Homeಕರೋನಾ ತಲ್ಲಣಸುಪ್ರೀಂ ಕೋರ್ಟ್‌ನ 50% ಸಿಬ್ಬಂದಿಗೆ ಕೊರೊನಾ ಸೋಂಕು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ

ಸುಪ್ರೀಂ ಕೋರ್ಟ್‌ನ 50% ಸಿಬ್ಬಂದಿಗೆ ಕೊರೊನಾ ಸೋಂಕು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ

- Advertisement -
- Advertisement -

ಭಾರತದ ಕೊರೊನಾ ಬಿಕ್ಕಟ್ಟು ಹೆಚ್ಚಾಗಿದ್ದು, ಸುಪ್ರೀಂ ಕೋರ್ಟ್‌ನ ಶೇಕಡಾ 50 ರಷ್ಟು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಭೌತಿಕ ವಿಚಾರಣೆಗಳನ್ನು ಸ್ಥಗಿತಗೊಳಿಸಲಾಗಿದ್ದು, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಯಲಿದೆ ಎಂದು ತಿಳಿಸಲಾಗಿದೆ.

ನ್ಯಾಯಾಲಯದ ಕೊಠಡಿಗಳು ಸೇರಿದಂತೆ ಇಡೀ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಕರಣಗಳ ವಿಚಾರಣೆ ಆರಂಭವಾಗಲಿದೆ. ನ್ಯಾಯಮೂರ್ತಿಗಳ ನಿವಾಸದಿಂದಲೇ ವಿಚಾರಣೆ ನಡೆಸಲಿದೆ. ಆತಂಕಗೊಳ್ಳುವ ಅವಶ್ಯಕತೆ ಏನೂ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

10:30ಕ್ಕೆ ನಿಗದಿಯಾಗಿದ್ದ ನ್ಯಾಯಪೀಠವು 11:30ಕ್ಕೆ ಕಾರ್ಯಾರಂಭಿಸಲಿದೆ, 11ಕ್ಕೆ ನಿಗದಿಯಾಗಿದ್ದ ಪ್ರಕರಣಗಳ ವಿಚಾರಣೆ 12ರಿಂದ ಶುರುವಾಗಲಿವೆ ಎಂದು ಕೋರ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು

ಶನಿವಾರವಷ್ಟೇ, ಕೊರೊನಾ ಪರೀಕ್ಷೆಗೆ ಒಳಗಾದ 90 ಸಿಬ್ಬಂದಿಗಳಲ್ಲಿ 44 ಮಂದಿಗೆ ಕೊರೊನಾ ದೃಢವಾಗಿದೆ. ಈ ಹಿಂದೆ ಹಲವು ನ್ಯಾಯಾಧೀಶರು ಕೊರೊನಾ ಸೋಂಕಿಗೆ ಒಳಪಟ್ಟು ನಂತರ ಚೇತರಿಸಿಕೊಂಡಿದ್ದರು.

ಕಳೆದ ವಾರದಲ್ಲಿ ಸುಮಾರು 10 ಲಕ್ಷ ಹೊಸ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ಭಾನುವಾರ 1,68,912 ಹೊಸ ಪ್ರಕಣಗಳು ವರದಿಯಾಗಿವೆ. ಇದು ಇಲ್ಲಿಯವರೆಗೆ ದಾಖಲಾದ ದೈನಂದಿನ ಅತಿ ಹೆಚ್ಚು ಪ್ರಕರಣಗಳಾಗಿವೆ. ಕಳೆದ 24 ಗಂಟೆಗಳಲ್ಲಿ ಕೊರನಾ ಸಂಬಂಧಿತ ಸಮಸ್ಯೆಗಳಿಂದ 904 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.


ಇದನ್ನೂ ಓದಿ: ರೈತ ಹೋರಾಟ: ಪಟ್ಟು ಬಿಡದ ಸರ್ಕಾರಕ್ಕೆ ವಿಭಿನ್ನವಾಗಿ ಪೆಟ್ಟು ನೀಡಲು ನಿಂತ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

0
ಪ್ರಭುತ್ವಕ್ಕೆ ಸತ್ಯ ನುಡಿಯುತ್ತಿದ್ದ ಖ್ಯಾತ ಪರ್ತಕರ್ತ ರವೀಶ್ ಕುಮಾರ್ ಎನ್‌ಡಿಟಿವಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಎನ್‌ಡಿಟಿವಿ ಅದಾನಿ ತೆಕ್ಕೆಗೆ ಹೋದುದ್ದೆ ಅವರ ರಾಜೀನಾಮೆಗೆ ಪ್ರಮುಖ ಕಾರಣ. ರವೀಶ್ ಕುಮಾರ್‌ರವರಿಗೆ ಗೌರಿ ಸ್ಮಾರಕ ಟ್ರಸ್ಟ್...