Homeಅಂತರಾಷ್ಟ್ರೀಯಅಮೆರಿಕ ಚುನಾವಣೆ: ಅಭ್ಯರ್ಥಿಗಳ ಚರ್ಚೆಯಲ್ಲಿ ಇರಲಿದೆ ಮ್ಯೂಟ್ ಬಟನ್!

ಅಮೆರಿಕ ಚುನಾವಣೆ: ಅಭ್ಯರ್ಥಿಗಳ ಚರ್ಚೆಯಲ್ಲಿ ಇರಲಿದೆ ಮ್ಯೂಟ್ ಬಟನ್!

ಸುಮಾರು 60 ಲಕ್ಷ ಜನರು ಈವರೆಗೆ ಚುನಾವಣೆಗೆ ಮುಂಚಿತವಾಗಿ ಮತ ಚಲಾಯಿಸುವ ಅವಕಾಶವನ್ನು ಬಳಸಿಕೊಂಡು ತಮ್ಮ ಮತಪತ್ರಗಳನ್ನು ಚಲಾಯಿಸಿದ್ದಾರೆ. ಇದರಲ್ಲಿ ಜೋ ಬಿಡೆನ್ ಮುಂದಿದ್ದಾರೆ ಎನ್ನಲಾಗಿದೆ.

- Advertisement -
- Advertisement -

ಅಮೆರಿಕ ಚುನಾವಣೆ ಹಿನ್ನೆಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಸ್ಫರ್ಧಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ನಡುವೆ ಗುರುವಾರ ಚರ್ಚೆ ನಡೆಯಲಿದೆ. ಆದರೆ ಈ ಬಾರಿಯ ಚರ್ಚೆಯಲ್ಲಿ ಪ್ರತಿ ಅಭ್ಯರ್ಥಿಯು ತಡೆರಹಿತವಾಗಿ ಮಾತನಾಡಲು ಸಹಾಯಕವಾಗುವಂತೆ ಅಡೆತಡೆಗಳನ್ನು ತಪ್ಪಿಸಲು ಮ್ಯೂಟ್ ಬಟನ್ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಅಧ್ಯಕ್ಷೀಯ ಆಯೋಗವು ಚರ್ಚೆ ವೇಳೆ ಮಾತಾಡುತ್ತಿರುವ ಅಭ್ಯರ್ಥಿ ಬಿಟ್ಟು ಇನ್ನೊಬ್ಬ ಅಭ್ಯರ್ಥಿಯ ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡುತ್ತದೆ. ಪ್ರತಿ 15 ನಿಮಿಷಗಳ ಚರ್ಚೆಯ ಆರಂಭದಲ್ಲಿ ಟೀಕೆಗಳನ್ನು ಮಾಡಲು ಎರಡು ನಿಮಿಷಗಳ ಅವಕಾಶ ನೀಡಲಾಗುತ್ತದೆ. ಮಾತು ಮುಗಿದ ನಂತರ ಇಬ್ಬರ ಮೈಕ್ರೊಫೋನ್‌ಗಳನ್ನು ಆನ್ ಮಾಡಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ.

ಸುಮಾರು 60 ಲಕ್ಷ ಜನರು ಈವರೆಗೆ ಚುನಾವಣೆಗೆ ಮುಂಚಿತವಾಗಿ ಮತ ಚಲಾಯಿಸುವ ಅವಕಾಶವನ್ನು ಬಳಸಿಕೊಂಡು ತಮ್ಮ ಮತಪತ್ರಗಳನ್ನು ಚಲಾಯಿಸಿದ್ದಾರೆ. ಇದರಲ್ಲಿ ಜೋ ಬಿಡೆನ್ ಮುಂದಿದ್ದಾರೆ ಎಂಬ ಅಂಶವನ್ನು ಹಿಂದಿಕ್ಕಲು ಅಧ್ಯಕ್ಷ ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ನವೆಂಬರ್ 3 ರಂದು ಅಮೆರಿಕ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿದ ಟ್ರಂಪ್

ಕಳೆದ ಸೆಪ್ಟೆಂಬರ್ 29 ರಂದು ನಡೆದ ಚರ್ಚೆಯ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಜೋ ಬಿಡೆನ್‌ ಮಾತಿಗೆ ಅಡ್ಡಿಪಡಿಸಿದ್ದರು. ಬಿಡೆನ್ ಅವರಿಗೆ ಅವಮಾನವಾಗುವಂತೆ ವರ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮ್ಯೂಟ್ ಬಟನ್ ವ್ಯವಸ್ಥೆ ಮಾಡಲಾಗಿದೆ.

ಟ್ರಂಪ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಆನ್‌ಲೈನ್ ಚರ್ಚೆ ಏರ್ಪಡಿಸಲಾಗಿತ್ತು. ಆದರೆ “ಕಂಪ್ಯೂಟರ್ ಹಿಂದೆ ಕುಳಿತು ಮಾಡುವ ಚರ್ಚೆಯಲ್ಲಿ ಕೂತು ನನ್ನ ಸಮಯವನ್ನು ವ್ಯರ್ಥ ಮಾಡಲು ಹೋಗುವುದಿಲ್ಲ” ಎಂದು ಹೇಳಿ, ಕಳೆದ ಗುರುವಾರ ನಿಗದಿಪಡಿಸಿದ ಎರಡನೇ ಚರ್ಚೆಯಿಂದ ಹಿಂದೆ ಸರಿದಿದ್ದರು. ಅಲ್ಲದೆ ಅಂದೇ ತಾವು ಚರ್ಚೆಯಲ್ಲಿ ಭಾಗವಹಿಸಿದರೆ ತಮ್ಮ ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇನ್ನು ಈ ಗುರುವಾರ ಚರ್ಚೆಗೆ ನಿಗದಿಪಡಿಸಲಾದ ವಿಷಯಗಳ ಬಗ್ಗೆ ಟ್ರಂಪ್ ಗುಂಪು ಅಸಮಾಧಾನ ವ್ಯಕ್ತಪಡಿಸಿದೆ. ಚರ್ಚೆ ವಿದೇಶಿ ನೀತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದೆ. ಜೊತೆಗೆ ಅಧ್ಯಕ್ಷೀಯ ಆಯೋಗದ ಗುಂಪು ಬಿಡೆನ್ ಕಡೆಗೆ ವಾಲುತ್ತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ: ಕಮಲಾ ಹ್ಯಾರಿಸ್

“ಅಧ್ಯಕ್ಷೀಯ ಆಯೋಗದ ಬಿಡೆನ್ ಪರ ವರ್ತನೆಗಳು ಇಡೀ ಚರ್ಚೆಯನ್ನು ವೈಫಲ್ಯವನ್ನಾಗಿ ಮಾಡಿವೆ” ಎಂದು ಟ್ರಂಪ್‌ ಪರ ಪ್ರಚಾರ ಅಭಿಯಾನದ ವ್ಯವಸ್ಥಾಪಕ ಬಿಲ್ ಸ್ಟೀಪಿಯನ್ ಎರಡು ಪುಟಗಳ ಪತ್ರದಲ್ಲಿ ದೂರಿದ್ದಾರೆ. ಆದರೆ, ಚರ್ಚಾ ವಿಷಯಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲು ಎರಡೂ ಕಡೆಯವರು ಈ ಹಿಂದೆ ಒಪ್ಪಿಕೊಂಡಿದ್ದಾರೆ ಎಂದು ಬಿಡೆನ್‌ ಪರ ಅಭಿಯಾನ ನಡೆಸುವವರು ತಿಳಿಸಿದ್ದಾರೆ.

ಅಧ್ಯಕ್ಷ ಟ್ರಂಪ್, ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಿರ್ವಹಣೆ, ನಿಯಂತ್ರಣದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಲು ಬಯಸಿದ್ದಾರೆ. ಆದರೆ ಚುನಾವಣಾ ಸಮೀಕ್ಷೆಗಳು, ಕೊರೊನಾ ವಿಚಾರ ಮತದಾರರಿಗೆ ಪ್ರಮುಖ ವಿಷಯವಾಗಿದೆ ಎಂದು ತೋರಿಸಿವೆ ಎಂದಿದ್ದಾರೆ.

ಚುನಾವಣಾ ಪ್ರಚಾರದ ತಮ್ಮ ಅಭಿಯಾನದುದ್ದಕೂ ಟ್ರಂಪ್ ಜೋ ಬಿಡೆನ್ ಅವರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯದಲ್ಲಿ ನಡೆದಿರುವ ಚುನಾವಣೋತ್ತರ ಸಮೀಕ್ಷೆಗಳು ಬಿಡೆನ್ ಪರವಾಗಿರುವುದು ಟ್ರಂಪ್ ಅವರ ಈ ವರ್ತನೆಗೆ ಕಾರಣವಾಗಿವೆ ಎನ್ನಲಾಗಿದೆ.

ಜೋ ಬಿಡನ್ ಅಮೆರಿಕಾದಲ್ಲಿ ಕಮ್ಯುನಿಸಮ್ ಮತ್ತು ಪ್ರವಾಹೋಪಾದಿಯಲ್ಲಿ ಕ್ರಿಮಿನಲ್ ವಲಸಿಗರನ್ನು ತುಂಬಲಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಚುನಾವಣಾ ರ್‍ಯಾಲಿಗಳಲ್ಲಿ ತಾವು ಸೋತರೆ ದೇಶ ಬಿಟ್ಟು ಹೋಗುವ ಮಾತುಗಳನ್ನಾಡಿ ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದ್ದಾರೆ.


ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸೋತರೆ ದೇಶ ಬಿಡಬಹುದು: ಡೊನಾಲ್ಡ್ ಟ್ರಂಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು

0
ಇಸ್ರೇಲಿ ಪಡೆಗಳು ರಫಾದಲ್ಲಿ ವಿನ್ಯಾಸಗೊಳಿಸಲಾದ ಸುರಕ್ಷಿತ ವಲಯದಲ್ಲಿ ಸ್ಥಳಾಂತರಗೊಂಡ ಜನರು ವಾಸಿಸುವ ಟೆಂಟ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 40 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು...