Homeಕರ್ನಾಟಕಐದು ದಶಕಗಳ ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ

ಐದು ದಶಕಗಳ ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ

- Advertisement -
- Advertisement -

ತಮ್ಮ ಪ್ರಖರ ಮಾತಿನ ವೈಖರಿಯಿಂದ ಗಮನ ಸೆಳೆಯುತ್ತಿದ್ದ ಸುಬ್ಬಯ್ಯ ಹೋರಾಟ, ಪ್ರಾಮಾಣಿಕತೆ, ಜಾತ್ಯತೀತ ಮೌಲ್ಯಗಳ ಪ್ರತೀಕದಂತಿದ್ದರು. ಮಾತಿನ ಮನೆಯನ್ನು ಮಾತಿನ ಮೂಲಕವೇ ವಶಕ್ಕೆ ಪಡೆದ ಸುಬ್ಬಯ್ಯ ತರಹದ ನಾಯಕರು ಅಪರೂಪ. ನಾಲ್ಕು ಬಾರಿ ಮೇಲ್ಮನೆ ಸದಸ್ಯರಾಗಿದ್ದ ಸುಬ್ಬಯ್ಯ ಅವರು ಆಡಲು ನಿಂತರೆ ಆಡಳಿತ ಪಕ್ಷದವರಿಗೆ ಆತಂಕ, ಗಾಬರಿ ಉಂಟಾಗುತ್ತಿತ್ತು.

ಸದಾ ವಿರೋಧ ಪಕ್ಷದವರಾಗಿಯೇ ಇರಲು ಬಯಸಿದ ಸುಬ್ಬಯ್ಯ ಬಯಸಿದ್ದರೆ ‘ಅಧಿಕಾರ’ ಅವರಿಂದ ದೂರ ಉಳಿಯುತ್ತಿರಲಿಲ್ಲ. ಹಲವು ಬಾರಿ ಅಧಿಕಾರ ಅವರ ಸಮೀಪ ಬಂದು ಹೋದದ್ದಿದೆ. ಅವರು ಅದಕ್ಕಾಗಿ ಆಸೆ ಪಟ್ಟವರಲ್ಲ. ಆಡಳಿತಾರೂಢ ಪಕ್ಷದ ಲೋಪ ಎತ್ತಿ ತೋರಿಸುವ ಯಾವ ಅವಕಾಶವನ್ನೂ ಸುಬ್ಬಯ್ಯ ಕೈ ಬಿಡುತ್ತಿರಲಿಲ್ಲ. ಮಾತಿನ ಚಟಾಕಿಯ ಮೂಲಕ ತಿವಿಯುತ್ತಿದ್ದರು. ಪ್ರಭುತ್ವದ ಅರೆಕೊರೆಗಳನ್ನು ಅವರ ಹಾಗೆ ದಾಖಲಿಸಿದವರು ವಿರಳ.

ಕಾನೂನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಜಕೀಯದ ರುಚಿ ಕಂಡವರು ಸುಬ್ಬಯ್ಯ. ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಪ್ರಜಾ ಸೋಷಲಿಸ್ಟ್ ಪಾರ್ಟಿ (ಪಿಎಸ್‍ಪಿ)ಯ ಅಭ್ಯರ್ಥಿಯ ಪರವಾಗಿ ಭಾಷಣ ಮಾಡುತ್ತಿದ್ದರು. ವೇದಿಕೆಯಲ್ಲಿ ಗಮನ ಸೆಳೆಯುತ್ತಿದ್ದ ಯುವಕ ಸುಬ್ಬಯ್ಯ ಅವರು ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದಾಗ ಮೊದಲಿಗೆ ಜೈಲಿಗೆ ಹೋಗಿದ್ದರು. ಮತ್ತು ಕೊನೆಯವರಾಗಿ ಹೊರ ಬಂದರು. ಜೈಲಿನಲ್ಲಿ ಮಾಂಸಾಹಾರ-ಶಾಖಾಹಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದಾಗ ಸುಬ್ಬಯ್ಯನವರು ‘ಆಹಾರ ಸ್ವಾತಂತ್ರ್ಯ’ದ ಪರವಾಗಿ ನಿಂತಿದ್ದರು.

ಸೆರೆಯಿಂದ ಹೊರ ಬಂದ ನಂತರ ಕೆಲಕಾಲ ಜನತಾ ಪಕ್ಷದ ಜೊತೆಗಿದ್ದ ಅವರು ನಂತರ ಭಾರತೀಯ ಜನ ಸಂಘದ ಮುಖ್ಯಸ್ಥರಾದರು. ಮುಂದೆ ಅದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆದಾಗ ರಾಜ್ಯದಲ್ಲಿ ಅದರ ಚುಕ್ಕಾಣಿ ಹಿಡಿದಿದ್ದರು. ಬಲಪಂಥೀಯ (?) ಪಕ್ಷದ ಜೊತೆಗೆ ಗುರುತಿಸಿಕೊಳ್ಳುವಾಗ ಸುಬ್ಬಯ್ಯ ಅವರಿಗೆ ಕಾಣಿಸಿದ್ದು ಅದರ ಭ್ರಷ್ಟಾಚಾರ ವಿರೋಧಿ ನಿಲುವು. ಬಿಜೆಪಿಯ ಪ್ರಮುಖ-ಹಿರಿಯ ನಾಯಕರ ಜೊತೆ ಹತ್ತಿರದ ಒಡನಾಟ ಹೊಂದಿದ್ದ ಸುಬ್ಬಯ್ಯ ಅವರು ರಾಜ್ಯ ಅಧ್ಯಕ್ಷರಾಗುವುದಕ್ಕೆ ಅಡೆತಡೆಗಳೇ ಇರಲಿಲ್ಲ. 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರದ ಭಾಗವಾಗದೇ ಹೊರಗಿನಿಂದ ಬೆಂಬಲ ನೀಡುವ ನಿಲುವು ತಳೆಯುವುದಕ್ಕೆ ಸುಬ್ಬಯ್ಯ ಅವರೇ ಕಾರಣರಾಗಿದ್ದರು.

ಸುಬ್ಬಯ್ಯ ಚುನಾವಣಾ ರಾಜಕೀಯದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಿಮೆ. ಒಮ್ಮೆ ಮಾತ್ರ ಅವರು 1979ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿಗೆ ಆರಂಭದಲ್ಲೇ ಭದ್ರ ನೆಲೆ ಒದಗಿಸಿದವರಲ್ಲಿ ಸುಬ್ಬಯ್ಯ ಪ್ರಮುಖರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾದ ನಂತರ ಆರ್‍ಎಸ್‍ಎಸ್ ಮೂಗು ತೂರಿಸುವುದಕ್ಕೆ ಅಡ್ಡಿಯುಂಟು ಮಾಡಿದರು. ಆರ್‍ಎಸ್‍ಎಸ್ ಜೊತೆಗಿನ ಅವರ ಸಂಘರ್ಷ ಪಕ್ಷ ತೊರೆಯುವುದಕ್ಕೂ ಕಾರಣವಾಯಿತು. ‘ಆರ್‍ಎಸ್‍ಎಸ್. ಅಂತರಂಗ’ ಕೃತಿ ಸುಬ್ಬಯ್ಯನವರ ಪ್ರಖರ ವೈಚಾರಿಕತೆಗೆ ಹಿಡಿದ ಕನ್ನಡಿಯಂತಿದೆ.

ವಿಚಾರದ ಖಚಿತತೆ ಸುಬ್ಬಯ್ಯನವರ ವೈಶಿಷ್ಟ್ಯ. ಅದರ ಜೊತೆಗೆ ನೇರಾನೇರ ಹೇಳುವ ಗುಣ ಅವರಿಗೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿತ್ತು. ಮಾತು ಅವರ ಶಕ್ತಿಯಾಗಿತ್ತು. ಹಾಗೆಯೇ ಅದೇ ಅವರ ಮಿತಿಯೂ ಆಗಿತ್ತು. ಮಾತಿನ ಮೂಲಕ ಬಹಳಷ್ಟನ್ನು ಪಡೆದ ಸುಬ್ಬಯ್ಯ ಅದೇ ಮಾತಿನಿಂದ ಹಲವನ್ನು ಕಳೆದುಕೊಂಡರು. ಆ ಬಗ್ಗೆ ಅವರಿಗೆ ವಿಷಾದವೇನಿರಲಿಲ್ಲ.

ಅಧಿಕಾರಕ್ಕಾಗಿ ಹಪಾಹಪಿಸದ ಅವರ ನಿಲುವು ಅವರ ವ್ಯಕ್ತಿತ್ವದ ಗಟ್ಟಿತನಕ್ಕೆ ಕಾರಣವಾಗಿತ್ತು. ಯಾರೂ ಅವರಿಗೆ ಆಮಿಷ ಒಡ್ಡುವುದು ಸಾಧ್ಯವಿರಲಿಲ್ಲ. ಅಂತಹ ಎದೆಗಾರಿಕೆ ಆಡಳಿತ ಪಕ್ಷದ ಯಾವ ನಾಯಕನ ಬಳಿಯಲ್ಲಿಯೂ ಇರಲಿಲ್ಲ.

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೇಲ್ಮನೆಯ ಅಖಾಡದಲ್ಲಿ ಸುಬ್ಬಯ್ಯನವರ ಮಾತಿನ ವೈಖರಿ ಆರಂಭವಾಯಿತು. ಅದು ಎಷ್ಟರ ಮಟ್ಟಿಗೆ ಪ್ರಭಾವಶಾಲಿ ಆಗಿತ್ತೆಂದರೆ ಅರಸು ಮೇಲ್ಮನೆಯನ್ನು ‘ಇಲ್ಲ’ವಾಗಿಸುವ ಯೋಚನೆ ಮಾಡಿದ್ದರು.

ಅರಸು ನಂತರ ಮುಖ್ಯಮಂತ್ರಿಯಾದ ಗುಂಡೂರಾವ್ ಅವರಿಗೂ ಹಾಗೂ ಅವರ ಸಂಪುಟದ ಸದಸ್ಯರಿಗೂ ಸುಬ್ಬಯ್ಯ ದುಃಸ್ವಪ್ನವಾಗಿದ್ದರು. ದೀರ್ಘ ಕಾಲದ ಕಾಂಗ್ರೆಸ್ ಆಡಳಿತದ ಅವಧಿ ಮುಗಿದು ಕಾಂಗ್ರೇಸ್ಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದರೂ ಸುಬ್ಬಯ್ಯನವರ ಆರ್ಭಟವೇನೂ ಕಡಿಮೆಯಾಗಲಿಲ್ಲ. ಹೆಗಡೆ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಸುಬ್ಬಯ್ಯನವರ ಪಾತ್ರ ಗಮನಾರ್ಹವಾದದ್ದು.

ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನೆಲೆ ನಿಲ್ಲಲು ಕಾರಣರಾದ ಕಾನ್ಶಿರಾಮ್ ಅವರ ಪ್ರೀತಿ-ಆಗ್ರಹಕ್ಕೆ ಮಣಿದು ಪಕ್ಷ ಸೇರಿದ ಸುಬ್ಬಯ್ಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ವಿಧಾನಸಭೆಯಲ್ಲಿ ಪಕ್ಷದ ಪ್ರತಿನಿಧಿ ಕಾಣಿಸಿಕೊಳ್ಳಲು ಕಾರಣರಾಗಿದ್ದರು. ಪಕ್ಷದೊಳಗಿನ ಅಸಹನೆ-ಧೋರಣೆಯಿಂದ ಹೆಚ್ಚು ಕಾಲ ಬಿಎಸ್‍ಪಿಯಲ್ಲಿಯೂ ಉಳಿಯಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದ ಸುಬ್ಬಯ್ಯ ಅವರು ಅಲ್ಲಿದ್ದದ್ದು ತೀರಾ ಕಡಿಮೆ ಅವಧಿಗೆ.

ಬಲಪಂಥೀಯರು ಪ್ರಭುತ್ವದ ಚುಕ್ಕಾಣಿ ಹಿಡಿಯುವುದರ ವಿರುದ್ಧ ಸುಬ್ಬಯ್ಯ ಅವರು ಬಹುತ್ವದ ನೆಲೆಯಿಂದ ದೇಶ ಕಟ್ಟಬಯಸುವ ಧೋರಣೆ ಉಳ್ಳವರಾಗಿದ್ದರು. ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ-ಧರ್ಮ ನಿರಪೇಕ್ಷ ನಿಲುವು ಅವರ ಆಸಕ್ತಿ ಹಾಗೂ ಕಾಳಜಿಗಳಾಗಿದ್ದವು. ಅದಕ್ಕಾಗಿ ಅವರು ಬೀದಿಗೆ ಇಳಿಯಲು ಎಂದೂ ಹಿಂದೇಟು ಹಾಕಿದವರಲ್ಲ. ‘ಸಮೂಹ ಸನ್ನಿ’ಯ ವಿರುದ್ಧದ ನಿಲುವು ತಳೆಯುವ ಧಾಷ್ಟ್ರ್ಯ ಮತ್ತು ಎದೆಗಾರಿಕೆಗಳೆರಡೂ ಅವರಿಗಿದ್ದವು. ರಾಜ್ ಅಭಿಮಾನಿಗಳನ್ನು ಎದುರಿಸಿದ ರೀತಿಯೇ ಅದಕ್ಕೆ ಸಾಕ್ಷಿ.

ಸುಬ್ಬಯ್ಯನವರ ರಾಜಕೀಯ-ಸಾಮಾಜಿಕ ಬದುಕು ಕರ್ನಾಟಕದ ರಾಜಕೀಯ-ಸಾಮಾಜಿಕ ಬದುಕಿನೊಂದಿಗೆ ತಳುಕು ಹಾಕಿಕೊಂಡಿದೆ. ಸುಬ್ಬಯ್ಯನವರ ಗೆಲುವು ರಾಜ್ಯ ರಾಜಕಾರಣದ ದಿಕ್ಕು ಬದಲಿಸುವುದಕ್ಕೆ ಕಾರಣವಾಗಿದೆ. ಹಾಗೆಯೇ ಅವರ ‘ಸೋಲು’ ಇಂದಿನ ದುಸ್ಥಿತಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದ ಸುಬ್ಬಯ್ಯ ಅವರು ಜೀವಪರ-ಜನಪರ ಕಾಳಜಿಯಿದ್ದ ಅಪರೂಪದ ನಾಯಕ. ‘ಮಾದರಿ’ ನಾಯಕರಾಗಿದ್ದ ಸುಬ್ಬಯ್ಯ ಅವರ ನಿರ್ಗಮನದಿಂದ ತೆರವಾದ ಸ್ಥಳವನ್ನು ಯಾರೂ ತುಂಬಲು ಸಾಧ್ಯವಿಲ್ಲ. ತುಂಬದ-ತುಂಬಲಾಗದ ‘ಸ್ಥಿತಿ’ ಕರ್ನಾಟಕದ ಸಾರ್ವಜನಿಕ ಬದುಕು ತಲುಪಿರುವ ದುಸ್ಥಿತಿಯ ದ್ಯೋತಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...