ದುನಿಯಾ ವಿಜಯ್ ಮತ್ತು ಅಮೂಲ್ಯ ಅಭಿನಯದ ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಟೈಮಲ್ಲಿ ವಿಲನ್ ಪಾತ್ರ ಮಾಡಿದ್ದ ಖಳನಟ ಅನಿಲ್ ಮತ್ತು ರಾಘವ್ ಉದಯ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು ನಿಮಗೆಲ್ಲಾ ಗೊತ್ತಿದೆ.

ಈ ಸಾವು ಅಚಾತುರ್ಯ ಮತ್ತು ಆಕಸ್ಮಿಕವಾಗಿ ಆದದ್ದು ಎಂದು ಹೇಳಿದರೂ, ಅಲ್ಲಿನ ಸನ್ನಿವೇಶ ಅದು ಸುಳ್ಳು ಎನ್ನುವಂತಿತ್ತು. ಈಜುಬರದ ಕಲಾವಿದರು ನಟನೆ ಮಾಡುವಾಗ ಅನಾಹುತ ನಡೆಯದಂತೆ ಎಚ್ಚರಿಕೆ ವಹಿಸಿ ಲೈಫ್ ಜಾಕೇಟ್, ಬೋಟು ಎಲ್ಲವನ್ನೂ ರೆಡಿ ಇಟ್ಟುಕೊಳ್ಳಬೇಕು. ಆದರೆ ಅವಾವು ಅಲ್ಲಿರಲಿಲ್ಲ. ಹಾಗಾಗಿ ಇದು ಸಿನಿಮಾದ ಪ್ರಮೋಷನ್ ಗೀಳಿಗೆ ಹೂಡಲಾಗಿದ್ದ ಖತರ್ನಾಕ್ ಪ್ಲಾನು ಎಂದು ಸಿನಿರಂಗವಷ್ಟೇ ಅಲ್ಲದೆ ಸಿನಿ ಪ್ರೇಕ್ಷಕರ ಅಂಗಳದಲ್ಲಿಯೂ ಗಾಸಿಪ್ ತರ ಹರಡಿತ್ತು.

ಈ ವಿಚಾರವಾಗಿ ತಾವರೆಕೆರೆ ಪೊಲೀಸ್ ಸ್ಟೇಷನ್‍ನಲ್ಲಿ ಸಿನಿಮಾದ 6 ಜನರ ಮೇಲೆ ಕೇಸು ದಾಖಲಾಗಿದ್ದು, ಚಿತ್ರದ ನಿರ್ಮಾಪಕ ಸುಂದರ್‌ಗೌಡ ಅವರನ್ನು ಎ-1 ಆರೋಪಿಯೆಂದು ದಾಖಲಿಸಲಾಗಿತ್ತು. ಆರನೇ ಆರೋಪಿಯಗಿದ್ದ ಹೆಲಿಕಾಪ್ಟರ್ ಪೈಲಟ್‍ನನ್ನು ಸಾಕ್ಷ್ಯಾಧಾರ ಕೊರತೆಯಿಂದ ಕೇಸಿನಿಂದ ಮುಕ್ತಗೊಳಿಸಲಾಗಿದೆ.

ವಿಷ್ಯ ಏನಂದ್ರೆ, ಸಿನಿಮಾಗಳ ಪ್ರಮೋಷನ್‍ಗಾಗಿ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಏನೆಲ್ಲಾ ಗಿಮಿಕ್‍ಗಳನ್ನ ಮಾಡೋಕು ಕೇರ್ ಮಾಡಲ್ಲ ಅನ್ನೋದು ಜಗಜ್ಜಾಹೀರಾಗಿರುವ ವಿಚಾರ. ಅಂತಹದರಲ್ಲಿ ಈ ಇಬ್ಬರು ಖಳನಟರ ಸಾವೂ ಒಂದು ಗಿಮಿಕ್ ಭಾಗವೇ ಇರಬಹುದು. ಇದು ನಿಜವೇ ಆದರೆ ಅದರಲ್ಲಿ ಮೈನ್ ರೋಲ್ ಪ್ರೊಡ್ಯೂಸರ್‌ದೆ ಆಗಿರುತ್ತೆ.

ಹಾಗಾಗಿಯೇ ಎಫ್‍ಐಆರ್ ಪಟ್ಟಿಯಲ್ಲಿ ಸುಂದರ್ ಹೆಸರು ಮೊದಲಿದೆ (ಎ1 ಆರೋಪಿ). ಹೀಗಿರುವಾಗ ಈ ಎಲ್ಲರೂ ತಮ್ಮ ಮೇಲಿರುವ ಆರೋಪವನ್ನು ಕೈಬಿಟ್ಟು ದೋಷಮುಕ್ತಗೊಳಿಸಬೇಕೆಂದು ರಾಮನಗರ ಸೆಷನ್ಸ್ ಕೋರ್ಟ್‍ನಲ್ಲಿ ಅಪೀಲು ಹಾಕಿದ್ದರು. ನ್ಯಾಯಾಧೀಶ ಸಿದ್ಧಲಿಂಗಪ್ರಭು ಅವರು ಆ ಅರ್ಜಿಯನ್ನು ವಜಾಗೊಳಿಸಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ ಸುಂದರ್‍ಗೆ ಅಲ್ಲಿಯೂ ಮಣೆ ಹಾಕಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ. ಐಪಿಸಿ ಸೆಕ್ಷನ್ 305(1) ಹಾಗೂ 308ರ ಅನ್ವಯ ಕೇಸು ಎದುರಿಸುತ್ತಿರುವ ಈ ಐವರು ಗಿಮಿಕ್ ಮಾಡಿ ಸಿನಿಮಾ ಪ್ರಮೋಟ್‍ಗಾಗಿ ಆ ಇಬ್ಬರ ಸಾವಿಗೆ ಕಾರಣರಾಗಿದ್ದಾರೋ, ಇಲ್ಲವೋ ಬೇರೆಯ ವಿಚಾರ. ಆದರೆ ಯಾವುದೇ ಮುಂಜಾಗ್ರತೆ ಇಲ್ಲದೆ ಬೇಜವಾಬ್ದಾರಿತನದಿಂದಂತೂ ಅನಿಲ್ ಮತ್ತು ಉದಯ್ ಸಾವಿಗೆ ಕಾರಣರಾಗಿದ್ದಾರೆ. ಅದಕ್ಕಾದರೂ ಅವರು ಶಿಕ್ಷೆ ಅನುಭವಿಸಲೇಬೇಕು.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here