Homeಮುಖಪುಟಹಲ್ಲೆಗೊಳಗಾಗಿ ರಕ್ತ ಸುರಿಸುತ್ತಿದ್ದ ಘೋಷ್‌ ಮೇಲೆ ನಾಲ್ಕು ನಿಮಿಷದ ಅವಧಿಯಲ್ಲಿ 2 FIR!

ಹಲ್ಲೆಗೊಳಗಾಗಿ ರಕ್ತ ಸುರಿಸುತ್ತಿದ್ದ ಘೋಷ್‌ ಮೇಲೆ ನಾಲ್ಕು ನಿಮಿಷದ ಅವಧಿಯಲ್ಲಿ 2 FIR!

- Advertisement -
- Advertisement -

JNU ವಿದ್ಯಾರ್ಥಿಗಳ ಮೇಲೆ ಗುಂಡಾಗಳು ನಡೆಸಿದ ದಾಳಿಗೆ ಪೊಲೀಸರ ಸಹಕಾರವಿದೆ ಎಂಬ ಆರೋಪ ನಿಜವಾಗುವ ರೀತಿಯಲ್ಲಿ ದೆಹಲಿ ಪೊಲೀಸರು ವರ್ತಿಸುತ್ತಿದ್ದಾರೆ. ಹಲ್ಲೆಗೊಳಗಾಗಿ ರಕ್ತ ಸುರಿಸುತ್ತಿದ್ದ JNUSU ಅಧ್ಯಕ್ಷೆ ಆಯಿಶಾ ಘೋಷ್‌ ಮೇಲೆ ನಾಲ್ಕು ನಿಮಿಷದ ಅವಧಿಯಲ್ಲಿ 2 FIR ದಾಖಲಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಆಯಿಶಾ ಮೇಲಿನ ದೂರುಗಳು ಭಾನುವಾರ ರಾತ್ರಿಯೇ ದಾಖಲಾಗಿದ್ದರೂ ಮಂಗಳವಾರ ಬೆಳಿಗ್ಗೆಯವರೆಗೂ ಆ ಮಾಹಿತಿ ಹೊರಬಂದಿರಲಿಲ್ಲ.. ಆದರೆ ಯಾವಾಗ ದಾಳಿಕೋರರ ಬಂಧನವಾಗಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೋ ಆಗ ಪೊಲೀಸರು ಎಫ್‌ಐಆರ್‌ ಅನ್ನು ಬಹಿರಂಗಗೊಳಿಸಿದ್ದಾರೆ.

ಆಯಿಷೆ ಘೋಷ್ ಮತ್ತು ಇತರ ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಭಾನುವಾರ ರಾತ್ರಿ 8.39 ಕ್ಕೆ ಮತ್ತು  8.43 ಕ್ಕೆ ಕ್ಯಾಂಪಸ್‌ನಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊಡೆದು ಹಾಸ್ಟೆಲ್‌ಗಳನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಆ ಸಮಯದಲ್ಲಿ ಅವರು ಹಲ್ಲೆಗೊಳಗಾಗಿ ರಕ್ತ ಸುರಿಸುತ್ತಾ ಆಸ್ಪತ್ರೆಯ ಹಾದಿಯಲ್ಲಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಎಡ ಒಕ್ಕೂಟದ ವಿದ್ಯಾರ್ಥಿಗಳು ಎಬಿವಿಪಿ ಮೇಲೆ ದಾಳಿಯ ಆರೋಪ ಹೊರಿಸಿ ನೀಡಿರುವ ಹಲವರು ದೂರುಗಳನ್ನು ಒಟ್ಟುಗೂಡಿಸಿ ಒಂದೇ ದೂರು ದಾಖಲಿಸಿರುವ ಪೊಲೀಸರು ಯಾವೊಬ್ಬ ಎಬಿವಿಪಿಯ ಸದಸ್ಯನ ಹೆಸರನ್ನು ಹೆಸರಿಸದೇ ಅನಾಮಧೇಯರು ಎಂದು ಉಲ್ಲೇಖಸಿದ್ದಾರೆ.

ಐಶೆ ಮತ್ತು ಇತರ 26 ವಿದ್ಯಾರ್ಥಿಗಳ ಮೇಲೆ ಜನವರಿ 1 ಮತ್ತು 4 ರಂದು ಎರಡು ಬಾರಿ ವಿಶ್ವವಿದ್ಯಾಲಯದ ಸರ್ವರ್ ಕೊಠಡಿಯನ್ನು ಧ್ವಂಸಗೊಳಿಸಿದ ಆರೋಪ ಮತ್ತು ಚಳಿಗಾಲದ ಸೆಮಿಸ್ಟರ್‌ಗೆ ವಿದ್ಯಾರ್ಥಿಗಳ ನೋಂದಣಿ ಸಮಯದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ.

ವಿದ್ಯಾರ್ಥಿಗಳು “ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಅಪರಾಧದ ಉದ್ದೇಶದಿಂದ ವಿಶ್ವವಿದ್ಯಾನಿಲಯದ ಆಸ್ತಿಯನ್ನು ಅಕ್ರಮವಾಗಿ ಅತಿಕ್ರಮಿಸಿದ್ದಾರೆ. ಅವರು ಸರ್ವರ್‌ಗಳನ್ನು ಹಾನಿಗೊಳಿಸಿದರು ಮತ್ತು ಅದನ್ನು ನಿಷ್ಕ್ರಿಯಗೊಳಿಸಿದರು. ಅವರು ಫೈಬರ್ ಆಪ್ಟಿಕ್ ವಿದ್ಯುತ್ ಸರಬರಾಜುಗಳನ್ನು ಸಹ ಹಾನಿಗೊಳಿಸಿದರು ಮತ್ತು ಕೋಣೆಯೊಳಗಿನ ಬಯೋಮೆಟ್ರಿಕ್ ವ್ಯವಸ್ಥೆಗಳನ್ನು ಮುರಿದರು” ಎಂದು ವಿಶ್ವವಿದ್ಯಾಲಯವು ದೂರು ನೀಡಿತ್ತು.

ಮುಸುಕು ಧರಿಸಿದ್ದ ಗೂಂಡಾಗಳು ಎಬಿವಿಪಿಯವರೆ ಆಗಿದ್ದಾರೆ. ಅವರು ಕ್ಯಾಂಪಸ್‌ನಿಂದ ದಾಳಿಯ ನಂತರ ಹೊರಹೋಗಲು ಪೊಲೀಸರೇ ಸಹಕರಿಸಿದ್ದಾರೆ. ಹಲವು ಫೋಟೊ ಮತ್ತು ವಿಡಿಯೋಗಳಲ್ಲಿ, ವಾಟ್ಸಾಪ್‌ ಸ್ಕ್ರೀನ್‌ಶಾಟ್‌ಗಳಲ್ಲಿ ಅವರ ಹೆಸರು ಮತ್ತು ಮುಖವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಆದರೂ ಪೊಲೀಸರು ಪಕ್ಷಪಾತವಾಗಿ ವರ್ತಿಸುತ್ತಿದ್ದು ಅವರ ಬಂಧನಕ್ಕೆ ಮುಂದಾಗಿಲ್ಲ. ಒಂದು ರೀತಿಯಲ್ಲಿ ಆರೋಪಿಗಳಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು JNUSU ಉಪಾಧ್ಯಕ್ಷ ಸಾಕೇತ್‌ ಮೂನ್‌ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹಲ್ಲೆಗೆ ಒಳಗಾದವರ ಮೇಲೆಯೇ ದೂರು ದಾಖಲಿಸಿರುವುದು ಪೂರ್ವ ನಿಯೋಜಿತ ಸಂಚು.

  2. ದೇಶದ ಭವಿಷ್ಯವನ್ನು ರೂಪಿಸುವವರನು ನಾವು ಚುನಾಯಿಸಿದ ಕಾರಣ ಈ ರೀತಿ ದೇಶದ ನಾಗರಿಕರು ಈ ರೀತಿ ದುರಾಡಳಿತಕ್ಕೆ ಒಳಪಡಬೇಕಾಗುತ್ತದೆ ಎಂದರೆ ತಪ್ಪಾಗಲಾರದು ಜೈ ಭೀಮ್ ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...