Homeಮುಖಪುಟ25 ವರ್ಷದ ದ್ವೇಷ 25 ನಿಮಿಷದಲ್ಲಿ ಶಮನ: ಅಲ್ಲಿಂದ ಶುರುವಾಯಿತು ಮೋದಿಯ ಅಧ:ಪತನ!

25 ವರ್ಷದ ದ್ವೇಷ 25 ನಿಮಿಷದಲ್ಲಿ ಶಮನ: ಅಲ್ಲಿಂದ ಶುರುವಾಯಿತು ಮೋದಿಯ ಅಧ:ಪತನ!

- Advertisement -
- Advertisement -

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಶಾಗೆ ದೊಡ್ಡ ಬ್ರೇಕ್ ನೀಡಿದ ಉತ್ತರಪ್ರದೇಶ ಈ ಸಲ ಉಲ್ಟಾ ಹೊಡೆಯುವ ಲಕ್ಷಣಗಳಿವೆ. 2014ರ ಚುನಾವಣೆ ಫಲಿತಾಂಶ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಉತ್ತರಪ್ರದೇಶದಲ್ಲಿ ಒಂದು ಸಮಾಲೋಚನೆ ನಡೆಯುತ್ತದೆ. ಅದು ಕೇವಲ 25 ನಿಮಿಷಗಳದ್ದು ಆದರೂ ಅದು 25 ವರ್ಷಗಳ ದ್ವೇಷಕ್ಕೆ ಒಂದು ಕೊನೆ ಹಾಡುತ್ತದೆ. ಅದು ಎಸ್‍ಪಿ ಮತ್ತು ಬಿಎಸ್‍ಪಿ ನಡುವಿನ ಮಾತುಕತೆ… ಅದಿವತ್ತೂ ಮೋದಿ-ಶಾಗಳ ಹುಚ್ಚಾಟಕ್ಕೆ ಕಢಿವಾಣ ಹಾಕುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದೆ…

ಎರಡನೇ ಹಂತದ ಚುನಾವಣೆ ಮುಗಿದ ಈ ಹೊತ್ತಿನಲ್ಲಿ ಮತ್ತೆ ನಾಲ್ಕೈದು ತಿಂಗಳಿನ ಹಿಂದಿನ ರಾಜಕೀಯ ವಾತಾವರಣವನ್ನು ನೆನಪಲ್ಲಿ ಇಟ್ಟುಕೊಂಡು, ಅದನ್ನು ಒಂದು ಉಪ-ಆಧಾರವಾಗಿ ಇಟ್ಟುಕೊಂಡು ಚುನಾವಣಾ ವಿಶ್ಲೇಷಣೆ ಮಾಡಲೇಬೇಕಾದ ಪರಿಸ್ಥಿತಿ ಚುನಾವಣಾ ಪಂಡಿತರುಗಳಿಗೆ ಈಗ ಉದ್ಭವಿಸಿದೆ. ಅಂದರೆ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತಿಸಘಡಗಳಲ್ಲಿ ಬಿಜೆಪಿಯ ಅದರಲ್ಲೂ ಮೋದಿ-ಶಾಗಳ ಸೋಲಿನ ನಂತರ ಹಲವು ಹರಸಾಹಸ ಮಾಡಿದರೂ ಈಗ ಮತ್ತೆ ಬಿಜೆಪಿಗೆ ಅಂದುಕೊಂಡಂತೆ ಆಗುತ್ತಿಲ್ಲ.

ಸದ್ಯ ಉತ್ತರಪ್ರದೇಶದ ವಿಷಯಕ್ಕೆ ಬರೋಣ. ಅಲ್ಲಿ ಏರ್ಪಟ್ಟ ಮೈತ್ರಿಯೊಂದು ಬಿಜೆಪಿಯ ಓಟಕ್ಕೆ ಮೊದಲ ತಡೆ ಹಾಕಿದೆ. ಅದು ಆರಂಭದಲ್ಲಿ ಮಹಾಘಟಬಂಧನವಾಗಿತ್ತು, ಈಗ ಅದರಲ್ಲಿ ಕಾಂಗ್ರೆಸ್ ಇಲ್ಲದೇ ಅದು ಕೇವಲ ಘಟಬಂಧನವಾಗಿದೆ. ಆದರೆ ಈ ಎಸ್ಪಿ-ಬಿಎಸ್‍ಪಿ-ಆರ್‍ಎಲ್‍ಡಿ ಮೈತ್ರಿ ಬಿಜೆಪಿಯಿಂದ 40-50 ಸ್ಥಾನಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದ್ದೇ ಇದೆ.

ಗೆಸ್ಟ್‍ಹೌಸ್ ಪ್ರಕರಣದಿಂದ ಘಟಬಂಧನದ ಕತೆ
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಇತಿಹಾಸದಲ್ಲಿ ಅವು ಪರಸ್ಪರ ಎದುರಾಳಿಯಾಗಿದ್ದೇ ಹೆಚ್ಚಾದರೂ, ಆಗಾಗ ಅವುಗಳ ನಡುವೆ ಒಲವು ಚಿಗುರಿದ್ದೂ ಉಂಟು. ಸುಮಾರು 25 ವರ್ಷಗಳ ಹಿಂದೆ ಮುಲಾಯಂ ನೇತೃತ್ವದ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯ ಸರ್ಕಾರ ಬಿದ್ದಾಗ ಎಸ್ಪಿ ಕಾರ್ಯಕರ್ತರು ಮಾಯಾವತಿಯವರನ್ನು ಗೆಸ್ಟ್‍ಹೌಸ್ ಒಂದರಲ್ಲಿ ಲಾಕ್ ಮಾಡಿ ಸತಾಯಿಸಿದ್ದರು. ಅಂದಿನಿಂದ ಎಸ್ಪಿ ಮತ್ತು ಬಿಎಸ್ಪಿ ನಡುವೆ ಒಂದು ದೊಡ್ಡ ಕಂದಕ ನಿರ್ಮಾಣವಾಗಿತ್ತು.

ಅದಾದ 26 ವರ್ಷಗಳ ನಂತರ, ಮೋದಿ-ಶಾ ಉತ್ತರಪ್ರದೇಶದಲ್ಲಿ 80ರಲ್ಲಿ 71 ಸೀಟು (ಅಪ್ನಾದಳ್ 2 ಸೇರಿದರೆ 73) ಗೆದ್ದಾಗ ಈ ಎರಡೂ ಪಕ್ಷಗಳೂ ತತ್ತರಿಸಿದ್ದವು. ಮುಂದೆ ಕೆಲ ವರ್ಷಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯಿತು. ಅಷ್ಟೊತ್ತಿಗೆ ತಂದೆಯಿಂದ ಬೇರೆಯಾಗಿ ಗುರ್ತಿಸಿಕೊಂಡಿದ್ದ ನಿಕಟಪೂರ್ವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚೆತ್ತುಕೊಂಡರು.
ಅದರ ಫಲವೇ ಅವರು, ಬಿಎಸ್ಪಿಯ ಮಾಯಾವತಿಯವರೊಂದಿಗೆ 25 ನಿಮಿಷಗಳ ಒಂದು ಮುಕ್ತ ಸಮಾಲೋಚನೆ, ಸಂಧಾನವನ್ನು ನಡೆಸಿದರು. ಇಡೀ ಮಾತುಕತೆಯ ಉದ್ದೇಶ ಬಿಜೆಪಿ, ಮುಖ್ಯವಾಗಿ, ಮೋದಿ-ಶಾಗಳನ್ನು ಅಧಿಕಾರದಿಂದ ದೂರ ಇಡುವುದಾಗಿತ್ತು.
ಸಭೆಯ ನಂತರ ಅಖಿಲೇಶ್ ಹೇಳಿದ್ದು ಒಂದೇ ಮಾತು: ‘ಎಸ್ಪಿ ಕಾರ್ಯಕರ್ತರು ಮಾಯಾವತಿಯನ್ನು ಅವಮಾನಿಸಿದರೆ ಅದು ನನ್ನನ್ನೇ ಅವಮಾನಿಸಿದಂತೆ….’

ಆಗ ಆರ್‍ಎಲ್‍ಡಿ ಮತ್ತು ಕಾಂಗ್ರೆಸ್ ಈ ಮೈತ್ರಿ ಜೊತೆ ಸೇರಿಕೊಂಡವು. ನಂತರ ಈ ಮಹಾಘಟಬಂಧನವು 3 ಲೋಕಸಭಾ ಉಪ ಚುನಾವಣೆಗಳನ್ನು ಭಾರಿ ಅಂತರದಿಂದ ಗೆದ್ದಿತು. ಆ ಮೂಲಕ ಬಿಜೆಪಿ ವಿರೋಧಿ ಮತಗಳು ಸೇರಿದರೆ ಮೋದಿ-ಶಾ ಆಟ ಝೀರೊ ಎಂಬುದನ್ನು ಸಾಬೀತು ಮಾಡಲಾಗಿತು. ಇದು ಕರ್ನಾಟಕದ ರಾಜಕಾರಣದ ಮೇಲೂ ಪ್ರಭಾವ ಬೀರಿದ ಪರಿಣಾಮವಾಗಿಯೇ ಇಲ್ಲಿ ಮೈತ್ರಿ ಸರ್ಕಾರ ರಚನೆಗೊಂಡಿತು. ಇಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆಯ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿತು.
ಈಗ ಬಿಜೆಪಿಯ ಅಂದಾಜಿತ ನಾಗಾಲೋಟಕ್ಕೆ ಉತ್ತರಪ್ರದೇಶವೇ ಮೊದಲ ಬ್ರೇಕ್ ಹಾಕುತ್ತಿದೆ. ಕರ್ನಾಟಕದಲ್ಲೂ ಬಿಜೆಪಿಗೆ ಬ್ರೇಕ್ ಬೀಳದೇ ಇರುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...