Homeಅಂಕಣಗಳುಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

- Advertisement -
- Advertisement -

ಮತ್ತೆ ಕೊರೊನಾ ಬೆದರುಬೊಂಬೆಯನ್ನು ತೋರಹೊರಟಿರುವ ಬಿಜೆಪಿ ನಡವಳಿಕೆಯನ್ನ ನೋಡಿದ ಕರ್ನಾಟಕದ ಜನ ಕೊರೊನಾಕ್ಕೂ ಬಿಜೆಪಿಗೂ ಶಾನೆ ಹೋಲಿಕೆ ಇದೆ ಎನ್ನತೊಡಗಿದ್ದಾರಲ್ಲಾ. ಕೊರೊನಾ ಅಲೆಗಳಂತೆಯೇ ಬಿಜೆಪಿ ಪಾರ್ಟಿಯ ಕಾರ್ಯಕ್ರಮಗಳು ಅಲೆಅಲೆಯಾಗಿ ಬಂದು ಮುಸ್ಲಿಮರ ಮೇಲೆ ಅಪ್ಪಳಿಸಿದವು. ಅದರ ಪರಿಣಾಮ ಮುಸ್ಲಿಮರು ಮತ್ತು ಹಿಂದೂಗಳೂ ತತ್ತರಿಸಿಹೋದರು. ಮುಸ್ಲಿಮರನ್ನು ಗುರಿಯಾಗಿಸಿ ಬಿಟ್ಟ ಬಾಣಗಳು ಹಿಂದೂಗಳಿಗೂ ತಾಗಿ, ರಂಜಾನ್ ಟೈಮಿನಲ್ಲಿ ಮುಸ್ಲಿಮರು ಕೂಡ ಹಿಂದೂ ಬಡವರಿಗೆ ಸಹಾಯ ಮಾಡುತ್ತ ಇಫ್ತಾರ್ ಕೂಟಗಳಿಗೆ ಹಿಂದೂಗಳನ್ನು ಕರೆಯುತ್ತ ಸಾಮರಸ್ಯಕ್ಕೆ ಕರೆಕೊಟ್ಟಿದ್ದನ್ನ ನೋಡಿದ ಬಿಜೆಪಿಗಳು ಬೇರೆ ತಂತ್ರ ಆಲೋಚಿಸುತ್ತಿರುವಾಗ ಕೊರೊನಾವೂ ಕೂಡ ಛದ್ಮವೇಶದಲ್ಲಿ ರೆಡಿಯಾಗುತ್ತಿದೆಯಂತಲ್ಲಾ. ಸಾಂಕ್ರಾಮಿಕ ಕಾಯಿಲೆಯೊಂದು ರಾಜಕೀಯ ಪಾರ್ಟಿಯ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದು ಚರಿತ್ರೆಯಲ್ಲೇ ಇಲ್ಲವಂತಲ್ಲಾ. ಆದರೆ ಕರ್ನಾಟಕದ ಮಟ್ಟಿಗೆ ಆಡಳಿತವನ್ನೆ ನಡೆಸದೆ ದಿಕ್ಕು ದೆಸೆಯಿಲ್ಲದೆ ಮುನ್ನಡೆಯುತ್ತಿರುವ ಪಾರ್ಟಿಯ ಆಸರೆಗೆ ಕೊರೊನಾ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲಾ, ಥೂತ್ತೇರಿ.

******

ಮುಸ್ಲಿಂ ಧರ್ಮದ ಮೇಲೆ ಎಲ್ಲಾ ಬಗೆಯ ಹಗೆಯ ಪ್ರಯೋಗ ನಡೆದ ಮೇಲೆ ಈಗ ಮಸೀದಿಗಳಲ್ಲಿನ ಧ್ವನಿವರ್ಧಕದ ಮೇಲೆ ಮುತಾಲಿಕ್ ಬಿದ್ದಿದ್ದಾರಲ್ಲಾ. ಮುತಾಲಿಕ್ ಮತಿಗೆಟ್ಟು ಮಾತನಾಡುತ್ತಿದ್ದಾರೆಂದು ಪರಿಗಣಿಸುವಂತಿಲ್ಲ. ಆತನ ಒತ್ತಾಯದ ಹಿಂದೆ ಬಿಜೆಪಿ ದನಿ ಅಡಗಿದೆ. ಹಾಗೆ ನೋಡಿದರೆ ಈ ಹಿಂದೆ ಅನಂತಕುಮಾರ ಹೆಗಡೆ ಎಂಬಾತ ಪುರೋಹಿತಶಾಹಿ ಪಿತ್ತ ನೆತ್ತಿಗೇರಿಸಿಕೊಂಡು ನಾವು ಅಂಬೇಡ್ಕರ್ ಸಂವಿಧಾನವನ್ನು ಬದಲಿಸುತ್ತೇವೆ, ಅದಕ್ಕಾಗಿಯೇ ಬಂದಿರುವುದು ಎಂದಾಗ ಇಡೀ ದೇಶದ ಯಾವ ಬಿಜೆಪಿಗನೂ ಇದನ್ನ ಖಂಡಿಸಲಿಲ್ಲ. ಅಂತೆಯೇ ಕೆಂಪುಕೋಟೆಯ ಮೇಲೆ ಭಗವಾಧ್ವಜವನ್ನ ಮುಂದೆ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದಾಗ ಯಾವ ಬಿಜೆಪಿ ’ದೇಶಪ್ರೇಮಿ’ಯೂ ಪ್ರತಿಹೇಳಲಿಲ್ಲ. ಅಲ್ಲಿ ಈಶ್ವರಪ್ಪನ ಮಾತು ಬಿಜೆಪಿಯ ಮಾತಾಗಿ ಉಳಿಯಿತು. ಹಾಗೆಯೇ ಮುತಾಲಿಕ್ ಮಾತೂ ಕೂಡ ಬಿಜೆಪಿಯ ಅಧಿಕೃತ ಘೋಷಣೆಯಿರಬಹುದೆಂದು ಚಿಂತಿಸುತ್ತಿರುವಾಗ, ರಂಜಾನ್ ಸಮಯದಲ್ಲಿಯೇ ಈಶ್ವರಪ್ಪನವರ ದುನಿಯ ಖತಂ ಆಯಿತಂತಲ್ಲಾ, ಥೂತ್ತೇರಿ.

*****

ಬಿಜೆಪಿಯೊಳಗಿನ ಗರ್ಭಗುಡಿಯ ಸಂಸ್ಕೃತಿ ಕಾರ್ಯಾಚರಣೆಗಳ ಸೂಚನೆ ಸಂತೋಷ್ ಮುಖಾಂತರ ಹೊರಬರುವ ಕಾರಣಕ್ಕೆ ಸಂಘಿಗಳಲ್ಲದ ಬಿಜೆಪಿ ಜನನಾಯಕರ ಜಂಘಾಬಲವೇ ಉಡುಗಿ ಹೋಗಿದೆಯಂತಲ್ಲಾ. ಬಿಜೆಪಿ ಗರ್ಭಗುಡಿಯ ಮಹಿಮೆ ತಿಳಿಯದವರು ದೀಢಿರಂಥ ಬಿಜೆಪಿ ಸೇರಿ, ಅಲ್ಲಿನ ಪಡಸಾಲೆಯಲ್ಲಿ ಕುಳಿತು ಗರ್ಭಗುಡಿಯಲ್ಲಿನ ಪಿಸುಮಾತಿಗೆ ಹೆದರಿ ಓಡಿ ಬಂದ ನೂರಾರು ಉದಾಹರಣೆಗಳಿವೆ. ಆ ಗರ್ಭಗುಡಿಯ ಪ್ರವೇಶ ಪಡೆಯಬೇಕಾದರೆ ಟೋಪಿ ಲಾಟಿ ಗಾಳಿಯಾಡುವ ಚಡ್ಡಿಯೊಂದಿಗೆ, ಸುರಕ್ಷಿತವಾದ ಮೈದಾನದಲ್ಲಿ ನಿಂತು, ’ನಮಸ್ತೇ ಸದಾವತ್ಸಲೇ ಮಾತೃಭೂಮಿ’ ಎಂದು ಎದೆ ಮೇಲೆ ಕೈಯಿಟ್ಟು ಭಗವಾಧ್ವಜಕ್ಕೆ ವಂದಿಸಿರಬೇಕು. ಅದೂ ವರ್ಷಾನುಗಟ್ಟಲೆ ನಡೆಯಬೇಕು. ಈ ಬೈಟಕ್‌ನ ವಿಷಯ ಕರಗತವಾದ ಮೇಲೆಯೇ ಗರ್ಭಗುಡಿಯ ಪ್ರವೇಶ ದಕ್ಕುವುದು. ಸದರಿ ಸರಕಾರದಲ್ಲಿ ಕಾಂಗ್ರೆಸ್ ದಳದಿಂದ ತುಡುಗು ದನಗಳು ಓಡಿಬಂದು ಮೈಮೇಲೆ ನೆದರಿಲ್ಲದೆ ಮೇಯುತ್ತಿವೆ. ಅವುಗಳನ್ನೆಲ್ಲಾ ಪಿಂಜರಾಪೋಲು ದೊಡ್ಡಿಗೆ ದೂಡಬೇಕಾದರೆ ಕೆಲವು ಮಾನದಂಡಗಳನ್ನ ಕಿಡಿಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹತಾರಗಳನ್ನಾಗಲೇ ಮಸೆಯುತ್ತಿರುವ ಸಂತೋಷ್ ಎಂಬ ಸಂಘವೀರನ ಮಾತಿನಿಂದ ಮುಮಂ ಬಸವರಾಜ ಬೊಮ್ಮಾಯಿ ಬಸವಳಿದು ಹೋಗಿದ್ದಾರಂತಲ್ಲಾ, ಥೂತ್ತೇರಿ.

*****

ಪಿಎಸ್‌ಐ ಅಕ್ರಮದಿಂದ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟತೆಯಲ್ಲಿ ನೂರು ಪರಸೆಂಟ್ ಗಡಿಯನ್ನು ಮುಟ್ಟಿತಂತಲ್ಲಾ. ಕರ್ನಾಟಕದಲ್ಲಿ ಯಾವುದೂ ನ್ಯಾಯವಾಗಿ ಸಿಗುವುದಿಲ್ಲ, ಎಲ್ಲದಕ್ಕೂ ಲಂಚ ಕೊಡಲೇಬೇಕೆಂಬ ನಿಯಮ ಜಾರಿಯಾದುದಕ್ಕೆ ಕಾರಣ ಹುಡುಕುತ್ತ ಹೋದರೆ, ಒಂದು ಕಾಲದಲ್ಲಿ ಅಷ್ಟೋಇಷ್ಟೋ ಪ್ರಾಮಾಣಿಕವಾಗಿದ್ದ ಅಂದರೆ, ಎ.ಕೆ ಸುಬ್ಬಯ್ಯ ಶಿವಪ್ಪನವರ ಕಾಲದಲ್ಲಿ ಇದ್ದದ್ದಕ್ಕಿಂತ ಇಂದು ಭ್ರಷ್ಟತೆಯ ವಿಷವೃಕ್ಷವಾಗಿ ಬೆಳೆಯಲು ಪಾರ್ಟಿಯ ಅಜೆಂಡಾವೆ ಕಾರಣವಂತಲ್ಲಾ. ಅಂದು ನಾಗಪುರದಿಂದ ಹೊರಟ ಆದೇಶದಂತೆ ಬಿಜೆಪಿ ಈ ದೇಶದಲ್ಲಿ ಬಲಿಷ್ಟವಾಗಿ ಬೇರೂರಬೇಕಾದರೆ ಹಣ ಬೇಕು. ಆ ಹಣ ಸರಕಾರದ ಖಜಾನೆಯಿಂದಲೇ ಬರಬೇಕು ಮತ್ತು ಸರಕಾರದ ಕಾರ್ಯಕ್ರಮಗಳಿಂದಲೇ ಕಟಾವಾಗಬೇಕು, ಹುದ್ದೆ ನೀಡುವಲ್ಲಿ ವಸೂಲಾಗಬೇಕು, ಆದ್ದರಿಂದ ಪಾರ್ಟಿಯ ಕಾರ್ಯಕರ್ತರು ಪಾರ್ಟಿಯವರ ಮೇಲೆ ಭ್ರಷ್ಟತೆ ಆಪಾದನೆ ಮಾಡಬಾರದು, ತಮ್ಮ ಪಾಲನ್ನು ಪ್ರಸಾದದಂತೆ ಪಡೆದು ಪಾರ್ಟಿ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂಬ ಮೌಖಿಕ ಕಾನೂನು ಜಾರಿಯಾದ್ದುದರಿಂದ ಅವ್ಯಾಹತವಾಗಿ ಸರಕಾರದಿಂದಲೇ ಭ್ರಷ್ಟತೆ ನಡೆದಿದ್ದರಿಂದ, ಸದ್ಯಕ್ಕೆ ಕರ್ನಾಟಕ ಹಂಡ್ರೆಡ್ ಪರಸೆಂಟ್ ಭ್ರಷ್ಟತೆಯಲ್ಲಿ ಮುಳುಗಿದೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...