Homeಅಂಕಣಗಳುಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

ಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

- Advertisement -
- Advertisement -
  1. ಗಡಿ

ಛೇ!
ಇದು ಬರೀ ಒಂದು ಗೆರೆ ಕಣೋ
ಯಾರೋ ಸಿಟ್ಟಲ್ಲಿ ಗೀಚಿದ್ದಾರೆ ಅಷ್ಟೆ.
ಬಾ, ಬಾ ಈ ಗೆರೆಯನ್ನೇ
centre line ಮಾಡಿ ಕಬಡ್ಡಿ ಆಡೋಣ.

ನನ್ನ ಏರಿಯಾಗೆ ಬಾ, ಬಂದು
ಒಂದು ಆವಾಜ್ ಹಾಕು.
ನನ್ನ ಮೇಲೆ ಕೈ ಬೀಸು, ಮುಟ್ಟಿ
ಹಿಂದಿರುಗು ನೋಡೋಣ.

ನಾನೂ ಬಿಡೋದಿಲ್ಲ
ನಿನ್ನ ಮೇಲೆ ಬೀಳುತ್ತೇನೆ
ಕಟ್ಟಿಹಾಕುತ್ತೇನೆ ವಾಪಸ್ಸು ಹೋಗದಂತೆ.

ನನ್ನ ಪಾಳಿ ಈಗ,
ನಿನ್ನ ಏರಿಯಾಕ್ಕೆ ನಾನು
ಹು ತು ತೂ ಅನ್ನುತ್ತ ಆಕ್ರಮಣ ಮಾಡಿದಾಗ
ಸಾಧ್ಯವಾದರೆ ನನ್ನ ಹಿಡಿ
ಬಿಡಬೇಡ ವಾಪಸ್ಸು ಗಡಿ ದಾಟಲು.

ಇದು ಬರೀ ಒಂದು ಗೆರೆ ಕಣೋ
ಹಾಗೇ ಇರಲಿ ಬಿಡು
ಯಾರೋ ಸಿಟ್ಟಿನಿಂದ ಗೀಚಿದ್ದಾರೆ
ಅಷ್ಟೇ.

ಗುಲ್ಜಾರ್
ಖ್ಯಾತ ಉರ್ದು ಕವಿ – ಸಿನಿಮಾ ಸಾಹಿತಿ

*****

2. ಕಣ್ಣುಗಳಿಗೆ ವೀಸಾ ಬೇಕಿಲ್ಲ

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.
ಕಣ್ಮುಚ್ಚಿ
ಹಾರಿಬಿಡುತ್ತೇನೆ ಪ್ರತಿದಿನ
ಗಡಿಗಳ ಮಿತಿಯನ್ನು,
ಭೇಟಿಯಾಗಲು
ಮೆಹದೀ ಹಸನ್‌ನನ್ನು!

ಪೆಟ್ಟಾಗಿದೆಯಂತೆ ಅವನ ದನಿಗೇನೋ
ಕುಳಿತುಬಿಟ್ಟಿದೆಯಂತೆ ಗಜಲ್
ಅವನೆದುರು ಮೂಕವಾಗಿ
ತುಟಿ ಕಂಪಿಸುತ್ತ
ಪುಟಗಳ ನಡುವಿನ ಹೂವು
ಒಣಗಿಹೋಗಿದೆಯೆಂದರೆ
ಗೆಳೆಯ ’ಫರಾಜ್’ ಕೂಡ
ಇನ್ನಿಲ್ಲ ಎಂದೇ ಅರ್ಥ.
ಬಹುಶಃ ಇನ್ನು ಕನಸುಗಳಲ್ಲೇ
ನಮ್ಮ ಭೇಟಿ.

ಕಣ್ಮುಚ್ಚಿಕೊಂಡು ದಾಟಿಬಿಡುತ್ತೇನೆ
ಗಡಿಗಳ ಮಿತಿಯನ್ನು ಮೇಲಿಂದ ಮೇಲೆ.

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.

ಗುಲ್ಜಾರ್
ಖ್ಯಾತ ಉರ್ದು ಕವಿ- ಸಿನಿಮಾ ಸಾಹಿತಿ

*****

3. ಕಲಾವಿದನ ಸಂಕಟ

ಹಿಂದುಸ್ತಾನ್ ಜಿಂದಾಬಾದ್
ಪಾಕಿಸ್ತಾನ್ ಜಿಂದಾಬಾದ್
ಎಂದು ಕೂಗುತ್ತ, ಚೀರುತ್ತ ಸಾಗಿರುವ
ಘೋಷಣೆಗಳ ನಡುವೆ
ಬೇಕಾದಷ್ಟು ಪ್ರಶ್ನೆಗಳಿದ್ದವು.

ಯಾವುದನ್ನ ನನ್ನ ದೇಶ ಅಂತ ಹೇಳಲಿ?
ಜನ ಯಾಕೆ ಹೀಗೆ ಒಬ್ಬರಾದ ಮೇಲೊಬ್ಬರು ಸಾಯುತ್ತಿದ್ದಾರೆ?

ಈ ಪ್ರಶ್ನೆಗಳಿಗೆ ಕೆಲವು ನಿರ್ದಿಷ್ಟ ಉತ್ತರಗಳಿವೆ
ಕೆಲವು ಹಿಂದುಸ್ತಾನಿ ಉತ್ತರಗಳು
ಕೆಲವು ಪಾಕಿಸ್ತಾನಿ ಉತ್ತರಗಳು
ಕೆಲವು ಹಿಂದೂ ಉತ್ತರಗಳು
ಕೆಲವು ಮುಸ್ಲಿಂ ಉತ್ತರಗಳು
ಕೆಲವರು ಉತ್ತರಗಳನ್ನ 1857ರ ಪಾಳುಬಿದ್ದ ಇತಿಹಾಸದಲ್ಲಿ ಹುಡುಕಿದರೆ
ಇನ್ನೂ ಕೆಲವರು ಮೊಘಲ್ ಆಡಳಿತದ ಅವಶೇಷಗಳಲ್ಲಿ.

ಎಲ್ಲ ಹಿಂದೆ ಹೋಗಿ ಹುಡುಕುತ್ತಿದ್ದಾರೆ
ಆದರೆ ಇವತ್ತಿನ ಕೊಲೆಗಾರ
ರಕ್ತ ಮತ್ತು ಚೂರಿಗಳಿಂದ ಭವಿಷ್ಯ ಬರೆಯುತ್ತಿದ್ದಾನೆ

ಈ ಸುದ್ದಿ ಹೇಳುತ್ತ ಹೇಳುತ್ತ
ನಾನು ನಿಮ್ಮ ಕಲ್ಲೇಟುಗಳನ್ನ ಬೇಕಾದರೆ ಸಹಿಸಬಲ್ಲೆ
ಆದರೆ ಹಿಂದೂ-ಮುಸ್ಲಿಂ ದಂಗೆಯಲ್ಲಿ
ಯಾರಾದರೂ ನನ್ನ ತಲೆ ಒಡೆದರೆ
ನನ್ನ ರಕ್ತದ ಪ್ರತಿ ಹನಿಯೂ ಕಣ್ಣೀರಿನಲ್ಲಿ ಕೈ ತೊಳೆಯುತ್ತದೆ.

ನಾನೊಬ್ಬ ಕಲಾವಿದ
ನನಗೆ ದುಷ್ಟ ಗಾಯಗಳು ಮತ್ತು
ಕೊಳಕು ಕಲೆಗಳು ಇಷ್ಟವಿಲ್ಲ.

ಸಾದತ್ ಹಸನ್ ಮಂಟೋ
ಉರ್ದುವಿನಲ್ಲಿ ಬರೆಯುತ್ತಿದ್ದ ಖ್ಯಾತ ಕಥೆಗಾರ

*****

4. ಪ್ರೇಮದ ಪಾತ್ರ

ನಮ್ಮ ಈ ದೇಶದಲ್ಲಿ
ಎಷ್ಟೋ ಶತಮಾನಗಳ ನಂತರ
ನಮಗೆ ಸಾಧ್ಯವಾಗಿದೆ ಉಸಿರಾಡಲು,
ಎಷ್ಟೋ ದಶಕಗಳಾದ ಮೇಲೆ
ಅವಕಾಶ ದೊರೆತಿದೆ ಪ್ರೇಮಿಸಲು,
ಎಷ್ಟೋ ಸಮಯವಾದ ಮೇಲೆ
ಶುರು ಮಾಡಿದ್ದೇವೆ ಓದಲು, ಬರೆಯಲು.

ಈಗ ನಾವು ರೂಪಿಸಬೇಕಾಗಿದೆ
ನಮ್ಮ ಪ್ರೇಮ ಪದ್ಯಗಳಲ್ಲಿ
ಬಂಡಾಯದ ರೂಪಕಗಳನ್ನು

ಪ್ರೇಮ ತಾನೇ ಸ್ವತಃ
ಎದ್ದು ನಿಂತು ವಹಿಸಬೇಕಾಗಿದೆ
ಬಂಡಾಯದ ಪಾತ್ರ.

ಯೋಗೇಶ ಮೈತ್ರೇಯ
ಮರಾಠಿ ಯುವ ಕವಿ ಮತ್ತು ವಿಮರ್ಶಕ

*****

5. ಶಿಕ್ಷೆಯ ಅಗತ್ಯವಿಲ್ಲ

ಇನ್ನೊಬ್ಬರಿಂದ
ನಿಮಗೆ ನೋವಾಗುತ್ತಿದೆಯೆಂದರೆ
ಆ ಇನ್ನೊಬ್ಬರು ತಮ್ಮೊಳಗೆ
ಅನುಭವಿಸುತ್ತಿದ್ದಾರೆ ಆಳವಾದ ಸಂಕಟ,
ಮತ್ತು ಉಕ್ಕಿ ಹರಿಯುತ್ತಿದೆ.
ಅವರ ಈ ನೋವು

ನಿಮ್ಮ ಶಿಕ್ಷೆಯ ಅಗತ್ಯವಿಲ್ಲ ಅವರಿಗೆ
ಬೇಕಾಗಿದೆ ನಿಮ್ಮ ಸಹಾಯ
ಈ ಸಂದೇಶವನ್ನೇ ಅಲ್ಲವೆ
ಅವರು ತಲುಪಿಸಲು ಪ್ರಯತ್ನಿಸುತ್ತಿರುವುದು
ನಿಮಗೆ.

ತಿಚ್ ನ್ಹಾತ್ ಹಾನ್
ಬೌದ್ಧ ಚಿಂತಕ-ಬರಹಗಾರ

*****

6. ಹೃದಯದ ಬಾಗಿಲು

ಯಾರನ್ನ ವೈರಿ ಎಂದು ಗುರುತಿಸಲಿ?
ವೈರಿ ಎಂದಮೇಲೆ ಕೈ ಕೈ ಮಿಲಾಯಿಸಲು ತಕ್ಕವನಾಗಿರಬೇಕು.
ಸೂರ್ಯನ ದಿಕ್ಕಿಗೆ ಹೊರಳಿ ಒಂದೇ ಸವನೇ ನಡೆಯುತ್ತಿದ್ದೇನೆ.
ಈಗ ಪ್ರಶ್ನೆ ಕೇಳುತ್ತಿರುವುದು ಹೃದಯ,
ಉದ್ರಿಕ್ತ ಮನಸ್ಸಲ್ಲ.
ಹೃದಯ ಮತ್ತು ಸೂರ್ಯನ ಅಮ್ಮಂದಿರು
ಖಾಸಾ ಅಕ್ಕ ತಂಗಿಯರು.
ಹೃದಯಕ್ಕೆ ನೋಡುವುದೂ ಗೊತ್ತು
ನೋಡಿದ್ದಕ್ಕೆ ಅರ್ಥ ಹಚ್ಚುವುದೂ ಗೊತ್ತು.
ಹೃದಯ,
ಕಟಕಟ ಎನ್ನುತ್ತಿರುವ ಹಲ್ಲುಗಳ ಸಿಟ್ಟಿನ ಕಥೆಯನ್ನು
ಎಷ್ಟು ಸೂಕ್ಷ್ಮವಾಗಿ
ಅರ್ಥಮಾಡಿಕೊಳ್ಳುತ್ತದೆಯೋ
ಅಷ್ಟೇ ಸೂಕ್ಷ್ಮವಾಗಿ
ಮನದಲ್ಲಿಯೇ ಅಂದುಕೊಂಡ ಹಾರೈಕೆಯನ್ನೂ ಕೇಳಿಸಿಕೊಳ್ಳಬಲ್ಲದು.

ಮನಸ್ಸಿನ ಬಾಗಿಲು
ಹೃದಯದ ಮೂಲಕವೇ ತೆರೆದುಕೊಳ್ಳಬೇಕು,
ಯಾವ ವೈರಿ ಒಳಗೆ ನುಗ್ಗಿದರೂ
ಗೆಳೆಯನಾಗುವ ಅಪಾಯವನ್ನು ದಾಟಿಯೇ
ಮುಂದೆ ಹೋಗಬೇಕು.

ಜಾಯ್ ಹಾಜೊ
ಅಮೆರಿಕನ್ ಕವಿ-ಸಂಗೀತಕಾರ್ತಿ

*****

7. ಭಗವಂತನ ಪವಿತ್ರ ಯೋಜನೆ

ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.

ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.

ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,

ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ

ಶಮ್ಸ್ ತಬ್ರೀಝೀ
12 ನೇ ಶತಮಾನದ ಪರ್ಶಿಯನ್ ಕವಿ

*****

8. ಭಗವಂತನಿಂದ

ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ, ಬೌದ್ಧ
ಎಂದೆಲ್ಲ ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ
ಎಷ್ಟು ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ ಎಂದುಕೊಳ್ಳಲೂ
ಭಯವಾಗುತ್ತದೆ.

ಪ್ರೇಮ ನನ್ನನ್ನು
ಎಷ್ಟು ಅಲುಗಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ, ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.

ಹಾಫಿಜ್
14ನೇ ಶತಮಾನದ ಪರ್ಶಿಯನ್ ಕವಿ

ಚಿದಂಬರ ನರೇಂದ್ರ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಕವಿ-ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಚಿದಂಬರ ಅನುವಾದಿಸಿರುವ ಕವನ ಸಂಕಲನ. ’ಗಾಳಿಕೆನೆ’ ಅವರ ಸ್ವತಂತ್ರ ಕವಿತೆಗಳ ಸಂಕಲನ


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...