Homeಅಂಕಣಗಳುಶ್ರೀನಿವಾಸ್ ಪ್ರಸಾದ್‌ಗೆ ನಿರ್ಮಲಾ ನೀತಿ ಬೋಧೆ!

ಶ್ರೀನಿವಾಸ್ ಪ್ರಸಾದ್‌ಗೆ ನಿರ್ಮಲಾ ನೀತಿ ಬೋಧೆ!

- Advertisement -
- Advertisement -

ಆಡಳಿತ ಪಕ್ಷವೊಂದು ಸರಿಯಾಗಿ ಕೆಲಸ ಮಾಡಬೇಕಾದರೆ ಸಮರ್ಥ ವಿರೋಧ ಪಕ್ಷವೂ ಬೇಕಂತೆ. ಹಾಗಾಗಿ ಕರ್ನಾಟಕದಲ್ಲಿ ಸಮರ್ಥವಾಗಿಯೇ ಕೆಲಸ ಮಾಡುತ್ತಿದ್ದ ಕಾಂಗೈ ಪಾರ್ಟಿಯ ಯಾವ ಮಾತಿಗೂ ಕಿವಿಗೊಡದೆ ನಡೆದಿದ್ದ ಬಿಜೆಪಿ ಸರಕಾರ, ರಾಹುಲ್‌ಗಾಂಧಿ ಮಾಡುತ್ತಿರುವ ಜಾಥಕ್ಕೆ ಜನ ಮುತ್ತಿಗೊಳ್ಳುತ್ತಿರುವುದನ್ನು ನೋಡಿ ಗಾಬರಿಗೊಂಡು, ತನ್ನ ಮೀಸಲಾತಿ ವಿರೋಧವನ್ನು ಬದಿಗಿಟ್ಟು ಮೀಸಲಾತಿಯನ್ನು ಜಾರಿಗೆ ತಂದುಬಿಟ್ಟಿತಲ್ಲಾ. ಈ ಕ್ರಾಂತಿಕಾರಿ ತೀರ್ಮಾನದ ಹಿಂದಿರುವ ಹಿಕಮತ್ತೇನೆಂದರೆ ಈ ಮೀಸಲಾತಿ ಜಾರಿಗೆ ಮುನ್ನ ಸದನದಲ್ಲಿ ಚರ್ಚೆಯಾಗಬೇಕು; ಆ ನಂತರ ಲೋಕಸಭೆಗೂ ಸದರಿ ಮಸೂದೆ ಹೋಗಬೇಕು; ಆ ನಂತರ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯಬೇಕು; ಇದೆಲ್ಲಾ ಆಗುವುದರಲ್ಲಿ ಕರ್ನಾಟಕದ ಚುನಾವಣೆಯೇ ಮುಗಿದು ಲೋಕಸಭೆ ಚುನಾವಣೆಯೂ ಬರಬಹುದು. ಆದರೆ ಯಾವ ಸಾಧನೆಯನ್ನೂ ಮಾಡದೆ ಬರಿಗೈಲಿ ಚುನಾವಣೆಗೆ ಹೊರಟಿದ್ದ ಬಿಜೆಪಿ ಕೈಗೆ ಮೀಸಲಾತಿ ಸೌಟು ಸಿಕ್ಕಿದೆ. ಬಕೇಟು ಕೂಡ ಪೂರ್ತಿ ಖಾಲಿಯಿದೆ; ಉದ್ಯೋಗವನ್ನೇ ಸೃಷ್ಟಿಸದ ಖಾಲಿ ಹುದ್ದೆ ತುಂಬದ ಬಿಜೆಪಿ ಸಂಚಿಗೆ ದಲಿತರು ಮೋಸ ಹೋಗುತ್ತಾರೋ ಇಲ್ಲವೋ ಕಾದುನೋಡಬೇಕಂತಲ್ಲಾ, ಥೂತ್ತೇರಿ.

*****

ಬೊಮ್ಮಾಯಿ ಮೀಸಲಾತಿ ಬುಟ್ಟಿಗೆ ಕೈ ಹಾಕಿದ ಕೂಡಲೇ ಎಲ್ಲಾ ಜಾತಿಗಳು ಜೇನು ಬುಟ್ಟಿಯಿಂದ ಎದ್ದ ಜೇನುಹುಳುಗಳಂತೆ ಝೇಂಕಾರದ ಶಬ್ದ ಮಾಡುತ್ತ ಬೊಮ್ಮಾಯಿಯವರನ್ನು ಮುತ್ತಿಕೊಂಡವಲ್ಲಾ. ಈ ಮೊದಲು ಜನಾಂಗದ ಮುಖಂಡರಿದ್ದರೆ ಈಗ ಎಲ್ಲ ಜಾತಿಗಳಲ್ಲೂ ಸುಖ ಸಂತೋಷದ ಸುಪ್ಪತ್ತಿಗೆಯಲ್ಲಿರುವ ಜಗದ್ಗುರುಗಳೇ ಜಾತಿ ನಾಯಕರಾಗಿದ್ದಾರೆ. ಈ ಪೈಕಿ ಕರ್ನಾಟಕದ ಎರಡನೇ ದೊಡ್ಡ ಸಮುದಾಯವಾದ ಒಕ್ಕಲಿಗರ ಜಗದ್ಗುರು ನಿರ್ಮಲಾನಂದರು ಮೀಸಲಾತಿಗೆ ಕೈಯೊಡ್ಡಿ ನಮಗೆ ಕೊಡುವ ನಾಲ್ಕು ಪರಸೆಂಟು ಯಾತಕ್ಕೂ ಸಾಲುತ್ತಿಲ್ಲ ನಾವು ಹದಿನಾರು ಪರಸೆಂಟ್ ಇರುವುದರಿಂದ, ಅಷ್ಟೂ ಪರಸೆಂಟ್ ಮೀಸಲಾತಿ ಏನೂ ಬೇಡ, ಹನ್ನೆರಡು ಪರಸೆಂಟ್ ಕೊಡಿ; ಇಲ್ಲವಾದರೆ ಬೆಂಗಳೂರು ಸುತ್ತ ಭೂಮಿ ಮಾರಿಕೊಂಡು ಬೆಂಗಳೂರಿನ ಬಾರು ಕ್ಲಬ್ಬು ಹೋಟೆಲುಗಳಲ್ಲಿ ಕಳೆದುಹೋಗಿರುವ ಒಕ್ಕಲಿಗರನ್ನು ಒಟ್ಟಿಗೆ ಸೇರಿಸಿ ವಿಜಯನಗರದಿಂದ ಭೂಮಿ ಮಾರಿಕೊಂಡ ಜಾಗಕ್ಕೆ ಜಾಥ ತೆಗೆಯುತ್ತೇವೆ ಎಂದಿದ್ದಾರಲ್ಲಾ. ಬೆಂಗಳೂರು ಸುತ್ತಮುತ್ತ ಒಕ್ಕಲಿಗರು ಭೂಮಿ ಮಾರಿಕೊಂಡಿದ್ದಕ್ಕೆ ಕಾರಣ ಅಂದು ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರು. ಭೂಮಿ ಮಾರಿಕೊಂಡ ಜನಾಂಗ ಮುಂದೇನು ಮಾಡಬೇಕೆಂಬ ಕಸುಬಿನ ಪಟ್ಟಿಯನ್ನ ಅವರೇ ತಯಾರಿಸಿ ಕೊಡಬೇಕಿತ್ತು, ಕೊಟ್ಟಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ನಿರ್ಮಲಾನಂದರು ಒಕ್ಕಲಿಗರ ಇತಿಹಾಸದ ಪಥ ಬಿಟ್ಟು ಉತ್ತರಪ್ರದೇಶದ ದಾರಿ ಹಿಡಿದಿದ್ದಾರೆ. ಉತ್ತರದ ಶಾ ಆದಿತ್ಯರು ಮೀಸಲಾತಿ ವಿರೋಧಿಗಳು. ನಿರ್ಮಲಾನಂದರು ಎಬ್ಬಿಸುವ ಮೀಸಲಾತಿ ಗಲಭೆ ತೀವ್ರಗೊಂಡು ಮೀಸಲಾತಿಯೇ ರದ್ದಾಗುವ ಅಪಾಯವನ್ನು ಬಿಜೆಪಿಗಳೇ ತಯಾರಿಸಿರಬಾರದೇಕೆ ಎಂದು ಶ್ರೀನಿವಾಸ್ ಪ್ರಸಾದರ ಕಡೆ ಜನ ಗುಮಾನಿ ಪಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಅರ್ಧ ಶತಮಾನದ ಹಿಂದೆ ಮೈಸೂರು ಕಡೆಯಿಂದ ಮೇಲೆದ್ದು ಬಂದ ದಲಿತ ನಕ್ಷತ್ರ ಶ್ರೀನಿವಾಸ ಪ್ರಸಾದ್ 2024ರಿಂದ ನಿವೃತ್ತಿಯಾಗುತ್ತಾರಂತಲ್ಲಾ. ಹಾಗೆ ನೋಡಿದರೆ ಅವರು ನಿವೃತ್ತಿಯಾಗಿದ್ದುದು ಸಿದ್ದರಾಮಯ್ಯನ ಸಂಪುಟದಲ್ಲಿ ಸಚಿವರಾದಾಗಲೇ. ಬಹುಮುಖ್ಯವಾದ ರೆವಿನ್ಯೂ ಖಾತೆ ಪಡೆದು ರಗ್ಗು ಹೊದ್ದು ಮಲಗಿದ್ದನ್ನು ನೋಡಿದ ಸಿದ್ದು ಖಾತೆ ಬದಲಿಸಿದರು. ಸಿಟ್ಟುಗೊಂಡ ಶ್ರೀನಿವಾಸ್ ಎದ್ದುಹೋಗಿ ಬಿಜೆಪಿ ಕದ ಬಡಿದರು. ಅವರು ಕದಬಡಿಯುತ್ತಿದ್ದಾಗ ಉತ್ತರ ಕನ್ನಡದವನೊಬ್ಬ ’ನಾವು ಸಂವಿಧಾನ ಬದಲಿಸುತ್ತೇವೆ’ ಎಂದ ವಿಕೃತ ಮಾತು ಶ್ರೀನಿವಾಸರ ಕಿವಿಗೆ ಬೀಳಲೇಯಿಲ್ಲ. ಅವರು ರಾಜಕಾರಣಕ್ಕೆ ಬಂದಾಗ ದಲಿತರು ಗುಡಿಸಲಲ್ಲಿದ್ದು ಬಡತನದಲ್ಲಿದ್ದರಂತೆ ಈಗಲೂ ಹಾಗೇ ಇರುವುದನ್ನು ನೋಡಿ ಮೋದಿಯವರಿಗೆ ತಿಳಿಸಿದರಂತೆ; ಆಗ ಅಲ್ಲೇ ಇದ್ದ ನಿರ್ಮಲಾಸೀತಾರಾಂ ಕೂಡಲೇ ಸಾರ್ ಗುಡಿಸಲಲ್ಲಿರುವ ದಲಿತರು ಅದನ್ನು ಒಳ್ಳೆಮನೇಯಲ್ಲಿದ್ದೇವೆ ಅಂದುಕೊಂಡರಾಯ್ತು. ಇನ್ನ ನಮಗೆ ಬಡತನವೇಇಲ್ಲ; ಎಳೆ ಬಾಳೆದೆಲೆಯ ಮೇಲೆ ಈಗ ತಾನೆ ಸಣ್ಣಕ್ಕಿ ಅನ್ನವನ್ನು ಹುಳಿಯಲ್ಲಿ ಕಲೆಸಿ ತುಪ್ಪ ಹಾಕಿಕೊಂಡು ಚಪ್ಪರಿಸುತ್ತ ಹಪ್ಪಳ ಸೊಂಡಿಗೆ ಪತ್ರೊಡೆ ಕಡ್ಳೆ ಪಾಯಸದೊಂದಿಗೆ ಉಂಡಿದ್ದೇವೆ ಎಂದುಕೊಂಡರಾಯ್ತು ಸಾರ್, ನಮ್ಮ ಭಾವನೆಗಳೇ ಬದಲಾಗುತ್ತವೆ. ಈಚೆಗೆ ಬಿಜೆಪಿಗೆ ಬರುತ್ತಿರುವ ಬಡವರಿಗೆ ನಾವು ಹೀಗೆಯೇ ಹೇಳುತ್ತಿದ್ದೇವೆ ಎಂದರಂತಲ್ಲಾ, ಥೂ ಥೂ ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...