ಉತ್ತರಪ್ರದೇಶದ ಮೀರತ್ನ ಎಲ್ಎಲ್ಆರ್ಎಂ ವೈದ್ಯಕೀಯ ಕಾಲೇಜಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮೇವಿನ ಯಂತ್ರಕ್ಕೆ ಬಿದ್ದು ಗಂಭೀರವಾಗಿದ್ದ 5 ವರ್ಷದ ಮಗುವಿಗೆ ಚಿಕಿತ್ಸೆ ನೀಡುವ ಬದಲು ತುರ್ತು ಚಿಕಿತ್ಸೆಗೆ ಆಗ್ರಹಿಸಿದ ಮಗುವಿನ ಕಟುಂಬಸ್ಥರ ಮೇಲೆ ವೈದ್ಯರು ಹಲ್ಲೆ ನಡೆಸಿದ್ದಾರೆ ಎಂದು FREE PRESS JOURNAL ವರದಿ ಮಾಡಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಆಕಸ್ಮಿಕವಾಗಿ ಮೇವಿನ ಯಂತ್ರಕ್ಕೆ ಬಿದ್ದು 5 ವರ್ಷದ ಮಗುವಿನ ಕೈ ತುಂಡಾಗಿದೆ. ತಕ್ಷಣದ ವೈದ್ಯಕೀಯ ನೆರವಿಗಾಗಿ ಕುಟುಂಬವು ಸಹಾಯ ಕೋರಿ LLRM ವೈದ್ಯಕೀಯ ಕಾಲೇಜಿಗೆ ಧಾವಿಸಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುವ ಬದಲು ಮಗುವಿನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿದ್ದ ಮಗು ಚೀರಾಡುತ್ತಿತ್ತು. ಆದರೆ ವೈದ್ಯರು ಗೂಂಡಾಗಿರಿ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಿರಿಯ ವೈದ್ಯರು ಮಗುವಿನ ಕುಟುಂಬದವರ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಈ ಘಟನೆಯ ಬೆನ್ನಲ್ಲೇ ಆರೋಪಿತ ಮೂವರು ವೈದ್ಯರನ್ನು ಅಮಾನತುಗೊಳಿಸಿ ಅವರ ವಿರುದ್ಧ ತನಿಖೆಗೆ ಸೂಚಿಸಲಾಗಿದೆ ಎಂದು LLRM ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.
मेरठ :- मेडिकल कॉलेज के जूनियर डॉक्टरों की गुंडई, 5 साल के बच्चे को लेकर आये परिवार को पीटा
चारा मशीन में आने से कट गया था बच्चे का हाथ
इलाज छोड़कर पूरे परिवार को डॉक्टरों ने पीटा
परिवार की पिटाई के दौरान बिलखता रहा बच्चा
पिटाई से परिवार की एक महिला बेहोश हुई
1/2 @JantantraTv pic.twitter.com/2f14Jb6TMo— अरुण चन्द्रा 🇮🇳 (@vipchandra13) October 24, 2023
ಇದನ್ನು ಓದಿ: ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದ ಮಿಜೋರಾಂ ಸಿಎಂ; ಬಿಜೆಪಿಗೆ ಶಾಕ್ ಕೊಟ್ಟ ಮೈತ್ರಿ ಪಕ್ಷ