Homeಮುಖಪುಟಕಾಂಗ್ರೆಸ್ ಸೇರಲು ಡ್ರಗ್ಸ್, ಮದ್ಯಪಾನ, ಸಾರ್ವಜನಿಕ ವೇದಿಕೆಯಲ್ಲಿ ಪಕ್ಷವನ್ನು ಟೀಕಿಸುವುದು ನಿಷೇಧ

ಕಾಂಗ್ರೆಸ್ ಸೇರಲು ಡ್ರಗ್ಸ್, ಮದ್ಯಪಾನ, ಸಾರ್ವಜನಿಕ ವೇದಿಕೆಯಲ್ಲಿ ಪಕ್ಷವನ್ನು ಟೀಕಿಸುವುದು ನಿಷೇಧ

- Advertisement -
- Advertisement -

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆಯಲು ಬಯಸುವವರಿಗೆ ಕಾಂಗ್ರೆಸ್ ಹೊಸ ಷರತ್ತುಗಳನ್ನು ಘೋಷಿಸಿದೆ. ಸದಸ್ಯತ್ವ ಪಡೆಯಲು ಬಯಸುವವರು ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರುವುದನ್ನು ಘೋಷಿಸಬೇಕು ಎಂದಿದೆ.

ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಎಂದಿಗೂ ಟೀಕಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಘೋಷಿಸಿದೆ.

ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ನೋಂದಣಿ ಪತ್ರದಲ್ಲಿರುವ ಪ್ರಕಾರ, ಹೊಸದಾಗಿ ಸೇರ್ಪಡೆಯಾಗುವವರು ಕಾನೂನು ವ್ಯಾಪ್ತಿ ಮೀರಿ ಆಸ್ತಿ ಹೊಂದಿರುವುದಿಲ್ಲವೆಂದು ತಿಳಿಸಬೇಕು. ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ದೈಹಿಕ ಶ್ರಮದ ಕೆಲಸಗಳನ್ನು ಮಾಡಲೂ ಹಿಂಜರಿಯುವುದಿಲ್ಲ ಎಂದು ಘೋಷಿಸಬೇಕು.

ಇದನ್ನೂ ಓದಿ: ಕನ್ಹಯ್ಯ, ಜಿಗ್ನೇಶ್ ಮತ್ತು ಹಾರ್ದಿಕ್‌ ಮೇಲೆ ‘ಬಿಹಾರ ಕಾಂಗ್ರೆಸ್‌‌’ಗೆ ನಂಬಿಕೆ – RJD ಜೊತೆ ಮೈತ್ರಿಗೆ ಬ್ರೇಕ್

“ಇದು ನಮ್ಮ ಪಕ್ಷದ ಸಂವಿಧಾನದ ಭಾಗವಾಗಿದೆ. ಹೊಸ ಸದಸ್ಯರು ಸೇರಿದಂತೆ ಎಲ್ಲಾ ಕಾಂಗ್ರೆಸ್ ಸದಸ್ಯರು ಈ ಮಾನದಂಡಗಳನ್ನು ಅನುಸರಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.

ಕಾಂಗ್ರೆಸ್ ನವೆಂಬರ್ 1 ರಂದು ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದೆ. ಈ ಅಭಿಯಾನ ಮುಂದಿನ ವರ್ಷ ಮಾರ್ಚ್ 31 ರವರೆಗೆ ಮುಂದುವರಿಯುತ್ತದೆ. ಸದಸ್ಯತ್ವ ಅಭಿಯಾನದ ವಿಧಾನಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲು ಅಕ್ಟೋಬರ್ 26 ರಂದು ಸಭೆ ಕರೆಯಲಾಗಿದೆ.

ಕಾಂಗ್ರೆಸ್ ಸದಸ್ಯರಾಗಲು ಬಯಸುವವರಿಗೆ 10 ಅಂಶಗಳ ಪಟ್ಟಿ ಘೋಷಣೆ ಮಾಡಿದೆ.

“ನಾನು ಸರ್ಟಿಫೈಡ್ ಖಾದಿಯನ್ನು ಧರಿಸುವವನು. ನಾನು ಆಲ್ಕೊಹಾಲ್ಯುಕ್ತ ಪಾನೀಯಗಳು ಮತ್ತು ಮಾದಕವಸ್ತುಗಳಿಂದ ದೂರವಿರುತ್ತೇನೆ. ನಾನು ಯಾವುದೇ ರೂಪದಲ್ಲಿ ಸಾಮಾಜಿಕ ತಾರತಮ್ಯವನ್ನು ನಂಬುವುದಿಲ್ಲ, ಅದನ್ನು ತೊಡೆದು ಹಾಕಲು ಕೆಲಸ ಮಾಡುತ್ತೇನೆ. ನಾನು ಧರ್ಮ, ಜಾತಿಯ ಭೇದವಿಲ್ಲದ ಸಮಾಜವನ್ನು ನಂಬುತ್ತೇನೆ. ವರ್ಕಿಂಗ್ ಕಮಿಟಿಯಿಂದ ಸೂಚಿಸುವ ದೈಹಿಕ ಶ್ರಮ ಸೇರಿದಂತೆ ಕನಿಷ್ಠ ಕಾರ್ಯಗಳನ್ನು ನಿರ್ವಹಿಸುತ್ತೇನೆ. ಕಾನೂನು ವ್ಯಾಪ್ತಿ ಮೀರಿ ಆಸ್ತಿ ಹೊಂದಿರುವುದಿಲ್ಲವೆಂದು ಘೋಷಿಸುತ್ತೇನೆ” ಎಂಬ ಹಲವು ಅಂಶಗಳು ಪಟ್ಟಿಯಲ್ಲಿ ಇವೆ.


ಇದನ್ನೂ ಓದಿ: ಸಿಎಂ ‘ಬುರುಡೆ ಬೊಮ್ಮಾಯಿ’ ಬಿಜೆಪಿ ‘ಬಂಡಲ್’: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...