Homeಎಕಾನಮಿಜಿಯೋಗೆ ಪಟ್ಟ - ಬಿಸ್ಸೆನ್ನೆಲ್‍ಗೆ ಚಟ್ಟ...

ಜಿಯೋಗೆ ಪಟ್ಟ – ಬಿಸ್ಸೆನ್ನೆಲ್‍ಗೆ ಚಟ್ಟ…

- Advertisement -
- Advertisement -

70 ವರ್ಷಗಳ ಭಾರತ ರಾಷ್ಟ್ರ ನಿರ್ಮಾಣದ ಇತಿಹಾಸದಲ್ಲಿ ಬಿಎಸ್ಸೆನ್ನೆಲ್‍ಗೆ ತನ್ನದೇ ಆದ ಮಹತ್ವದ ಪಾತ್ರವಿದೆ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ, ದೇಶದ ಒಟ್ಟಾರೆ ಆರ್ಥಿಕ ವಾಣಿಜ್ಯ ವಹಿವಾಟುಗಳಿಗೆ ಬಿಸ್ಸೆನ್ನೆಲ್ ನೀಡಿದ ಕೊಡುಗೆ ಅಪಾರವಾದದ್ದು. ಮೂಲೆಮೂಲೆಯ ಹಳ್ಳಿಗಾಡುಗಳನ್ನೂ ಒಳಗೊಂಡು ಇಡೀ ದೇಶಕ್ಕೆ ಸಂಪರ್ಕ ಸೇತುವಾಗಿ ದುಡಿದ ಸಂಸ್ಥೆಯ ಸೇವೆಯನ್ನು ರೂಪಾಯಿಗಳಲ್ಲಿ ಲೆಕ್ಕ ಹಾಕಲಾಗದು. ಇಂಥಾ ಸಂಸ್ಥೆಯನ್ನು ಮಣ್ಣುಗೂಡಿಸಲು ಇದೀಗ ರಂಗ ಸಜ್ಜಾಗಿದೆ.

ಇದು ದಿಢೀರ್ ಸಂಭವಿಸಿದ್ದಲ್ಲ. ಬಹಳ ವ್ಯವಸ್ಥಿತವಾಗಿ ಹಂತಹಂತವಾಗಿ ನಡೆಸಿದ ಷಡ್ಯಂತ್ರ. ಖಾಸಗಿ ಕಂಪನಿಗಳು 4ಜಿ ಸೇವೆ ಒದಗಿಸುತ್ತಿರುವ ಸಂದರ್ಭದಲ್ಲಿ ಬಿಎಸ್ಸೆನ್ನೆಲ್‍ಗೆ 4ಜಿ ಸ್ಪೆಕ್ಟ್ರಮ್ ಮಂಜೂರಾತಿಯೇ ಸಿಗಲಿಲ್ಲವೆಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಕುಸಿಯುತ್ತಿರುವ ಸಂಸ್ಥೆಯನ್ನು ಉಳಿಸಿಕೊಳ್ಳಲು ಬಿಸ್ಸೆನ್ನೆಲ್ ನೌಕರರು ಹಲವು ಬಾರಿ ಮುಷ್ಕರ ಹೂಡಿದ್ದಾರೆ. ಮುಷ್ಕರ ಎಂದರೆ ಸಂಬಳ ಭತ್ಯೆ ಜಾಸ್ತಿ ಮಾಡಿ ಎಂದು ಕೇಳುವುದು ಮಾಮೂಲಿ. ಆದರೆ ಬಿಸ್ಸೆನ್ನೆಲ್ ನೌಕರರ ಪ್ರಧಾನ ಬೇಡಿಕೆ ‘4ಜಿ ಸ್ಪೆಕ್ಟ್ರಮ್ ಹಂಚಿಕೆ ಮಾಡಿ – ಬಿಸ್ಸೆನ್ನೆಲ್ ಉಳಿಸಿ’ ಎಂಬುದಾಗಿತ್ತು. ಮುಷ್ಕರ ತೀವ್ರಗೊಂಡ ಸಂದರ್ಭದಲ್ಲಿ ಕೇಂದ್ರದ ಮಂತ್ರಿಗಳು ಹಾಜರಾಗಿ 4ಜಿ ಕೊಡುವುದಾಗಿ ಭರವಸೆ ನೀಡಿದ್ದು, ನಂತರದಲ್ಲಿ ಬೇಡಿಕೆಯನ್ನು ಕಸದಬುಟ್ಟಿಗೆ ಹಾಕಿದ್ದು ಹಳೆ ಸಂಗತಿ.

ಈಗ 5ಜಿ ಟೆಕ್ನಾಲಜಿ ಅಳವಡಿಕೆಗೆ ರಂಗ ಸಜ್ಜಾಗಿರುವ ಹೊತ್ತಿನಲ್ಲಿ ಬಿಸ್ಸೆನ್ನೆಲ್ ಇನ್ನೂ ಓಬೀರಾಯನ ಕಾಲದಲ್ಲೇ ಇದೆ. ಪರಿಣಾಮವಾಗಿ ಸಂಸ್ಥೆಗೆ ಹೊಸ ಗ್ರಾಹಕರು ಸೇರುವುದಿರಲಿ, ಇದ್ದ ಗ್ರಾಹಕರೇ ದೂರಾಗುವಂತಹ ಸನ್ನಿವೇಶ ನಿರ್ಮಿಸಲಾಗಿದೆ. ಇತ್ತೀಚೆಗೆ ಜಿಯೋ ದರ ಸಮರಕ್ಕೆ ಇಳಿದ ಮೇಲಂತೂ ಬಿಸ್ಸೆನ್ನೆಲ್ ಅಸ್ತಿತ್ವವೇ ಪ್ರಶ್ನಾರ್ಹ. ಇತಿಹಾಸದಲ್ಲಿ ಮೊದಲ ಬಾರಿಗೆ ಈಗ ಬಿಸ್ಸೆನ್ನೆಲ್ ಬಳಿ ವೇತನಕ್ಕೂ ಕಾಸಿಲ್ಲ. ಈಗ 50 ವರ್ಷ ಮೇಲ್ಪಟ್ಟ ನೌಕರರ ಸ್ವಯಂನಿವೃತ್ತಿ ಘೋಷಿಸಲಾಗಿದೆ. ನಿವೃತ್ತಿ ವಯಸ್ಸನ್ನು 60 ರಿಂದ 58ಕ್ಕೆ ಇಳಿಸಲಾಗಿದೆ. ಪರಿಣಾಮವಾಗಿ ಸುಮಾರು 54 ಸಾವಿರ ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

‘ನಷ್ಟದಲ್ಲಿರುವ ಸಂಸ್ಥೆಗೆ ಹಣ ಯಾಕೆ ಕೊಡಬೇಕು?’ ‘ತೆರಿಗೆದಾರರ ಜೇಬಿಗೆ ಕತ್ತರಿ’ ಇತ್ಯಾದಿ ಪಾಂಡಿತ್ಯಪೂರ್ಣ ವಾದಗಳು, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಟಿವಿ ಪ್ಯಾನೆಲ್ ಚರ್ಚೆಗಳು ನಡೆದಿವೆ. ಜನಮಾನಸದಲ್ಲಿ ಬಿಸ್ಸೆನ್ನೆಲ್ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಜಾಲವೊಂದು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವು ಕಟುಸತ್ಯಗಳನ್ನು ನಾವು ನೆನಪಿನಲ್ಲಿಡಬೇಕು. 2004-05ರಲ್ಲಿ ಇದೇ ಬಿಸ್ಸೆನ್ನೆಲ್ 10,000 ಕೋಟಿ ನಿವ್ವಳ ಲಾಭ ಗಳಿಸಿತ್ತು. 2014, 2015, 2016ನೇ ಸಾಲಿನಲ್ಲಿಯೂ ಅಲ್ಪ ಪ್ರಮಾಣದ ಲಾಭವನ್ನು ದಾಖಲಿಸಿತ್ತು.

2016ರಲ್ಲಿ ಜಿಯೋ ಮಾರುಕಟ್ಟೆ ಪ್ರವೇಶಿಸಿತು. ಸಾಕ್ಷಾತ್ ಭಾರತದ ಪ್ರಧಾನಿಗಳು ಮುಂದೆ ನಿಂತು ಬಿಟ್ಟು ಜಾಹಿರಾತು ನೀಡಿ ಅದನ್ನು ಪ್ರಮೋಟ್ ಮಾಡಿದರು. ಈ ಮಧ್ಯೆ 2017ರಲ್ಲಿ ಬಿಎಸ್ಸೆನ್ನೆಲ್ ನೆಟ್‍ವರ್ಕ್ ಮೇಲೆ ಸೈಬರ್ ದಾಳಿ ನಡೆದು ಲಕ್ಷಾಂತರ ಸಂಪರ್ಕಗಳಿಗೆ ಹಾನಿಯಾಯಿತು. ಇಲ್ಲಿ ಕಾಣದ ಕೈಗಳು ಕೆಲಸ ಮಾಡಿರುವುದು ಸ್ಪಷ್ಟ. ಯಾವಾಗ ಜಿಯೋ ಅಟ್ಟಹಾಸದಿಂದ ಟೆಲಿಕಾಂ ಪ್ರವೇಶಿಸಿ ದರ ಸಮರಕ್ಕಿಳಿಯಿತೋ ಆಗ ಮೊದಲೇ 4ಜಿ ತಂತ್ರಜ್ಞಾನವಿಲ್ಲದೆ ದುರ್ಬಲವಾಗಿದ್ದ ಸಂಸ್ಥೆ ಕುಸಿದುಹೋಯ್ತು. ಇದು ಕೇವಲ ಬಿಸ್ಸೆನ್ನೆಲ್‍ಗೆ ಮಾತ್ರ ಅನ್ವಯಿಸುವಂತದ್ದಲ್ಲ, ವೊಡಾಫೋನ್ ಹಾಗೂ ಏರ್ಟೆಲ್‍ನಂತಹ ಖಾಸಗಿ ಕಂಪನಿಗಳೂ ಕೂಡ ಈ ಅವಧಿಯಲ್ಲಿ ನಷ್ಟ ಅನುಭವಿಸಿವೆ ಎಂಬುದನ್ನು ನಾವು ನೆನಪಿಡಬೇಕು.

ತಮಾಷೆಯೆಂದರೆ ‘ಅಧಿಕ ಸ್ಪೀಡ್ ಮತ್ತು ಕಡಿಮೆ ದರ’ ಎಂಬುದು ಜಿಯೋದ ತಂತ್ರವಾಗಿದ್ದಾಗಲೇ ಬಿಸ್ಸೆನ್ನೆಲ್‍ನ ಆಡಳಿತ ಮಂಡಳಿ ದರಗಳನ್ನು ಏರಿಸಿಬಿಟ್ಟಿತು. ಈ ಕ್ರಮ ಕೂಡ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ. ಮೋದಿ ಸರ್ಕಾರ ತಮ್ಮ ನೆಚ್ಚಿನ ಖಾಸಗಿ ಕೂಟದೊಂದಿಗೆ ಸೇರಿ ನಡೆಸಿದ ಷಡ್ಯಂತ್ರದ ಫಲ ಇದು.

ಕಳೆದ ಏಪ್ರಿಲ್‍ನಲ್ಲಿ ಬಿಎಸ್ಸೆನ್ನೆಲ್ ನೌಕರರ ಸಂಘ ಬಿಡುಗಡೆ ಮಾಡಿದ ಅಂಕಿಅಂಶಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಈಗ ಜಿಯೋ ತನ್ನ 5ಜಿ ಸೇವೆಯ ಗಿಗಾಫೈಬರ್ ಹೆಸರಿನ ಬ್ರಾಡ್ ಬ್ಯಾಂಡ್ ಬಿಡುಗಡೆಗೆ ನಿಂತಿದೆ. ಅಲ್ಲಿಗೆ ಬಿ.ಎಸ್.ಎನ್.ಎಲ್ ಕಥೆ ಏನು? ಜೊತೆಗೆ ತನ್ನ ಖರ್ಚುವೆಚ್ಚಗಳಿಗೆ ಹಾಗೂ ಬಂಡವಾಳ ಹೂಡಿಕೆಗೆ ಬಿಎಸ್ಸೆನ್ನೆಲ್ ಸಾಲ ಪಡೆದುಕೊಳ್ಳಲಾರದಂತೆ ಸರ್ಕಾರ ನಿರ್ಬಂಧಿಸಿದೆಯಂತೆ. ಕಳೆದ ಮಾರ್ಚ್‍ನ ಲೆಕ್ಕಪತ್ರಗಳ ಪ್ರಕಾರ ಟೆಲಿಕಾಂ ವ್ಯವಹಾರದಲ್ಲಿರುವ ಖಾಸಗಿ ಕಂಪನಿಗಳು ಬಿಎಸ್ಸೆನ್ನೆಲ್‍ಗೆ ಹೋಲಿಸಿದರೆ ಭಾರೀ ಸಾಲದಲ್ಲಿದ್ದವು. ವೊಡಾಫೋನ್ ಐಡಿಯಾದ ಸಾಲ 1,20,000 ಕೋಟಿ! ಏರ್ಟೆಲ್‍ನ ಸಾಲ 1,13,000 ಕೋಟಿ! ಇನ್ನೂ ಜಿಯೋದ ಸಾಲ 2 ಲಕ್ಷ ಕೋಟಿಗಳು!! ಬಿಸ್ಸೆನ್ನೆಲ್‍ನ ಸಾಲ 13,900 ಕೋಟಿಗಳು ಮಾತ್ರ.

ಬಿಸ್ಸೆನ್ನೆಲ್ ಆಸ್ತಿ-ಪಾಸ್ತಿಗಳು ದೇಶದ ಮೂಲೆಮೂಲೆಗಳಲ್ಲೂ ಸಾವಿರಾರು ನಗರ, ಪಟ್ಟಣಗಳಲ್ಲಿ ಹರಡಿಕೊಂಡಿವೆ. ದೇಶಾದ್ಯಂತ ಟವರ್‍ಗಳು ಮತ್ತು ಕೇಬಲ್ ಜಾಲವಿದೆ. 2016ರ ಅಧಿಕೃತ ಅಂದಾಜಿನ ಪ್ರಕಾರವೇ ಬಿಸೆನ್ನೆಲ್‍ನ ಮೌಲ್ಯ 70,746 ಕೋಟಿಗಳು. ವಾಸ್ತವದಲ್ಲಿ ಅದರ ಆಸ್ತಿ ಪಾಸ್ತಿಯ ಮಾರುಕಟ್ಟೆ ಮೌಲ್ಯ ಅದಕ್ಕಿಂತ ಎಷ್ಟೋ ಪಟ್ಟು ಅಧಿಕವಿರುತ್ತದೆ. ಇಂಥಾ ಅನುಕೂಲತೆ ಯಾವುದೇ ಖಾಸಗಿ ಕಂಪನಿಗೂ ಇಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಬಂಡವಾಳವನ್ನು ಖದೀಮ ಕಾರ್ಪೊರೇಟ್‍ಗಳ ಬಾಯಿಗೆ ಹಾಕುತ್ತಿರುವ ಸರ್ಕಾರ ಬಿಸ್ಸೆನ್ನೆಲ್‍ಗೆ ಸಾಲ ಪಡೆಯಲು ಅನುಮತಿಯನ್ನೇ ಕೊಡಲಿಲ್ಲ!

ಸದ್ಯದಲ್ಲೇ ನಮ್ಮ ಈ ಅಮೂಲ್ಯ ಉದ್ದಿಮೆ ಸಂಸ್ಥೆ ರಕ್ಕಸ ಕಾರ್ಪೊರೇಟ್‍ಗಳ ಬಾಯಿಗೆ ಬೀಳಲಿದೆ. ಬಿಎಸ್ಸೆನ್ನೆಲ್ ಕಬಳಿಸುವ ಈ ಖಾಸಗಿ ದೇಶದ್ರೋಹವನ್ನು ಮರೆಮಾಚಿ ಬೋಪರಾಕ್ ಹಾಕಲು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವಂದಿಮಾಗಧರೂ ಈಗಾಗಲೇ ಸಜ್ಜಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...