Homeಅಂತರಾಷ್ಟ್ರೀಯಪೊಲೀಸರಿಂದ 17 ವರ್ಷದ ಬಾಲಕನ ಹತ್ಯೆ: ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳು

ಪೊಲೀಸರಿಂದ 17 ವರ್ಷದ ಬಾಲಕನ ಹತ್ಯೆ: ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳು

- Advertisement -
- Advertisement -

ಫ್ರಾನ್ಸ್‌ನ ಪ್ಯಾರಿಸ್ ನಗರದಲ್ಲಿ 17 ವರ್ಷದ ವಾಹನ ಚಾಲಕನನ್ನು ಟ್ರಾಫಿಕ್ ಪೊಲೀಸರು ಹತ್ಯೆಗೈದ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಇದುವರೆಗೂ ಸುಮಾರು 667ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, 200ಕ್ಕೂ ಅಧಿಕ ಪೊಲೀಸರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ನಹೆಲ್ ಎಂಬ 17 ವರ್ಷದ ಬಾಲಕನು ಓದುತ್ತಿರುವಾಗಲೇ ಆಹಾರ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ಟ್ರಾಫಿಕ್ ಪೊಲೀಸರು ನಾಂತೇರ್‌ನಲ್ಲಿ ವಾಹನ ತಪಾಸಣೆ ವೇಳೆ ವಿನಾಕಾರಣ ಗುಂಡು ಹಾರಿಸಿ ಆತನನ್ನು ಕೊಲೆಗೈಯಲಾಗಿದೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನೆಗಳು ದಾಖಲಾಗಿವೆ. ಪೊಲೀಸರು ಮತ್ತು ಪೊಲೀಸ್ ಕಚೇರಿಗಳ ಮೇಲೆ ಪಟಾಕಿಗಳನ್ನು ಹಚ್ಚಿ ಎಸೆಯಲಾಗಿದೆ. ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಯಾಗಿ ಪೊಲೀಸರು ಅಶ್ರವಾಯು ಸಿಡಿಸಿದ್ದಾರೆ.

ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 40,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರುವಂತೆ ಮನವಿ ಮಾಡಿದ್ದಾರೆ. “17 ವರ್ಷದ ಬಾಲಕನ ಹತ್ಯೆ ಅನರೀಕ್ಷಿತ ಮತ್ತು ಅಕ್ಷಮ್ಯವಾದುದು. ಪೊಲೀಸರ ಈ ವರ್ತನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಪ್ರತಿಯಾಗಿ ನಾಗರೀಕರು ಶಾಂತಿ ಧಕ್ಕೆ ತರಬಾರದು” ಎಂದಿದ್ದಾರೆ.

ಫ್ರಾನ್ಸ್ ತನ್ನ ಪೋಲಿಸ್‌ನಲ್ಲಿ ಜನಾಂಗೀಯ ತಾರತಮ್ಯದ ಆಳವಾದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ವಿಶ್ವಸಂಸ್ಥೆ ಹೇಳಿದೆ, “ಉತ್ತರ ಆಫ್ರಿಕಾದ ಮೂಲದ 17 ವರ್ಷದ ಯುವಕನನ್ನು ಫ್ರಾನ್ಸ್‌ನಲ್ಲಿ ಪೊಲೀಸರು ಕೊಂದಿದ್ದರಿಂದ ನಾವು ಕಳವಳಗೊಂಡಿದ್ದೇವೆ … ಕಾನೂನು ಜಾರಿಯಲ್ಲಿನ ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಆಳವಾದ ಸಮಸ್ಯೆಗಳನ್ನು ದೇಶವು ಗಂಭೀರವಾಗಿ ಪರಿಹರಿಸಲು ಇದು ಸರಿಯಾದ ಸಂದರ್ಭವಾಗಿದೆ” ಎಂದು ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಹಾಗೂ ರಾಷ್ಟ್ರೀಯ ಏಕತೆಯನ್ನು ಖಾತ್ರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಅದಕ್ಕಾಗಿ ದೇಶದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕರೆದ ತುರ್ತು ಕ್ಯಾಬಿನೆಟ್ ಸಭೆಯು ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುವ ಗುರಿಯನ್ನು ಹೊಂದಿದೆ ಎಂದು ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಹೇಳಿದ್ದಾರೆ.

ಮಧ್ಯ ಪ್ಯಾರಿಸ್‌ನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ನಾಂಟೆರ್ರೆಯ ವಿಯುಕ್ಸ್-ಪಾಂಟ್ ನೆರೆಹೊರೆಯಲ್ಲಿ ನಹೆಲ್ ತನ್ನ ತಾಯಿ ಮೌನಿಯಾ ಅವರೊಂದಿಗೆ ವಾಸಿಸುತ್ತಿದ್ದರು. 2021 ರಲ್ಲಿ ಲೈಸಿ ಲೂಯಿಸ್ ಬ್ಲೆರಿಯಟ್‌ನಲ್ಲಿ ಎಲೆಕ್ಟ್ರಿಕ್‌ಗೆ ಸಂಬಂಧಿಸಿದ ಕೋರ್ಸ್‌ಗೆ ಸೇರಿದ್ದರು. ಬಿಡುವಿನ ವೇಳೆಯಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಮಾನ್ಯ ಕ್ಷೇತ್ರವೇ ಸಾಮರ್ಥ್ಯದ ಪರೀಕ್ಷೆಯೇ? ಮೀಸಲು ಕ್ಷೇತ್ರದ ಗೆಲುವನ್ನು ಪ್ರಶ್ನಿಸುವವರ ಸಂವಿಧಾನಾತ್ಮಕ ಅರಿವು ಎಷ್ಟಿದೆ?

ಮೀಸಲಾತಿಯನ್ನು ಸಂವಿಧಾನ ನೀಡಿದ ಹಕ್ಕು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುವವರು ಪರಿಶಿಷ್ಟ ಜಾತಿಯ ನಾಯಕರಿಗೆ ಮಾತ್ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕುತ್ತಿರುವುದು ಯಾವ ರೀತಿಯ ಪ್ರಜಾಪ್ರಭುತ್ವದ ಮನೋಭಾವ? ಭಾರತದ ರಾಜಕೀಯದಲ್ಲಿ ಪರಿಶಿಷ್ಟ...

ಭಾರತ್ ಸಮ್ಮಿಟ್‌ನ 115 ಭಾಷಣಕಾರರಿಗೆ ಭಾರತ ಪ್ರವೇಶ ನಿರಾಕರಣೆ : ವೀಸಾ ವಿಚಾರ ‘ಸಾರ್ವಭೌಮ ಅಧಿಕಾರ’ ಎಂದ ವಿದೇಶಾಂಗ ಸಚಿವಾಲಯ

ಆರಂಭದಲ್ಲಿ ಅನುಮತಿ ನೀಡಿದ ನೀಡಿದ್ದರೂ, ಕಾಂಗ್ರೆಸ್ ಪಕ್ಷದ 'ಭಾರತ್ ಸಮ್ಮಿಟ್'ನಲ್ಲಿ ಭಾಗವಹಿಸಬೇಕಿದ್ದ ಮೂರನೇ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷಣಕಾರರ ಭಾರತ ಪ್ರವೇಶಿಸಕ್ಕೆ ತಡೆಯೊಡ್ಡಲಾಗಿದೆ. ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ...

ಗ್ರಾಮ ದೇವತೆ, ದೇವಸ್ಥಾನದ ಜಾಗ, ಸಾರ್ವಜನಿಕ ರಸ್ತೆ ಕಬಳಿಕೆ ಆರೋಪ; ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಕುಟುಂಬದ ಒತ್ತುವರಿ ಜಾಗ ತೆರವುಗೊಳಿಸಿದ ಅಧಿಕಾರಿಗಳು!

ಜಾನಪದ ಗಾಯಕಿ ಹಾಗೂ ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಕುಟುಂಬವು ದರ್ಭಂಗಾ ಜಿಲ್ಲೆಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಸ್ಥಳೀಯ ಆಡಳಿತವು ಗುರುವಾರ ತೆರವುಗೊಳಿಸಿದೆ. 'ದಿ...

ಜಿಬಿಎ ಚುನಾವಣೆ ಗಡುವು ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅನುಮತಿ ಕೋರಿದ ಕರ್ನಾಟಕ ಚುನಾವಣಾ ಆಯೋಗ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ವಿಧಿಸಿರುವ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ....

ಮುಸ್ಲಿಮರ ಮನೆ ಕೆಡವಿದ ಬುಲ್ಡೋಜರ್‌ಗಳೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದ ಯೋಗಿ ಆದಿತ್ಯನಾಥ್; ಹೆಚ್ಚಿನ ಉತ್ಪಾದನೆ, ರಫ್ತಿಗೆ ಕರೆ 

ಲಖನೌ: ಮುಸ್ಲಿಮರು, ದಲಿತರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ನಡೆದಿರುವ ಮನೆ, ಕಟ್ಟಡಗಳ ಧ್ವಂಸ ಕಾರ್ಯಾಚರಣೆಗಳ ಮೂಲಕ ವಿವಾದದ ಕೇಂದ್ರವಾಗಿರುವ ಬುಲ್ಡೋಜರ್‌ಗಳನ್ನೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದು...

ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರಕ್ಕೆ ವಿಶೇಷ ಅಧಿವೇಶನ: ‘ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದ ಪ್ರಿಯಾಂಕಾ

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಉದ್ದೇಶದಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ...

ನನ್ನ ಫೋನ್ ಟ್ಯಾಪ್ ಮಾಡುತ್ತಿರುವ ಪ್ರಧಾನಿ, ಅವರ ವಿರುದ್ಧದ ಸಾಕ್ಷ್ಯಗಳೇನು ಎಂಬುದು ಅವರಿಗೆ ಗೊತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲಿವೆ. ಅದನ್ನು ಪ್ರಧಾನಿ ಟ್ಯಾಪ್ ಮಾಡುತ್ತಿದ್ದಾರೆ ಎಂದು...

ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸಿದೆ; ವ್ಯವಸ್ಥಿತ ಹತ್ಯೆ, ವಿನಾಶವನ್ನು ಪುನರುಚ್ಚರಿಸಿದ ನೊಬೆಲ್ ಪುರಸ್ಕೃತೆ ನವಿ ಪಿಳ್ಳೈ 

ಗಾಜಾ/ಡರ್ಬನ್: ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನಡೆಸಿರುವುದು ಕೇವಲ ಯುದ್ಧದ ಭಾಗವಾಗಿ ನಡೆದ ದಾಳಿಗಳಲ್ಲ, ಬದಲಿಗೆ ಒಂದು ಜನಸಮುದಾಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಉದ್ದೇಶದಿಂದ ನಡೆಸಿದ ವ್ಯವಸ್ಥಿತ ನರಮೇಧ ಎಂಬ ತಮ್ಮ ಹಿಂದಿನ...

‘ನನ್ನ ಜೊತೆ ನೇರ ಚರ್ಚೆ ನಡೆಸಿದ ನಂತರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮುಖಾಮುಖಿ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮೊಂದಿಗೆ ನಡೆಯುವ ನೇರ ಚರ್ಚೆಯ ಬಳಿಕ ನರೇಂದ್ರ...

ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕಾರಣ ತಿಳಿಸುವಂತೆ ಒತ್ತಾಯಿಸಿದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ

ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಿರುವುದಕ್ಕೆ ಕಾರಣ ತಿಳಿಸುವಂತೆ ಪತ್ರಕರ್ತರ ಸಂಘ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಗುರುವಾರ (ನ.12)...