದಾಖಲೆಗಳಲ್ಲಿ ಅಕ್ಷರ ದೋಷಗಳಾಗಿದ್ದರೂ ಸಾಫ್ಟ್‌ವೇರ್ ಅದನ್ನು ‘ತಾರ್ಕಿಕ ವ್ಯತ್ಯಾಸ’ ಎಂದು ವರ್ಗೀಕರಿಸುತ್ತಿದೆ. ದಶಕಗಳಿಂದ ಮತದಾನ ಮಾಡುತ್ತಿದ್ದರೂ, ಕೇವಲ ಸಾಫ್ಟ್‌ವೇರ್‌ನ ಅಕ್ಷರ ಗೊಂದಲದಿಂದಾಗಿ ಮತದಾರರು ನೋಟಿಸ್‌ಗೆ ಗುರಿಯಾಗುತ್ತಿದ್ದಾರೆ.

ಸಾಫ್ಟ್‌ವೇರ್ ಫ್ಲ್ಯಾಗ್ ಮಾಡಿದ ತಕ್ಷಣ ಮತದಾರರಿಗೆ ನೋಟಿಸ್‌ಗಳು ಜಾರಿಯಾಗುತ್ತಿವೆ. ಆಡಳಿತ ವ್ಯವಸ್ಥೆಯು ಸಾಫ್ಟ್‌ವೇರ್ ನೀಡುವ ‘Logical Discrepancy’ ಪಟ್ಟಿಯನ್ನೇ ಅಂತಿಮವೆಂಬಂತೆ ನೋಡಿ, ನೈಜ ನಾಗರಿಕರನ್ನು ‘ಆಡಳಿತಾತ್ಮಕವಾಗಿ ಸಂಶಯಾಸ್ಪದ’ ವ್ಯಕ್ತಿಗಳನ್ನಾಗಿ ಮಾಡುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ತಮ್ಮ ಮತದಾನದ ಹಕ್ಕು ಕಳೆದುಹೋಗಬಹುದು ಎಂಬ ಭೀತಿ ಮತ್ತು ಮಾನಸಿಕ ಒತ್ತಡ ಸೃಷ್ಟಿಯಾಗುತ್ತಿದೆ.

ಸಾಫ್ಟ್‌ವೇರ್ ಸೃಷ್ಟಿಸಿದ ದೋಷವನ್ನು ಸರಿಪಡಿಸಲು ದಿನಗೂಲಿ ಕಾರ್ಮಿಕರು, ಬಡವರು ಮತ್ತು ಹಿರಿಯ ನಾಗರಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಹಶೀಲ್ದಾರ್ ಕಚೇರಿಗಳು, ಬೆಂಗಳೂರು ಒನ್ ಅಥವಾ ತಾಲೂಕು ಕೇಂದ್ರಗಳಿಗೆ ಪದೇ ಪದೇ ಅಲೆಯಬೇಕಾಗಿದೆ. 1987 ಅಥವಾ 2002ಕ್ಕಿಂತ ಹಿಂದಿನ ಅಪರೂಪದ ಲಿಂಕ್ ದಾಖಲೆಗಳನ್ನು ಹುಡುಕಿ ತರಲು ಸಾಫ್ಟ್‌ವೇರ್ ಪರೋಕ್ಷವಾಗಿ ಒತ್ತಾಯಿಸುತ್ತಿರುವುದರಿಂದ, ದಾಖಲೆಗಳಿಲ್ಲದ ಶ್ರಮಿಕ ವರ್ಗದವರು ಮತದಾನದ ಹಕ್ಕಿನಿಂದ ಸಂಪೂರ್ಣ ಹೊರಗುಳಿಯುವ ಭೀತಿ ಎದುರಾಗಿದೆ.

ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು:

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ನಿವಾಸಿ ನಾಗರಾಜು ಶಿವಪ್ಪ, ‘ಬಿಎಲ್‌ಒ ನನಗೆ ನೋಟಿಸ್‌ ನೀಡಿದ್ದಾರೆ. ಆಧಾರ್‌ ಜತೆಗೆ ಇನ್ನೊಂದು ದಾಖಲೆ ಕೊಡಿ ಎಂದಿದ್ದಾರೆ. ನಾನು ಎಸ್‌ಎಸ್‌ಎಲ್‌ಸಿ ಮಾಡಿಲ್ಲ. ಪಾಸ್‌ಪೋರ್ಟ್‌ ಸಹ ಇಲ್ಲ. ಅವರು ಕೇಳುತ್ತಿರುವ ಬೇರೆ ದಾಖಲೆ ನನ್ನ ಬಳಿ ಇಲ್ಲ. ಪಿಆರ್‌ಸಿ ಪಡೆದುಕೊಳ್ಳಿ ಎಂದು ಬಿಎಲ್‌ಒ ಹೇಳಿದ್ದರು. ಐದು ದಿನಗಳಿಂದ ಅರ್ಜಿ ಸಲ್ಲಿಸುತ್ತಿದ್ದರೂ ಎರರ್‌ ಎಂದೇ ಬರುತ್ತಿದೆ. ಸೋಮವಾರ ನೋಟಿಸ್‌ ಜತೆಗೆ ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ವಿಚಾರಣೆ ವೇಳೆ, ಇರುವ ಸ್ಥಿತಿಯನ್ನು ಹೇಳಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. 

ಚಾಮರಾಜಪೇಟೆಯ ಪ್ರಸಾದ್ ಎಂಬ ಮತದಾರರ ಪ್ರಶ್ನೆ ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ತಲೆತಲಾಂತರಗಳಿಂದ ಭಾರತದಲ್ಲೇ ವಾಸಿಸುತ್ತಿರುವ, ಮತದಾನ ಮಾಡುತ್ತಿರುವ ಕುಟುಂಬಗಳಿಗೆ ಇದ್ದಕ್ಕಿದ್ದಂತೆ ತಂದೆಯ ಅಂಕಪಟ್ಟಿ ಅಥವಾ ಜನನ ಪ್ರಮಾಣಪತ್ರ ತರುವಂತೆ ಕಿರುಕುಳ ನೀಡಲಾಗುತ್ತಿದೆ. ಆಧಾರ್, ಬಿಪಿಎಲ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನೇ ‘ಅಸಿಂಧು’ ಎನ್ನುವ ಚುನಾವಣಾ ಆಯೋಗದ ನಿಲುವು ನಾಗರಿಕರನ್ನು ತೀವ್ರ ಆತಂಕಕ್ಕೆ ತಳ್ಳಿದೆ.

ಬೆಂಗಳೂರಿನ ಎಕ್ಸ್ ಬಳಕೆದಾರರೊಬ್ಬರು ತಮ್ಮಲ್ಲಿ ಹಲವು ದಾಖಲೆಗಳಿದ್ದರೂ ಯಾವುದನ್ನೂ ಇಸಿಐ ಸ್ವೀಕರಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ನಾನು ಖುದ್ದಾಗಿ ವಿಚಾರಣೆಗೆ ಹೋಗಿದ್ದೆ. ಅಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಫೈಲ್, ವೋಟರ್ ಐಡಿ, ಆಸ್ತಿ ತೆರಿಗೆ ರಸೀದಿ, ಚಾಲನಾ ಪರವಾನಗಿ, ವಿದ್ಯುತ್ ಮತ್ತು ನೀರಿನ ಬಿಲ್, ಗ್ಯಾಸ್ ಬಿಲ್—ಇವ್ಯಾವುದೂ ಸಿಂಧುವಾದ ದಾಖಲೆಗಳಲ್ಲ ಎಂದು ತಿಳಿದು ಆಘಾತವಾಯಿತು! ಈ ಮೇಲಿನ ದಾಖಲೆಗಳನ್ನು ಮಾನ್ಯ ಮಾಡದಿದ್ದರೆ ಇನ್ಯಾವ ದಾಖಲೆ ನೀಡಬೇಕು? ಭಾರತ ಏಕೆ ಹಿಮ್ಮುಖವಾಗಿ ಸಾಗುತ್ತಿದೆ? ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಇದು ಸರಳ ಪ್ರಕ್ರಿಯೆಯಾಗಬೇಕಿತ್ತು, ಅದನ್ನು ಏಕೆ ಹೀಗೆ ಸಂಕೀರ್ಣಗೊಳಿಸುತ್ತಿದ್ದೀರಿ? ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ನೋಟಿಸ್ ಪಡೆದ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವುದು ಕಡ್ಡಾಯವಾಗಿದೆ. ಮತದಾರರು ಪರಿಶೀಲನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಉಳಿಸಿಕೊಳ್ಳಬೇಕೇ ಅಥವಾ ತೆಗೆದುಹಾಕಬೇಕೇ ಎಂಬುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಚುನಾವಣಾ ನೋಂದಣಾಧಿಕಾರಿಗೆ (ಇಆರ್‌ಒ) ಇರುತ್ತದೆ. ಆದರೆ, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ, ಸಂತ್ರಸ್ತ ಮತದಾರರು ಜಿಲ್ಲಾಧಿಕಾರಿಗಳಿಗೆ ಮೊದಲ ಮೇಲ್ಮನವಿ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಎರಡನೇ ಮೇಲ್ಮನವಿ ಸಲ್ಲಿಸಬಹುದು.

ವಿಚಾರಣೆ ಎಂಬ ಶಿಕ್ಷೆ ಯಾಕೆ?

ವಿಚಾರಣೆಗೆ ಒಳಪಡುವವರಿಗೆ ಇಷ್ಟು ಕಡಿಮೆ ಸಮಯ ನೀಡಿರುವುದು ಬಗ್ಗೆ ಮತದಾರರು ಪ್ರಶ್ನೆ ಎತ್ತಿದ್ದಾರೆ. ಅಧಿಕಾರಿಗಳು ಮನೆಗೆ ಬಂದು ದಾಖಲೆಗಳನ್ನು ಪರಿಶೀಲಿಸುವ ಬದಲು, ಸಾರ್ವಜನಿಕರೇ ಇಆರ್‌ಒ ಕಚೇರಿಗೆ ಪ್ರಯಾಣ ಬೆಳೆಸಿ ವಿವರಗಳನ್ನು ಸಾಬೀತುಪಡಿಸಬೇಕಿರುವುದು ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ಡಿಜಿಟಲ್ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಮಾನವನ ಶ್ರಮವನ್ನು ಕಡಿತಗೊಳಿಸಿ, ಪ್ರಕ್ರಿಯೆಗಳನ್ನು ಅತ್ಯಂತ ಸರಳ ಹಾಗೂ ವೇಗಗೊಳಿಸುತ್ತಿರುವ ಈ ಯುಗದಲ್ಲಿ, ಸರ್ಕಾರದ ಅಥವಾ ಆಡಳಿತಾತ್ಮಕ ಸೇವೆಗಳು ಇನ್ನೂ ಹಳೆಯ ಸಂಕೀರ್ಣ ವಿಧಾನಗಳನ್ನೇ ನೆಚ್ಚಿಕೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ನಿರಾಶೆ ಮೂಡಿಸಿದೆ.

ಸರ್ಕಾರಿ ದಾಖಲೆಗಳು, ಮತದಾರರ ಪಟ್ಟಿ ಪರಿಶೀಲನೆ, ಸಾರ್ವಜನಿಕ ಸೇವೆಗಳು ಹಾಗೂ ಗುರುತಿನ ಚೀಟಿಗಳ ನವೀಕರಣದಂತಹ ದೈನಂದಿನ ಪ್ರಕ್ರಿಯೆಗಳಿಗೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಬದಲು, ಜನರನ್ನು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡಿಸುವುದು ಮತ್ತು ಭೌತಿಕವಾಗಿ ಹಾಜರಾಗುವಂತೆ ಪೀಡಿಸುವುದು ಪ್ರಸ್ತುತ ವ್ಯವಸ್ಥೆಯ ಹಿನ್ನಡೆಗೆ ಹಿಡಿದ ಕನ್ನಡಿಯಾಗಿದೆ. ಡಿಜಿಟಲ್ ವ್ಯವಸ್ಥೆಯಲ್ಲಿ ಲಕ್ಷಾಂತರ ದತ್ತಾಂಶಗಳನ್ನು ಕೆಲವೇ ಕ್ಷಣಗಳಲ್ಲಿ ತಾಳೆ ಮಾಡುವ ಸಾಮರ್ಥ್ಯವಿದ್ದರೂ, ಸಣ್ಣಪುಟ್ಟ ತಾಂತ್ರಿಕ ವ್ಯತ್ಯಾಸಗಳು ಅಥವಾ ಕಾಗುಣಿತದ ದೋಷಗಳಿಗೂ ನಾಗರಿಕರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರಿಗೆ ಸುದೀರ್ಘ ಅಲೆದಾಟ ಹಾಗೂ ಮಾನಸಿಕ ಕಿರುಕುಳ ನೀಡುವುದು ಎಷ್ಟು ಸರಿ.

ಕೇವಲ ಡೇಟಾ ಎಂಟ್ರಿ ಮಾಡುವಾಗ ಅಧಿಕಾರಿಗಳು ಅಥವಾ ಸಿಬ್ಬಂದಿ ಮಾಡಿದ ತಪ್ಪುಗಳು ಸಾಫ್ಟ್‌ವೇರ್‌ನಲ್ಲಿ ‘Logical Discrepancy’ ಆಗಿ ಹೊರಹೊಮ್ಮುತ್ತಿವೆ. ತಂತ್ರಜ್ಞಾನ ವ್ಯವಸ್ಥೆಯು ನಾಗರಿಕರ ಅರ್ಹತೆಯಲ್ಲಿ ದೋಷವಿದೆಯೋ ಅಥವಾ ಕೇವಲ ಡೇಟಾದಲ್ಲಿ ತಾಂತ್ರಿಕ ದೋಷವಿದೆಯೋ ಎಂಬುದನ್ನು ಬೇರ್ಪಡಿಸಲು ವಿಫಲವಾಗುತ್ತಿದ್ದು, ತಂತ್ರಜ್ಞಾನದ ವೈಫಲ್ಯಕ್ಕೆ ಅಂತಿಮವಾಗಿ ಸಾಮಾನ್ಯ ನಾಗರಿಕನೇ ಶಿಕ್ಷೆ ಅನುಭವಿಸುವಂತಾಗಿದೆ.

ಸರ್ಕಾರ ಹೇಳಿದ್ದ PRC ಕಥೆ:

ಮತದಾರರ ಪಟ್ಟಿಯಲ್ಲಿ ವಿವರ ಲಭ್ಯವಿಲ್ಲದ ಮತ್ತು ವ್ಯತ್ಯಾಸವಿರುವ ಮತದಾರರಿಗೆ ಚುನಾವಣಾ ಆಯೋಗವು 11 ಮಾದರಿಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದೆ. ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರಗಳಿಲ್ಲದ ಬಡವರು ಹಾಗೂ ದಿನಗೂಲಿ ಕಾರ್ಮಿಕರಿಗೆ ‘ಶಾಶ್ವತ ನಿವಾಸ ಪ್ರಮಾಣಪತ್ರ’ (PRC) ಒಂದೇ ಕೊನೆಯ ದಾರಿಯಾಗಿದೆ.

ಆದರೆ, ಈ ಪಿಆರ್‌ಸಿ ಪಡೆಯಲು ಅಟಲ್ ಸೇವಾ ಸಿಂಧು, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ತೆರಳಿದರೆ ಸರ್ವರ್ ಕೈಕೊಡುತ್ತಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿನ ನಾಡಕಚೇರಿ ಹಾಗೂ ‘ಗ್ರಾಮ ಒನ್’ ಕೇಂದ್ರಗಳಲ್ಲಿ ಸರ್ವರ್ ಒತ್ತಡ ತುಸು ಕಡಿಮೆಯಿದೆ. ಹೀಗಾಗಿ, ಪೋರ್ಟಲ್‌ನಲ್ಲಿ ಪದೇ ಪದೇ ‘ಎರರ್’ ಸಂದೇಶಗಳು ಬಂದರೂ ಸಿಬ್ಬಂದಿ ತಾಳ್ಮೆಯಿಂದ ಪ್ರಯತ್ನಿಸಿ ಅರ್ಜಿದಾರರ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಬಹುತೇಕ ಕಡೆ ಪ್ರಮಾಣಪತ್ರಗಳು ವಿತರಣೆಯಾಗುತ್ತಿದ್ದರೂ, ಕೆಲವು ತಾಲೂಕುಗಳಲ್ಲಿ ತಹಶೀಲ್ದಾರರ ಕಟ್ಟುನಿಟ್ಟಿನ ‘ಯಾಂತ್ರಿಕ ಧೋರಣೆ’ ಮತದಾರರನ್ನು ಸಂಕಷ್ಟಕ್ಕೆ ತಳ್ಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮತದಾರರೊಬ್ಬರು ಅನುಭವಿಸಿದ ಅನುಭವವೇ ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅರ್ಜಿದಾರರು ಪಿಆರ್‌ಸಿ ಮಾರ್ಗಸೂಚಿ ಪ್ರಕಾರವೇ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಸ್ಥಳೀಯ ಗ್ರಾಮ ಆಡಳಿತಾಧಿಕಾರಿ (VA) ಮತ್ತು ಕಂದಾಯ ಪರಿಶೀಲಕರು (RI) ಸ್ಥಳಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕಡತವನ್ನು ತಹಶೀಲ್ದಾರ್‌ಗೆ ಶಿಫಾರಸು ಮಾಡಿದ್ದರು.

ಬರೋಬ್ಬರಿ 21 ದಿನಗಳ ಕಾಲ ಕಾಯಿಸಿದ ನಂತರ ತಹಶೀಲ್ದಾರರು, “ಅರ್ಜಿದಾರರು ಸಲ್ಲಿಸಿರುವ ದಾಖಲಾತಿಗಳು ಸಮರ್ಪಕವಾಗಿರದ ಕಾರಣ, ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಅರ್ಹರಾಗಿರುವುದಿಲ್ಲ” ಎಂಬ ಒಕ್ಕಣೆಯೊಂದಿಗೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

“ಯಾವ ದಾಖಲೆ ತಪ್ಪಿದೆ ಅಂತ ಹೇಳದಿದ್ದರೆ ನಾವೇನು ಮಾಡಬೇಕು?”

ತಹಶೀಲ್ದಾರರ ಈ ಅಸ್ಪಷ್ಟ ನಿಲುವಿನ ವಿರುದ್ಧ ಅರ್ಜಿದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರ ಪ್ರಕಟಿಸಿರುವ ಪಿಆರ್‌ಸಿ ಮಾರ್ಗಸೂಚಿಯಲ್ಲಿರುವ ದಾಖಲೆಗಳನ್ನೇ ನಾನು ಸಲ್ಲಿಸಿದ್ದೇನೆ. ಅದರಲ್ಲಿ ಯಾವ ದಾಖಲೆ ಕೊರತೆಯಿದೆ ಅಥವಾ ಯಾವುದರಲ್ಲಿ ದೋಷವಿದೆ ಎಂದು ಸ್ಪಷ್ಟವಾಗಿ ಹಿಂಬರಹ ನೀಡಿದರೆ, ಬೇರೆ ದಾಖಲೆ ಹೊಂದಿಸಿ ಮತ್ತೆ ಅರ್ಜಿ ಸಲ್ಲಿಸಬಹುದು. ಅದನ್ನು ಬಿಟ್ಟು ‘ಸಮರ್ಪಕವಾಗಿಲ್ಲ’ ಎಂದು ಒಂದೇ ಸಾಲಿನಲ್ಲಿ ತಿರಸ್ಕರಿಸಿದರೆ, ನಾವು ನಮ್ಮ ಪೌರತ್ವ ಮತ್ತು ನಿವಾಸವನ್ನು ಹೇಗೆ ಸಾಬೀತುಪಡಿಸಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

SIR ನೋಟಿಸ್‌ಗಳಿಗೆ ಉತ್ತರಿಸಲು ಆಯೋಗ ನೀಡಿರುವ ಕಾಲಾವಕಾಶ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಅರ್ಜಿಗಳಲ್ಲಿನ ದೋಷ ಏನೆಂಬುದನ್ನು ನಿರ್ದಿಷ್ಟವಾಗಿ ಸೂಚಿಸದೆ ತಿರಸ್ಕರಿಸುತ್ತಿರುವುದು, ಸಾರ್ವಜನಿಕರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಹುನ್ನಾರವೇ ಎಂಬ ಅನುಮಾನ ಮೂಡಿಸುತ್ತಿದೆ.

ಅರ್ಜಿ ತಿರಸ್ಕರಿಸುವಾಗ ಸೂಕ್ತ ಕಾರಣ ಮತ್ತು ಮಾರ್ಗದರ್ಶನ ನೀಡುವುದನ್ನು ಕಂದಾಯ ಇಲಾಖೆ ಕಡ್ಡಾಯಗೊಳಿಸಬೇಕು ಹಾಗೂ ಇಂತಹ ಬಾಕಿ ಇರುವ ಅರ್ಜಿಗಳನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ತಲೆತಲಾಂತರಗಳಿಂದ ಇದೇ ಮಣ್ಣಿನಲ್ಲಿ ಹುಟ್ಟಿ, ದೇಶದ ಪ್ರಜೆಯಾಗಿ ಪ್ರಜಾಪ್ರಭುತ್ವದ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಿಕೊಂಡು ಬಂದ ಒಬ್ಬ ಸಾಮಾನ್ಯ ನಾಗರಿಕನಿಗೆ ಇದ್ದಕ್ಕಿದ್ದಂತೆ ‘ದಾಖಲೆಗಳನ್ನು ತಂದು ನಿನ್ನ ಅಸ್ತಿತ್ವ/ಪೌರತ್ವ ಸಾಬೀತುಪಡಿಸು’ ಎಂದು ನೋಟಿಸ್ ನೀಡಿದಾಗ ಆಗುವ ತೊಳಲಾಟ ವಿವರಿಸಲಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...