Homeಮುಖಪುಟಉದಯ್‌ ಲಲಿತ್‌ ಮುಂದಿನ ಸಿಜೆಐ; ಜಸ್ಟೀಸ್‌ ಎನ್‌.ವಿ.ರಮಣ ಶಿಫಾರಸು

ಉದಯ್‌ ಲಲಿತ್‌ ಮುಂದಿನ ಸಿಜೆಐ; ಜಸ್ಟೀಸ್‌ ಎನ್‌.ವಿ.ರಮಣ ಶಿಫಾರಸು

- Advertisement -
- Advertisement -

ಜಸ್ಟಿಸ್ ಉದಯ್ ಯು ಲಲಿತ್ ಅವರು ಆಗಸ್ಟ್ 27ರಂದು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯವಾಗಿರುವ ಎನ್‌ವಿ ರಮಣ ಅವರು ಮುಂದಿನ ಸಿಜೆಐ ಸ್ಥಾನಕ್ಕೆ ಲಲಿತ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ.

ರಮಣ ಅವರು ಬುಧವಾರದಂದು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು ಮುಂದಿನ ಸಿಜೆಐ ಆಗಲು ಲಲಿತ್ ಅವರನ್ನು ಹೆಸರಿಸಿದ್ದಾರೆ.

ನ್ಯಾಯಮೂರ್ತಿ ಎಸ್‌.ಎಂ.ಸಿಕ್ರಿ ಅವರ ನಂತರದಲ್ಲಿ ವಕೀಲರ ವಿಭಾಗದಿಂದ ಮೇಲ್ದರ್ಜೆಗೇರಿ ಸಿಜೆಐ ಆಗುತ್ತಿರುವ ಎರಡನೇ ನ್ಯಾಯಾಮೂರ್ತಿ ಎಂಬ ಹೆಗ್ಗಳಿಕೆಗೆ ಲಲಿತ್‌ ಪಾತ್ರರಾಗುತ್ತಿದ್ದಾರೆ. ಸಿಕ್ರಿ ಅವರು 1971 ಮತ್ತು 1973 ರ ನಡುವೆ ಸಿಜೆಐ ಆಗಿದ್ದರು. ಲಲಿತ್ ಅವರು ಆಗಸ್ಟ್ 2014ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಂಪ್ರದಾಯದಂತೆ, ಕೇಂದ್ರ ಕಾನೂನು ಸಚಿವಾಲಯವು ಸಿಜೆಐ ನಿವೃತ್ತಿಯ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಮುಖ್ಯನ್ಯಾಯಮೂರ್ತಿಗೆ ಕೋರಿಕೆ ಪತ್ರ ಬರೆಯುತ್ತದೆ. ಹುದ್ದೆಯಲ್ಲಿರುವವರು ನಿವೃತ್ತಿಗೆ 30 ದಿನಗಳ ಮೊದಲು ಶಿಫಾರಸುಗಳನ್ನು ಸಚಿವಾಲಯಕ್ಕೆ ಕಳುಹಿಸುತ್ತಾರೆ. ಸಾಂಪ್ರದಾಯಿಕವಾಗಿ, ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಸಿಜೆಐ ಆಗಿ ನೇಮಿಸಲಾಗುತ್ತದೆ.

1993ರಲ್ಲಿ ಎರಡನೇ ನ್ಯಾಯಾಧೀಶರ ಪ್ರಕರಣದ ಅನ್ವಯ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಸಿಜೆಐ ಆಗಿ ನೇಮಿಸಲಾಗುತ್ತದೆ.

ಕೇಂದ್ರ ಕಾನೂನು ಸಚಿವರು ಸೂಕ್ತ ಸಮಯದಲ್ಲಿ, ಮುಂದಿನ ಸಿಜೆಐ ನೇಮಕಕ್ಕಾಗಿ ನಿರ್ಗಮಿಸಲಿರುವ ಮುಖ್ಯ ನ್ಯಾಯಮೂರ್ತಿಯವರನ್ನು ಕೋರುತ್ತಾರೆ. ಸಿಜೆಐ ಶಿಫಾರಸನ್ನು ಸ್ವೀಕರಿಸಿದ ನಂತರ ಸಚಿವರು, ನೇಮಕಾತಿ ವಿಷಯದಲ್ಲಿ ರಾಷ್ಟ್ರಪತಿಯವರಿಗೆ ಸಲಹೆ ನೀಡುವ ಪ್ರಧಾನಿಯವರಿಗೆ ಶಿಫಾರಸ್ಸನ್ನು ತಿಳಿಸುತ್ತಾರೆ.

ಈ ಬಾರಿ ಕಾನೂನು ಸಚಿವಾಲಯವು ರಮಣ ಅವರ ಶಿಫಾರಸನ್ನು ಕೋರಿ ಪತ್ರವನ್ನು ಬರೆಯುವಲ್ಲಿ ವಿಳಂಬ ಮಾಡಿತ್ತು. ಹೀಗಾಗಿ ಲಲಿತ್ ಅವರ ಹೆಸರನ್ನು ಶಿಫಾರಸ್ಸು ಮಾಡುವಲ್ಲಿಯೂ ತಡವಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...