Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು ಅಧ್ಯಾಯ -11: ಕಾಫಿ ಉದ್ಯಮದಲ್ಲಿ ಮರೆಯಲಾಗದ ಹೆಸರು ಸಿದ್ಧಾರ್ಥ ಹೆಗಡೆ

ಕಳೆದುಹೋದ ದಿನಗಳು ಅಧ್ಯಾಯ -11: ಕಾಫಿ ಉದ್ಯಮದಲ್ಲಿ ಮರೆಯಲಾಗದ ಹೆಸರು ಸಿದ್ಧಾರ್ಥ ಹೆಗಡೆ

ನಾನಿದನ್ನು ಬರೆಯುತ್ತಿರುವ ವೇಳೆಗೆ, ಸಿದ್ದಾರ್ಥರು ಇಲ್ಲ. ಅವರು ಕಟ್ಟಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಹೋರಾಟವನ್ನು ಅವರ ಕುಟುಂಬದವರು ನಡೆಸುತ್ತಿದ್ದಾರೆ.

- Advertisement -
- Advertisement -

ಕಾಫಿ ಉದ್ಯಮದಲ್ಲಿ ಎಂದು ಮರೆಯಲಾಗದ ಇನ್ನೊಂದು ಹೆಸರು ಸಿದ್ಧಾರ್ಥ ಹೆಗಡೆಯವರದು. ಬಹುಶಃ ಇಂದು ಭಾರತದ ಯುವಪೀಳಿಗೆಯಲ್ಲಿ ಅವರ ಹೆಸರನ್ನು ಕೇಳದವರೇ ಇಲ್ಲವೆನ್ನಬಹುದು. ಯಾಕೆಂದರೆ ಯುವಕರ ನೆಚ್ಚಿನ ಮತ್ತು ಮೆಚ್ಚಿನ ತಾಣಗಳಾಗಿದ್ದ ಕೆಫೇ ಕಾಫಿ ಡೇ ಗಳು.

ಸಿದ್ಧಾರ್ಥ ಒಬ್ಬ ದೊಡ್ಡ ಕನಸುಗಾರ. ಅವರು ಮಲೆನಾಡಿಗ. ಕಾಫಿ ಅವರ ಬದುಕಾಗಿತ್ತು, ಕಾಫಿ ಅವರ ಕನಸಾಗಿತ್ತು. ಕಾಫಿ ಕೃಷಿಯಿಂದ ಕಾಫಿ ಉದ್ಯಮಕ್ಕಿಳಿದು ಹೊಸತೊಂದು ಸಾಧನೆಯ ಸಾಮ್ರಾಜ್ಯ ಕಟ್ಟುವುದರೊಂದಿಗೆ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದವರು.  ಮಲೆನಾಡಿನ ರಸ್ತೆಬದಿಯ ಕಟ್ಟೆಗಳಲ್ಲಿ, ಟೀ ಅಂಗಡಿಯಲ್ಲಿ, ಇತರ ಸಣ್ಣ ಪುಟ್ಟ ಸ್ಥಳಗಳಲ್ಲಿ ಹಾಳು ಹರಟೆಗಳಲ್ಲಿ ಕಾಲ ಕಳೆಯುತ್ತಿದ್ದ ಯುವಕರನ್ನು ದುಡಿಮೆಗೆ ಹಚ್ಚುವುದಷ್ಟೇ ಅಲ್ಲ ಗೌರವಯುತವಾದ ಸಂಬಳ, ಸಂಭಾವನೆಯನ್ನೂ ಕಲ್ಪಿಸಿಕೊಟ್ಟವರು. 2019 ರಲ್ಲಿ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರ ಸಂಖ್ಯೆ 20,000 ಕ್ಕೂ ಹೆಚ್ಚಿತ್ತು.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಸಿದ್ದಾರ್ಥರಿಗೆ ಹಿರಿಯರಿಂದ ಬಂದ ದೊಡ್ಡ ಕಾಫಿ ಪ್ಲಾಂಟೇಷನ್ ಇತ್ತು. 1992 ರಲ್ಲಿ ಅವರು ಅಮಾಲ್ಗಮೇಟೆಡ್ ಬೀನ್ ಕಾಫಿ ಎಂಬ ಕಾಫಿ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿದ ನಂತರ ಅವರ ಕಾಫಿ ಪ್ಲಾಂಟೇಷನ್ ಗಳೂ ವಿಸ್ತಾರವಾದವು. 1995-96 ರಲ್ಲಿ ಪ್ರಾರಂಭವಾದ ಕೆಫೆ ಕಾಫಿ ಡೇ, ಕಾಫಿ ಚಿಲ್ಲರೆ ಮಾರಾಟ ಕೇಂದ್ರಗಳು. ಅತಿ ಬೇಗ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಪ್ರಸಿದ್ಧವಾದವು. ಕೆಫೆ ಕಾಫಿ ಡೇ ಯಂತೂ ಇತರ ದೊಡ್ಡ ಕಾಫಿ ಕಂಪನಿಗಳಿಗೂ ಸಾದ್ಯವಾಗದಷ್ಟು ಬೆಳೆಯಿತು. ಕೇವಲ ಎರಡು ದಶಕಗಳಲ್ಲಿ 1700 ಕೆಫೆ ಕಾಫಿ ಡೇ ಕೇಂದ್ರಗಳು ಮತ್ತು ಸುಮಾರು 50,000 ದಷ್ಟು ಚಿಲ್ಲರೆ ಮಾರಾಟ ಯಂತ್ರ ಕೇಂದ್ರಗಳು ಸ್ಥಾಪನೆಯಾದದ್ದು ಸಣ್ಣ ಸಾಧನೆಯಲ್ಲ. ಇಂದು ಭಾರತದ ಆಂತರಿಕ ಮಾರುಕಟ್ಟೆ ಸಾಕಷ್ಟು ವೃದ್ಧಿಯಾಗಿದ್ದರೆ ಅದರಲ್ಲಿ ಸಿದ್ಧಾರ್ಥರ ಕೊಡುಗೆಯೂ ದೊಡ್ಡದು.

ಸಿದ್ಧಾರ್ಥ ಹೆಗಡೆಯವರ ಅಮಾಲ್ಗಮೇಟೆಡ್ ಬೀನ್ ಕಾಫಿ ಕಂಪನಿಯ ಕಛೇರಿ ಚಿಕ್ಕಮಗಳೂರು

A lot can happen over a cup of coffee ಎನ್ನುವ  ಕೆಫೆ ಕಾಫಿ ಡೇ ಘೋಷಣೆಯೇ ಯುವ ಪೀಳಿಗೆಯನ್ನು ಆಕರ್ಷಿಸಿತ್ತು.

ನಗರಗಳ ಸಾವಿರಾರು ಯುವ ಉದ್ಯೋಗಿಗಳಿಗೆ ಕಾಫಿ ಡೇ ನಿತ್ಯದ ಮೆಚ್ಚಿನ ತಾಣವಾಯಿತು.

ನಾವು ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಮತ್ತೆ ನೆನಪಿಸಿಕೊಳ್ಳಬೇಕು. ಇದೇ ರೀತಿಯ ಒಂದು ಸಾಹಸವನ್ನು  ಸುಮಾರು ಒಂದು ಶತಮಾನದ ಹಿಂದೆಯೇ ಒಬ್ಬರು ಮಹಿಳೆ ಮಾಡಿದ್ದರು. ಅವರೂ ಒಬ್ಬ ಕಾಫಿ ಬೆಳೆಗಾರರರು. ಅವರ ಬಗ್ಗೆ ಹಿಂದೆಯೇ ಉಲ್ಲೇಖವನ್ನು ಮಾಡಿದ್ದೇನೆ.

ಅವರು ಭಾರತದ ಪ್ರಥಮ ಮಹಿಳಾ ಉದ್ಯಮಿಯೆನಿಸಿದ ಕೊಡಗಿನ ಸಾಕಮ್ಮ 1920 ರಲ್ಲಿ ಅವರು ಬೆಂಗಳೂರಿನಲ್ಲಿ “ಸಾಕಮ್ಮಾಸ್ ಕಾಫಿ” ಎಂಬ ಕಾಫಿ ಪುಡಿ ಉದ್ಯಮವನ್ನು ಸ್ಥಾಪಿಸಿದ್ದರು. ಅವರೂ ಕೂಡ ಹಲವಾರು ಊರುಗಳಿಗೆ ತಮ್ಮ ಕಾಫಿ ಪುಡಿ ಉದ್ಯಮವನ್ನು ವಿಸ್ತರಿಸಿದ್ದರು.

ಸಿದ್ದಾರ್ಥರ ಕಾಫಿ ಸಂಬಂಧಿತ ಉದ್ಯಮಗಳು ಕೊಮಾರ್ಕ್ ನ ಹುಟ್ಟಿನ ಜೊತೆ ಜೊತೆಯಾಗಿಯೇ ಸಾಗಿದ್ದವು.  ಕೊಮಾರ್ಕ್ ನ ಸಂಘಟನೆಯ ಸಮಯದಲ್ಲಿಯೇ  ಸಿದ್ಧಾರ್ಥ ಅವರೊಮ್ಮೆ ಭಾರತದ ಕಾಫಿಯ ಸ್ಥಿತಿ -ಗತಿಗಳ ಬಗ್ಗೆ ಹೇಳಿದ್ದರು. ಆ ಸಂದರ್ಭದಲ್ಲೇ, ಕಾಫಿ ವ್ಯವಹಾರಗಳೆಲ್ಲವೂ ವಿದೇಶಗಳ ಹಿಡಿತದಲ್ಲಿರುವ ದೊಡ್ಡ ಉದ್ಯಮ. ಅದರ ಜೊತೆ ಭಾರತದ ಸಹಕಾರಿ ವಲಯದ ಸಂಸ್ಥೆಯೊಂದು ಸ್ಪರ್ಧಿಸಬೇಕಾದರೆ ಇರುವ ಕಷ್ಟ ಮತ್ತು ಸಮಸ್ಯೆಗಳ ಬಗ್ಗೆಯೂ ಹೇಳಿದ್ದರು.

ಇವುಗಳೇನೇ ಇರಲಿ ಕೆಲಕಾಲ ಇವೆರಡೂ ಸಂಸ್ಥೆಗಳು ಸಮಾನಾಂತರವಾಗಿ ಕೆಲಸ ಮಾಡುತ್ತ ಬೆಳೆಗಾರರರಿಗೆ ಒಂದು ರೀತಿಯ ಮಾರುಕಟ್ಟೆಯ ಸ್ಥಿರತೆಯನ್ನೂ ಜೊತೆಯಲ್ಲಿ ಆರ್ಥಿಕ ಸ್ಥೈರ್ಯವನ್ನೂ ನೀಡಿದ್ದವು.

ಸಾವಿರಾರು ಕೋಟಿಗಳ ಬೃಹತ್ ಉದ್ಯಮಿಯಾಗಿದ್ದ ಸಿದ್ದಾರ್ಥ ಅಷ್ಟೇ ಸರಳ ವ್ಯಕ್ತಿಯೂ ಆಗಿದ್ದರು. ನಮ್ಮೂರಿನ ಸುತ್ತಮತ್ತ ಅವರ  ಹಲವಾರು ತೋಟಗಳಿದ್ದವು. ಅನೇಕ ಸಾರ್ವಜನಿಕ ಕಾರ್ಯಗಳಿಗೆ ಅವರು ನಿರಂತರವಾಗಿ ಸಹಾಯ ಮಾಡಿದ್ದಾರೆ.

ಕುಪ್ಪಳಿಯಲ್ಲಿನ ಕವಿಶೈಲದ ಕುವೆಂಪು ಮತ್ತು ತೇಜಸ್ವಿ ಸ್ಮಾರಕಗಳ ನಿರ್ಮಾಣದಲ್ಲಿ ಲಕ್ಷಾಂತರ ರೂಗಳ ಕೊಡುಗೆ ಮಾತ್ರವಲ್ಲ ಇತರ ಸಹಾಯಗಳನ್ನೂ ಮಾಡಿದ್ದಾರೆ. ಸಿದ್ದಾರ್ಥರ ಬೆಂಬಲವಿಲ್ಲದಿದ್ದರೆ ಕಲಾವಿದ ಕೆ.ಟಿ.ಶಿವಪ್ರಸಾದರ ಅದ್ಭುತ ಶಿಲ್ಪ ಕಲಾ ನಿರ್ಮಾಣಗಳು ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ.

ತೇಜಸ್ವಿ ಸ್ಮಾರಕ, ಕುಪ್ಪಳಿ
ಕುವೆಂಪು ಸ್ಮಾರಕ ಕುಪ್ಪಳಿ

ನಾವು ಹಾನುಬಾಳಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಿದಾಗಲೂ ಅಷ್ಟೇ “ಗುಡ್ ಕಾಫಿ ನೆಲದಲ್ಲಿ ಇವೆಲ್ಲ ಆಗಬೇಕು ಕಣ್ರಿ” ಎಂದು  ಹೇಳಿ ಹಣ ಸಹಾಯ ಮಾಡಿದ್ದರು.

ಇಷ್ಟು ವರ್ಷಗಳ ನಂತರ ನಾನಿದನ್ನು ಬರೆಯುತ್ತಿರುವ ವೇಳೆಗೆ, ಸಿದ್ದಾರ್ಥರು ಇಲ್ಲ. ಅವರು ಕಟ್ಟಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಹೋರಾಟವನ್ನು ಅವರ ಕುಟುಂಬದವರು ನಡೆಸುತ್ತಿದ್ದಾರೆ.

ಸಿದ್ದಾರ್ಥ ಹೆಗಡೆಯವರರಿಗೆ ಸ್ವಯಂ ಪ್ರೇರಣೆಯಿಂದ ರಸ್ತೆಗಳಲ್ಲಿ ನಿಂತು ಶ್ರದ್ಧಾಂಜಲಿ ಅರ್ಪಿಸುತ್ರಿರು ಕಾಫಿ ಬೆಳೆಗಾರರು, ಸಕಲೇಶಪುರ ತಾಲ್ಲೂಕಿನ ಹಾನುಬಾಳು ನಲ್ಲಿ

ಕೊಮಾರ್ಕ್ ಸಂಸ್ಥೆಯೂ ನಾಮಾವಶೇಷ ಸ್ಥಿತಿಯಲ್ಲಿದೆ. (ಅದನ್ನು ಮುಂದೆ ಬರೆಯುತ್ತೇನೆ).

ಸಿದ್ಧಾರ್ಥರ ದುರಂತದಲ್ಲಿ ಮುಕ್ತಾಯವಾದ ಬದುಕನ್ನು ನೋಡಿದಾಗ ಗಿರೀಶ್ ಕಾರ್ನಾಡರ ನಾಟಕದ ಸಾಲುಗಳು ನೆನಪಿಗೆ ಬರುತ್ತವೆ. ಅವರ ತುಘಲಕ್ ನಾಟಕದ ತುಘಲಕ್ ಪಾತ್ರದ ಮಾತುಗಳಿವು.

“ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯುವುದು ಹೇಗೆ ?”

ಚರಿತ್ರೆಯ ತುಘಲಕ್ ಹುಚ್ಚು ದೊರೆಯೆಂದು ಖ್ಯಾತನಾದವ, ಕಾರ್ನಾಡರ ತುಘಲಕ್ ಕನಸುಗಾರ, ತನ್ನ ಕಾಲವನ್ನು ಮೀರಿ ಮುಂದೋಡಿದವ. ಅಪಾರ ಬುದ್ಧಿವಂತ. ಜಾಗತೀಕರಣದ ಚಿಮ್ಮು ಹಲಗೆಯನ್ನೇರಿ ದಿಗಂತಕ್ಕೆ ಜಿಗಿದ ಸಿದ್ಧಾರ್ಥ ಅದೇ ಜಾಗತೀಕರಣದ ಮಾರಿಸುಳಿಗೆ ಬಲಿಯಾದರೇ? ಸಿದ್ಧಾರ್ಥರ ತಪ್ಪು ಸರಿಗಳೇನೇ ಇರಲಿ. ಅವರು ದುರಂತವಪ್ಪಿರಲಿ… ಕಾಫಿ ಬೆಳೆಗಾರರು ಅಂದಿಗೂ ಇಂದಿಗೂ ಸಿದ್ಧಾರ್ಥ ತಮ್ಮವನೆಂದು ಎದೆಯಲ್ಲಿಟ್ಟುಕೊಂಡಿದ್ದಾರೆ… ಅಲ್ಲಿ ಸಿದ್ಧಾರ್ಥ ಚಿರಸ್ಥಾಯಿ.

ಕೊಮಾರ್ಕ್ ನ ವ್ಯವಹಾರಗಳು ಚೆನ್ನಾಗಿ ನಡೆದು ಮೊದಲಿನ ಎರಡು ವರ್ಷಗಳಲ್ಲಿ ಕೋಟ್ಯಂತರ ಲಾಭ ಗಳಿಸಿತ್ತು. ಭಾರತೀಯ ಕಾಫಿ ಮಾರುಕಟ್ಟೆಯ ಮುಂದಾಳುವಾಗಿ ಕೊಮಾರ್ಕ ಸಂಸ್ಥೆ ಹೊರಹೊಮ್ಮಿತ್ತು.

ಕೊಮಾರ್ಕ್ ನ ನಿರ್ದೇಶಕರುಗಳಲ್ಲಿ ಈಗ ಸಂಸ್ಥೆ ಹೊಸ ಹೊಸ ವಿಸ್ತರಣೆಗೆ ಸಂದರ್ಭ ಬಂದಿದೆ ಅನ್ನಿಸತೊಡಗಿತ್ತು.  ಅದರ ಮೊದಲ ಹೆಜ್ಜೆಯಾಗಿ ಅಮುಲ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಅದರ ಮೂಲಕ ಕಾಫಿ ಪುಡಿ ಮಾರಾಟವನ್ನು ಪ್ರಾರಂಭಿಸುವ ಉದ್ದೇಶವಿತ್ತು. ಅಮುಲ್ ಕೂಡಾ ಒಂದು ಸಹಕಾರಿ ಸಂಸ್ಥೆಯಾದದ್ದರಿಂದ ಇದು ಸರಿಯಾದ ಕ್ರಮವೂ ಆಗಿತ್ತು. ಆ ಸಮಯದಲ್ಲೇ ಅಮುಲ್ ಸಂಸ್ಥೆಗೆ ದೇಶಾದ್ಯಂತ ಒಂದು ಲಕ್ಷದಷ್ಟು ಮಾರಾಟ ಮಳಿಗೆಗಳಿದ್ದವು. ಇದು ಯಶಸ್ವಿಯಾದರೆ ದೇಶದ ಆಂತರಿಕ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಸಾಧ್ಯತೆ ಇತ್ತು. ಇದಕ್ಕೆ ಪೂರಕವಾಗಿ ಕೊಮಾರ್ಕ್ ಸಂಸ್ಥೆಯೇ ಒಂದು ಇನ್ಸ್ಟಂಟ್ ಕಾಫಿ ಪುಡಿ ಉದ್ಯಮವನ್ನೂ ಸ್ಥಾಪಿಸಲು ತೊಡಗುವುದೆಂದೂ ತೀರ್ಮಾನಿಸಿ ಆ ನಿಟ್ಟಿನಲ್ಲಿಯೂ ಪ್ರಯತ್ನಗಳು ಪ್ರಾರಂಭವಾದವು.

ಕೊಮಾರ್ಕ್ ನ ನಿರ್ದೇಶಕರುಗಳಾದ ಎನ್.ಎಂ.ಶಿವಪ್ರಸಾದ್, ಪ್ರದೀಪ್ ಕೆಂಜಿಗೆ, ನಂದೀಶ್ ಬಾಳ್ಳು ಮುಂತಾದವರಲ್ಲದೆ ಕಾಫಿ ಮಂಡಳಿಯ ಸದಸ್ಯರಾಗಿದ್ದು ಕೊಮಾರ್ಕ ಸಂಸ್ಥೆಗೆ ಸಲಹೆಗಾರರೂ ಆಗಿದ್ದ ಬಾಳ್ಳು ಜಗನ್ನಾಥ್ ಇವರೆಲ್ಲರೂ ರವೀಂದ್ರನಾಥರ ಜೊತೆಗೂಡಿ  ಈ ವಿಚಾರದಲ್ಲಿ ಗುಜರಾತ್, ದೆಹಲಿ, ಹೈದರಾಬಾದ್ ಮುಂತಾದ ಕಡೆಗಳಿಗೆ ಹಲವು ಸಲ  ಹೋಗಿ ಸರ್ವ ಸಿದ್ಧತೆ ನಡೆಸಿದರು. ಆದರೆ ಇವರೆಲ್ಲರಿಗೂ  ಅನಿರೀಕ್ಷಿತವಾದ ಆದರೆ ಎಲ್ಲರನ್ನೂ ಬೆಚ್ಚಿಬೇಳಿಸುವಂತಹ ವಿದ್ಯಮಾನಗಳು ಕೋಮಾರ್ಕ್ ಸಂಸ್ಥೆಯಲ್ಲಿ ನಡೆದು ಹೋಗಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Soddarth was never born with Golden spoon.He owned only 90 acres of plantation.By the turn of d century the empire was expanded – courtesy then CM of Karnataka.

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...