Homeಮುಖಪುಟಮಧ್ಯಪ್ರದೇಶ: ಮಹಿಳೆಗೆ ಥಳಿಸಿದ ಗುಂಪು

ಮಧ್ಯಪ್ರದೇಶ: ಮಹಿಳೆಗೆ ಥಳಿಸಿದ ಗುಂಪು

- Advertisement -
- Advertisement -

ಮಧ್ಯಪ್ರದೇಶದ ಸಾಗರ್‌ನಲ್ಲಿ ಮಹಿಳೆಯನ್ನು ಗುಂಪೊಂದು ಥಳಿಸುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಗುಂಪಿಗೆ ಸಂತ್ರಸ್ತೆ, ಸಹೋದರರೇ ಎಂದು ಕರೆದುಕೊಂಡು ಕರುಣೆ ತೋರಿಸುವಂತೆ ಬೇಡಿಕೊಳ್ಳುವುದು ಕಂಡು ಬಂದಿದೆ.

ಆ.12ರಂದು ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಮಹಿಳೆಯನ್ನು ಎಳೆದುಕೊಂಡು ಬಂದು ಹಲ್ಲೆ ನಡೆಸುವುದು, ಥಳಿಸುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಮಹಿಳೆ ಸಹೋದರರೆ ನನ್ನನ್ನು ಬಿಟ್ಟುಬಿಡಿ ಎಂದು ಆಗ್ರಹಿಸಿದ್ದಾರೆ. ಆದರ ಗುಂಪು ಆಕೆಗೆ ಹಲ್ಲೆ ನಡೆಸುವುದನ್ನು ಮುಂದುವರಿಸಿದೆ.

5 ತಿಂಗಳ ಮಗುವಿನೊಂದಿಗೆ ಅಲೆದಾಡುತ್ತಿದ್ದ ಮಹಿಳೆಯನ್ನು ಹಿಂಸಾಚಾರಕ್ಕೆ ಒಳಪಡಿಸುವುದನ್ನು ವೀಡಿಯೊ ಬಹಿರಂಗಪಡಿಸುತ್ತದೆ. ವೈರಲ್ ವೀಡಿಯೊದಲ್ಲಿ, ಸಹೋದರ ದಯವಿಟ್ಟು ನನ್ನ ಕುಟುಂಬವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಮಹಿಳೆ ಅಳುವುದು ಕಂಡು ಬಂದಿದೆ.

ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಗೋಪಾಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.  ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಓರ್ವ ಶಂಕಿತ ಆರೋಪಿಗೆ ಬಂಧಿಸಲಾಗಿದ್ದು, ಇತರರ ಬಂಧನಕ್ಕೆ ಬಲೆ ಬೀಸಲಾಗಿದೆ.

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸಾರ್ವಜನಿಕವಾಗಿ ಮಹಿಳೆಗೆ ಥಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನು ಓದಿ; ಮಧ್ಯಪ್ರದೇಶ: ಹಿಜಾಬ್ ವಿವಾದ; ಪ್ರಾಂಶುಪಾಲರು ಸೇರಿ ಮೂವರಿಗೆ ಜಾಮೀನು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಹತ್ಯೆ ಪ್ರಕರಣ: ಬಿಜೆಪಿಯ ಮಾಜಿ ಸಂಸದ ಸೇರಿ ಎಲ್ಲಾ...

0
ಆರ್‌ಟಿಐ ಕಾರ್ಯಕರ್ತ ಮತ್ತು ಪರಿಸರವಾದಿ ಅಮಿತ್ ಜೇತ್ವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಹೈಕೋರ್ಟ್‌ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ...