Homeಮುಖಪುಟತಮಿಳುನಾಡಿನ 154 ಸ್ಥಾನಗಳಲ್ಲಿ ಎಂಎನ್‌ಎಂ ಸ್ಪರ್ಧೆ- ಕಮಲ್ ಹಾಸನ್

ತಮಿಳುನಾಡಿನ 154 ಸ್ಥಾನಗಳಲ್ಲಿ ಎಂಎನ್‌ಎಂ ಸ್ಪರ್ಧೆ- ಕಮಲ್ ಹಾಸನ್

ಉಳಿದ 80 ಸ್ಥಾನಗಳಲ್ಲಿ ತಲಾ 40 ಸ್ಥಾನಗಳಲ್ಲಿ ಎರಡು ಮೈತ್ರಿ ಪಕ್ಷಗಳು ಸ್ಪರ್ಧಿಸಲಿವೆ

- Advertisement -
- Advertisement -

ಪಂಚರಾಜ್ಯ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ರಾಜ್ಯಗಳೆಂದರೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ. ರಾಜಕಾರಣಿಗಳ ಜೊತೆಗೆ ನಟ-ನಟಿಯರು ಸೇರಿ ಚುನಾವಣೆಯನ್ನು ರಂಗೇರಿಸಿದ್ದಾರೆ. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ 234 ವಿಧಾನಸಭಾ ಸ್ಥಾನಗಳ ಪೈಕಿ 154 ಸ್ಥಾನಗಳಲ್ಲಿ ಮಕ್ಕಳ್ ನೀಧಿ ಮಯ್ಯಂ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.

ಮಕ್ಕಳ್ ನೀಧಿ ಮಯ್ಯಂ ತನ್ನ ಇಬ್ಬರು ಮೈತ್ರಿ ಪಾಲುದಾರರಾದ ಅಖಿಲ ಭಾರತ ಸಮತುವಾ ಮಕ್ಕಳ್ ಕಚ್ಚಿ ಮತ್ತು ಇಂಡಿಯಾ ಜನನಾಯಾಗ ಕಚ್ಚಿ ಪಕ್ಷಗಳು ಉಳಿದ 80 ಸ್ಥಾನಗಳಲ್ಲಿ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಸೀಟು ಹಂಚಿಕೆ ಒಪ್ಪಂದವನ್ನು ನಟ, ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಸೋಮವಾರ ತಡರಾತ್ರಿ ಘೋಷಿಸಿತು. 2019 ರ ಲೋಕಸಭಾ ಚುನಾವಣೆಯಲ್ಲಿ ಮಕ್ಕಳ್ ನೀಧಿ ಮಯ್ಯಂ ತಮಿಳುನಾಡಿನಲ್ಲಿ ಶೇಕಡಾ 4 ರಷ್ಟು ಮತಗಳನ್ನು ಗಳಿಸಿ ಗಮನ ಸೆಳೆದಿತ್ತು.

ಇದನ್ನೂ ಓದಿ: ತಮಿಳುನಾಡು ಚುನಾವಣೆ: BJPಗೆ 20 ಮತ್ತು PMKಗೆ 23 ಸೀಟು ನೀಡಿದ AIADMK

“ಜನರ ಬಹುದಿನಗಳ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ ತಮಿಳುನಾಡನ್ನು ಪರಿವರ್ತಿಸುವ ಸಾಮಾನ್ಯ ಗುರಿಗೆ ಪಕ್ಷಗಳು ಬದ್ಧವಾಗಿವೆ. ತಮಿಳುನಾಡಿನ ಹೆಮ್ಮೆ ಮತ್ತು ವೈಭವವನ್ನು ಪುನಃಸ್ಥಾಪಿಸುವ ಸಾಮಾನ್ಯ ಕಾರ್ಯಸೂಚಿಯೊಂದಿಗೆ, ಈ ಪಕ್ಷಗಳು ದೀರ್ಘಕಾಲ ಒಟ್ಟಾಗಿರಲು ನಿರ್ಧರಿಸಿದ್ದಾರೆ” ಎಂದು ಪಕ್ಷ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಕ್ಷವು ವಿಶಿಷ್ಟವಾದ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ. ಚುನಾವಣೆಯಲ್ಲಿ ಅಂತಿಮವಾಗಿ ಆಯ್ಕೆಯಾಗಲು ಶಾರ್ಟ್‌ಲಿಸ್ಟ್ ಮಾಡಿದ ಮೇಲೆ ಅಬ್ಯರ್ಥಿಗಳ ಸಂದರ್ಶನ ನಡೆಯುತ್ತವೆ.

ಎಂಎನ್‌ಎಂ ಭ್ರಷ್ಟಾಚಾರ, ಉದ್ಯೋಗಗಳು, ಅಭಿವೃದ್ಧಿ ಹೊಂದುತ್ತಿರುವ ಹಳ್ಳಿಗಳು ಮತ್ತು ಜನ ಸ್ನೇಹಿ ಇ-ಆಡಳಿತವನ್ನು ಪ್ರಮುಖ ವಿಷಯಗಳಾಗಿ ಪ್ರಚಾರದಲ್ಲಿ ಬಳಸುತ್ತಿದೆ. ಗೃಹಿಣಿಗಳಿಗೆ ಸಂಬಳ ನೀಡುವ ಭರವಸೆ ನೀಡಿದೆ ಮತ್ತು ಸರ್ಕಾರಿ ಯೋಜನೆಗಳನ್ನು ಸುಲಭವಾಗಿ ತಿಳಿಯಲು ಮತ್ತು ಪ್ರಯೋಜನ ಪಡೆಯಲು ಜನರಿಗೆ ಸಹಾಯ ಮಾಡಲು ಸಾರ್ವಜನಿಕ ಸಂಪನ್ಮೂಲವಾಗಿ ಎಲ್ಲಾ ಮನೆಗಳಲ್ಲಿ ಇಂಟರ್ನೆಟ್ ಹೊಂದಿರುವ ಉಚಿತ ಕಂಪ್ಯೂಟರ್‌ಗಳನ್ನು ನೀಡುವ ಭರವಸೆ ನೀಡಿದೆ.

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಕನಿಷ್ಠ 180 ಸ್ಥಾನಗಳಿಂದ ಸ್ಪರ್ಧಿಸಲು ಡಿಎಂಕೆ ಬಯಸಿದೆ. ಉಳಿದ 54 ಸ್ಥಾನಗಳನ್ನು ತಮ್ಮ ಮೈತ್ರಿ ಪಾಲುದಾರರಿಗೆ ಬಿಡಲು ಸಿದ್ಧವಿದೆ. AIADMK ಮೈತ್ರಿಕೂಟವು ಸೀಟು ಹಂಚಿಕೆ ಆರಂಭಿಸಿದ್ದು, ರಾಷ್ಟ್ರೀಯ ಪಕ್ಷ ಬಿಜೆಪಿಗೆ 20 ಸ್ಥಾನ ಮತ್ತು ಪ್ರಾದೇಶಿಕ ಪಕ್ಷ PMKಗೆ 23 ಸ್ಥಾನ ಹಂಚಿಕೆ ಮಾಡಿದೆ.


ಇದನ್ನೂ ಓದಿ: ತಮಿಳುನಾಡು: DMK 180 ಸ್ಥಾನಗಳಲ್ಲಿ ಸ್ಪರ್ಧಿಸಲು ಹಠ ಹಿಡಿದಿರುವುದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...