Homeಕರ್ನಾಟಕಹೇಳಿಕೆ ಬದಲಿಸುತ್ತಿರುವ ಸುಜಾತಾ ಭಟ್: ಅನನ್ಯಾ ಭಟ್ ಪ್ರಕರಣದ ಸುತ್ತ ಹಲವು ಗೊಂದಲ

ಹೇಳಿಕೆ ಬದಲಿಸುತ್ತಿರುವ ಸುಜಾತಾ ಭಟ್: ಅನನ್ಯಾ ಭಟ್ ಪ್ರಕರಣದ ಸುತ್ತ ಹಲವು ಗೊಂದಲ

- Advertisement -
- Advertisement -

ಧರ್ಮಸ್ಥಳಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎಂಬ ಪ್ರಕರಣದ ಸುತ್ತ ಗೊಂದಲ ಸೃಷ್ಟಿಯಾಗಿದೆ. ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಹೇಳಿಕೆಗಳು ಈ ಗೊಂದಲಗಳಿಗೆ ಕಾರಣವಾಗಿದೆ.

ಶುಕ್ರವಾರ (ಆ.22) ‘ಇನ್‌ಸೈಟ್‌ರಶ್’ ಎಂಬ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿದ್ದ ವಿಡಿಯೋದಲ್ಲಿ ಮಾತನಾಡಿದ ಸುಜಾತಾ ಭಟ್, “ಅನನ್ಯಾ ಭಟ್ ನನ್ನ ಮಗಳು ಎನ್ನುವುದು ಸುಳ್ಳು. ನನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ. ಕೆಲ ವ್ಯಕ್ತಿಗಳು ಆ ರೀತಿ ಹೇಳುವಂತೆ ಒತ್ತಡ ಹೇರಿದ್ದರಿಂದ ನಾನು ಸುಳ್ಳು ಕಥೆ ಹೆಣೆದೆ ಎಂದು ಸ್ಪಷ್ಟಪಡಿಸಿದ್ದರು. ಆ ವ್ಯಕ್ತಿಗಳು ಯಾರು ಎಂದು ವರದಿಗಾರ್ತಿ ಕೇಳಿದಾಗ, ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಟಿ ಎಂದು ಹೆಸರು ಹೇಳಿದ್ದರು.

ಮುಂದುರಿದು, ಆಸ್ತಿ ವಿವಾದ ಇತ್ತು ಅದಕ್ಕೆ ನಾನು ಅನನ್ಯಾ ಭಟ್ ಕಥೆ ಹೇಳಿದೆ. ನನ್ನ ಅಜ್ಜನ ಆಸ್ತಿಯನ್ನು ದಾನವಾಗಿ ದೇವಸ್ಥಾನಕ್ಕೆ ಕೊಡುವಾಗ ಮೊಮ್ಮಗಳಾದ ನನ್ನ ಸಹಿ ತೆಗೆದುಕೊಳ್ಳಬೇಕಿತ್ತು. ನನಗೆ ಹಕ್ಕಿದೆ, ಆದರೆ ಹಾಗೆ ಮಾಡದೆ ದಾನವಾಗಿ ನಮ್ಮ ತಾತನ ಜಮೀನನ್ನು ಧರ್ಮಸ್ಥಳಕ್ಕೆ ಬರೆದುಕೊಟ್ಟರು. ನನ್ನನ್ನು ಸತ್ತಂತೆ ಪರಿಗಣಿಸಿದರು. ಅದು ನನಗೆ ತುಂಬಾ ನೋವು ಕೊಟ್ಟಿತು. ಹಾಗಾಗಿ ಅವರು ಹೇಳಿದಂತೆ ಮಾಡಿದ್ದೇನೆ. ನಾನು ತೋರಿಸಿರುವ ಫೋಟೋ ಎಲ್ಲವೂ ನಕಲಿ. ನಾನು ಧರ್ಮಸ್ಥಳ ಕ್ಷೇತ್ರ ಅಥವಾ ಅಲ್ಲಿನ ಯಾವುದೇ ವ್ಯಕ್ತಿ ವಿರುದ್ಧ ದೂರು ಕೊಟ್ಟಿಲ್ಲ, ಧರ್ಮಸ್ಥಳ ಗ್ರಾಮದಲ್ಲಿ ಎಂದು ದೂರು ಕೊಟ್ಟಿದ್ದೆ ಎಂದಿದ್ದರು.

ನನಗೆ ಈ ಕುರಿತು ಯಾರೂ ಹಣದ ಆಮಿಷ ಒಡ್ಡಿಲ್ಲ. ಕೇವಲ ಒಂದು ಬಾರಿಯಷ್ಟೇ ಅವರನ್ನು ಭೇಟಿಯಾಗಿದ್ದೇನೆ. ಮಗಳ ಕಥೆ ಹೇಳಿ ಎಂದು ಹೇಳಿಕೊಟ್ಟರು. ನನ್ನ ತಲೆಗೆ ತುರುಕಿದರು. ಅದರಂತೆ ಹೇಳಿದ್ದೇನೆ. ಆದರೆ, ಅದು ಈ ಮಟ್ಟಕ್ಕೆ ಹೋಗುತ್ತದೆ, ಇಷ್ಟೊಂದು ತೇಜೋವಧೆ ಆಗುತ್ತದೆ ಎಂದು ಯಾವತ್ತೂ ಭಾವಿಸಿರಲಿಲ್ಲ. ನಾನು ಲೀವಿಂಗ್ ಟುಗೆದರ್‌ನಲ್ಲಿ ಇದ್ದದ್ದು ನಿಜ. ಆದರೆ, ಆ ವ್ಯಕ್ತಿಯನ್ನು (ಸಂಗಾತಿಯನ್ನು) ನಾನೇ ದುಡಿದು ಸಾಕಿದ್ದೇನೆ. ಯಾರ ಮುಂದೆಯೂ ಕೈಚಾಚಿದವಳು ಅಲ್ಲ ಎಂದು ಸುಜಾತಾ ಭಟ್ ಅವರು ಹೇಳಿದ್ದರು.

ಈ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ಮನೆಯಿಂದ ಸುದ್ದಿ ವಾಹಿನಿಗಳ ಜೊತೆ ಮಾತನಾಡಿದ ಸುಜಾತಾ ಭಟ್, “ಇವತ್ತು ಸಂಜೆ 5 ಗಂಟೆಗೆ ಒಬ್ಬರು ವಕೀಲರು ಬಂದು ನನ್ನನ್ನು ಕರೆದುಕೊಂಡು ಹೋಗಿ ಯೂಟ್ಯೂಬ್ ಚಾನೆಲ್‌ ಜೊತೆ ಮಾತನಾಡಿಸಿದರು. ಅವರ ಕಾರಿನಲ್ಲಿ ನನ್ನನ್ನು ಕೂರಿಸಿಕೊಂಡು ನನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ ಎಂಬ ಹೇಳಿಕೆ ಕೊಡಿಸಿದರು. ಅನನ್ಯಾ ಭಟ್ ಕಥೆ ಹೆಣೆಯಲು ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ಮತ್ತು ಜಯಂತ್ ಟಿ ನನ್ನನ್ನು ಪ್ರಚೋದಿಸಿದರು ಎಂದು ಬಲವಂತವಾಗಿ ಹೇಳಿಸಿದರು. ಇದು ಈ ರೀತಿ ಚಾನೆಲ್‌ನಲ್ಲಿ ಬರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ಎಸ್‌ಐಟಿ ಮುಂದೆ ಹೋಗಿ ಎಲ್ಲಾ ವಿಷಯವನ್ನು ಹೇಳುತ್ತೇನೆ. ದಯವಿಟ್ಟು ಅಲ್ಲಿಯವರೆಗೆ ನನಗೆ ಸಮಯ ಕೊಡಿ ಎಂದಿದ್ದಾರೆ.

ನನ್ನನ್ನು ಕತ್ರಿಗುಪ್ಪೆ ಕಾಮಾಕ್ಯ ರಸ್ತೆಯಲ್ಲಿ ಕರೆದುಕೊಂಡು ಹೋಗಿ, ಎಲ್ಲೋ ಒಳ ರಸ್ತೆಯಲ್ಲಿ ಕಾರಿನೊಳಗೆ ಕೂರಿಸಿ ನನ್ನಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಂದು ವಾಹಿನಿಯವರ ಜೊತೆಯೂ ನೀವು ಅನನ್ಯಾ ಭಟ್ ಇಲ್ಲ ಎಂಬ ಹೇಳಿಕೆ ಕೊಟ್ಟಿದ್ದೀರಲ್ವಾ? ಎಂದು ಸುದ್ದಿವಾಹಿನಿ ವರದಿಗಾರ ಕೇಳಿದಾಗ, ಆ ವಾಹಿನಿಯವರು ಕೂಡ ನನ್ನಿಂದ ಬಲವಂತವಾಗಿ ಹೇಳಿಕೆ ಕೊಡಿಸಿದ್ದಾರೆ ಎಂದಿದ್ದಾರೆ.

ನಾನು ಮೊದಲು ಎಸ್‌ಐಟಿ ಮುಂದೆ ಹೇಳಿಕೆ ಕೊಡುತ್ತೇನೆ. ಆ ಬಳಿಕ ಮಾಧ್ಯಮಗಳ ಮುಂದೆ ಮಾತನಾಡುತ್ತೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾನು ಇನ್ನು ಎಸ್‌ಐಟಿ ಮುಂದೆಯೇ ಹೇಳಿಕೆ ಕೊಡುತ್ತೇನೆ. ಎಸ್‌ಐಟಿಯವರು ಮಾಧ್ಯಮಗಳಿಗೆ ಹೇಳಿಕೆ ಕೊಡದಂತೆ ಸೂಚಿಸಿದ್ದಾರೆ. ನನ್ನಿಂದ ಬಲವಂತವಾಗಿ ಹೇಳಿಕೆ ಕೊಡಿಸಿದ ಬಗ್ಗೆ ನನ್ನ ವಕೀಲರ ಜೊತೆ ಮಾತನಾಡಿದ್ದೇನೆ. ಅವರು ಎಸ್‌ಐಟಿ ಮುಂದೆ ಹೋಗೋಣ ಎಂದಿದ್ದಾರೆ. ಹಾಗಾಗಿ, ನಾನು ಎಸ್ಐಟಿ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ಸುಜಾತಾ ಭಟ್ ತಿಳಿಸಿದ್ದಾರೆ.

2003ರಲ್ಲಿ ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತಾಯಿ ಸುಜಾತಾ ಭಟ್ 2025ರ ಜುಲೈ 15ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, “ಮಗಳ ನಾಪತ್ತೆ ಬಗ್ಗೆ ಈ ಹಿಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ಕೊಟ್ಟಿದ್ದರೂ ನನಗೆ ನ್ಯಾಯ ಸಿಕ್ಕಿಲ್ಲ. ಈಗ ಅನಾಮಿಕ ಕೊಟ್ಟ ದೂರಿನಂತೆ ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ನನಗೆ ಆಶಾ ಭಾವನೆ ಮೂಡಿದೆ. ಎಸ್‌ಐಟಿಯವರು ನನ್ನ ಮಗಳ ನಾಪತ್ತೆ ಪ್ರಕರಣವನ್ನೂ ಬೇಧಿಸಿ, ಅವಳ ಅಸ್ತಿ ಹುಡುಕಿ ಕೊಟ್ಟರೆ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತೇನೆ” ಎಂದಿದ್ದರು.

ಸುಜಾತಾ ಭಟ್ ಅವರ ಸಂಪೂರ್ಣ ಹೇಳಿಕೆಯ ಲಿಂಕ್ ಇಲ್ಲಿದೆ

ಅನನ್ಯಾ ಭಟ್ ನಾಪತ್ತೆ ದೂರು ಧರ್ಮಸ್ಥಳ ಠಾಣೆಯಿಂದ ಆಗಸ್ಟ್ 20, 2025ರಂದು ಎಸ್‌ಐಟಿಗೆ ವರ್ಗಾವಣೆಯಾಗಿದೆ. ಎಸ್‌ಐಟಿಯವರು ವಿಚಾರಣೆಗೆ ಹಾಜರಾಗುವಂತೆ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ನಡುವೆ ಸುದ್ದಿ ವಾಹಿನಿಯೊಂದು ಸುಜಾತಾ ಭಟ್ ಅವರಿಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ ಎಂದು ನಿರಂತರ ಸುದ್ದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಜಾತಾ ಭಟ್, ಯುವತಿಯೊಬ್ಬರ ಫೋಟೋ ಬಿಡುಗಡೆ ಮಾಡಿ, “ಇದೇ ಅನನ್ಯಾ ಭಟ್” ಎಂದಿದ್ದರು. ಆದರೆ, ಸುದ್ದಿವಾಹಿನಿ ಮತ್ತು ಕೆಲ ಯೂಟ್ಯೂಬ್ ಚಾನೆಲ್‌ಗಳು ಆ ಫೋಟೋ ನಕಲಿ ಎಂದು ಆರೋಪಿಸಿತ್ತು. ವಾಸಂತಿ ಎನ್ನುವವರ ಫೋಟೋವನ್ನು ಯೂಟ್ಯೂಬರ್ ಸಮೀರ್ ಎಐ ಮೂಲಕ ಬದಲಾಯಿಸಿ ಅನನ್ಯಾ ಭಟ್ ಎಂದು ಬಿಂಬಿಸಿದ್ದಾರೆ ಎಂದಿತ್ತು.

ಸುಜಾತಾ ಭಟ್ ಅವರಿಗೆ ಅನನ್ಯಾ ಎಂಬ ಮಗಳೇ ಇರಲಿಲ್ಲ ಎಂಬುವುದಕ್ಕೆ ಸುದ್ದಿವಾಹಿನಿ, ಸುಜಾತಾ ಭಟ್ ಸಂಬಂಧಿಕರು ಎನ್ನಲಾದ ಕೆಲ ವ್ಯಕ್ತಿಗಳಿಂದ ಹೇಳಿಕೆಯನ್ನೂ ಪಡೆದಿತ್ತು. ಇದನ್ನು ಗಮನಿಸಿದ ಜನರು ಸುಜಾತಾ ಭಟ್ ಆರೋಪ ನಿಜವೋ, ಸುಳ್ಳೋ ಎಂಬ ಗೊಂದಲಕ್ಕೀಡಾಗಿದ್ದರು.

ಈ ಬೆನ್ನಲ್ಲೇ ‘ಇನ್‌ಸೈಟ್‌ರಶ್’ ಯೂಟ್ಯೂಬ್ ಚಾನೆಲ್‌ಗೆ ಸುಜಾತಾ ಭಟ್ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಇದಾಗಿ, ಗಂಟೆಯೊಳಗೆ “ನನ್ನಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿದೆ” ಎಂಬ ಸುಜಾತಾ ಮಾತು ಜನರಲ್ಲಿ ಗೊಂದಲ ಉಂಟು ಮಾಡಿದೆ. ಹಾಗಾಗಿ, ಅನನ್ಯಾ ಭಟ್ ಪ್ರಕರಣದ ಸತ್ಯಾಸತ್ಯತೆ ಎಸ್‌ಐಟಿ ತನಿಖೆಯಿಂದಲೇ ಬಯಲಾಗಬೇಕಿದೆ.

15 ದಿನದಿಂದ ‘ಮಾರ್ವಾಡಿ ಗೋ ಬ್ಯಾಕ್’ ಪ್ರತಿಭಟನೆಗಳು: ಹೈದರಾಬಾದ್‌ನಲ್ಲಿ ಹೆಚ್ಚಿದ ಉದ್ವಿಗ್ನತೆ, ಪೊಲೀಸರು ಹೈ ಅಲರ್ಟ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...

ತೆಲಂಗಾಣ| ಅಂತರ್ಜಾತಿ ವಿವಾಹಕ್ಕೆ ಯುವತಿ ಕುಟುಂಬದ ವಿರೋಧ; ದಲಿತ ಯುವಕನ ಮನೆ ಧ್ವಂಸ

ಹೈದರಾಬಾದ್ ಸಮೀಪದ ಗದ್ವಾಲ್ ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ದಲಿತ ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಬಹುಜನ ಫ್ರಂಟ್, ಹ್ಯೂಮನ್...

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...