ಯುಪಿ: ಮೂರು ಗಂಟೆ ಕಾದರೂ ದಾಖಲಿಸದ ಆಸ್ಪತ್ರೆ, ಹೆತ್ತವರ ಕಣ್ಣು ಮುಂದೆ 5 ವರ್ಷದ ಬಾಲಕಿ ಸಾವು | NaanuGauri
PC: NDTV

ಡೆಂಗ್ಯೂ ಜ್ವರ ಬಂದ ತಮ್ಮ ಐದು ವರ್ಷದ ಮಗಳನ್ನು ಎತ್ತಿ ಆಸ್ಪತ್ರೆಯೊಳಗೆ ಮೂರು ಗಂಟೆ ಅಲೆದಾಡಿದರೂ, ಚಿಕಿತ್ಸೆ ಸಿಗದೆ ಹೆತ್ತರವರ ಕಣ್ಣ ಮುಂದೆಯೆ ಬಾಲಕಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಫಿರೋಜಾಬಾದ್‌ನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿ ಮಾಡಲು ಆಸ್ಪತ್ರೆಗೆ ತೆರಳಿದ್ದ ಎನ್‌ಡಿಟಿವಿ ತಂಡವು ಈ ದುರಂತ ಘಟನೆಯನ್ನು ಕಂಡಿದೆ ಎಂದು ಅದು ವರದಿ ಮಾಡಿದೆ.

ಸವನ್ಯ ಗುಪ್ತಾ ಎಂಬ ಐದು ವರ್ಷದ ಬಾಲಕಿಯನ್ನ ಅವರ ಹೆತ್ತವರು ಬೆಳಿಗ್ಗೆ 8 ಗಂಟೆಗೆ ಆಸ್ಪತ್ರೆಗೆ ಕರೆತಂದಿದ್ದರು. ಮಧ್ಯಾಹ್ನದ ವರೆಗೆ ಕಾಯಿಸಿ ಮಧ್ಯಾಹ್ನದ ವೇಳೆಗೆ ಅವರನ್ನು ದಾಖಲಿಸಲಾಯಿತು.  ಆದರೆ ದಾಖಲಾದ ಕೂಡಲೇ ಬಾಲಕಿಯು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಗುಂಪು ಹಲ್ಲೆ – ಯುಪಿಯಲ್ಲಿ 22 ವರ್ಷದ ಮುಸ್ಲಿಂ ಯುವಕ ಸಾವು

“ನಮಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ನನ್ನ ಸಹೋದರಿ ಸುರಕ್ಷಿತವಾಗಿರುತ್ತಿದ್ದಳು. ನಾವು ಆಕೆಯ ಸ್ಥಿತಿಯ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದೆವು ಆದರೆ ಅವರು ನಮ್ಮ ಮನವಿಗೆ ಕಿವಿಗೊಡಲಿಲ್ಲ” ಎಂದು ಬಾಲಕಿಯ ಸಹೋದರ ಹೇಳಿದ್ದಾರೆ.

ಬಾಲಕಿಯ ದೇಶದಲ್ಲಿ ಉಷ್ಣತೆಯ ಹಚ್ಚಿದ್ದರೂ ಆಸ್ಪತ್ರೆ ಮಗುವನ್ನು ದಾಖಲಿಸಲು ನಿರಾಕರಿಸಸಿತ್ತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. “ವೈದ್ಯರು ಏನನ್ನೂ ಮಾಡಲಿಲ್ಲ. ಅವರಿಗೆ ಹಣ ಮಾತ್ರ ಬೇಕು” ಎಂದು ಮೃತ ಮಗುವಿನ ಇನ್ನೊಬ್ಬ ಸಂಬಂಧಿ ಹೇಳಿದ್ದಾರೆ.

ಡೆಂಗ್ಯೂಗೆ ಈ ತಿಂಗಳ ಆರಂಭದಲ್ಲಿ ಫಿರೋಜಾಬಾದ್‌ನಲ್ಲಿ 45 ಮಕ್ಕಳು ಸೇರಿದಂತೆ 53 ಜನರು ಸಾವನ್ನಪ್ಪಿದ್ದು ವರದಿಯಾಗಿತ್ತು. ಅಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ರೋಗಕ್ಕೆ ತುತ್ತಾದವರು ಮತ್ತು ಮಕ್ಕಳ ಪೋಷಕರ ದೃಶ್ಯಗಳು ಕರುಣಾಜನಕವಾಗಿದ್ದು, ಜ್ವರದಿಂದ ಬಳಲುತ್ತಿರುವ ಮಕ್ಕಳ ಚೇತರಿಕೆಗೆ ಪೋಷಕರು ಪ್ರಾರ್ಥಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಉತ್ತರ ಪ್ರದೇಶ: ಫಿರೋಜಾಬಾದ್‌ನಲ್ಲಿ ಶಂಕಿತ ಡೆಂಗ್ಯೂಗೆ 45 ಮಕ್ಕಳು ಸೇರಿ 53 ಮಂದಿ ಬಲಿ

ಸರ್ಕಾರ ಈ ಬಗ್ಗೆ ತನಿಖೆಗೆ ಸೂಚಿಸಿತ್ತಾದರೂ, ಡೆಂಗ್ಯೂವನ್ನು ಸರ್ಕಾರ ಕಳಪೆಯಾಗಿ ನಿರ್ವಹಣೆ ಮಾಡಿರುವುದರ ವಿರುದ್ದ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಳೆದ ವಾರವಷ್ಟೇ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳ ಕೊರತೆಯಿಂದ ಅನೇಕ ರೋಗಿಗಳು ಸಾಯುತ್ತಿದ್ದಾರೆ ಎಂದು ಹೇಳಿದ್ದರು.

ರಾಜ್ಯದ ರಾಜಧಾನಿ ಲಕ್ನೋದಿಂದ ಸುಮಾರು 300 ಕಿಮೀ ದೂರದಲ್ಲಿರುವ ಫಿರೋಜಾಬಾದ್ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಡೆಂಗ್ಯೂ ಮತ್ತು ಮಾರಣಾಂತಿಕ ವೈರಲ್ ಜ್ವರದಿಂದ ಹೋರಾಡುತ್ತಿದೆ. ಇದುವರೆಗೂ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಕಳೆದ 48 ಗಂಟೆಗಳಲ್ಲಿ ಜಿಲ್ಲೆಯೊಂದರಲ್ಲೇ 16 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ ಎಂದು ವರದಿಯಾಗಿವೆ.

ಪಿರೋಜಾಬಾದ್‌ ಮಾತ್ರವಲ್ಲದೆ ನೆರೆಯ ಮಥುರಾ, ಆಗ್ರಾ ಮತ್ತು ಮೈನ್‌ಪುರಿ ಜಿಲ್ಲೆಗಳಲ್ಲೂ ಸೋಂಕು ಕಂಡುಬಂದಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ಯುಪಿ – 68 ವರ್ಷದ ವೃದ್ಧೆಯನ್ನು ಥಳಿಸಿ ಕೊಂದ ದರೋಡೆಕೋರರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here