ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಂದ ಜೈಲ್‌ಭರೋ ಚಳವಳಿ ಎಚ್ಚರಿಕೆ…

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬೇಡಿಕೆಗಳನ್ನು ಈಡೇರಿಸಲು ಮತ್ತು ಹೈಕೋರ್ಟ್ ಆದೇಶದಂತೆ ಸಂಧಾನಕ್ಕೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ನಾವು ಜೈಲ್ ಭರೋ ಚಳವಳಿಗೂ ಸಿದ್ದರಿದ್ದೇವೆ ಎಂದು ಜಂಟಿ ಕ್ರಿಯಾ ಸಮಿತಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ನಮಗೆ ಮೊದಲು 825 ಕೋಟಿ ಭವಿಷ್ಯ ನಿಧಿ ಹಣ ಹಾಗೂ ಸಹಕಾರಿ ಸಂಸ್ಥೆಯ 547 ಕೋಟಿ ನಿಧಿಯನ್ನು ಬಿಡುಗಡೆ ಮಾಡಬೆಕು. ಇದು ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದು. ಇದಕ್ಕೆ ಸಮ್ಮತಿಸದಿದ್ದರೆ ಮುಷ್ಕರ ಅಥವಾ ಬಂದ್ ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಸಾರಿಗೆ ನೌಕರರ ಮುಷ್ಕರ : ಹಬ್ಬಕ್ಕೆ ಊರಿಗೆ ತರಳಲು ಪ್ರಯಾಣಿಕರ ಪರದಾಟ..

ತೆಲಂಗಾಣ ಹೈಕೋರ್ಟ್ ಮುಷ್ಕರನಿರತ ನೌಕರರೊಂದಿಗೆ ಸಂಧಾನ ನಡೆಸಬೇಕೆಂದು ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ಮಾತುಕತೆಗೆ ಮುಂದೆ ಬರುತ್ತಿಲ್ಲ. ನಮ್ಮನ್ನು ನಿರ್ಲಕ್ಷ್ಯ ಮಾಡುವ ಜೊತೆಗೆ ಮತಹಾಕಿ ಅಧಿಕಾರ ನೀಡಿದ ಜನರಿಗೂ ಸೂಕ್ತ ಉತ್ತರ ಕೊಡುತ್ತಿಲ್ಲ ಎಂದು ಹೋರಾಟಗಾರರು ದೂರಿದ್ದಾರೆ.

ಜಂಟಿ ಕ್ರಿಯಾ ಸಮಿತಿ ಸಂಧಾನಕ್ಕೆ ಮುಕ್ತವಾಗಿದೆ. ಹೀಗಾಗಿ ಹೈಕೋರ್ಟ್ ಆದೇಶ ಪಾಲನೆಗೆ ಸರ್ಕಾರ ಮುಂದಾಗಬೇಕು. ಹೈಕೋರ್ಟ್ ಅದೇಶಕ್ಕೆ ಉತ್ತರ ಕೊಡದವರು ಇನ್ನು ನಮಗೇನು ಉತ್ತರ ನೀಡುತ್ತಾರೆ. ಸರ್ಕಾರ ಮಾತುಕತೆ ನಡೆಸಲಿ ಬಿಡಲಿ ಇದೇ ಧೋರಣೆ ಮುಂದುವರೆದರೆ ಸಂವಿಧಾನಬದ್ದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆಯಿಂದ ಕಂಗೆಟ್ಟಿದ್ದ ತೆಲಂಗಾಣಕ್ಕೆ ಈಗ ಓಲಾ, ಉಬರ್ ಶಾಕ್!

ಎರಡು ವಾರಗಳಿಂದ ಮುಷ್ಕರದಲ್ಲಿ ತೊಡಗಿರುವ ಟಿಎಸ್ಆರ್ ಟಿಸಿ ನೌಕರರನ್ನು ರಾಜ್ಯ ಸರ್ಕಾರ ಎಸ್ಮಾ ಕಾಯ್ದೆಯಡಿ ಕೆಲಸದಿಂದ ವಜಾಗೊಳಿಸಿತ್ತು. ಇದರ ವಿರುದ್ದ ನೌಕರರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಇಂದು ಮುಷ್ಕರ ನಿರತರೊಂದಿಗೆ ಸರ್ಕಾರ ಸಂಧಾನ ಮಾತುಕತೆ ನಡೆಯಲಿದ್ದು ಸಭೆಯ ನಂತರ ತೀರ್ಮಾನ ಪ್ರಕಟಗೊಳ್ಳಲಿದೆ…

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here