Homeಮುಖಪುಟಉತ್ತರಕಾಶಿ: 'ಪತ್ರಕರ್ತ', ಹಿಂದುತ್ವ ಸಂಘಟನೆಗಳು ಅಪಹರಣ ಪ್ರಕರಣವನ್ನು 'ಲವ್ ಜಿಹಾದ್'ಗೆ ತಿರುಗಿಸಿದ್ದು ಹೇಗೆ?

ಉತ್ತರಕಾಶಿ: ‘ಪತ್ರಕರ್ತ’, ಹಿಂದುತ್ವ ಸಂಘಟನೆಗಳು ಅಪಹರಣ ಪ್ರಕರಣವನ್ನು ‘ಲವ್ ಜಿಹಾದ್’ಗೆ ತಿರುಗಿಸಿದ್ದು ಹೇಗೆ?

- Advertisement -
- Advertisement -

ಕಳೆದ ತಿಂಗಳು 14 ವರ್ಷದ ಹಿಂದೂ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಿಸಲು ಪ್ರಯತ್ನಿಸಿದರು ಎಂಬ ಆರೋಪದಿಂದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಕೋಮು ಉದ್ವಿಗ್ನತೆಗಳು ಉದ್ಭವಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26ರಂದು ಜಿತೇಂದ್ರ ಸೈನಿ ಮತ್ತು ಉಬೇದ್ ಖಾನ್ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಆ ನಂತರ, ಸ್ಥಳೀಯ ಹಿಂದುತ್ವ ಗುಂಪುಗಳು ಇದು “ಲವ್ ಜಿಹಾದ್” ಪ್ರಕರಣ ಎಂದು ಆರೋಪಿಸಿದರು.

ಹಿಂದುತ್ವ ಗುಂಪುಗಳು ರ್ಯಾಲಿಯನ್ನು ಮುನ್ನಡೆಸಿ, ಅಂಗಡಿಗಳನ್ನು ಧ್ವಂಸ ಮಾಡಿದರು ಮತ್ತು ಮುಸ್ಲಿಂ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಲಾಯಿತು. ಆನಂತರ ಕನಿಷ್ಠ 41 ಮುಸ್ಲಿಂ ಕುಟುಂಬಗಳು ಪಟ್ಟಣವನ್ನು ತೊರೆದಿದ್ದಾರೆ. ಹಿಂದುತ್ವ ಸಂಘಟನೆಗಳು ಉದ್ದೇಶಪೂರ್ವಕವಾಗಿ ಘಟನೆಗೆ “ಕೋಮು ಬಣ್ಣ” ನೀಡಿ “ಲವ್ ಜಿಹಾದ್” ಎಂದು ಹೇಳಿಕೊಂಡಿವೆ ಎಂದು ಅಪ್ರಾಪ್ತ ಬಾಲಕಿಯ ಮಾವ ರಾಕೇಶ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಮೊದಲು “ಲವ್ ಜಿಹಾದ್” ದೃಷ್ಟಿಕೋನ ನೀಡಿದ್ದು “ಸ್ಥಳೀಯ ಪತ್ರಕರ್ತ” ಎಂದು ರಾಕೇಶ್ ದೂಷಿಸಿದ್ದಾರೆ. ”ತನ್ನ ಸೊಸೆ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ “ನಕಲಿ ದೂರು” ದಾಖಲಿಸುವಂತೆ ಈ ಪತ್ರಕರ್ತ ಒತ್ತಾಯಿಸಿದ್ದನು. ಈ ಆರೋಪದ ನಕಲಿ ದೂರಿನಲ್ಲಿ ಖಾನ್ ಮಾತ್ರ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ, ಮತ್ತೋರ್ವ ಆರೋಪಿ ಸೈನಿ ಅಲ್ಲ ಹೆಸರು ಕೈಬಿಡಲಾಗಿದೆ” ಎಂದು ಹೇಳಿದರು.

ಪತ್ರಕರ್ತನು ತನ್ನ ಸುದ್ದಿ ವೆಬ್‌ಸೈಟ್‌ನಲ್ಲಿ “ಲವ್ ಜಿಹಾದ್” ದೃಷ್ಟಿಕೋನವನ್ನು ಕೊಟ್ಟು ನಕಲಿ ದೂರನ್ನು “ಸೋರಿಕೆ” ಮಾಡಿದನು. ಆ ಬಳಿಕ ಹಿಂದುತ್ವ ಗುಂಪುಗಳು ಅದನ್ನು ಕೋಮು ಉದ್ವಿಗ್ನತೆಗಳು ಉಂಟುಮಾಡಲು ಬಳಸಿಕೊಂಡರು ಎಂದು ರಾಕೇಶ್ ತಿಳಿಸಿದ್ದಾರೆ.

ಏನಿದು ಪ್ರಕರಣ?

ಅಪಹರಣ ಯತ್ನ: 14 ವರ್ಷದ ಅಪ್ರಾಪ್ತ ಬಾಲಕಿಯ ಪೋಷಕರು ಚಿಕ್ಕವಳಿದ್ದಾಗ ಮೃತಪಟ್ಟಿದ್ದರು. ಅವಳು ಸೋದರಮಾವ ರಾಕೇಶ್ ಕುಟುಂಬದೊಂದಿಗೆ ಪುರೋಲಾದಲ್ಲಿ ವಾಸಿಸುತ್ತಾಳೆ. ರಾಕೇಶ್ ಸರ್ಕಾರಿ ಶಾಲಾ ಶಿಕ್ಷಕ. ಸ್ಥಳೀಯರು ಅವರನ್ನು ಮಾಸ್ಟರ್ಜಿ ಎಂದು ಕರೆಯುತ್ತಾರೆ. ನ್ಯೂಸ್‌ಲಾಂಡ್ರಿ ಅವರ ಮನೆಗೆ ಭೇಟಿ ನೀಡಿದಾಗ, ಅವರು ಆರಂಭದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದರು – ಅವರು ”ಇಂದು ಪುರೋಲಾದಲ್ಲಿ ನಡೆಯುತ್ತಿರುವ ಕೋಮು ಉದ್ವಿಗ್ನತೆಗಳಿಗೆ ಮಾಧ್ಯಮವೇ ಕಾರಣ” ಎಂದು ಆರೋಪಿಸಿದರು.

”ಪತ್ರಕರ್ತರು ಮತ್ತು ಹಿಂದುತ್ವ ಸಂಘಟನೆಗಳು ನನ್ನ ಜೀವನವನ್ನು ಕಷ್ಟಕರವಾಗಿಸಿದೆ” ಎಂದು ಅವರು ಹೇಳಿದರು. ”ನಾನು ಒಂದು ತಿಂಗಳಿನಿಂದ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಪೊಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾರೆ ಆದರೆ ನನ್ನ ಭುಜದ ಮೇಲೆ ಬಂದೂಕು ಇಟ್ಟುಕೊಂಡು ಹಿಂದೂ-ಮುಸ್ಲಿಂ ಎಂಬ ನಾಟಕವಾಡುತ್ತಿದ್ದಾರೆ” ಎಂದು ರಾಕೇಶ್ ತಮ್ಮ ಅಳಲು ತೋಡಿಕೊಂಡರು.

”ಮೇ 26ರಂದು ಮಧ್ಯಾಹ್ನ 3 ಗಂಟೆಗೆ ತನಗೆ ಫೋನ್ ಕರೆ ಬಂದಿತ್ತು. ನನ್ನ ಸೊಸೆಯನ್ನು ಇಬ್ಬರು ನೌಗಾಂವ್‌ಗೆ ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರೋ ಕರೆ ಮಾಡಿದ್ದರು. ಆ ಸಮಯದಲ್ಲಿ ನಾನು ಅಲ್ಲಿ ಇರಲಿಲ್ಲ ಆದ್ದರಿಂದ ನಾನು ತಕ್ಷಣ ನನ್ನ ಸ್ನೇಹಿತ ಅಜಯ್ ಗೆ ಕರೆ ಮಾಡಿ ತ್ವರಿತವಾಗಿ ಸ್ಥಳಕ್ಕೆ ತಲುಪಲು ಹೇಳಿದೆ” ಎಂದು ಘಟನೆಯನ್ನು ವಿವರಿಸಿದರು.

ಇದನ್ನೂ ಓದಿ: ಉತ್ತರಾಖಂಡ: ಮುಸ್ಲಿಂ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಬೇಕು; ಬೆದರಿಕೆಯ ಪೋಸ್ಟರ್‌ ಅಂಟಿಸಿದ ಕಿಡಿಗೇಡಿಗಳು

ರಾಕೇಶ್ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿ ”ಬಿಜೆಪಿ, ಬಜರಂಗದಳ ಮತ್ತು ವಿಎಚ್‌ಪಿ”ಯ ಕಾರ್ಯಕರ್ತರು ಇದ್ದರು. ಅವರ ಜೊತೆಗೆ ತನ್ನ ಸೊಸೆ ಇದ್ದಳು. ಆಗ ಅವರೆಲ್ಲರೂ ಖಾನ್ ಮತ್ತು ಸೈನಿ ಓಡಿಹೋದರು ಎಂದು ಹೇಳಿದರು.

”ಆರೋಪಿಗಳು ಪುರೋಲಾ ಬಜಾರ್‌ನಲ್ಲಿ ಅಂಗಡಿಕಾರರಾಗಿದ್ದಾರೆ. ನಾವು ನನ್ನ ಸೊಸೆಯೊಂದಿಗೆ ಅಂಗಡಿಗೆ ಹೋಗಿದ್ದೆವು. ನೀವು ಏನು ಮಾಡಿದ್ದೀರಿ, ಅದಕ್ಕೆ ಕ್ಷಮೆಯಾಚಿಸಿ, ಪೊಲೀಸರಿಗೆ ಯಾವುದೇ ದೂರು ನೀಡುವುದಿಲ್ಲ” ಎಂದು ಹೇಳಿದೆ.

”ಉಬೇದ್ ಮತ್ತು ಜಿತೇಂದ್ರ ನನ್ನ ಸೊಸೆಯನ್ನು ಅಪಹರಿಸುವ ಉದ್ದೇಶದಿಂದ ಕರೆದುಕೊಂಡು ಹೋಗುತ್ತಿದ್ದರು. ಆದರೂ, ನಾನು ಅವರನ್ನು ಕ್ಷಮಿಸುತ್ತಿದ್ದೆ ಏಕೆಂದರೆ ನನಗೆ ಉಬೇದ್ ಪರಿಚಿತ ವ್ಯಕ್ತಿಯಾಗಿದ್ದಾರೆ. ಅವರ ಅಂಗಡಿಯಿಂದಲೇ ಸರಕುಗಳನ್ನು ಖರೀದಿಸುತ್ತಿದ್ದೆ” ಎಂದು ಹೇಳಿದರು.

”ನಾನು ಅಷ್ಟೆಲ್ಲಾ ಹೇಳಿದರೂ ಕೂಡ ಆ ಇಬ್ಬರೂ ಕ್ಷಮೆ ಕೇಳಲಿಲ್ಲ ಮತ್ತು ಸೊಕ್ಕುತನ ತೋರಿದರು. ಹೀಗಾಗಿ, ನಾನು ದೂರು ನೀಡಲು ನಿರ್ಧರಿಸಿ ಪುರೋಲಾ ಪೊಲೀಸ್ ಠಾಣೆಗೆ ತೆರಳಿದೆ” ಎಂದರು.

ಪೊಲೀಸ್ ಠಾಣೆಯಲ್ಲಿ, ರಾಕೇಶ್ ಅವರನ್ನು ಸ್ಥಳೀಯ ಪತ್ರಕರ್ತ ಅನಿಲ್ ಅಸ್ವಾಲ್ ಎಂಬವರು ಈ ಘಟನೆಗೆ ‘ಲವ್ ಜಿಹಾದ್’ ಕೋನವನ್ನು ನೀಡಲು ಪ್ರೇರೇಪಿಸಿದರು. ಅಷ್ಟೇ ಅಲ್ಲದೇ ಅನಿಲ್ ಅವರು ನಕಲಿ ದೂರು ಪತ್ರವನ್ನು ನೀಡಿದ್ದರು. ಈ “ನಕಲಿ” ಪತ್ರದಲ್ಲಿ ಖಾನ್ ಹೆಸರು ಮಾತ್ರ ಹೆಸರಿಸಿದೆ, ಸೈನಿ ಹೆಸರಿರಲಿಲ್ಲ. ಅದು “ಅಪಹರಣ” “ವೇಶ್ಯಾವಾಟಿಕೆ” ಮತ್ತು “ಲವ್ ಜಿಹಾದ್” ಎಂದು ಆರೋಪಿಸಲಾಗಿತ್ತು.

ಅನಿಲ್ ಬಿಬಿಸಿ ಖಬರ್ ಎಂಬ ವೆಬ್‌ಸೈಟ್ ಅನ್ನು ನಡೆಸುತ್ತಿದ್ದಾರೆ – ಇದು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌(ಬಿಬಿಸಿ) ಜೊತೆಗೆ ಯಾವುದೇ ಸಂಬಂಧವಿಲ್. ಅನಿಲ್ ಅವರು ಆರ್‌ಎಸ್ಎಸ್ ಮತ್ತು ಎಬಿವಿಪಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ.

ಅನಿಲ್ ಕೊಟ್ಟ ನಕಲಿ ದೂರಿನಲ್ಲಿ ಏನಿದೆ?

”[ಖಾನ್] ಹಲವು ದಿನಗಳಿಂದ ಅರ್ಜಿದಾರರ (ರಾಕೇಶ್) ಸೊಸೆಯನ್ನು ಹಿಂಬಾಲಿಸುತ್ತಿದ್ದರು. ಎದುರು ಪಕ್ಷದವರು ಅತ್ಯಂತ ಕುತಂತ್ರದ ವ್ಯಕ್ತಿಯಾಗಿದ್ದು, ಅಪ್ರಾಪ್ತ ಬಾಲಕಿಯೊಂದಿಗೆ ಪರಾರಿಯಾಗುವುದು ಮತ್ತು ಅವಳನ್ನು ಮಾಂಸದ ವ್ಯಾಪಾರ(ವೇಶ್ಯಾವಾಟಿಕೆ)ಗೆ ತಳ್ಳುವುದು ಎದುರಿನವರ ಗುರಿಯಾಗಿದೆ. ಎದುರು ಪಕ್ಷದವರು ಎಷ್ಟು ಬುದ್ಧಿವಂತರು ಎಂದರೆ ಪ್ರತಿಪಕ್ಷಗಳು ಸಂತ್ರಸ್ತ ಬಾಲಕಿಯ ಹೆಸರನ್ನು ಅಂಕಿತ್ ಎಂದು ಹೇಳಿಕೊಂಡು ವಂಚಿಸುತ್ತಿವೆ. ಅರ್ಜಿದಾರರ ಸೊಸೆಯನ್ನು ಮನವೊಲಿಸುವ ಮೂಲಕ ದೊಡ್ಡ ಘಟನೆಯನ್ನು ಕಾರ್ಯಗತಗೊಳಿಸುವ ಪ್ರಯತ್ನದಂತೆ ತೋರುತ್ತಿದೆ. ಎದುರು ಪಕ್ಷದವರು, ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಲವ್ ಜಿಹಾದ್ ಮತ್ತು ಆಮಿಷಕ್ಕೆ ಒಳಪಡಿಸುವ ಮೂಲಕ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಳ್ಳುವ ಪಿತೂರಿಯಲ್ಲಿದ್ದರು. ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಮತ್ತು ತಕ್ಷಣ ಅವರನ್ನು ಬಂಧಿಸಲು ಮತ್ತು ಅಗತ್ಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ಹೇಳಿದೆ.

The ‘fake’ complaint on the left and the actual complaint on the right.

ರಾಕೇಶ್ ಅವರು ಈ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರು. ಅಂತಹ ಪ್ರಕರಣ ಇಲ್ಲದಿರುವಾಗ, ಯಾಕೆ ‘ಲವ್ ಜಿಹಾದ್’ ದೃಷ್ಟಿಕೋನಕ್ಕೆ ತಿರುಗಿಸಬೇಕು?… ಇತರ ಆರೋಪಿ ಜಿತೇಂದ್ರ ಸೈನಿ ಹೆಸರನ್ನು ಏಕೆ ಉಲ್ಲೇಖಿಸಲಾಗಿಲ್ಲ?” ಎಂದು ರಾಕೇಶ್ ಪ್ರಶ್ನಿಸಿದ್ದಾರೆ.

ಇನ್ನೂ ಈ ಬಗ್ಗೆ ನ್ಯೂಸ್‌ಲಾಂಡ್ರಿ ಜೊತೆ ಮಾತನಾಡಿರುವ ಪುರೋಲಾದ ಠಾಣೆಯ ಅಧಿಕಾರಿ ಖಾಜನ್ ಸಿಂಗ್ ಚೌಹಾನ್ ಅವರು, ”ಈ ಪತ್ರಕರ್ತ ತನ್ನ ನಕಲಿ ದೂರು ಪತ್ರವನ್ನು ಇಟ್ಟುಕೊಂಡು ರಾಕೇಶ್‌ನನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿರುವುದನ್ನು ನಾನು ನೋಡಿದ್ದೇನೆ. ಈ ಘಟನೆಯು ಲವ್ ಜಿಹಾದ್‌ಗೆ ಸಂಬಂಧಿಸಿಲ್ಲ ಎಂದು ಅವರು ಹೇಳಿದರು.

”ನಕಲಿ ದೂರಿನಲ್ಲಿ, ‘ಲವ್ ಜಿಹಾದ್’ ಎಂದು ಬರೆಯಲಾಗಿದೆ ಮತ್ತು ಉಬೇದ್ ಖಾನ್ ಸಂತ್ರಸ್ತೆಯೊಂದಿಗೆ ಅಂಕಿತ್ ಎಂದು ಮಾತನಾಡುತ್ತಿದ್ದರು ಎಂದು ಅದು ಹೇಳಿದೆ. ಆದರೆ ಇದು ಸುಳ್ಳು” ಎಂದು ಹೇಳಿದರು.

ರಾಕೇಶ್ ನಂತರ ತನ್ನದೇ ಆದ ದೂರಿನ ಪತ್ರವನ್ನು ಬರೆದು ನೀಡಿದರು. ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಸೈನಿ ಮತ್ತು ಖಾನ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪತ್ರಕರ್ತ ಅನಿಲ್ ನಂತರ ಒಂದು ಹೆಜ್ಜೆ ಮುಂದೆ ಹೋಗಿ ಬಿಬಿಸಿ ಖಬರ್‌ ಎನ್ನುವ ತನ್ನ ವೆಬ್ಸೈಟ್‌ನಲ್ಲಿ ಉತ್ತರಕಾಶಿಯಲ್ಲಿ “ಲವ್ ಜಿಹಾದ್” ಎಂದು ಸುದ್ದಿಗಳನ್ನು ಪ್ರಕಟಿಸಿದರು ಎಂದು ರಾಕೇಶ್ ಆರೋಪಿಸಿದರು.

”ಇಬ್ಬರನ್ನು ಲವ್ ಜಿಹಾದ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರಿಂದ ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ” ಎಂದು ಒಬ್ಬರು ಹೇಳಿದರು.

ಅನಿಲ್ ಅವರು ಈ ಸುದ್ದಿಗಳನ್ನು ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಫಾರ್ವರ್ಡ್ ಮಾಡಿದ್ದಾರೆ. ಇದರಿಂದ ಕೋಮು ಉದ್ವಿಗ್ನತೆ ಹೆಚ್ಚಾಯಿತು ಎಂದು ಹೇಳಿದರು.

ವಿಎಚ್‌ಪಿಯ ವೀರೇಂದ್ರ ಸಿಂಗ್ ರಾವತ್, ಬಿಜೆಪಿಯ ಪವನ್ ನೌಟಿಯಾಲ್, ಯುವ ಮೋರ್ಚಾ ಮಂಡಲ್‌ನ ದಿವಾಕರ್ ಉನಿಯಾಲ್ ಮತ್ತು ಪುರೋಲಾ ವ್ಯಾಪಾರಿ ಮಂಡಲದ ಪದಾಧಿಕಾರಿಗಳಾದ ಬ್ರಿಜ್ಮೋಹನ್ ಚೌಹಾಣ್ ಮತ್ತು ದೀಪಕ್ ನೌಟಿಯಾಲ್ ಸೇರಿದಂತೆ ಪುರೋಲಾದಲ್ಲಿನ ಹಲವು ಜನರು ಈ ಸುದ್ದಿಯನ್ನು ಎತ್ತಿಕೊಂಡರು. ಮೇ 27ರಂದು ಚೌಹಾಣ್ ಅವರು ಪುರೋಲಾ ವ್ಯಾಪಾರಿಗಳ ವಾಟ್ಸಾಪ್ ಗುಂಪಿನಿಂದ ಮುಸ್ಲಿಮರನ್ನು ತೆಗೆದುಹಾಕಿದರು. ಚೌಹಾಣ್ ಕೂಡ ಬಿಜೆಪಿ ಜೊತೆ ನಂಟು ಹೊಂದಿದ್ದಾರೆ.

The letter issued by the Purola Gram Pradhan Sangathan.

ಆನಂತರ ಈ ಸುದ್ದಿಯು ಹತ್ತಿರದ ಹಳ್ಳಿಗಳಿಗೂ ಪಸರಿಸಿತು. ಮೇ 28 ರಂದು, ಪುರೋಳ ಗ್ರಾಮ ಪ್ರಧಾನ ಸಂಘಟನೆಯ (ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ) ಅಧ್ಯಕ್ಷ ಪ್ರದೀಪ್ ರೈ ನೇತೃತ್ವದಲ್ಲಿ ಮೇ 29 ರಂದು ಪುರೋಳ ಮಾರುಕಟ್ಟೆಯನ್ನು ಮುಚ್ಚಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿ ಗ್ರಾಮ ಪ್ರಧಾನರಿಗೆ ಪತ್ರವನ್ನು ನೀಡಲಾಯಿತು.

ಈ ಮಧ್ಯೆ BBC ಖಬರ್‌ ವೆಬ್ಸೈಟ್‌ನಲ್ಲಿ, “ಪುರೋಲಾದಲ್ಲಿ ‘ಲವ್ ಜಿಹಾದ್’ ವಿರುದ್ಧದ ಪ್ರತಿಭಟನೆ” ಎಂದು ಮತ್ತೊಂದು ವರದಿಯನ್ನು ಪ್ರಕಟಿಸಿತು.

ಮೇ 29 ರ ಪ್ರತಿಭಟನೆಯಲ್ಲಿ ಕೋಪಗೊಂಡ ಜನಸಮೂಹವು ಮುಸ್ಲಿಮರು ನಡೆಸುತ್ತಿದ್ದ ಅಂಗಡಿಗಳನ್ನು ಧ್ವಂಸಗೊಳಿಸಿದರು. ಮುಸ್ಲಿಂ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನೆ ನಂತರ ಅನೇಕ ಮುಸ್ಲಿಂ ಕುಟುಂಬಗಳು ಊರುಬಿಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...